Udayavni Special

ಮೋದಿ ಜನಪ್ರಿಯತೆಗೆ ಕಾರಣಗಳೇನು?

ಚಿಂತನೆ

Team Udayavani, Jul 7, 2020, 6:17 AM IST

ಮೋದಿ ಜನಪ್ರಿಯತೆಗೆ ಕಾರಣಗಳೇನು?

ಯಾವ ವಿಷಯವನ್ನಾದರೂ ಕೂಡ ದೇಶದ ಕೊನೆಯ ವ್ಯಕ್ತಿಗೂ ತಿಳಿಯುವಂತೆ ಮಾತಿನ ಹಾಗೂ ಸಂಕೇತಗಳ ಮೂಲಕ ಹೇಳಬಲ್ಲವರು ಮೋದಿ. ತಮ್ಮ ಈ ಕೌಶಲದ ಭಾಗವಾಗಿಯೇ ದೇಶಕ್ಕೆ ಕೋವಿಡ್ 19 ಸಂದರ್ಭದಲ್ಲಿ ದೀಪ ಬೆಳಗಿಸುವ ಕರೆಕೊಟ್ಟಿದ್ದು. ಕೋವಿಡ್ 19 ವೀರರಿಗೆ ಚಪ್ಪಾಳೆ ತಟ್ಟಲು ಹೇಳಿದ್ದು. ಗಡಿ ಭಾಗಕ್ಕೆ ತೆರಳಿ ಸೈನಿಕರಿಗೆ ಮನೋಬಲ ತುಂಬಿದ್ದು. ಇಂತಹ ಸಂಕೇತಗಳು ಸಮುದಾಯವನ್ನು ಆಳದಲ್ಲಿ ಮುಟ್ಟುತ್ತವೆ, ಅದಕ್ಕೆ ಉತ್ಸಾಹ ತುಂಬುತ್ತವೆ ಮತ್ತು ಒಂದು ಭಾವನಾತ್ಮಕ ಏಕತೆಯ ಭಾವನೆ ತರುತ್ತವೆ.

ನಮಗೆ ಗೊತ್ತಿದೆ: ದೇಶಗಳು, ಸಮಾಜಗಳು, ಹೊಸ ಸಂಕಟಗಳ ಸುಳಿಯಲ್ಲಿ ಸಿಲುಕಿಕೊಂಡಂತೆ ಪ್ರಚಲಿತ ನಾಯಕರ ಜನಪ್ರಿಯತೆ ಬಿದ್ದು ಹೋಗುತ್ತದೆ. ಬಂದಿರುವ ಹೊಸ ಸೋಷಿಯೋ- ಪೊಲಿಟಿ­ಕಲ್‌ ಸಂದರ್ಭ ಅವರ ನಾಯಕತ್ವದ ಗುಣಗಳನ್ನು ಅಪ್ರಸ್ತುತ­ವಾಗಿಸಿ ಅವರನ್ನು ಮೂಲೆಗುಂಪಾಗಿಸುತ್ತದೆ. ಈಗ ಹೊಸ ವಿಚಾ­ರ­ಗಳನ್ನು ಹೊತ್ತು, ಹಳೆಯ ವೈಫ‌ಲ್ಯಗಳನ್ನು ಹಿಂದಿನ ನಾಯಕತ್ವದ ತಲೆಗೆ ಕಟ್ಟಿ ಹೊಸ ನಾಯಕರು ಉದಯಿಸುತ್ತಾರೆ.

ಇವೆಲ್ಲವೂ ಹರಿಯುವ ನೀರಿನಂತಹ ನಿರಂತರ ಪ್ರಕ್ರಿಯೆಗಳು. ಯಾರಿಗಾಗಿಯೂ ಕಾಯದ ಸೋಶಿಯೋ – ಪೊಲಿಟಿಕಲ್‌ ಪ್ರವಾಹಗಳು. ಬಿದ್ದವನನ್ನು ಇತಿಹಾಸದ ಬುಲ್ಡೋಜರ್‌ ಎತ್ತಿಕೊಂಡು ಹೋಗಿ ದೂರ ಎಸೆಯುತ್ತದೆ. ಗೆದ್ದವನ ಕಾಲ ಇದು. ಮತ್ತೆ ಅಲೆಗಳು ಬದಲಾಗುವ ತನಕ. ಹೀಗೆ ಸಮಾಜ ಎಷ್ಟು ವೇಗವಾಗಿ ಬದಲಾಗುತ್ತದೆಯೋ ಅಷ್ಟೇ ಶೀಘ್ರವಾಗಿ ನಾಯಕತ್ವ­ಗಳು ಏಳುತ್ತ, ಬೀಳುತ್ತ ಸಾಗುತ್ತವೆ.

