ದಡ ಸೇರದೆ ಮುಳುಗುವ ಪ್ರಾದೇಶಿಕ ಪಕ್ಷಗಳು

Team Udayavani, Nov 5, 2019, 5:17 AM IST

ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದು, ದೆಹಲಿಗೆ ಸಡ್ಡು ಹೊಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದ್ದರೆ, ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಅಧಿಕಾರ ಹೋಗಲಿ, ಚುನಾವಣೆಯಲ್ಲಿ ಒಂದು ಗೌರವಾನ್ವಿತ ಸೀಟುಗಳನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ? ಇವುಗಳಲ್ಲಿ ಕೆಲವು ಪಕ್ಷಗಳು ಖಾತೆಗಳನ್ನು ತೆರೆಯಲೂ ಅಸಮರ್ಥವಾಗಿ ಮುಳುಗಿವೆ.

ಕರ್ನಾಟಕವು ಇತ್ತೀಚೆಗೆ ಹಿಂದೆಂದೂ ಕಂಡು ಕೇಳರಿಯದ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದ್ದು, ಕೇಂದ್ರ ಸರ್ಕಾರದಿಂದ ನಿರೀಕ್ಷೆಯ ನೆರವು ದೊರಕಲಿಲ್ಲ ಮತ್ತು ಬಂದಿರುವ ನೆರವೂ ಭೀಮನಹೊಟ್ಟೆಗೆ ಕಾಸಿನ ಮಜ್ಜಿಗೆಯಂತಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ, ನಮ್ಮಲ್ಲೂ ಪ್ರಾದೇಶಿಕ ಪಕ್ಷದ ಅಧಿಕಾರ ಇದ್ದಿದ್ದರೆ, ಎನ್ನುವ ಚಿಂತನೆಯನ್ನು ಹುಟ್ಟು ಹಾಕಿದೆ. ಇದು ಇನ್ನೂ ಮೆಲು ಧ್ವನಿಯಲ್ಲಿ ಇದ್ದು, ಈ ಬಾರಿ ರಾಜಕೀಯ ವೀಕ್ಷಕರಲ್ಲದೇ ಜನಸಾಮಾನ್ಯರೂ ಈ ಬಗ್ಗೆ ಸ್ವಲ್ಪ ಗಂಭೀರವಾಗಿ ಮಂಥನ ಮಾಡುತ್ತಿ¨ªಾರೆ. ದೇಶದ ಬಹುತೇಕ ಹಿಂದಿ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳು ಇವೆ. ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ (ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಮೈತ್ರಿ ಸರ್ಕಾರ)ಗಳಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರ ಇವೆ. ಜಮ್ಮು ಮತ್ತು ಕಾಶ್ಮೀರ, ಮತ್ತು ಪಂಜಾಬ್‌ನಲ್ಲೂ ತೀರಾ ಇತ್ತೀಚಿನವರೆಗೆ ಪ್ರಾದೇಶಿಕ ಪಕ್ಷಗಳ ದರ್ಬಾರು ಇತ್ತು. ದಕ್ಷಿಣದ ನಾಲ್ಕೂ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದರೂ, ಕರ್ನಾಟಕ ಮಾತ್ರ ರಾಷ್ಟ್ರೀಯ ಪಕ್ಷದ ತೆಕ್ಕೆಯಲ್ಲಿಯೇ ಸದಾ ಇರುತ್ತದೆ. ಕೇಂದ್ರ ಸರ್ಕಾರದಿಂದ ರಾಜ್ಯದ ಬೇಡಿಕೆಗಳಿಗೆ ಸರಿಯಾದ ಸ್ಪಂದನೆ ದೊರಕದಿ¨ªಾಗ ಮತ್ತು ಲೋಕಸಭಾ-ವಿಧಾನಸಭಾ ಚುನಾವಣೆಯ ಪೂರ್ವ ದಲ್ಲಿ ಪ್ರಾದೇಶಿಕ ಪಕ್ಷದ ಪರಿಕಲ್ಪನೆ ಚುರುಕುಗೊಳ್ಳುತ್ತದೆ ಮತ್ತ ಅದೇ ವೇಗದಲ್ಲಿ ಮಣ್ಣುಗೂಡುತ್ತದೆ ಕೂಡಾ.

