ಆಗದಿರಲಿ ಸಂಸಾರ, ಉದ್ಯೋಗದ ಕಲಸುಮೇಲೋಗರ


Team Udayavani, Dec 27, 2020, 6:09 AM IST

ಆಗದಿರಲಿ ಸಂಸಾರ, ಉದ್ಯೋಗದ ಕಲಸುಮೇಲೋಗರ

ಸಾಂದರ್ಭಿಕ ಚಿತ್ರ

ಭವಿಷ್ಯದಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವವರು ಮನೆಯಲ್ಲಿ ಕೆಲಸದ ಕೋಣೆಯನ್ನೂ ನಿರ್ಮಿಸುವ ಪ್ಲ್ರಾನ್‌ ಹಾಕಿಕೊಳ್ಳಬೇಕಿದೆ. ಈಗಾಗಲೇ ಅನೇಕ ಅಪಾರ್ಟ್‌ಮೆಂಟ್‌ಗಳು ಖಾಲಿ ಇರುವ ಫ್ಲ್ಯಾಟ್‌ಗಳನ್ನು ವರ್ಕಿಂಗ್‌ ಸ್ಪೇಸ್‌ ಆಗಿ ಬದಲಿಸಿ,
ತನ್ನ ನಿವಾಸಿಗಳೆಲ್ಲ ಆ ಜಾಗವನ್ನೇ ಆಫೀಸ್‌ನಂತೆ ಬಳಸಲು ಅವಕಾಶ ಮಾಡಿಕೊಡುತ್ತಿವೆ.

ಮನೆಯಿಂದಲೇ ಕೆಲಸ(ವರ್ಕ್‌ ಫ್ರಂ ಹೋಂ) ಎನ್ನುವುದು ಇತ್ತೀಚೆಗೆ ಬಹಳಷ್ಟು ಚರ್ಚೆಗೆ ಬಂದಿರುವ ವಿಚಾರ. ಕೊರೊನಾ ಕಲಿಸಿದ ಪಾಠಗಳಲ್ಲಿ ಇದೂ ಒಂದು. ನಿತ್ಯ ಟ್ರಾಫಿಕ್‌ನಲ್ಲಿ ಜೀವನ ಸವೆಸುತ್ತಾ, ಸಂಜೆಯಾಗುತ್ತಾ ಬಂದರೆ ಸಾಕು ಕಣ್ಣ ರೆಪ್ಪೆಯ ಮೇಲೆ ಮಣಭಾರದ ಸುಸ್ತನ್ನು ಹೊತ್ತು, ಮನೆಗೆ ಬಂದು ಮಲಗಿಬಿಟ್ಟರೆ ಬೆಳಗ್ಗೆ ಮತ್ತದೇ ಕಚೇರಿಯ ಗುಂಗು. ಈ ನಡುವೆ ಕುಟುಂಬವೆನ್ನುವ ಪುಟ್ಟ ಗೂಡು ಸದ್ದಿಲ್ಲದಂತಾಗಿರುತ್ತದೆ. ಆದರೆ ವರ್ಕ್‌ ಫ್ರಂ ಹೋಂ ಹಾಗಲ್ಲ. ಒಂದು ಕುರ್ಚಿ, ಒಂದು ಲ್ಯಾಪ್‌ಟಾಪ್‌, ಇಂಟರ್ನೆಟ್‌ ಇದ್ದರೆ ಸಾಕು ಅಂದಿನ ಕೆಲಸ ಮನೆಯ ಮಹಡಿಯಲ್ಲೇ ಮುಗಿಯುತ್ತದೆ. ಮಹಡಿಯಿಂದ ಇಳಿದರೆ ಕುಟುಂಬದ ಬೆಚ್ಚಗಿನ ಅರಮನೆ.