ಏಕೆಂದರೆ ನಾಯಕತ್ವದ ಕುರಿತಾದ ಪ್ರೀತಿ ಮೂಲತಃ ಯುಗ ಧರ್ಮಕ್ಕನುಗುಣವಾಗಿ ಸಮುದಾಯದ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಒಂದು ಸೆಂಟಿಮೆಂಟ್‌. ಹೀಗಾಗಿಯೇ ಪ್ರತಿಯೊಂದು ಯುಗವೂ ವಿಭಿನ್ನ ಮನಸ್ಥಿತಿಯ ನಾಯಕರನ್ನು ಸೃಷ್ಟಿಸುವುದು. ಉದ್ದೇಶ ಮುಗಿದ ನಂತರ ಅವರನ್ನು ಇತಿಹಾಸದ ಮೂಲೆಗೆ ತಳ್ಳುವುದು. ಸಾಧಾ ರಣವಾಗಿ ನಾಯಕತ್ವದ ಕಥೆ ಒಂದು ಸಮಾಜದ ಏರಿಳಿತದ ಕಥೆ. ನಾಯಕತ್ವ ಒಂದು ಕಾಲಘಟ್ಟದ ಸಾಮಾಜಿಕ ಉತ್ಪನ್ನ.

ಆದರೆ ಪ್ರಧಾನಿ ನರೇಂದ್ರ ಮೋದಿಯಯವರಂತಹ ನಾಯಕತ್ವದ ಮಾತು ಬೇರೆ. ಬಹಳ ಕುತೂಹಲದ, ಅಚ್ಚರಿಯ, ಅಧ್ಯಯನದ ವಿಷಯ ಇದು. ಪ್ರಸ್ತುತದಲ್ಲಿ ನಮ್ಮ ದೇಶ ಸಂಕಟಗಳಿಂದ ತುಂಬಿಹೋಗಿದೆ. ಎಂತಹ ಸಮಸ್ಯೆಗಳು ನೋಡಿ! ಕೊರೊನಾ ದೇಶವನ್ನೆಲ್ಲ ವ್ಯಾಪಿಸಿದೆ. ಪರಿಣಾಮವಾಗಿ ಆರ್ಥಿಕತೆ ತೀವ್ರ ಕುಸಿದಿದೆ. ಲಕ್ಷಾಂತರ ನೌಕರಿಗಳು ನಾಪತ್ತೆಯಾಗಿವೆ. ವಲಸೆ ಕಾರ್ಮಿಕರು ಅನುಭವಿಸಿದ ನೋವುಗಳ ಕುರಿತ ದಾರುಣ ಕತೆಗಳು ದೇಶದಲ್ಲೆಲ್ಲ ಮಾರ್ದನಿಸಿವೆ. ಚೀನ ಗಡಿಯಂಚಿಗೆ ಬಂದು ನಿಂತಿದೆ.

ಎಡಪಂಥೀಯ ಟೀಕಾಸ್ತ್ರವಂತೂ ಮೋದಿಯ ವರ ವಿರುದ್ಧ ನಿರಂತರ ನಡೆದೇ ಇದೆ. ಸಾಧಾರಣ ವ್ಯಕ್ತಿತ್ವದ ನಾಯಕನೊಬ್ಬನನ್ನು ಇತಿಹಾಸದ ಕತ್ತಲೆಗೆ ತಳ್ಳಲು ಇವುಗಳಲ್ಲಿ ಒಂದೊಂದು ವಿಷಯವೇ ಸಾಕಿತ್ತು. ಆದರೆ ಇವೆಲ್ಲವೂ ಸೇರಿದ ಅಲೆ ಬಂದರೂ ಕೂಡ ಅಲುಗಾಡದೆ ನಿಂತು ಜನಪ್ರಿಯತೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಹೋಗಿರುವವರು ಮೋದಿ. ಇತ್ತೀಚಿನ ಕೆಲವು ಸಮೀಕ್ಷೆಗಳು ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ವೈಯಕ್ತಿಕ ವರ್ಚಸ್ಸು ಹೆಚ್ಚುತ್ತಲೇ ಇದೆ ಎಂದಿವೆ.