ಕರ್ನಾಟಕದಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವಾಗಿದೆ. ಮೈಸೂರು ಮೂಲದ ಸಾಹುಕಾರ ಚೆನ್ನಯ್ಯನವರ ಪ್ರಜಾಪಕ್ಷ, ಶಾಂತವೇರಿ ಗೋಪಾಲಗೌಡರ ಸಂಯುಕ್ತ ಮತ್ತು ಪ್ರಜಾ ಸೋಷಿಯಲಿಸ್ಟ್‌ ಪಕ್ಷಗಳು, ಕೆಂಗಲ್‌ ಹನುಮಂತಯ್ಯನವರ ಸುರಾಜ್ಯ ಪಕ್ಷ, ಕೆ.ಎಚ್‌. ಪಾಟೀಲರ ರೆಡ್ಡಿ ಕಾಂಗ್ರೆಸ್‌ ಪಕ್ಷ, ದೇವರಾಜ್‌ ಅರಸುರವರ ಅರಸು ಕಾಂಗ್ರೆಸ್‌, ಗುಂಡೂರಾಯರ ಇಂದಿರಾ ಕಾಂಗ್ರೆಸ್‌, ಎ.ಕೆ. ಸುಬ್ಬಯ್ಯನವರ ಕನ್ನಡನಾಡು, ಬಂಗಾರಪ್ಪವನರ ಕರ್ನಾಟಕ ಕ್ರಾಂತಿ ರಂಗ- ಕರ್ನಾಟಕ ಕಾಂಗ್ರೆಸ್‌, ರಾಮಕೃಷ್ಣ ಹೆಗೆಡೆಯವರ ಲೋಕಶಕ್ತಿ, ಸಾರಿಗೆ ಮತ್ತು ಪತ್ರಿಕೋದ್ಯಮಿ ವಿಜಯ ಸಂಕೇಶ್ವರರ ಕನ್ನಡನಾಡು, ಶ್ರೀರಾಮುಲುರವರ ಬಿಎಸ್‌ಅರ್‌ ಪಕ್ಷ, ಪ್ರಭಾಕರ ರೆಡ್ಡಿಯವರ ಕನ್ನಡ ಪಕ್ಷ, ವಾಟಾಳ್‌ ನಾಗರಾಜರ ಕನ್ನಡ ಚಳ ವಳಿ ವಾಟಾಳ್‌ ಪಕ್ಷ, ಲಂಕೇಶರ ಪ್ರಗತಿ ರಂಗ, ನೈಸ್‌ರೋಡ್‌ ಖ್ಯಾತಿಯ ಅಶೋಕ್‌ ಖೇಣಿಯವರ ಕರ್ನಾಟಕ ಮಕ್ಕಳ ಪಕ್ಷ, ಕೆಲವು ಬುದ್ಧಿಜೀವಿಗಳು ಮತ್ತು ಚಿಂತಕರಿಂದ ಸರ್ವೋದಯ ಕರ್ನಾಟಕ ಪಕ್ಷ, ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ, ಕನ್ನಡ ಚಲನಚಿತ್ರ ನಟ ಉಪೇಂದ್ರರ ಪ್ರಜಾಕೀಯ, ನಿವೃತ್ತ ಪೋಲಿಸ್‌ ಅಧಿಕಾರಿ ಅನುಪಮಾ ಶೆಣೈಯವರ ಭಾರತೀಯ ಜನಶಕ್ತಿ ಕಾಂಗ್ರೆಸ್‌, ಶಾಸಕ ವರ್ತೂರು ಪ್ರಕಾಶರ ನಮ್ಮ ಕಾಂಗ್ರೆಸ್‌, ಮಹದಾಯಿ-ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ಹುಟ್ಟಿದ ಜನಸಾಮಾನ್ಯ ಕಾಂಗ್ರೆಸ್‌…ಇವು ಕಳೆದ ಆರು ದಶಕದಲ್ಲಿ ಕರ್ನಾಟಕದಲ್ಲಿ ಉದಯಿಸಿ ಮತ್ತು ಬಹುತೇಕ ಅಸ್ತಮಿಸಿದ ಪ್ರಾದೇಶಿಕ ಪಕ್ಷಗಳು. ದೇವೇಗೌಡರ ಜಾತ್ಯಾತೀತ ಜನತಾದಳವು ರಾಷ್ಟ್ರೀಯ ಪಕ್ಷವೋ, ಪ್ರಾದೇಶಿಕ ಪಕ್ಷವೋ ಎನ್ನುವ ಗೊಂದಲದಲ್ಲಿದೆ. ಅದರ ಪ್ರಭಾವ ಕೆಲವೇ ಪ್ರದೇಶಕ್ಕೆ ಸೀಮಿತವಾಗಿದ್ದು ಅದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಲಿಲ್ಲ ಮತ್ತು ರಾಷ್ಟ್ರೀಯ ಪಕ್ಷವಾಗಿಯೂ ಕಾಣಿಸುತ್ತಿಲ್ಲ.

ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿ ಏಕೆ ಹಳಿ ಏರುವುದಿಲ್ಲ?
ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದು, ಕೇಂದ್ರದಲ್ಲಿ ಕಿಂಗ್‌ ಮೇಕರ್‌ ಆಗಿ, ದೆಹಲಿಗೆ ಸಡ್ಡು ಹೊಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದ್ದರೆ, ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಅಧಿಕಾರ ಹೋಗಲಿ, ಚುನಾವಣೆಯಲ್ಲಿ ಒಂದು ಗೌರವಾನ್ವಿತ ಸೀಟುಗಳನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ? ಇವುಗಳಲ್ಲಿ ಕೆಲವು ಪಕ್ಷಗಳು ಖಾತೆಗಳನ್ನು ತೆರೆಯಲೂ ಅಸಮರ್ಥವಾಗಿ ಮುಳುಗಿವೆ. ಕೆಲವು ಪಕ್ಷಗಳು ಒಂದಂಕಿ ಸೀಟುಗಳಿಗೆ ತೃಪ್ತಿ ಪಟ್ಟರೆ, ಒಂದೆರಡು ಪಕ್ಷಗಳು ಕಷ್ಟದಲ್ಲಿ ಎರಡಂಕಿ ತಲುಪಿವೆ. ಕೆಲವು ರಾಜಕೀಯ ವೀಕ್ಷಕರ ಪ್ರಕಾರ ಜನಪ್ರಿಯ ಮತ್ತು ಪ್ರಭಾವಿ ಧುರೀಣರ ಪಕ್ಷಗಳಿಗೆ ಸಂಪನ್ಮೂಲ ಕೊರತೆಯಿಂದ ಮೇಲೇಳಲಾಗಲಿಲ್ಲ. ಇನ್ನು ಕೆಲವು ಪಕ್ಷಗಳು ಸಂಪನ್ಮೂಲ ಸಾಕಷ್ಟು ಇದ್ದರೂ ಜನಪ್ರಿಯ ಮತ್ತು ಪ್ರಭಾವಿ ಧುರೀಣರು ಇಲ್ಲದಿರುವುದರಿಂದ ವಿಫ‌ಲವಾದವು.
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ವೈಫ‌ಲ್ಯಕ್ಕೆ ಇದು ಕಾರಣ ಎನ್ನುವುದರಲ್ಲಿ ಸಹಮತವಿದೆ. ಆದರೆ, ಪ್ರಾದೇಶಿಕ ಪಕ್ಷಗಳ ಸ್ಥಾಪನೆಗೆ ಮೂಲ ಕಾರಣವಾದ ನಾಡು-ನುಡಿ-ಸಂಸ್ಕೃತಿ, ಪ್ರಾದೇಶಿಕ ಅಸಮಾನತೆ, ಕೇಂದ್ರ ಸರ್ಕಾರದ ಪಕ್ಷಪಾತ ಧೋರಣೆ, ಕೇಂದ್ರ ವಿರೋಧಿ ನೀತಿ, ಭಾಷಾಹೇರಿಕೆ, ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಕೇಂದ್ರ ಸರ್ಕಾರದ ನೀತಿಗಳು, ಅಭಿವೃದ್ಧಿಯಲ್ಲಿ ಹಿನ್ನಡೆ ಮುಂತಾದ ಭಾವನಾತ್ಮಕ ವಿಷಯಗಳ ಮೇಲೆ ಆಗದಿರುವುದು ಮತ್ತು ಇವುಗಳನ್ನು ಸರಿಯಾಗಿ ಇನ್ನಿತರ ರಾಜ್ಯಗಳಂತೆ ನಗದೀಕರಣ ಮಾಡಲಾಗದ ಮನ ಸ್ಥಿತಿ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿ ಬೇರೂರದಂತೆ ಮಾಡಿವೆ.

