ಮನುಕುಲದ ಮಹಾನ್ವೇಷಣೆಯೇ ಚಕ್ರ 


Team Udayavani, Sep 12, 2021, 6:10 AM IST

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಕಾಲದೊಟ್ಟಿಗೆ ಕಾಲೂರುತ್ತಾ, ವಿಕಸಿಸುತ್ತಾ ಚಲಿಸುತ್ತಿರುವ ಜೀವಜಗತ್ತು ಪ್ರತೀ ಹಂತದಲ್ಲೂ ಬದಲಾವಣೆಗೆ ತೆರೆದುಕೊಳ್ಳುತ್ತಲೇ ಸಾಗುತ್ತಿದೆ. ಮನುಷ್ಯ ಪ್ರಾಣಿಯೂ ಅದಕ್ಕೆ ಹೊರತಲ್ಲ. ಆತ ಹೆಜ್ಜೆಹೆಜ್ಜೆಗೂ ಹೊಸತನ್ನು ಶೋಧಿಸಿಕೊಳ್ಳುತ್ತ ಬದುಕನ್ನು ಬದಲಾಯಿಸಿಕೊಳ್ಳುತ್ತಲೇ ನಡೆದವನು. ಸಂಕೀರ್ಣಗೊಳ್ಳುತ್ತಿರುವ ಬದುಕನ್ನು ಸರಳಗೊಳಿಸಿಕೊಳ್ಳುವ ಬಹುವಿಧದ ಸಲಕರಣೆಗಳು ಅವನ ತಂತ್ರಜ್ಞಾನ ಬುದ್ಧಿಗೆ ದಿನದಿನವೂ ದಕ್ಕುತ್ತಿವೆ.

ಮನುಕುಲದ ಅತೀ ದೊಡ್ಡ ಸಂಶೋಧನೆ ಯಾವುದು ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ದೊರಕುವ ಒಮ್ಮತದ ಉತ್ತರವೆಂದರೆ ಅದು “ಚಕ್ರ’ ಎನ್ನುವುದು. ಹೌದು, ಅಲೆಮಾರಿ ಯಾಗಿದ್ದ ಮನುಷ್ಯನಿಗೆ ವಿಕಾಸದ ಯಾವುದೋ ಒಂದು ಘಟ್ಟದಲ್ಲಿ ಚಕ್ರವೆಂಬ ಸಾಧನವೊಂದನ್ನು ಶೋಧಿಸಲು ಸಾಧ್ಯವಾದ ಮೇಲೇ ಅವನ ಬದುಕಿನ ಮಿತಿ ಗಳು, ಸಾಧ್ಯತೆಗಳು ವಿಸ್ತರಿಸಿ ಕೊಂಡವು. ದಾರಿ ಹತ್ತಿರವಾಯಿತು, ಕೆಲಸ ಸಲೀಸಾಯಿತು. ಆದಿ ಮಾನವನ ಕಾಲದಿಂದಲೂ ಚಕ್ರ ಕುಂಬಾರ, ಗಾಣಿಗ, ನೇಕಾರರರ ಕುಲಕಸುಬಿನ ಮಂತ್ರವಾಗಿ, ದುಡಿಮೆಯ ತಂತ್ರವಾಗಿ ಬಳಕೆಯಾಗುತ್ತಾ ಬಂತು. ಅನಂತರದ ದಿನಗಳಲ್ಲಿ ಮತ್ತಷ್ಟು ಆಧುನೀ ಕರಣಗೊಂಡು ಗಿರಣಿ, ಯಂತ್ರ, ಕೈಗಾರಿಕೆಗಳಲ್ಲಿ ಚಕ್ರವು ಮತ್ತಷ್ಟು ಬಿರುಸಾಗಿ ಸುತ್ತುವುದಕ್ಕೆ ಶುರುಮಾಡಿತು.