ಸಂಕಟಗಳ ನಡುವೆಯೂ ಮೋದಿಯವರನ್ನು ದೇಶದ ಶೇ. 65ರಷ್ಟು ಜನತೆ ಬೆಂಬಲಿಸುತ್ತದೆ. ಪ್ರೀತಿಸುತ್ತದೆ. ಈಗ ಚುನಾವಣೆಯಾದರೂ ಮೋದಿ ಮತ್ತೆ ಗೆದ್ದು ಪ್ರಧಾನಿಯಾಗಬಹುದು.ಇತಿಹಾಸದ ಎಲ್ಲ ಗ್ರಹಿಕೆಗಳನ್ನು ಮುರಿದು ಹಾಕಿದ್ದು ಮೋದಿ ವರ್ಚಸ್ಸು ಎಂಬು ದನ್ನು ಗಮನಿಸಬೇಕು. ಮೋದಿ ನಾಯಕತ್ವ ಸಾಧಾರಣವಾಗಿ ಬಂದು ಹೋಗುವ ರೀತಿಯ ನಾಯಕತ್ವ ಅಲ್ಲ. ತುಂಬ ಆಳವಾಗಿ ಜನಪದದಲ್ಲಿ, ಜನಮನದಲ್ಲಿ ಬೇರುಬಿಟ್ಟಿದ್ದು ಅದು.

ಮೋದಿಯವರ ಇಂತಹ ಜನಪ್ರಿಯತೆಗೆ ಬಹುಶಃ ಎರಡು ಮುಖ್ಯ ಕಾರಣಗಳಿವೆ. ಒಂದನೆಯದು ನಿಸ್ಸಂಶಯವಾಗಿಯೂ ಅವರ ವ್ಯಕ್ತಿತ್ವ. ಅವರ ನಾಯಕತ್ವದ ಸಮ್ಮೊàಹಿನಿ ವಿದ್ಯೆಯ ಆಧಾರಶಿಲೆ ಅದು. ಮೋದಿ ವ್ಯಕ್ತಿತ್ವದ ಮಹತ್ವದ ಅಂಶಗಳನ್ನು ಇಲ್ಲಿ ಗಮನಿಸಬೇಕು. ಒಂದನೆಯದು ಅವರ ಸಂವಹನ ಶಕ್ತಿ. ಯಾವ ವಿಷಯವನ್ನಾದರೂ ಕೂಡ ದೇಶದ ಕೊನೆಯ ವ್ಯಕ್ತಿಗೂ, ಅನಕ್ಷರಸ್ಥ ವ್ಯಕ್ತಿಗೂ ತಿಳಿಯುವಂತೆ ಮಾತಿನ ಹಾಗೂ ಸಂಕೇತಗಳ ಮೂಲಕ ಹೇಳಬಲ್ಲವರು ಅವರು.

ಗಾಂಧೀಜಿಯ ಹಾಗೆ, ರೂಪಕಗಳ ಮೂಲಕ ಸಂವಹಿಸಬಲ್ಲವರು ಅವರು. ತಮ್ಮ ಈ ಕೌಶಲದ ಭಾಗವಾಗಿಯೇ ದೇಶಕ್ಕೆ ಕೊರೊನಾ ಸಂದರ್ಭದಲ್ಲಿ ದೀಪ ಬೆಳಗಿಸುವ ಕರೆಕೊಟ್ಟಿದ್ದು. ಬಾಲ್ಕನಿಯಲ್ಲಿ ನಿಂತು ಕೊರೊನಾ ವೀರರಿಗೆ ಚಪ್ಪಾಳೆ ತಟ್ಟಲು ಹೇಳಿದ್ದು. ಗಡಿ ಭಾಗಕ್ಕೆ ತೆರಳಿ ಸೈನಿಕರಿಗೆ ಮನೋಬಲ ತುಂಬಿದ್ದು. ಇಂತಹ ಸಂಕೇತಗಳು ಸಮುದಾಯವನ್ನು ಆಳದಲ್ಲಿ ಮುಟ್ಟುತ್ತವೆ, ಅದಕ್ಕೆ ಉತ್ಸಾಹ ತುಂಬುತ್ತವೆ ಮತ್ತುಒಂದು ಭಾವನಾತ್ಮಕ ಏಕತೆಯ, ರಾಷ್ಟ್ರೀ ಯತೆಯ ಭಾವನೆಯನ್ನು ತರುತ್ತವೆ ಎನ್ನುವುದು ಅವರಿಗೆ ಗೊತ್ತು. ಹೀಗಾಗಿ ಮೋದಿ, ಅರ್ಥದಾಚೆಗಿನ ಸಂಕೇತಗಳನ್ನೇ ಹೆಚ್ಚು ಪ್ರೀತಿಸುವ ಭಾರತೀಯರಿಗೆ ಇಷ್ಟವಾಗುವುದು.