ಅಕಸ್ಮಾತ್‌ ಇವು ಅವುಗಳ ಪ್ರಣಾಳಿಕೆಯಲ್ಲಿ ಇದ್ದರೂ, ಇನ್ನಿತರ ರಾಜ್ಯಗಳ ಪ್ರಾದೇಶಿಕ ಪಕ್ಷಗಳಂತೆ lಛಿಠಿಠಿಛಿr ಮತ್ತು sಟಜಿrಜಿಠಿನಲ್ಲಿ ಕಾಣದೇ ಮೇಲು ನೋಟಕ್ಕೆ ಕವರ್‌ ನೋಟ್‌ ಆಗಿರುತ್ತವೆ. ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆಯನ್ನು ಜನಸಾಮಾನ್ಯರಲ್ಲಿ ಬಿಂಬಿ ಸುವಲ್ಲಿ, ಅಚ್ಚೊತ್ತುವುದರಲ್ಲಿ ಅವರ ಚಿಂತನೆಯನ್ನು ಬದಲಿ ಸುವುದರಲ್ಲಿ ಈ ಪಕ್ಷಗಳ ಧುರೀಣರು ವಿಫ‌ಲರಾದದ್ದು ಈ ಪಕ್ಷಗಳ ಹಿನ್ನಡೆಗೆ ಕಾರಣವಾಯಿತು.

ಇದಕ್ಕೂ ಮೇಲಾಗಿ ಈ ಯಾವ ಪಕ್ಷಗಳೂ ಒಂದು ಸದೃಢ ನೆಲೆಗಟ್ಟು, ಅದರ್ಶ, ಯೋಜನೆಗಳು, ತತ್ವ, ನೀತಿ- ನಿರೂಪಣೆಯ ಮೇಲೆ ಉದಯಿಸಲಿಲ್ಲ. ಈ ಎÇÉಾ ಪಕ್ಷಗಳ ಹಿಂದೆ ಇರುವವರು, ಅವರು ಈ ಹಿಂದೆ ಇರುವ ಪಕ್ಷಗಳಿಂದ ನಿರ್ಲಕ್ಷಿಸಲ್ಪಟ್ಟ, ಹೊರಹಾಕಲ್ಪಟ್ಟ, ವರ್ಚಸ್ಸನ್ನು ಕಳೆದುಕೊಂಡ ಧುರೀಣರು ಇರುತ್ತಿದ್ದು, ತಮ್ಮ ಹಠ ಸಾಧಿಸಲು, ತಾವಿನ್ನೂ ರಾಜಕೀಯದಲ್ಲಿ ಪ್ರಸ್ತುತ ಎಂದು ತೋರಿಸಲು, ರಾಜಕೀಯ ದ್ವೇಷ ಮತ್ತು ಪ್ರತಿಕಾರ ಸಾಧಿಸಲು, ಪುನಃ ವೇದಿಕೆ ಏರಲು, ಕನಿಷ್ಠ ಕೆಲವು ಸೀಟುಗಳನ್ನಾದರೂ ಗಳಿಸಿ ಅಧಿಕಾರ ಹಂಚುವಿಕೆಯ ಚೌಕಾಶಿಯಲ್ಲಿ ಮೇಲುಗೈ ಸಾಧಿಸಲು… ಹೀಗೆ ಜನಸಾಮಾನ್ಯರಿಗೆ ಅರ್ಥವಾಗದ ರಾಜಕೀಯ ತಂತ್ರದ ಅಗೋಚರ ಅಜೆಂಡಾಗಳು ಇತ್ತೇ ವಿನಃ ಪ್ರಣಾಳಿಕೆಗಳಲ್ಲಿ ತೋರಿಸುವ ಕನ್ನಡ ನಾಡು, ನುಡಿ, ಅಸ್ಮಿತೆ ನಾಡಿನ ಅಭಿವೃದ್ಧಿಗಳೆಲ್ಲವೂ ತೋರಿಕೆಗೆ ಸೀಮಿತವಾದವು.

