Udayavni Special

ಕೋವಿಡ್ 19 ಅವಧಿಯಲ್ಲಿ ರಕ್ಷಾ ಬಂಧನವೆಂಬ ಮಮತೆಯ ಹಬ್ಬ

ಚಿಂತನೆ

Team Udayavani, Aug 3, 2020, 6:55 AM IST

ಕೋವಿಡ್ 19 ಅವಧಿಯಲ್ಲಿ ರಕ್ಷಾ ಬಂಧನವೆಂಬ ಮಮತೆಯ ಹಬ್ಬ

ಕೋವಿಡ್ 19 ಮಹಾಮಾರಿಯಿಂದ ಜಗತ್ತಿನ ಎಲ್ಲ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಭಾರತದಲ್ಲಿಯೂ ಈ ವೈರಸ್‌ನ ಹಾವಳಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಕೋವಿಡ್ 19 ಪರಿಣಾಮವು ನಮ್ಮ ನಿತ್ಯ ಜೀವನದ ಚಟುವಟಿಕೆಗಳ ಮೇಲೂ ಸಾಕಷ್ಟು ಪರಿಣಾಮ ಬೀರಿ, ನಮ್ಮ ಜೀವನ ಶೈಲಿಯನ್ನೇ ಬದಲಾವಣೆ ಮಾಡುತ್ತಿದೆ.

ಈ ಎಲ್ಲದರ ಜೊತೆಗೆ ನಮ್ಮ ಹಬ್ಬ-ಆಚರಣೆಗಳ ಶೈಲಿಗಳಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ವೈವಿಧ್ಯಮಯ ಆಚರಣೆಗಳಲ್ಲಿ ರಕ್ಷಾ ಬಂಧನವೂ ತುಂಬಾ ಪ್ರಾಮುಖ್ಯತೆ ಪಡೆದ ಹಬ್ಬವಾಗಿದೆ.

ಅಣ್ಣ ಸದಾಕಾಲ ನನ್ನನ್ನು ರಕ್ಷಿಸಲಿ ಎಂಬ ಮಹದಾಸೆಯೊಂದಿಗೆ ಸಹೋದರಿಯು, ಸಹೋದರನ ಕೈಗೆ ರಾಖಿ ಕಟ್ಟುವುದೇ ರಕ್ಷಾ ಬಂಧನವೆನಿಸಿಕೊಳ್ಳುತ್ತದೆ. ಇಂತಹ ಪವಿತ್ರವಾದ ಹಬ್ಬವನ್ನು ಈ ವರ್ಷ ಕೋವಿಡ್ 19 ನಡುವೆಯೇ ಆಚರಿಸಬೇಕಾಗಿರುವುದರಿಂದ ರಾಖೀ ಕಟ್ಟುವ ಸಹೋದರಿಯು ರಾಖಿಯೊಂದಿಗೆ ಅಣ್ಣನಿಗೆ ಮಾಸ್ಕ್ ಹಾಗೂ ಸಿಹಿ ತಿಂಡಿಗಳೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೇಯ, ಖಾದ್ಯ ಕೊಡುವಂತಾಗಲಿ.

ಇದಕ್ಕೆ ಪ್ರತಿಯಾಗಿ ಸಹೋದರನು ಉಡುಗೊರೆಯ ರೂಪದಲ್ಲಿ ಅಕ್ಕ ತಂಗಿಯರಿಗೆ ವರ್ಷದುದ್ದಕ್ಕೂ ಸಾಕಾಗುವಷ್ಟು ಮಾಸ್ಕ್ ಗಳನ್ನು ಹಾಗೂ ಸ್ಯಾನಿಟೈಜರ್‌ಗಳನ್ನು ಕೊಡುವಂತಾಗಲಿ. ಒಟ್ಟಲ್ಲಿ, ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಬಹಳ ಜಾಗೃತಿ ವಹಿಸಿ ಕೊರೊನಾ ಸಾಂಕ್ರಾಮಿಕದಿಂದ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವ ಕೆಲಸವಾಗಬೇಕಿದೆ.