ಇಷ್ಟೊಂದು ಸ್ವಾದಿಷ್ಟಕರ ಚಿಂತನೆಯೊಂದಿಗೆ ನಾವು ವರ್ಕ್‌ ಫ್ರಂ ಹೋಂ ಬಗ್ಗೆ ಅಧ್ಯಯನ ಶುರುಮಾಡಿದ್ದೇವೆ. ವೈರಸ್‌ಗಳ ಪ್ರತೀ ಹೊಸ ವರಸೆಗಳಿಗೆ ದಿಕ್ಕು ತಪ್ಪಿ ಕಂಗೆಡುವ ಬದಲು, ಮಳೆಗಾಲಕ್ಕೂ ಮುನ್ನ ಇರುವೆಗಳು ತಮ್ಮ ಗೂಡುಗಳಲ್ಲಿ ಮುಂದಿನ ಬೇಸಗೆ ಕಾಲಕ್ಕೆ ಆಗುವಷ್ಟು ಅಹಾರ ಸ್ಟಾಕ್‌ ಇಡುವ ಹಾಗೆ, ಇಂದು ಮನೆಯನ್ನೇ ನಾವು ನಮ್ಮ ಬುದ್ಧಿವಂತಿಕೆಯ, ಭವಿಷ್ಯದ ಹೊಟ್ಟೆ ಪಾಡಿನ ಹಾಗೂ ಕೌಶಲದ ಗೂಡನ್ನಾಗಿಸಿಕೊಳ್ಳಬೇಕು.

ಮನೆಯಿಂದ ಕೆಲಸ ಮಾಡುವ ಪರಿಪಾಠ ಇಂದಿನದ್ದಲ್ಲ. ಶತಮಾನಗಳ ಹಿಂದೆ ಮನುಷ್ಯ ಯಾವ ಫ್ಯಾಕ್ಟರಿಗೂ ಹೋಗುತ್ತಿರಲಿಲ್ಲ. ತಾನು ಇರುವಲ್ಲಿಯೇ ಕೆಲಸ ಮಾಡುತ್ತಿದ್ದ. ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ ಹೀಗೆ ಎಲ್ಲ ರೀತಿಯ ಕೆಲಸಗಳು ಮನೆಯಿಂದಲೇ ಆಗುತ್ತಿದ್ದವು. ತೀರಾ ಕೆಲವು ಜನರು ಮಾತ್ರ ಆಯಾ ಸಾಮ್ರಾಜ್ಯಗಳ ಅರಮನೆಗಳಲ್ಲಿ, ಸಿರಿವಂತರ ಮನೆಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಕ್ರಮೇಣ ಜಗತ್ತು ಜಾಗತೀಕರಣದಡೆಗೆ ಸಾಗಿದಾಗ ಅನಿಶ್ಚಿತೆಯ ವ್ಯಾಪಾರಕ್ಕಿಂತ ತಿಂಗಳಾದರೆ ಸಂಬಳ ಎಣಿಸುವ ಕೆಲಸ ಬೇಕು ಎಂದು ತನ್ನ ಕುಲಕಸುಬನ್ನು ಕಟ್ಟಿ ಮೂಲೆಗಿಟ್ಟು ಹೊರಟ ಮಾನವ ಹಿಂತಿರುಗಿ ನೋಡಲೇ ಇಲ್ಲ. ಈಗ ವೈರಸ್‌ ಎಲ್ಲರನ್ನೂ ಹಿಂದಿರುಗಿ ನೋಡುವಂತೆ ಮಾಡಿದೆ. ವರ್ಕ್‌ ಫ್ರಂ ಹೋಂ ಕೆಲವು ಜನರ ಕೈ ಹಿಡಿದಿದೆ. ಕೆಲವರು ಹೊಂದಿಕೊಳ್ಳಲಾಗದೇ ಪರದಾಡುತ್ತಿದ್ದಾರೆ, ಇನ್ನೂ ಕೆಲವರು ನಿರುದ್ಯೋಗಿಗಳಾಗಿಯೋ ಅಥವಾ ಉದ್ಯೋಗಗಳಿಂದ ಬೇಸತ್ತೋ ಮತ್ತದೇ ವ್ಯವಸಾಯವೆನ್ನುವ ಕುಲಕಸುಬಿಗೆ ಮರಳುತ್ತಿರುವ ಉದಾಹರಣೆಗಳೂ ಸಿಗುತ್ತಿವೆ.