ಕೊರೊನಾ ಸಂದರ್ಭದಲ್ಲಿ ದೀಪ ಬೆಳಗಲು ದೇಶಕ್ಕೆ ಅವರು ನೀಡಿದ ಆಹ್ವಾನವನ್ನು ಸೂಕ್ಷ¾ವಾಗಿ ಗಮನಿಸಬೇಕು. ಅದು ಇಡೀ ದೇಶದ ಲಕ್ಷ್ಯವನ್ನು ಆ ಕಡೆಗೆ ಸಾಂಸ್ಕೃತಿಕ ಸಂಕೇತವೊಂದರ ಮೂಲಕ ಸೆಳೆಯುವ, ಕೇಂದ್ರೀಕರಿಸುವ ಪ್ರಯತ್ನ. ಸ್ವತಃ ತಾವು ಕೂಡ ದೀಪ ಬೆಳಗಿದರು. ದೇಶವೇ ನೋಡಿದೆ. ಮೋದಿ ದೀಪ ಬೆಳಗುವಾಗ ಆ ಬೆಳಕಿನಲ್ಲಿ ಕಂಡಿದ್ದು ಮೋದಿಯವರ ಆತ್ಮವಿಶ್ವಾಸ. ಬೆಟ್ಟದಂತಹ ಕಷ್ಟವನ್ನು ಕೂಡ ಎದುರಿಸಿ ನಿಲ್ಲಬಲ್ಲಂಥ‌ ಶಾಂತ ಮನಸ್ಥಿತಿ, ಧೈರ್ಯ, ತಾತ್ವಿಕತೆ. ಅದನ್ನು ಹಿಂದೆ ದೇಶ ಕಂಡಿದ್ದು ಇಂದಿರಾ ಗಾಂಧಿ ಅವರಲ್ಲಿ.

ಒಂದು ಸಮುದಾಯದ ಹೋರಾಟಕ್ಕೆ ಬಹುಶಃ ಮೋದಿ ಬೆಳಕಾದದ್ದು ಹೀಗೆ. ತಮ್ಮ ಹೋರಾಟದ ಪ್ರಾಮಾಣಿಕತೆಯನ್ನು ಅಗ್ನಿಸಾಕ್ಷಿಯಾಗಿಸಿದ್ದು ಹೀಗೆ. ಕೊರೊನಾ ವಿರುದ್ಧದ ತಮ್ಮ ಹೋರಾಟದ ಪ್ರಾಮಾಣಿಕತೆಯನ್ನು ಮೋದಿ ಪ್ರಮಾಣಿಸಿದ್ದು ಹೀಗೆ. ಪ್ರಸ್ತುತದ ಸಂಕಟದ ಗಳಿಗೆ ಯಲ್ಲಿಯೂ ಜನತೆ ಮೋದಿಯವರ ಬೆನ್ನ ಹಿಂದೆ ನಿಂತಿದ್ದು ಇಂತಹ ಭಾವನಾತ್ಮಕ ಅನುಭವದ ಹಿನ್ನೆಲೆಯಲ್ಲಿ. ಮೋದಿ ತುಂಬಿದ ವಿಚಿತ್ರ ಧೈರ್ಯ ಹಾಗೂ ನೀಡಿದ ಅಭಯದ ಭಾವನೆ ಯನ್ನು ಅನುಭವಿಸಿ. ಮೋದಿ ವ್ಯಕ್ತಿತ್ವ ಹೀಗೆ ಹಲವು ಸಂಕೇತಗಳ ಮೂಲಕ ಜನರಲ್ಲಿ ಮೂಡಿಸಿರುವ ಭರವಸೆಯ ಭಾವನೆಯೇ ಅವರನ್ನು ಈ ಸಂದರ್ಭದಲ್ಲಿಯೂ ಜನಪ್ರಿಯ ನಾಯಕರನ್ನಾಗಿಸಿದ್ದು.

ಇನ್ನೂ ಒಂದು ಮಾತು ಗಮನಿಸಬೇಕು. ಮೋದಿ ಸರಕಾರ ಆರ್ಥಿಕ ವಾಗಿ ತುಂಬ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟಿದೆ. ಎಷ್ಟೇ ಒತ್ತಡ ಬಂದರೂ ಭಾವಾವೇಶಕ್ಕೆ ಒಳಗಾಗಿ, ಜನಪ್ರಿಯತೆಯ ರಾಜ­ಕೀಯಕ್ಕೆ ಸಿಲುಕಿ ಕ್ರಮ ತೆಗೆದುಕೊಂಡಿಲ್ಲ. ಸರಕಾರದ ಹಣವನ್ನು ಹರಿದು ಹಂಚಿಲ್ಲ. ಮುಂದೆ ಬಂದುಬಿಡಬಹುದಾದ ಇನ್ನೂ ಹೆಚ್ಚಿನ ಸಂಕಟಗಳನ್ನು ಎದುರಿಸಲು ಬೇಕಾದ ಮಾನಸಿಕತೆ ಮತ್ತು ಸ್ಥೈರ್ಯವನ್ನು ಕಾದಿರಿಸಿಕೊಂಡೇ ಅದು ಮುನ್ನಡೆ ದಿರುವುದು ದೇಶದ ಪ್ರೌಢ ಮನಸ್ಸುಗಳಿಗೆ ಗೊತ್ತು. ಮೋದಿ ಜನ ಪ್ರಿಯತೆಗೆ ಕಾರಣ ಬಹುಶಃ ಜನತೆ ಅವರಲ್ಲಿ ಗಮನಿಸಿರುವ ಈ ರಾಜಕೀಯ ಪ್ರೌಢತೆ.