ಈ ಹಬ್ಬವು ಅಣ್ಣ ತಂಗಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಅಣ್ಣ ತಂಗಿಯ ರಕ್ಷಣೆ ಮಾಡಿದರೆ, ತಂಗಿಯಾದವಳು ಅಣ್ಣನ ರಕ್ಷಣೆ ಮಾಡುವ, ಕಷ್ಟಕಾಲದಲ್ಲಿ ಆತನ ಜತೆ ನಿಲ್ಲುವ ಸಂಕಲ್ಪಕ್ಕೆ ನಾಂದಿಯಾಗುತ್ತದೆ. ರಕ್ಷಾ ಬಂಧನ ಎಂಬ ಅಕ್ಷರಗಳೇ ಅಪಾರ ಅರ್ಥವನ್ನು ಒಳಗೊಂಡಿವೆ.

ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧ ಎಂದರ್ಥ. ಅಂದರೆ ತನ್ನ ಸಹೋದರನಿಗೆ ರಾಖೀ ಕಟ್ಟುವ ಮೂಲಕ ರಕ್ಷಣೆ ಮಾಡು ಎಂದು ಬಾಂಧವ್ಯದ ಬಂಧನಕ್ಕೊಳಪಡಿಸುವಳು ಸಹೋದರಿ. ತಂಗಿಯ ಯಾವುದೇ ಕಷ್ಟ, ನೋವು ನಲಿವುಗಳಿಗೆ ಅಣ್ಣನಾದವನು ಸದಾಕಾಲ ಸಹಾಯ ಹಸ್ತ ನೀಡುವ ಮೂಲಕ ಹೃದಯವಂತನಾಗಿರಬೇಕು ಎನ್ನುವುದನ್ನು ಈ ಹಬ್ಬ ಸಾರುತ್ತದೆ.

ತನ್ನ ಅಣ್ಣನಿಗೆ ಒಳ್ಳೆಯ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ದೊರಕಲಿ ಎಂದು ಸಹೋದರಿಯು ಹಾರೈಸುವಳು. ಅಣ್ಣ ತಂಗಿಯ ಈ ಪವಿತ್ರವಾದ ಸಂಬಂಧಕ್ಕೆ ಯಾವುದೇ ಹಣ, ಶ್ರೀಮಂತಿಕೆಯ ಅಹಂ ಎಂಬುದೇ ಇಲ್ಲ. ಇಂತಹ ಅಮೂಲ್ಯ ಸಂಬಂಧಕ್ಕೆ ಬೇಕಾಗಿರುವುದು ಹೃದಯ ಶ್ರೀಮಂತಿಕೆ ಮಾತ್ರ. ತನ್ನ ಅಣ್ಣ ಅಥವಾ ತಮ್ಮ ಗಟ್ಟಿಯಾಗಿರಬೇಕೆಂದು ಸದಾ ಬಯಸುವ ಸಹೋದರಿ ಯರು, ತಾವು ಊಟ ಮಾಡಿದ್ದೇವೆಂದು ಸುಳ್ಳು ಹೇಳಿ ಅಣ್ಣನ ಹೊಟ್ಟೆ ತುಂಬಿಸುವ ತ್ಯಾಗವನ್ನು ನಾವೆಷ್ಟು ನೋಡಿಲ್ಲ. ಈ ಅಪರಿಮಿತ ಪ್ರೇಮಕ್ಕೆ, ಮಮತೆಗೆ ಬೆಲೆ ಕಟ್ಟುವುದು ಅಸಾಧ್ಯ.