ಆದಾಗ್ಯೂ ಮೊದಲಿನಿಂದಲೂ ದೊಡ್ಡ ಕಂಪೆನಿಗಳಲ್ಲಿ ವಾರದಲ್ಲಿ ಒಂದೆರಡು ದಿನ ಮನೆಯಿಂದಲೇ ಕೆಲಸ ಮಾಡುವ ಅವಕಾಶವಂತೂ ಇತ್ತು. ಈಗ ಸಂಪೂರ್ಣ ಮನೆಯಿಂದಲೇ ಕೆಲಸ ಮಾಡಬೇಕು ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಮನೆಯಿಂದ ಕೆಲಸ ಮಾಡುವುದೇ ಉದ್ಯೋಗ ಕ್ಷೇತ್ರದ ಪ್ರಮುಖ ಬೆಳವಣಿಗೆಯಾಗಬಹುದು. ಹಾಗಾಗಿ ಈಗಿನಿಂದಲೇ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.

ಮನೆಯ ವಿನ್ಯಾಸವೇ ಬದಲಾಗಬೇಕು
ಮಹಾನಗರಗಳಲ್ಲಿರುವ ಪುಟ್ಟ ಒಂದು ರೂಮಿನ ಮನೆಗ ಳಲ್ಲಿ ವರ್ಕ್‌ ಫ್ರಂ ಹೋಂ ಮಾಡುವುದಕ್ಕೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಎಷ್ಟೇ ಚಿಕ್ಕದಾಗಿದ್ದರೂ ಪತಿ, ಪತ್ನಿ, ಮಗು ಮೂವರೂ ಇರುವ ಒಂದು ಮನೆಯಲ್ಲಿ ಕೆಲಸ ಮಾಡಲಿಕ್ಕೆಂದೇ ನಿರ್ದಿಷ್ಟ ಜಾಗದ ಆವಶ್ಯಕತೆ ಇದೆ. ಮನೆಯಲ್ಲಿ ದೇವರ ಮನೆ ಎಂಬ ಕಲ್ಪನೆ ಹೇಗಿರುತ್ತದೋ, ಹಾಗೆಯೇ ಕೆಲಸಕ್ಕೆ ಪ್ರತ್ಯೇಕವಾದ ಜಾಗ ಅಥವಾ ಕೋಣೆಯೂ ನಿರ್ಮಾಣವಾಗಬೇಕಿದೆ. ವರ್ಕ್‌ ಫ್ರಂ ಹೋಂ ವ್ಯವಸ್ಥೆ ಕಂಪೆನಿಗಳಿಗೂ ಲಾಭದಾಯಕವಾಗಿ ಬದಲಾಗುತ್ತಿರುವುದರಿಂದ, ಭವಿಷ್ಯದಲ್ಲೂ ಈ ಪರಿಪಾಠ ಮುಂದುವರಿಯುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಈಗ ಉದ್ಯೋಗಿಯ ಮನಃಸ್ಥಿತಿಯನ್ನು ಕಚೇರಿಯಿಂದ ಮನೆಗೆ ಬದಲಾಯಿಸಬೇಕಿದೆ. ಈಗಾಗಲೇ ಮನೆಯು ಆತನಿಗೆ ಪೂರಕವಾಗಿದ್ದರೆ ಸರಿ. ಒಂದು ವೇಳೆ ಕೆಲಸ ನಿರ್ವಹಿಸುವುದಕ್ಕೆ ಪ್ರತ್ಯೇಕ ಸ್ಥಳವಿಲ್ಲದಿದ್ದರೆ ಒಂದು ನಾಲ್ಕು ಹೆಜ್ಜೆ ಅಡ್ಡಾಡುವಷ್ಟಾದರೂ ಪ್ರತ್ಯೇಕತೆ ವರ್ಕ್‌ ಫ್ರಂ ಹೋಂಗೆ ಸೂಕ್ತ.ಭವಿಷ್ಯದಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸು ವವರು ಮನೆಯಲ್ಲಿ ಕೆಲಸದ ಕೋಣೆಯನ್ನೂ ನಿರ್ಮಿಸುವ ಪ್ಲ್ರಾನ್‌ ಹಾಕಿಕೊಳ್ಳಬೇಕಿದೆ. ಈಗಾಗಲೇ ಅನೇಕ ಅಪಾರ್ಟ್‌ ಮೆಂಟ್‌ಗಳು ಖಾಲಿ ಇರುವ ಫ್ಲ್ಯಾಟ್‌ಗಳನ್ನು ವರ್ಕಿಂಗ್‌ ಸ್ಪೇಸ್‌ ಆಗಿ ಬದಲಿಸಿ, ತನ್ನ ನಿವಾಸಿಗಳೆಲ್ಲ ಆ ಜಾಗವನ್ನೇ ಆಫೀಸ್‌ನಂತೆ ಬಳಸಲು ಅವಕಾಶ ಮಾಡಿಕೊಡುತ್ತಿವೆ.

