Udayavni Special

“ಆತ್ಮಹಿಂಸೆ’ ಎಂಬ ವ್ಯಸನವು…


Team Udayavani, Mar 31, 2019, 6:00 AM IST

health,

ಸಾಂದರ್ಭಿಕ ಚಿತ್ರ.

“ದೇವರು’ ಎನ್ನುವ ಪರಿಭಾವನೆ, ನಂಬಿಕೆ ಅವರವರಿಗೆ ಬಿಟ್ಟಿದ್ದು. ಯಾರೂ ಅದನ್ನು ಪ್ರಶ್ನಿಸರು. “ದೇವರು’ ಇಲ್ಲವೆಂದಾದರೂ ಅಂಥ ಪರಿಕಲ್ಪನೆಯನ್ನು ಸೃಷ್ಟಿಸಿಕೊಳ್ಳಲೂ ಅಡ್ಡಿಯಿಲ್ಲ. ಧರ್ಮ ನಿರಪೇಕ್ಷತೆ, ಧರ್ಮ ಸಮನ್ವಯವನ್ನು ಅರಸುವ ನಿಟ್ಟಿನಲ್ಲಿ ತಳೆಯುವ ನಂಬಿಕೆ, ಪರಿಕಲ್ಪನಾತ್ಮಕವಾಗಿ ನಡೆಸುವ ವಿಧಿ ಮತ್ತು ಆಚರಣೆಗಳು ಸಮಷ್ಟಿ ಹಿತಕ್ಕೆ ವಿರುದಟಛಿವಾಗಿರದೆ ಅದಕ್ಕೆ ಪೂರಕವಾಗಿರಬೇಕು.

ಮೂಲತಃ ನಾವೆಲ್ಲರೂ ಮನುಷ್ಯರು. ಧರ್ಮ ಎಂದರೆ ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯನೇ. ಮನುಷ್ಯನಿಗೆ ಹೊರತಾದ ಧರ್ಮ ಸಾಧ್ಯವಿಲ್ಲ. ಎಲ್ಲ ಧರ್ಮಗಳ ಅಖೈರು ಧ್ಯೇಯ ಒಂದೇ. ದೇಹವನ್ನು ಕ್ರೂರವಾಗಿ ದಂಡಿಸಿಕೊಂಡು ಯಾವ “ಮೋಕ್ಷಕ್ಕಾಗಿ’
ಹಪಹಪಿಸಬೇಕಿದೆ? ಕಾಳಿದಾಸ ತನ್ನ “ಕುಮಾರ ಸಂಭವಮ್‌’ನಲ್ಲಿ “ಶರೀರಮಾದ್ಯಮ್‌ ಖಲು ಧರ್ಮಸಾಧನಮ್‌’ ಅಂದರೆ ಧರ್ಮ ಪರಿಪಾಲನೆಗೆ ಮೊಟ್ಟ ಮೊದಲಿಗೆ ಇರಬೇಕಾದ್ದೇ ಶರೀರ ಎನ್ನುತ್ತಾನೆ.

ಒಂದೆಡೆ ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪರಿಶ್ರಮ, ಇನ್ನೊಂದೆಡೆ “ಆತ್ಮಹಿಂಸೆ’?ಇದಲ್ಲವೆ ವಿಪರ್ಯಾಸ? ಸ್ವಾಮಿ ವಿವೇಕಾನಂದರು “ಸದೃಢ ಶರೀರದಲ್ಲಿ ಸದೃಢ ಮನಸ್ಸು’ ಎಂದಿದ್ದಾರೆ.

ತಾರ್ಕಿಕವಾಗಿ ಪರಿಶೀಲಿಸದೆ ವೃಥಾ ಸಮ್ಮತಿಸುವ ಯಾವುದೇ ಸಂಗತಿ ಮೌಡ್ಯವೆನ್ನಿಸುತ್ತದೆ. ಮೌಡ್ಯದ ಆಕರಗಳು ಅಜ್ಞಾನ ಮತ್ತು ಭಯ. ಇವು ಕಾರಣವಾದವನ್ನು ನಿರ್ಲಕ್ಷಿಸುವಂತೆ ವ್ಯಕ್ತಿಯನ್ನು ಬಂಧಿಸುತ್ತವೆ. ಪ್ರತಿಯೊಂದು ಮೌಡ್ಯವೂ ಸಮಾಜವನ್ನು ಒಂದಲ್ಲೊಂದು ಬಗೆಯಲ್ಲಿ ಪೀಡಿಸುತ್ತದೆ. ಶಿಕ್ಷಣದಿಂದ ಮೌಡ್ಯ ದೂರವಾಗುತ್ತದೆ ಎನ್ನುವ ಭರವಸೆ ಹುಸಿಯಾದಂತಿದೆ. ಏಕೆಂದರೆ ಗಣನೀಯ ಸಂಖ್ಯೆಯಲ್ಲಿ ವಿದ್ಯಾವಂತರೇ ಅದರ ಪಾಶಕ್ಕೆ ಸಿಲುಕಿದ್ದಾರೆ.

ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ದೇವರಗಟ್ಟು ದೇಗುಲದಲ್ಲಿ ದಸರ ಸಂದರ್ಭ. ಬನ್ನಿ ಹಬ್ಬದ ನಡುರಾತ್ರಿ ನೂರಾರು ಮಂದಿ ಭಕ್ತರು ದೊಣ್ಣೆಯಿಂದ ಪರಸ್ಪರ ತಲೆಗೆ ಬಡಿದುಕೊಳ್ಳುತ್ತಾರೆ. ಶಿವ ಅಸುರನೊಬ್ಬನನ್ನು ಸಂಹರಿಸಿದ ಪ್ರತೀಕವೆನ್ನಲಾಗುವ ಈ ಆಚರಣೆಯಲ್ಲಿ ಭಕ್ತರ ನೆತ್ತಿಯಿಂದ ರಕ್ತ ಜಿನುಗುತ್ತಿರುತ್ತದೆ. ಪೋಲಿಸರು, ವೈದ್ಯರು
ಮೂಕಪ್ರೇಕ್ಷಕರಾಗಿರುತ್ತಾರೆ. ಪ್ರತೀ ವರ್ಷ ತೀವ್ರ ಪೆಟ್ಟಾಗಿ ದವಾಖಾನೆಗಳಿಗೆ ದಾಖಲಾಗುವವರ ಸಂಖ್ಯೆ ಏರುತ್ತಲೇ ಇದೆ. ಮೈಯಿಂದ ರಕ್ತ ಚಿಮ್ಮಿಸಿ ಯಾವ “ದೈವ’ವನ್ನು ಮೆಚ್ಚಿಸಬೇಕಿದೆ? ಮನೋವಿಜ್ಞಾನಿಗಳು ಈ ನಿಟ್ಟಿನಲ್ಲಿ ಎರಡು
ಪ್ರಮುಖ ಅಂಶಗಳನ್ನು ಗುರುತಿಸಿದ್ದಾರೆ.

ಒಂದು, ಉದ್ದೇಶಿತ ಗುರಿ ಮುಟ್ಟಲು ಪಡುವ ಪ್ರಯತ್ನಗಳೇ ದಕ್ಕುವ ಫ‌ಲಕ್ಕಿಂತ ಅತಿಯಾದಾಗ ಆಗುವ, ಒತ್ತಡ, ಆಲಸ್ಯ ಇಂಥ ನಡೆಗಳನ್ನು ಪ್ರೇರೇಪಿಸುತ್ತವೆ. ಇನ್ನೊಂದು, ತಾವೇಕೆ ಹೀಗೆ ವರ್ತಿಸುತ್ತಿದ್ದೇವೆಂದು ಸ್ವಯಂ ಹಿಂಸಾತ್ಮಕ ಆಚರಣೆಗಳಲ್ಲಿ ತೊಡಗಿರುವವರಿಗೆ ತಿಳಿದಿರುವುದಿಲ್ಲ. ಏನೋ ಎಲ್ಲರೂ ಮಾಡುತ್ತಾರೆ,ಅದಕ್ಕಾಗಿ ತಾವೂ ಎನ್ನುವ ಧೋರಣೆ ಅವರಲ್ಲಿ. ಇಂಥಲ್ಲಿ ಸಹ ಸಮರ್ಥನೆಗಳನ್ನು ಹೆಣೆಯುವುದಿದೆ!
ಕೆಂಡ ಹಾಯುವುದರಿಂದ ಶರೀರದ ನಿರ್ದಿಷ್ಟ ನರಗಳು ಉದ್ದೀಪನಗೊಂಡು ವ್ಯಾಧಿಗಳು ವಾಸಿಯಾಗುವುದೆಂಬ ವಾದವಿದೆ.