ಮತ್ತೂಂದು ವಿಷಯ… ಮೋದಿ ಕೇವಲ ರಾಜಕೀಯ ನಾಯಕನಾಗಿ ಜನರ ಮುಂದೆ ಕಾಣಿಸಿಕೊಳ್ಳುವುದಿಲ್ಲ. ನಮ್ಮ ದೇಶದಲ್ಲಿ ಜನಪ್ರಿಯತೆಯನ್ನು ದೀರ್ಘ‌ ಕಾಲದಲ್ಲಿ ಉಳಿಸಿಕೊಂಡ ನಾಯಕರು ಮೂಲತಃ ತಮ್ಮ ವ್ಯಕ್ತಿತ್ವದಲ್ಲಿ ರಾಜಕೀಯೇತರವಾದ ಅಂಶ ಹೊಂದಿದವರು. ಉದಾಹರಣೆಗೆ ಗಾಂಧಿ ಮತ್ತು ನೆಹರೂ, ಅಶೋಕ ಮತ್ತಿತರರು. ತುಂಬಾ ಕುತೂಹಲದ ವಿಷಯ ಏನೆಂದರೆ ಅದು ಹೇಗೋ ಮೋದಿ ನಾಯಕತ್ವ ದೇಶದ ಧಾರ್ಮಿಕ ಮನ್ನಣೆಯನ್ನೂ ಗಳಿಸಿದ್ದು. ನಮ್ಮ ಇತಿಹಾಸದ ನೆನಪಿನಲ್ಲಿ ಇನ್ನೂ ಜೀವಂತವಾಗಿಯೇ ಇರುವ, ವಿಶೇಷವಾಗಿ ಪಶ್ಚಿಮ ಏಶಿಯಾದ ಕೆಲವು ದೇಶಗಳಲ್ಲಿ ಈಗಲೂ ಚಾಲ್ತಿಯ­ಲ್ಲಿರುವ ಈ ರೀತಿಯ ಧಾರ್ಮಿಕ ರಾಜಕೀಯ ಸ್ವರೂಪದ ನಾಯಕರು ಅವರು. ನಮ್ಮ ದೇಶದ ಸಂದರ್ಭದಲ್ಲಿ ಅವರ ಜನಪ್ರಿಯತೆಯ ಕಾರಣಗಳಲ್ಲಿ ಇದೂ ಒಂದು.

ಸಂಕಷ್ಟದ ಗಳಿಗೆಗಳಲ್ಲಿಯೂ ಮೋದಿ ದೇಶಕ್ಕೆ ಪ್ರೀತಿಯ ನಾಯಕರಾಗಿ ಬೆಳೆಯುತ್ತಲೇ ನಿಂತಿದ್ದಕ್ಕೆ ಇನ್ನೂ ಒಂದು ಕಾರಣ­ವಿದೆ. ಅದೇನೆಂದರೆ ಮೋದಿ ದೇಶದ ಎರಡು ಪ್ರಮುಖ ಸಂಸ್ಕೃತಿ ಪರಂಪರೆಗಳ ಪ್ರಾತಿನಿಧಿಕ ನಾಯಕ. ನಮಗೆ ಗೊತ್ತು. ಓರ್ವ ಕೇವಲ ರಾಜಕೀಯ ನಾಯಕನಿಗಿಂತ ಹೆಚ್ಚಿನ ಶಕ್ತಿ ಸಂಸ್ಕೃತಿ -ರಾಜಕೀಯ ನಾಯಕನಿಗೆ ಇರುತ್ತದೆ. ಅಂದರೆ ಅವರ ಇಡೀ ನಡವಳಿಕೆಯಲ್ಲಿ, ಮಾತಿನಲ್ಲಿ, ಶರೀರ ಭಾಷೆಯಲ್ಲಿ, ಮೌನದಲ್ಲಿ ಕೂಡ ಆ ಸಂಸ್ಕೃತಿಗಳು ಪ್ರಕಟವಾಗುತ್ತಿರುತ್ತವೆ. ಆ ಸಂಸ್ಕೃತಿಗಳನ್ನು ಗಟ್ಟಿಗೊಳಿಸುವ, ಅವುಗಳನ್ನು ಪೋಷಿಸುವ ರೀತಿಯ ನಿರ್ಣಯಗಳನ್ನು ಅವರು ತೆಗೆದುಕೊಳ್ಳುತ್ತಿರುತ್ತಾರೆ. ವಿಷಯಗಳನ್ನು ಹೇಳುತ್ತಿರು­ತ್ತಾರೆ. ಇಡೀ ಸಮುದಾಯಕ್ಕೆ ಅರ್ಥವಾಗುವಂತೆ. ಅಂತಹ ವ್ಯಕ್ತಿ­ಯನ್ನು, ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಜನ ತಮ್ಮದೇ ವ್ಯಕ್ತಿತ್ವ ಆಲ್ಟರ್‌ ಇಗೋವನ್ನಾಗಿ ನೋಡುತ್ತಾರೆ.