ಮನಃಸ್ಥಿತಿಯೂ ಬದಲಾಗಬೇಕು
ಮನೆಯಲ್ಲೇ ಕಚೇರಿಯ ಕೆಲಸವನ್ನು ನಿರ್ವಹಿಸುವ ಉದ್ಯೋಗಿಗಳ ಮನಃಸ್ಥಿತಿ ಬದಲಾಗಲು ಕಾಲಾವಕಾಶ ಬೇಕೇ ಬೇಕು. ಇದುವರೆಗೂ ಕಚೇರಿಯ ತಲೆನೋವನ್ನು ಕಚೇರಿಯ ಕ್ಯಾಬಿನ್ನಿನಲ್ಲೇ ಇಟ್ಟು ಬರುತ್ತಿದ್ದ ಉದ್ಯೋಗಿ ಈಗ ಮನೆಯಲ್ಲಿ ಅದೇ ಒತ್ತಡದ ಬೀಗ ತೆರೆದುಬಿಟ್ಟರೆ, ಆತನಿಗೆ ಹಾಗೂ ಆತನ ಕುಟುಂಬಸ್ಥರ ಮೇಲೆ ಆಗುವ ಮಾನಸಿಕ ಒತ್ತಡಗಳು ಅಪಾರ. ಈ ಕಾರಣಕ್ಕಾಗಿಯೇ ಅವುಗಳನ್ನು ನಿಭಾಯಿಸುವುದನ್ನು ಉದ್ಯೋಗಿಗೆ ಕಲಿಸಬೇಕು. ಈಗಾಗಲೇ ಕೆಲವು ಕಂಪೆನಿಗಳು ಮನೆಯಿಂದ ಕೆಲಸ ಮಾಡಲಿಕ್ಕೆ ಬೇಕಿರುವ ಮಾನಸಿಕ ಸ್ಥಿತಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಅಲ್ಲದೇ ಯೋಗ ತರಬೇತಿಗಳನ್ನು, ಮನಶಾಸ್ತ್ರಜ್ಞರೊಂದಿಗೆ ಮಾತುಕತೆಯನ್ನು ಏರ್ಪಡಿಸುತ್ತಿವೆ. ಇಂತಹ ಪ್ರಯತ್ನವನ್ನು ಎಲ್ಲ ಕಂಪೆನಿಗಳೂ ಮಾಡಬೇಕು.