ಹಾಗೆಯೇ ಸನ್ನೆಯಾಗಿ, ಸರಳ ಸಾಧನವಾಗಿ, ಭಾರಹೊರುವ ಗಾಡಿಯಾಗಿ ಉರುಳುತ್ತಾ ಉರುಳುತ್ತಾ ಮುಂದೆ ವಾಹನ ಲೋಕದ ಚಮತ್ಕಾರಗಳಾದ ಕಾರ್‌, ಬಸ್‌, ರೈಲು, ವಿಮಾನ, ರಾಕೆಟ್‌ಗಳಾಗಿ ಚಕ್ರವು ಕಾಲದ ಚಲನೆಗೆ ಸಾಕ್ಷಿಯಾಗಿದ್ದು ಸತ್ಯ. ಹೇಳಿಕೇಳಿ ಇದು ಯಂತ್ರಯುಗ. ಯಾಂತ್ರಿಕ ಬದುಕಿನಲ್ಲಿ ಅಡಿಗಡಿಗೂ ಯಂತ್ರದ  ಸುಳಿಗೆ ಸಿಲುಕಿಕೊಂಡ ನಮ್ಮ ಅಡಿಗೆಮನೆಯ ರುಬ್ಬುವ ಯಂತ್ರಗಳಿಂದ ಹಿಡಿದು ಬೃಹದಾದ ಬೆಟ್ಟಗುಡ್ಡಗಳನ್ನೇ ಅನಾಮತ್ತಾಗಿ ಎತ್ತಿ ತಳ್ಳಬಲ್ಲ ಭಯಂಕರ ಕ್ಷಮತೆಯ ಯಂತ್ರೋಪ ಕರಣಗಳು ಎದುರಿಗಿವೆ. ಸಾರಿಗೆ, ಸಂಪರ್ಕ ಕ್ಷೇತ್ರಗಳಲ್ಲಾದ  ಕ್ರಾಂತಿಗಳು ಜಗತ್ತನ್ನು ಕಿರಿದಾಗಿಸಿರುವುದು ಸುಳ್ಳಲ್ಲ. ಕೆಲವೇ ತಾಸುಗಳಲ್ಲಿ ಸಾವಿರಾರು ಮೈಲಿ ದೂರದ  ಮತ್ತೂಂದು ಭೂ ತುದಿಯನ್ನು ತಲುಪುವುದು ಕೂಡ ಈಗ ಬಲುಸಲೀಸು. ಮಿಲಿಯನ್‌ಗಟ್ಟಲೆ ಕಿ.ಮೀ. ದೂರದ ಆಕಾಶ ಕಾಯಗಳನ್ನೂ ನಮ್ಮ ನೌಕೆಗಳು ಮುಟ್ಟಿಬಂದಿವೆ. ಮತ್ತೆಮತ್ತೆ ಮನುಷ್ಯನನ್ನೂ ಅಲ್ಲಿಗೆ ಹೊತ್ತೂಯ್ಯಲು ಹಾತೊರೆಯುತ್ತಿವೆ. ಒಟ್ಟಾರೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಕಾಲೀನ ಜಗತ್ತು ನೆಟ್ಟಿರುವ ಅವಿಸ್ಮರಣಿಯ ಮೈಲಿಗಲ್ಲುಗಳಿಗೆಲ್ಲ ಮೂಲಪ್ರೇರಣೆಯಾಗಿ, ಸಾಧನವಾಗಿ, ಒದಗಿದ್ದು ಮಾತ್ರ ಈ ಚಕ್ರವೇ.