ದೇಶದಲ್ಲಿ ಪ್ರಚಲಿತವಿರುವ ಅಂತಹ ಎರಡು ಸಂಸ್ಕೃತಿ ಪರಂಪರೆ­­ಗಳು: ದೇಶದ ಹಿಂದುತ್ವ ಪರಂಪರೆ ಹಾಗೂ ಆಧುನಿಕ ಭಾರತದ ಪಾಶ್ಚಿಮಾತ್ಯಗೊಂಡ ಮಧ್ಯಮ ವರ್ಗದ ಪರಂಪರೆ. ಈ ಎರಡೂ ವರ್ಗಗಳ ನಾಯಕರು ಮೋದಿ. ಮೋದಿಯವರ ಪರಿಕಲ್ಪನೆಯ ಆತ್ಮ ನಿರ್ಭರತೆ ಈ ಎರಡೂ ಸಂಸ್ಕೃತಿಗಳಿಗೂ ಪ್ರಿಯವಾದ ಶಬ್ದ. ಆತ್ಮ ನಿರ್ಭರತೆ ಹಿಂದೂ ಸಂಸ್ಕೃತಿಯ ಭಾಗ. ನಮಗೆ ಗೊತ್ತು. ಆತ್ಮತೃಪ್ತಿ ಅಲ್ಲಿ ಮಹತ್ವದ್ದು. ಅಲ್ಲಿ ಶಬ್ದಕ್ಕೆ ಧಾರ್ಮಿಕ ಕನೋಟೇಶನ್‌ಗಳಿವೆ. ಆತ್ಮಗೌರವವನ್ನು ಸಂಕೇತಿಸುವ ಪದ ಅದು. ಅಲ್ಲದೆ ಮ್ಯಾಕ್ರೋ ಹಂತದಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಎತ್ತಿ ಹಿಡಿಯುವ ಶಬ್ದ ಅದು. ಆ ಕುರಿತಾದ ಪಾಠಗಳನ್ನು ದೇಶಕ್ಕೆ ಹೇಳಿ ದೇಶವನ್ನು ಕಟ್ಟಿಹೋದವರು ಗಾಂಧಿ.

ಮೋದಿ ಆ ಮಾತನ್ನು ಮತ್ತೆ ಹೇಳಿದ್ದಾರೆ, ಆತ್ಮನಿರ್ಭರತೆಯ ಭಾಗವಾಗಿ ದೇಶ ಉತ್ಪನ್ನಗಳನ್ನು ಸ್ವತಃ ತಾನೇ ಉತ್ಪಾದಿಸಿ ಕೊಳ್ಳಬೇಕೆಂಬ ಮೋದಿ ಸಂಕಲ್ಪ ಕೂಡ ಮಧ್ಯಮ ವರ್ಗದವರಲ್ಲಿ ಮತ್ತೂಮ್ಮೆ ಹೊಸ ಭರವಸೆಗಳನ್ನು ಮೂಡಿಸಿದೆ. ಏಕೆಂದರೆ ಇದು ದೇಶದ ಮಾರು­ಕಟ್ಟೆಗೂ ಕೂಡ ಪ್ರಿಯವಾದ ಶಬ್ದ.