ಹೆಣ್ಣುಮಕ್ಕಳ ಕಥೆಯೇನು?
ಕುಟುಂಬದ ಕಲ್ಪನೆ ಶುರುವಾದಾಗಿನಿಂದಲೂ ಹೆಣ್ಣು ಮನೆ ಗಾಗಿಯೇ ಕೆಲಸ ಮಾಡಿದವಳು. ವರ್ಕ್‌ ಫ್ರಂ ಹೋಂ ರೂವಾರಿ ಹೆಣ್ಣೇ. ಮನೆಯಲ್ಲೂ ದುಡಿದು ಕಚೇರಿಯಲ್ಲೂ ದುಡಿಯುವ ಹೆಣ್ಣಿಗೆ ಮನೆಯಿಂದಲೇ ಕಚೇರಿ ಕೆಲಸ ಮಾಡಬೇಕಾಗಿ ಬಂದಿದೆ. ಮಕ್ಕಳೂ ಮನೆಯಲ್ಲೇ ಇವೆ. ಈ ಕಾರಣಕ್ಕಾಗಿಯೇ, ಮಕ್ಕಳನ್ನು ಸಂಭಾಳಿಸುವುದು, ಅವರ ಬೇಡಿಕೆಗಳನ್ನು ಪೂರೈಸುವುದೇ ಆಕೆಗೆ ಸವಾಲಿನ ಕೆಲಸವಾಗಿದೆ. ಹೆಣ್ಣಿಗೆ ತನಗೆ ಬೇಕಾದ ಏಕಾಂತ ಸಿಗುತ್ತಿಲ್ಲ. ಮನೆಯಿಂದ ಕೆಲಸ ಮಾಡುತ್ತಿದ್ದಾಳೆ ಎಂದರೆ ಎಲ್ಲ ಸಮಯದಲ್ಲೂ ಲಭ್ಯವಿರುತ್ತಾಳೆ ಎಂದು ಪತಿ, ಮಕ್ಕಳು ಹಾಗೂ ಕುಟುಂಬಸ್ಥರು ಪದೇಪದೆ ಅನ್ಯ ಕೆಲಸಕ್ಕಾಗಿ ಅಪೇಕ್ಷಿಸುವುದು ಮಾಡುತ್ತಿದ್ದಾರೆ. ನೆಂಟರು ಬಂದರೆ ಕೆಲಸಕ್ಕೆ ಲಾಗಿನ್‌ ಆಗದಂಥ ಒತ್ತಡ ಆಕೆಯ ಮೇಲೆ ಬೀಳುತ್ತಿದೆ. ಈ ಕಾರಣಕ್ಕಾಗಿಯೇ, ಹೆಣ್ಣುಮಕ್ಕಳು ವರ್ಕ್‌ ಫ್ರಂ ಹೋಂ ಮಾಡುತ್ತಿದ್ದರೆ ಕುಟುಂಬಸ್ಥರು ಆಕೆಗೆ ಕೆಲಸ ಮಾಡಲು ಅನುಕೂಲವಾಗುವಂಥ ಮಾನಸಿಕ ವಾತಾವರಣ ಕಲ್ಪಿಸಿಕೊಡ ಬೇಕು. ಗಂಡ, ಮಕ್ಕಳು ಮನೆಯ ಜವಾಬ್ದಾರಿಗಳನ್ನು ಹಂಚಿಕೊಂಡು ಆಕೆಗೆ ವಿಶ್ರಾಂತಿ ನೀಡಬೇಕು.

ಹೆಚ್‌ಆರ್‌ ಪಾಲಿಸಿ ಬದಲಾವಣೆ
ಮೊದಲೆಲ್ಲ ಮಾನವ ಸಂಪನ್ಮೂಲ ವಿಭಾಗವೆಂಬುದೇ ಇರಲಿಲ್ಲ. ಕಂಪೆನಿಯ ಬೆಳವಣಿಗೆಯಾಗಿ ಉದ್ಯೋಗಿಗಳ ಸಂಖ್ಯೆ ಅಧಿಕವಾದಾಗ, ಒಟ್ಟು ಉತ್ಪನ್ನವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ಶುರುವಾದಾಗ ಹೆಚ್‌ಆರ್‌ ವಿಭಾಗ ಶುರುವಾಯಿತು. ಕಚೇರಿಯ ಶಿಸ್ತಿನ ಬಗ್ಗೆ ಪಾಠಗಳು ಶುರುವಾದವು. ನೌಕರನು ಕಚೇರಿಗೆ ಬಂದಾಗ ಆತನಿಗೆ ಪೂರಕವಾಗುವಂಥ ವಾತಾವರಣ ಇದ್ದರೆ ಕೆಲಸದಲ್ಲಿ ಗುಣಮಟ್ಟ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಬಹುದು ಎಂಬುದನ್ನು ಕಂಪೆನಿಗಳು ಕಂಡುಕೊಂಡವು. ಕಚೇರಿಯಲ್ಲಿ ಗುಣಮಟ್ಟದ ವಾತಾವರಣ ಸೃಷ್ಟಿಸಲು ಇಂದಿಗೂ ಹೊಸ ಹೊಸ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಬಂದಿರುವ ಹೆಚ್‌ಆರ್‌ ವಿಭಾಗ ಈಗ ಮನೆಯಿಂದ ಕೆಲಸ ನಿರ್ವಹಿಸಲು ಬೇಕಿರುವ ವಾತಾವರಣ ಸೃಷ್ಟಿಸಲು ಹೊಸ ಪಾಲಿಸಿಗಳನ್ನು ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ.