ಧಾರ್ಮಿಕ ನಂಬಿಕೆಯಲ್ಲಿಯೂ ಚಕ್ರದ್ದು ಬಹುದೊಡ್ಡ ಪಾತ್ರವಿದೆ. ಶ್ರೀಚಕ್ರವು ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗ. ಹಾಗೆಯೇ ಸಂಸ್ಕೃತದಲ್ಲಿ ಚಕ್ರವೆಂಬ ವೃತ್ತವನ್ನು ಶಕ್ತಿಯ ಕೊನೆಯಿರದ ಸುತ್ತುವಿಕೆ ಎಂದು ವರ್ಣಿಸಲಾಗಿದೆ. ಬಿಂದುವಿನಲ್ಲಿ ಆರಂಭಗೊಳ್ಳುವ ಜೀವ ಚಕ್ರದೊಳಗೆಯೇ ಸುತ್ತಿಸುತ್ತಿ ಮತ್ತೆ ಬಿಂದುವಾಗಿ ಅಂತ್ಯಗೊಳ್ಳುತ್ತದೆ!. ಇಲ್ಲಿ ಚಕ್ರಕ್ಕೆ ಯಂತ್ರಗಳು ಅಥವಾ ಅನುಭಾವಿ ರೇಖಾಚಿತ್ರಗಳೆಂಬ ಅರ್ಥವಿದೆ. ಶರೀರದ ಒಳಗಿನ ವಿಭಿನ್ನ ನರತಂತುಗಳ ಜಾಲವನ್ನೂ ಚಕ್ರವೆಂದು ನಂಬಲಾಗಿದೆ. ಪ್ರಾಣವು ನಿಗೂಢ ಶರೀರದ ಮೂಲಾಂಶ ಮತ್ತು ಇಡೀ ಚಕ್ರವ್ಯವಸ್ಥೆಯು ಜೀವಕ್ಕೆ ಅತೀ ಮುಖ್ಯ ಮತ್ತು ಶಕ್ತಿಯ ಮೂಲ ಎಂದಿದ್ದಾರೆ ಷುಮ್ಮಿಕಿ.

ಚಕ್ರವೆಂದರೆ ಸುತ್ತು, ವರ್ತುಲ, ಪುನರಾವರ್ತಿತ ಅವರ್ತ, ಚಲನೆ.. ಚಕ್ರವೆಂಬುದು ಬದುಕಿನ ರೂಪಕ, ಕಾಲದ ಗತಿಶೀಲತೆಗದು ಪೂರಕ, ಹಾಗೆಯೇ ಚಕ್ರವು ಪ್ರಗತಿಯ ದ್ಯೋತಕ.. ಈ ಬದುಕಿ ನಾಚೆ, ಜಗತ್ತಿನಾಚೆ ಚಲಿಸುವ ಕಾಲವನ್ನು ಚಕ್ರವಿಲ್ಲಿ ಪ್ರತಿನಿಧಿಸುತ್ತದೆ. ದುಂಡನೆ ಗಾಲಿಯಂತಹ ತತ್ತಿಯು ಜೀವತುಂಬಿ ಕೊಂಡು ಶುರುವಿಡುವ ಬದುಕು ಹಂತಹಂತವಾಗಿ ಸಾಗಿ ಕೊನೆಗೆ ಮರಳಿ ಮಣ್ಣು ಸೇರುವುದರೊಂದಿಗೆ ಜೀವನಚಕ್ರವನ್ನು ಪೂರೈಸುತ್ತದೆ. ಪ್ರಕೃತಿಯೂ ಅಂತಹ ಅನೇಕ ಚಕ್ರಗಳೊಂದಿಗೆ ತನ್ನ ಅಸ್ತಿತ್ವವನ್ನು ಬೆಸೆದುಕೊಂಡಿದೆ. ವಿಶ್ವದ ಸೃಷ್ಟಿ-ಲಯಗಳೂ ಚಕ್ರೀಯ ಚಲನೆಯಲ್ಲಿಯೇ ಮಿಳಿತಗೊಂಡಿವೆ. ಗ್ರಹತಾರೆಗಳು ಮಾತ್ರವಲ್ಲ ವಿಶ್ವಸೃಷ್ಟಿಯ ಸಮಸ್ತ ಕಾಯಗಳೂ ಕೂಡ ಮತ್ತೂಂದರ ಸುತ್ತ ಚಕ್ರೀಯ ಪರಿಭ್ರಮಣೆಯಲ್ಲಿಯೇ ತಮ್ಮ ಹುಟ್ಟು, ಅಸ್ತಿತ್ವ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುತ್ತವೆ. ಪ್ರಕೃತಿಯ ನಿತ್ಯಕ್ರಿಯೆಗಳೆನಿರುವ ಜಲಚಕ್ರ, ಪೋಷಕಾಂಶ ಚಕ್ರಗಳಿದ್ದು ಅವೆಲ್ಲ ಜೀವಗೋಳದ ಸಾವಯವ ಸಂಬಂಧಗಳನ್ನು ಮರುಸ್ಥಾಪಿಸುತ್ತವೆ. ನೆಲದ ಮೇಲಿನ ನೀರು, ಗಾಳಿ, ಉಷ್ಣಾಂಶ, ಪೋಷಕಾಂಶಗಳೆಲ್ಲವೂ ಚಲನಾಪ್ರಕ್ರಿಯೆಗೆ ಒಳಪಟ್ಟಿರುತ್ತವೆ. ಇಲ್ಲಿ ವಿವಿಧ ಧಾತು-ಸಂಯುಕ್ತಗಳು ಜೀವಭೂರಸಾಯನಿಕ ಚಕ್ರವಾಗಿ ಜೈವಿಕ ಮತ್ತು ಅಜೈವಿಕಾಂಶಗಳ ನಡುವೆ ಚಲಿಸುತ್ತ ಮತ್ತೆಮತ್ತೆ ಹೊಸಹುಟ್ಟು ಪಡೆದುಕೊಳ್ಳುತ್ತವೆ.