ದೇಶದ ಬಿಸಿನೆಸ್‌ ವಲಯದಲ್ಲಿ ಇದು ಸಂಚಲನಗಳನ್ನು ಮೂಡಿಸಿದೆ. ಭಾರತೀಯ ಕಂಪನಿಗಳಿಗೆ ಇದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ದೇಶದ ಮೇಲೆ ಆಗಬಹುದು. ಆತ್ಮ ನಿರ್ಭರತೆ ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಬಲ್ಲದು. ಚೀನದಂತಹ ಕೈಗಾರಿಕಾ ಬೆಳವಣಿಗೆಗೆ ಇದು ಇಂಬು ಕೊಡಬಹುದು. ಸಹಜವಾಗಿ ಮಧ್ಯಮ ವರ್ಗ ಮೋದಿಯವರನ್ನು ಮತ್ತೆ ಬೆಂಬಲಿಸಿದೆ. ಮೋದಿ ಜನಪ್ರಿಯತೆಯ ಗುಟ್ಟು ಇದು. ಮೋದಿ ನಾಯಕತ್ವ ತುಂಬ ಸಂಕೀರ್ಣ ಸ್ವರೂಪದ್ದು. ಧಾರ್ಮಿಕ, ಸಾಮಾಜಿಕ, ರಾಜಕೀಯ ಅಂಶಗಳನ್ನು ಹೊಂದಿದೆ. ಹೀಗಾಗಿಯೇ ಗಟ್ಟಿ ಅದು.

– ಡಾ| ಆರ್‌.ಜಿ. ಹೆಗಡೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಗುಚಿ ಬಿದ್ದ ಸಿಮೆಂಟ್ ಹುಡಿ ತುಂಬಿದ ಟ್ಯಾಂಕರ್: ಮಣ್ಣಿನಡಿ ಹೂತು ಹೋದ ಚಾಲಕ

ಮಗುಚಿ ಬಿದ್ದ ಸಿಮೆಂಟ್ ಹುಡಿ ತುಂಬಿದ ಟ್ಯಾಂಕರ್: ಮಣ್ಣಿನಡಿ ಹೂತು ಹೋದ ಚಾಲಕ

ಅಯೋಧ್ಯೆಯಲ್ಲಿ ತಲೆಎತ್ತಲಿದೆ “ರಾಮಮಂದಿರ ಮಾದರಿ” ಬೃಹತ್ ರೈಲ್ವೆ ನಿಲ್ದಾಣ

ಅಯೋಧ್ಯೆಯಲ್ಲಿ ತಲೆಎತ್ತಲಿದೆ “ರಾಮಮಂದಿರ ಮಾದರಿ” ಬೃಹತ್ ರೈಲ್ವೆ ನಿಲ್ದಾಣ

ಅಮಿತ್ ಶಾ ಬಗ್ಗೆ ಆಕ್ಷೇಪಾರ್ಹ ಬರಹ: ಕೆಪಿಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ವ್ಯಕ್ತಿ ಬಂಧನ

ಅಮಿತ್ ಶಾ ಬಗ್ಗೆ ಆಕ್ಷೇಪಾರ್ಹ ಬರಹ: ಕೆಪಿಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ಕಾರ್ಯದರ್ಶಿ ಬಂಧನ

ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಮುನ್ನ ಗೂಗಲ್ ನಲ್ಲಿ ಹುಡುಕಾಡಿದ ವಿಷಯ ಯಾವುದು ಗೊತ್ತಾ?

ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಮುನ್ನ ಗೂಗಲ್ ನಲ್ಲಿ ಹುಡುಕಾಡಿದ ವಿಷಯ ಯಾವುದು ಗೊತ್ತಾ?

ಸಿಎಂ ತವರು ಶಿವಮೊಗ್ಗದಲ್ಲಿ ಮತ್ತೋಬ್ಬ ಶಾಸಕರಿಗೆ ಕೋವಿಡ್-19 ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ರಿಗೆ ಕೋವಿಡ್-19 ಪಾಸಿಟಿವ್

ಸೋಂಕಿನಿಂದ ಗುಣಮುಖ: ಬೆಳಗಾವಿಯಲ್ಲಿ ಯುವಕನಿಗೆ ಮಾಲೆ ಹಾಕಿ ಪಟಾಕಿ ಸಿಡಿಸಿ ಸ್ವಾಗತ

ಸೋಂಕಿನಿಂದ ಗುಣಮುಖ: ಬೆಳಗಾವಿಯಲ್ಲಿ ಯುವಕನಿಗೆ ಮಾಲೆ ಹಾಕಿ ಪಟಾಕಿ ಸಿಡಿಸಿ ಸ್ವಾಗತ

ರಕ್ಷಾಬಂಧನ‌: ಭ್ರಾತೃ – ಭಗಿನಿ ಬಾಂಧವ್ಯ ಬಂಧನ

ರಕ್ಷಾಬಂಧನ‌: ಭ್ರಾತೃ – ಭಗಿನಿ ಬಾಂಧವ್ಯ ಬಂಧನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19 ಅವಧಿಯಲ್ಲಿ ರಕ್ಷಾ ಬಂಧನವೆಂಬ ಮಮತೆಯ ಹಬ್ಬ