ಬದಲಾವಣೆ ಏನಾಗಬೇಕು?
ಮನುಷ್ಯ ಎಷ್ಟಿದ್ದರೂ ಸಂಘಜೀವಿ. ಆತನಿಗೆ ಗೆಳೆಯರು, ಸಹೋದ್ಯೋಗಿಗಳ ಒಡನಾಟದ ಅಗತ್ಯವಿರುತ್ತದೆ. ಈ ಕಾರಣಕ್ಕಾಗಿಯೇ ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಅವರಿಗೆ ಹೆಚ್ಚುವರಿ ರಜೆಗಳನ್ನು ಕೊಡುವುದು, ಪ್ರವಾಸಕ್ಕೆ ಅನುವು ಮಾಡಿಕೊಡಲು ಕಂಪೆನಿಗಳು ಮುಂದಾಗಬೇಕು. ತಿಂಗಳಿಗೊಮ್ಮೆ ಅವರಿಗೆ ಹೊಟೇಲ್‌ನಲ್ಲೋ ಅಥವಾ ರೆಸಾರ್ಟ್‌ಗಳಲ್ಲೋ ಸ್ನೇಹಿತರೊಂದಿಗೆ ಕಾಲ ಕಳೆಯುವುದಕ್ಕೆ ಉಚಿತ ಕೂಪನ್‌ಗಳನ್ನು ನೀಡುವ ಬಗ್ಗೆ ಯೋಚಿಸಿ, ತಮ್ಮ ಉದ್ಯೋಗಿಗಳ ಮಾನಸಿಕ ಒತ್ತಡವನ್ನು ತಗ್ಗಿಸುವ ಕೆಲಸವಾಗಬೇಕಿದೆ.

ಮನೆಯಿಂದ ಕೆಲಸ ಎಂಬುದು ಅತ್ಯಂತ ಸಕ್ಷಮ ಹೊಸ ಉದ್ಯೋಗ ವಿಧಾನವಾಗಿಯೇ ಬದಲಾವಣೆ ಆಗಬಹುದು. ಆ ಬದಲಾವಣೆಗೆ ತಕ್ಕಂತೆ ಕಂಪೆನಿಗಳು ಹಾಗೂ ಮುಖ್ಯವಾಗಿ ಉದ್ಯೋಗಿಗಳು ಬದಲಾಗಬೇಕಿದೆ. ಮನುಷ್ಯ ಪ್ರತೀ ಬಾರಿಯೂ ಪ್ರಾಪಂಚಿಕ ಒತ್ತಡಗಳು ನಿರ್ಮಾಣವಾದಾಗಲೆಲ್ಲ ಅದರಿಂದ ಹೊರಬರಲು ತ್ವರಿತವಾಗಿ ಕಲಿತುಬಿಡುತ್ತಾನೆ. ಆದರೂ ಈ ಕಲಿಕೆಗೆ ಅಂತ್ಯವಿಲ್ಲ. ಒಟ್ಟಲ್ಲಿ ಮನೆಯೆಂಬುದನ್ನು ಸದಾ ಸಂಪದ್ಭರಿತವಾಗಿರುವ ಇರುವೆಯ ಗೂಡನ್ನಾಗಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಮುಂದಿನ ದಿನಗಳಲ್ಲಿ ಮನುಷ್ಯನಿಗಿರುವ ನಿಜವಾದ ಅಗ್ನಿಪರೀಕ್ಷೆ.

(ಲೇಖಕರು ಹಿರಿಯ ಮಾನಸಿಕ ರೋಗ ತಜ್ಞರು, ಸಿದ್ಧಗಂಗಾ ಆಸ್ಪತ್ರೆ ತುಮಕೂರು)

ಡಾ|ಗಿರೀಶ್‌ ಚಂದ್ರ ಮನಶ್ಯಾಸ್ತ್ರಜ್ಞರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.