ನಾವಿರುವ ಗೋಳದ ಚಕ್ರೀಯ ಚಲನೆಯ ಕಾರಣದಿಂದಾ ಗಿಯೇ ನಮ್ಮಲ್ಲಿ ದಿನಮಾನಗಳು, ಕಾಲಮಾನಗಳು ಮತ್ತು ಋತುಮಾನಗಳು ಬದಲಾಗುತ್ತವೆ, ಪುನರಾವರ್ತನೆಗೊಳ್ಳುತ್ತವೆ. ಹಾಗಾಗಿ ನಮ್ಮೊಟ್ಟಿಗಿರುವ ಸಮಯ, ಸನ್ನಿವೇಶಗಳಿಗೂ ಮರುಕಳಿ ಸುವಂತಹ ಚಕ್ರೀಯ ಚಲನೆಯಿದೆ. ಹಗಲು ಕಳೆಯುತ್ತಿದ್ದಂತೆ ತಾನಲ್ಲಿ ಅಡಿಯಿಡಬೇಕೆಂದು ಕತ್ತಲು ತುದಿಗಾಲಲ್ಲಿರುತ್ತದೆ. ಮತ್ತೆ ಕತ್ತಲು ಸರಿದು ಬೆಳಕು ಹರಿವ ಹೊತ್ತಿಗೆ ದಿನವೊಂದು ಉರುಳಿರುತ್ತದೆ. ನಮ್ಮ ಬದುಕೂ ಅದಕ್ಕಿಂತ ಬೇರೆಯಲ್ಲ. ಇಲ್ಲಿ ಸಿಹಿ-ಕಹಿ, ಏಳು-ಬೀಳು, ನೋವು-ನಲಿವು, ಸೋಲು-ಗೆಲುವು ಯಾವುದೂ ಶಾಶ್ವತ ಸ್ಥಿತಿಯಲ್ಲ. ಈ ಕ್ಷಣ ಬದಲಾಗುತ್ತದೆ ಎಂಬುದೇ ಸಾರ್ವಕಾಲಿಕ ಸತ್ಯ. ಕಷ್ಟಕಾಲವನ್ನು ದೂಡಿ ಒಳಬರಲು ಸುಖ, ಸಮೃದ್ಧಿಗಳು ಹೊಸ್ತಿಲಲ್ಲೇ ಕಾದಿರುತ್ತವೆ. ಸೋಲಿನ ಸುಳಿಯಲ್ಲಿ ಸಿಲುಕಿಕೊಂಡವನನ್ನು ದಡ ಸೇರಿಸಲು ಅಲ್ಲೊಂದು ಗೆಲುವು ಹೊಂಚುಹಾಕಿ ಕೂತಿರುತ್ತದೆ. ಗೆಲುವಿನ ಅಮಲಲ್ಲಿ ತೇಲುತ್ತಿರುವವನನ್ನು ಕಾಲೆಳೆದು ಕೆಡವಲು ಐನಾತಿ ಸೋಲೊಂದು ಸಂಚು ಹೂಡಿರುತ್ತದೆ. ಸಮೃದ್ಧಿ ತುಂಬಿಕೊಂಡ ಜಾಗದಲ್ಲಿ ಹಾಳುಸುರಿಯಲು ಕಾಲವೇ ಅಲ್ಲಿ ಕಾಯುತ್ತಿರುತ್ತದೆ!. ಲಾವಾರಸ ಕಾರಿದ ಜಾಗದಲ್ಲಿ ಮುಂದೊಂದು ದಿನ ಬೀಜವೊಂದು ಮೊಳೆಯಲು ಹಂಬಲಿಸುತ್ತದೆ!. ರೇಗುವವನ ಎದೆಯೊಳಗೂ ರಾಗವೊಂದು ದನಿಗೂಡಲು ಉತ್ಕಟವಾಗಿ ಬಯಸುತ್ತದೆ. ಚಕ್ರ ತಿರುಗುತ್ತದೆ..! ಕಾಲ ಸರಿಯುತ್ತದೆ.. ಬದುಕು ಬದಲಾಗುತ್ತದೆ. 