ಕೋವಿಡ್ 19 ಅವಧಿಯಲ್ಲಿ ರಕ್ಷಾ ಬಂಧನವೆಂಬ ಮಮತೆಯ ಹಬ್ಬ

ರಾಷ್ಟ್ರೀಯ ಶಿಕ್ಷಣ ನೀತಿ 2020: ಉನ್ನತ ಶಿಕ್ಷಣ ಇನ್ನು ಹೆಚ್ಚು ವೃತ್ತಿಪರ, ಸಂಶೋಧನೆ ಪರ

ರಾಷ್ಟ್ರೀಯ ಶಿಕ್ಷಣ ನೀತಿ 2020: ಉನ್ನತ ಶಿಕ್ಷಣ ಇನ್ನು ಹೆಚ್ಚು ವೃತ್ತಿಪರ, ಸಂಶೋಧನೆ ಪರ

ಮಕ್ಕಳಿಗೆ ನಾವೇನು ಕಲಿಸಬೇಕು?: ಮಗುವಿನೊಂದಿಗೆ ಪೋಷಕರ ಸಂಬಂಧ ‘ಫೆದರ್ ಟಚ್’ ಇದ್ದಂತೆ

ಮಕ್ಕಳಿಗೆ ನಾವೇನು ಕಲಿಸಬೇಕು?: ಮಗುವಿನೊಂದಿಗೆ ಪೋಷಕರ ಸಂಬಂಧ ‘ಫೆದರ್ ಟಚ್’ ಇದ್ದಂತೆ

ಶಿಕ್ಷಣದ ಶ್ರೇಷ್ಠತೆಯ ಹೊಸ ಅಲೆ ಆರಂಭ

ಶಿಕ್ಷಣದ ಶ್ರೇಷ್ಠತೆಯ ಹೊಸ ಅಲೆ ಆರಂಭ

ಕೋವಿಡ್ 19 ಕಲಿಸಿದ ಪಾಠ: ಪರ್ಯಾಯ ಶಿಕ್ಷಣ ಪದ್ಧತಿಗೆ ಇದು ಸಕಾಲವೇ?

ಕೋವಿಡ್ 19 ಕಲಿಸಿದ ಪಾಠ: ಪರ್ಯಾಯ ಶಿಕ್ಷಣ ಪದ್ಧತಿಗೆ ಇದು ಸಕಾಲವೇ?

MUST WATCH

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer

udayavani youtube

ಮಂಗೋಶ್ಟಿನ್ ಬೆಳೆಯುವ ಸೂಕ್ತ ವಿಧಾನ | How To Grow Mangosteen Fruit |FULL INFORMATION

udayavani youtube

New Education Policy 2020: All the key takeaways | Udayavaniಹೊಸ ಸೇರ್ಪಡೆ

ಕಾರ್‌ಗೆ ನಮಸ್ಕಾರ ; ಲಾಕ್‌ಡೌನ್‌ ವೇಳೆ ಧೂಳೆಬ್ಬಿಸಿದ ಕಾರ್‌ಗಳು

ಕಾರ್‌ಗೆ ನಮಸ್ಕಾರ ; ಲಾಕ್‌ಡೌನ್‌ ವೇಳೆ ಧೂಳೆಬ್ಬಿಸಿದ ಕಾರ್‌ಗಳು

ಮಗುಚಿ ಬಿದ್ದ ಸಿಮೆಂಟ್ ಹುಡಿ ತುಂಬಿದ ಟ್ಯಾಂಕರ್: ಮಣ್ಣಿನಡಿ ಹೂತು ಹೋದ ಚಾಲಕ

ಮಗುಚಿ ಬಿದ್ದ ಸಿಮೆಂಟ್ ಹುಡಿ ತುಂಬಿದ ಟ್ಯಾಂಕರ್: ಮಣ್ಣಿನಡಿ ಹೂತು ಹೋದ ಚಾಲಕ

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಅಯೋಧ್ಯೆಯಲ್ಲಿ ತಲೆಎತ್ತಲಿದೆ “ರಾಮಮಂದಿರ ಮಾದರಿ” ಬೃಹತ್ ರೈಲ್ವೆ ನಿಲ್ದಾಣ

ಅಯೋಧ್ಯೆಯಲ್ಲಿ ತಲೆಎತ್ತಲಿದೆ “ರಾಮಮಂದಿರ ಮಾದರಿ” ಬೃಹತ್ ರೈಲ್ವೆ ನಿಲ್ದಾಣ

ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…

ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.