ಕೆಲವರಂತೂ ತಮ್ಮ ರಾಜ್ಯದಲ್ಲಿ ನೆಲೆಗಟ್ಟನ್ನು ಭದ್ರಗೊಳಿಸಿಕೊಂಡು ರಾಷ್ಟ್ರ ರಾಜಕಾರಣದಲ್ಲಿ ಕೈ ಆಡಿಸಲು ಇಂಥ ಪ್ರಯತ್ನ ಮಾಡಿದರೇ ವಿನಃ ಅವರಲ್ಲಿ ಬದ್ಧತೆ ಇರಲಿಲ್ಲ. ರಾಜ್ಯದಲ್ಲಿ ಉನ್ನತ ಅಧಿಕಾರ ಅನುಭವಿಸಿದ್ದ ದೇವರಾಜ ಅರಸ್‌ ಮತ್ತು ರಾಮಕೃಷ್ಣ ಹೆಗಡೆಯವರು ಪ್ರಾದೇಶಿಕ ಪಕ್ಷಗಳನ್ನು ಹುಟ್ಟು ಹಾಕಿದಾಗ ಅವರಲ್ಲಿ ಈ ಅಜೆಂಡಾ ಸುಪ್ತವಾಗಿತ್ತು ಎಂದು ರಾಜಕೀಯ ವಿಮಶ‌ìಕರು ಟೀಕಿಸಿದ್ದರು. ಈ ಸೂಕ್ಷ ¾ವನ್ನು ತಿಳಿದೇ ಕನ್ನಡಿಗರು ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಲು ಮುಂದೆ ಬರಲಿಲ್ಲ ಎನ್ನುವ ಅಭಿಪ್ರಾಯವೂ ಇದೆ. ತಮಿಳುನಾಡಿನ ಪ್ರಾದೇಶಿಕ ಪಕ್ಷದ ಧುರೀಣರು ಮಾತನಾಡುವಾಗ “ತಮಿಳುನಾಡು-ತಮಿಳು’ ಎಂದು ಆರಂಭಿಸಿ ಅದೇ ಶಬ್ದಗಳಲ್ಲಿ ಮುಗಿಸುತ್ತಾರೆ. ಈ ಬದ್ಧತೆ ನಮ್ಮ ಧುರೀಣರಲ್ಲಿ ಕಾಣಲಿಲ್ಲ.