 

ಸತೀಶ್‌ ಜಿ.ಕೆ., ತೀರ್ಥಹಳ್ಳಿ

ಟಾಪ್ ನ್ಯೂಸ್

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

ಒಮಿಕ್ರಾನ್‌ ತೀವ್ರತೆ ಕಡಿಮೆ? ಅನೇಕ ಭಾರತೀಯರಲ್ಲಿ ಪ್ರತಿಕಾಯ

ಒಮಿಕ್ರಾನ್‌ ತೀವ್ರತೆ ಕಡಿಮೆ? ಅನೇಕ ಭಾರತೀಯರಲ್ಲಿ ಪ್ರತಿಕಾಯ

ಆಕ್ಸಿಜನ್‌ ಕೊರತೆ ಸಾವು ಪಂಜಾಬ್‌ನಲ್ಲಿ ಮಾತ್ರ!

ಆಕ್ಸಿಜನ್‌ ಕೊರತೆ ಸಾವು ಪಂಜಾಬ್‌ನಲ್ಲಿ ಮಾತ್ರ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಎರಡು ಕೈಗಳಲ್ಲಿ ಎರಡು ವೈಕುಂಠ ಪತ್ರ!

ಎರಡು ಕೈಗಳಲ್ಲಿ ಎರಡು ವೈಕುಂಠ ಪತ್ರ!

ಕೋವಿಡ್ ಸೋಂಕಿನಿಂದ ಬಳಲಿದವರಿಗೆ ಹೃದಯ ಮಿಡಿಯುತ್ತಿದೆ…

ಕೋವಿಡ್ ಸೋಂಕಿನಿಂದ ಬಳಲಿದವರಿಗೆ ಹೃದಯ ಮಿಡಿಯುತ್ತಿದೆ…

ಹೊರಳು ಹಾದಿಯಲ್ಲಿದೆ ದೇಶದ ಆರೋಗ್ಯ ವ್ಯವಸ್ಥೆ

ಹೊರಳು ಹಾದಿಯಲ್ಲಿದೆ ದೇಶದ ಆರೋಗ್ಯ ವ್ಯವಸ್ಥೆ

ನಮ್ಮ “ಕರ್ತವ್ಯ’ದ ಪರಿಧಿ ಹಿರಿದಾಗಿಸಿದ “ಸೇವೆ’

ನಮ್ಮ “ಕರ್ತವ್ಯ’ದ ಪರಿಧಿ ಹಿರಿದಾಗಿಸಿದ “ಸೇವೆ’

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.