ಸಹೋದರ ಎಂದರೆ, ಒಡಹುಟ್ಟಿದವನೇ ಆಗಿರಬೇಕಿಲ್ಲ. ಯಾವ ವ್ಯಕ್ತಿಗೆ ಹೆಣ್ಣುಮಗಳ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಅದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಮನಸ್ಸಿದೆಯೋ ಅವನು ಸಹೋದರನ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಆಗಲೇ ಹೇಳಿದಂತೆ, ಅದಕ್ಕೆ ರಕ್ತ ಸಂಬಂಧವೇ ಆಗಿರಬೇಕೆಂದೇನಿಲ್ಲ.

ಅಂದರೆ ಈ ಅಣ್ಣ-ತಂಗಿಯರ ಬಾಂಧವ್ಯ ರಕ್ತ ಸಂಬಂಧವನ್ನು ಮೀರಿರುವಂತಹದ್ದು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಆಕಸ್ಮಿಕವಾಗಿ ಭೇಟಿಯಾಗಿ ಅಣ್ಣ ತಂಗಿ ಎಂಬ ಸಂಬಂಧ ಭಾವನಾತ್ಮಕವಾಗಿಯೂ ಹಲವಾರು ಸಂದರ್ಭಗಳಲ್ಲಿ ಉಂಟಾಗಬಹುದು. ಇಂತಹ ಭಾವನಾತ್ಮಕ ಸಂಬಂಧಗಳನ್ನು ಕೂಡ ಎಂದಿಗೂ ಅಳಿಸಲಾರದಂತೆ ಗಟ್ಟಿಗೊಳಿಸುವ ಶಕ್ತಿಯೂ ರಕ್ಷಾ ಬಂಧನಕ್ಕಿದೆ.


ಸಂಬಂಧಗಳು ಹತ್ತಾರು ವರ್ಷ ಗಟ್ಟಿಯಾಗಿ ಉಳಿಯಬೇಕೆಂದರೆ ಅಪನಂಬಿಕೆಗಳಿಗೆ ಅವಕಾಶವಿಲ್ಲದಂತೆ ಬದುಕನ್ನು ಸಾಗಿಸಬೇಕು. ಏಕೆಂದರೆ ಸಂಬಂಧಗಳನ್ನು ಗಟ್ಟಿಗೊಳಿಸುವ ಭದ್ರ ಬುನಾದಿ ಎಂದರೆ ಪರಸ್ಪರ ಬಲವಾದ ನಂಬಿಕೆ. ಶ್ರೀಮಂತಿಕೆಯೇ ಇರಲಿ ಅಥವಾ ಬಡತನವೇ ಇರಲಿ ಎರಡನ್ನೂ ಸಮನಾಗಿ ಸ್ವೀಕರಿಸಿ ಹಂಚಿಕೊಂಡು ಬದುಕುವ ಕಲೆಯೇ ಸಂಬಂಧಗಳ ಸಂಜೀವಿನಿಯಿದ್ದಂತೆ.

ಆಧುನಿಕತೆಯ ಭರಾಟೆಯಲ್ಲಿ ಇಂದು ಹಬ್ಬಗಳು ಕೇವಲ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಸಂದೇಶಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಒತ್ತಡದ ಈ ಜೀವನದಲ್ಲಿ ಯಾರಿಗೂ ಯಾರ ಸಮಸ್ಯೆಗಳನ್ನೂ ಆಲಿಸಲು ಸಮಯವಿಲ್ಲದಂತಾಗಿದೆ.

ಈ ಎಲ್ಲದರ ಮಧ್ಯೆಯೇ ರಕ್ಷಾ ಬಂಧನದ ಒಂದು ದಿನವಾದರೂ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಡೀ ದಿನ ಅಕ್ಕ-ತಂಗಿಯರೊಡನೆ ಬೆರೆತು ಅವರ ಕೌಟುಂಬಿಕ, ವೃತ್ತಿ ಸಮಸ್ಯೆಗಳಿರಬಹುದು ಅವುಗಳನ್ನೆಲ್ಲಾ ಆಲಿಸಿ, ಆ ಸಮಸ್ಯೆಗಳಿಗೆ ಪರಿಹಾರದ ಭಾಗವಾಗೋಣ. ರಕ್ಷಾ ಬಂಧನವೆಂಬುದು ಕೇವಲ ಒಂದು ದಿನದ ಆಚರಣೆಗಷ್ಟೇ ಸೀಮಿತಗೊಳಿಸದೇ ಜೀವನ ಪರ್ಯಂತ ಅಣ್ಣನೆನಿಸಿಕೊಂಡವರು ಅಕ್ಕ-ತಂಗಿಯರ ಬದುಕಿಗೆ ಬೆಳಕಾಗುವ ಬಂಧವಾಗುವಂತಾಗಲಿ.