ನಾವು ಕನ್ನಡಿಗರು ಎಷ್ಟು?
ನಾವು ಆರೂವರೆ ಕೋಟಿ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ, ವಾಸ್ತವದಲ್ಲಿ ನಿಜವಾದ ಕನ್ನಡಿಗರ ಸಂಖ್ಯೆ ಎಷ್ಟು ಎನ್ನುವುದು ಗೊಂದಲವಿದೆ. ನಮ್ಮಲ್ಲಿ ಉರ್ದು, ತೆಲುಗು, ಮರಾಠಿ, ತಮಿಳು, ಹಿಂದಿ, ಮಲಯಾಳಂ, ಗುಜರಾತಿ ಭಾಷಿ ಕರೂ ಗಮನಾರ್ಹ ಪ್ರಮಾಣದಲ್ಲಿ ಇದ್ದಾರೆ. ಕನ್ನಡೇತರರೆಲ್ಲ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿದ್ದು, ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯಲ್ಲಿ ಬೆರೆತಿರು ವುದು ಕಡಿ ಮೆ. ಕರ್ನಾಟಕ ಏಕೀಕರಣವಾಗಿ ಆರು ದಶಕಗಳಾದರೂ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅವರನ್ನು ರಾಜ್ಯದ ಮುಖ್ಯ ವಾಹಿನಿಗೆ ಒಳಗೂಡಿಸುವ ಪ್ರಯತ್ನವನ್ನೂ ಮಾಡಲಾಗಿಲ್ಲ. ಮತ ಬ್ಯಾಂಕ್‌ ರಾಜಕಾರಣದಲ್ಲಿ ಅವರ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲಾಗಿದೆ. ಪ್ರಾದೇಶಿಕ ಪಕ್ಷಗಳು ಮುನ್ನೆಲೆಗೆ ಬಂದರೆ ತಮ್ಮತನ ಸಂಕಷ್ಟದಲ್ಲಿ ಸಿಲುಕಬಹುದು ಎನ್ನುವ ಅವ್ಯಕ್ತ ಚಿಂತನೆ ಅವರಲ್ಲಿ ಇದ್ದು, ಅವರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಿಸುವುದು ಕಷ್ಟ.

ಒಂದು ಪ್ರಾದೇಶಿಕ ಪಕ್ಷ ದಡ ಸೇರಬೇಕಿದ್ದರೆ, ಅದರ ಹಿಂದೆ ಪ್ರಭಾವಿ, ವರ್ಚಸ್ವಿ, ಜನಪ್ರಿಯ ಧುರೀಣರು ಇರಬೇಕು. ಅವರು ಜನರ ಭಾವನೆಗಳಿಗೆ ಮತ್ತು ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವದವ ರಾಗಿರಬೇಕು. ಅಣ್ಣಾ ದೊರೈ, ಎಮ….ಜಿ.ಆ ರ್‌, ಕರುಣಾನಿಧಿ, ಜಯಲಲಿತಾ, ಚಂದ್ರಬಾಬು ನಾಯ್ಡು, ಚಂದ್ರಶೇಖರ ರಾವ್‌, ಎನ್‌.ಟಿ. ರಾಮರಾವ್‌, ಜಗನ್‌ಮೋಹನ ರೆಡ್ಡಿ, ಮಮತಾ ಬ್ಯಾನರ್ಜಿ ಮತ್ತು ಬಾಳಾ ಠಾಕ್ರೆಯವರ ಸಾಹಸದ ಹಿಂದೆ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಚಾಕಚಕ್ಯತೆ ಇತ್ತು.

ಈ ನಿಟ್ಟಿನಲ್ಲಿ ಕರ್ನಾಟಕದ ರಾಜಕಾರಣಿಗಳು ಬಹು ಹಿಂದೆ ಇರುವುದೇ ಪ್ರಾದೇಶಿಕ ಪಕ್ಷ ನೆಲೆ ಕಾಣದಿರುವ ಹಿಂದಿನ ಕಾರಣ. ಸದ್ಯೋಭವಿಷ್ಯದಲ್ಲಿ ಇಂಥ ಜನಪ್ರಿಯ ಮತ್ತು ವರ್ಚಸ್ವಿ ಧುರೀಣರು ಹೊರ ಹೊಮ್ಮುವ ಸಾಧ್ಯತೆ ಕೂಡಾ ಕಡಿಮೆ.

– ರಮಾನಂದ ಶರ್ಮಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