– ರಾಜು ಭೂಶೆಟ್ಟಿ, ಹುಬ್ಬಳ್ಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Unemployment-1

ಅಭಿಮತ: ಸಿಂಗಾಪೂರ್‌ ನಿರುದ್ಯೋಗ ಸಮಸ್ಯೆ ಭಾರತೀಯರ ಮೇಲೆ ಜನರ ಮುನಿಸು!

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

ಚೀನದ ವಿರುದ್ಧ ರಾಸಾಯನಿಕ ಅಸ್ತ್ರ; ರಾಸಾಯನಿಕ ಉತ್ಪನ್ನಗಳ ಆಮದಿಗೆ ಮೂಗುದಾರ

ಚೀನದ ವಿರುದ್ಧ ರಾಸಾಯನಿಕ ಅಸ್ತ್ರ; ರಾಸಾಯನಿಕ ಉತ್ಪನ್ನಗಳ ಆಮದಿಗೆ ಮೂಗುದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಂತನೆ: ಕಲ್ಯಾಣ ಕರ್ನಾಟಕಕ್ಕೆ ಬೇಕು ಪ್ರತ್ಯೇಕ ಬಜೆಟ್‌

ಚಿಂತನೆ: ಕಲ್ಯಾಣ ಕರ್ನಾಟಕಕ್ಕೆ ಬೇಕು ಪ್ರತ್ಯೇಕ ಬಜೆಟ್‌

School-re-openಚಿಂತನೆ: ಶಾಲೆ ಆರಂಭವಾಗುವ ಹೊತ್ತಿನಲ್ಲಿ ಮಕ್ಕಳು, ಪೋಷಕರ ಮನಃಸ್ಥಿತಿ

ಚಿಂತನೆ: ಶಾಲೆ ಆರಂಭವಾಗುವ ಹೊತ್ತಿನಲ್ಲಿ ಮಕ್ಕಳು, ಪೋಷಕರ ಮನಃಸ್ಥಿತಿ

‘ನಲಿಕಲಿ’ಗೆ ಸುಗಮಕಾರರ ಸಮೂಹ ತಟ್ಟೆ

‘ನಲಿಕಲಿ’ಗೆ ಸುಗಮಕಾರರ ಸಮೂಹ ತಟ್ಟೆ

ಬಿ. ವೊಕೇಷನಲ್‌ ಕೋರ್ಸ್‌: ಶೈಕ್ಷಣಿಕ ಪಲ್ಲಟದ ಹೊಸ ಹಾದಿ

ಬಿ. ವೊಕೇಷನಲ್‌ ಕೋರ್ಸ್‌: ಶೈಕ್ಷಣಿಕ ಪಲ್ಲಟದ ಹೊಸ ಹಾದಿ

ಸಾಂದರ್ಭಿಕ: ಸಾಮಾಜಿಕ ಪರಿವರ್ತನೆಯ ಹರಿಕಾರ

ಸಾಮಾಜಿಕ ಪರಿವರ್ತನೆಯ ಹರಿಕಾರ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

Unemployment-1

ಅಭಿಮತ: ಸಿಂಗಾಪೂರ್‌ ನಿರುದ್ಯೋಗ ಸಮಸ್ಯೆ ಭಾರತೀಯರ ಮೇಲೆ ಜನರ ಮುನಿಸು!

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.