ಒಂದು ವೇಳೆ ಇದು ವಾಸ್ತವವೆ ಆದರೆ ವೈದ್ಯಕೀಯ ವಿದ್ಯಾಲಯಗಳು,
ಸಂಶೋಧನಾಲಯ ಗಳಾದರೂ ಯಾಕೆ ಬೇಕು? ಹೃದಯ, ಮೂತ್ರಪಿಂಡ ಕಸಿ ಏಕೆ? ರೋಗಿಯನ್ನು ಐ.ಸಿ.ಯು. ನಲ್ಲಿರಿಸಿ ಚಿಕಿತ್ಸೆ ನೀಡುವ ಅನಿವಾರ್ಯತೆ ತಾನೆ ಏಕೆ?. ಸುಡು ಸುಡುವ ಕೆಂಡದ ಮೇಲಿನ ನಡಿಗೆ ರೋಗಹರವೆನ್ನುವುದು ಎಂಜಿಲು ಎಲೆ ಮೇಲಿನ ಉರುಳಾಟ ಚರ್ಮ ರೋಗಕ್ಕೆ ಪರಿಹಾರ ಎನ್ನುವಷ್ಟೇ ಖರೆ! ಮನುಷ್ಯ ತನ್ನ ಮಿತಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹೀಗೆಲ್ಲ ಉನ್ಮತ್ತನಾಗುತ್ತಾನೆಂಬ ಸಮಜಾಯಿಷಿಯೂ ಉಂಟು. ಆದರೆ ತನ್ನನ್ನು,ಇತರರನ್ನು ಮರಣಾಂತಿಕ ಅನಾಹುತಗಳಿಗೆ ಗುರಿಯಾಗಿಸಿಕೊಳ್ಳುವುದು ಅಥವಾ ಗುರಿಯಾಗಿಸುವುದು ಅದೆಷ್ಟು ಸರಿ? ತೆವಲಿಗೆ ತೆರುವ ಕರ ಬಲು ದುಬಾರಿ! ನಾಲಿಗೆ ಚುಚ್ಚಿಸಿಕೊಳ್ಳುವಾಗ ಅದನ್ನು ನೋಡುವವರು ತಾನೆ ಅನುಭವಿಸುವ ಬೇನೆ ಎಂಥದ್ದೆಂದು ಅರ್ಥಮಾಡಿಕೊಳ್ಳಬೇಕು. ಭಕ್ತಿಯ ಉನ್ಮತ್ತಿನಲ್ಲಿ ಕಣ್ಣು, ಕೈ, ಕಾಲು ಕಳೆದುಕೊಂಡ ನಿದರ್ಶನಗಳೂ ಉಂಟು.

“ಅತಿ ಸರ್ವತ್ರ ವರ್ಜಯೇತ್‌’-ಅತಿಯಾದರೆ ಅಮೃತ ಕೂಡ ವಿಷವೇ. “ಸಿಡಿ’ ಆಡುವುದು, ತಲೆಯ ಮೇಲೆ ಹೊಡೆಯುವುದು/ಹೊಡೆಸಿಕೊಳ್ಳುವುದು,ಕೈಗೆ ಮೊಳೆ ಬಡಿಸಿಕೊಳ್ಳುವುದು, ನೆತ್ತರು ಕೆಳಗೆ ಚೆಲ್ಲುವಂತೆ ಚಾಕುವಿನಿಂದ ಎದೆ ಹೊಡೆದುಕೊಳ್ಳುವುದು, ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ರಥ ಎಳೆಯುವುದು,ಅಂಗೈನಲ್ಲಿ ಕರ್ಪೂರ ಉರಿಸುವುದು, ಕೂದಲು ಕಿತ್ತುಕೊಳ್ಳುವುದು/ ಕೀಳುವುದು, ಎಳೆಗೂಸುಗಳನ್ನು ಎತ್ತರದಿಂದ ಬಿಸಾಡುವುದು, ಕುದಿಯುವ ಎಣ್ಣೆಯಲ್ಲಿ ಕೈ ಅದ್ದುವುದು, ಮುಳ್ಳಿನ ಮೇಲೆ ನಿಲ್ಲುವುದು, ತಾಸುಗಟ್ಟಲೆ ನೀರಿನಲ್ಲಿ ಕೂರುವುದು, ಬೆಂಕಿ ನುಂಗುವುದು, ಮುಂತಾದ ಕ್ರೂರ ಆಚರಣೆಗಳಿಂದ ಸ್ವತಃ ತನಗಾಗಲೀ ಸಮಾಜಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ. ಉದ್ವೇಗ, ಆವೇಶಗಳಿಂದ ಸ್ವಹಿಂಸೆಗೊಳಗಾಗುವುದು ಬಾಲಿಶ.

“ದೈವ’ ದೊಡ್ಡ ಕಂಟಕವೊಂದರಿಂದ ನನ್ನನ್ನು ಮುಕ್ತವಾಗಿಸಿದೆ, ಅದಕ್ಕಾಗಿ ಈ “ಚಿಕ್ಕ ಹಿಂಸೆ’ ಸಹಿಸುವೆ ಎಂಬ ತೃಪ್ತಿ ಅರ್ಥವಿಲ್ಲದ್ದು.ಪ್ರಾರ್ಥನೆ, ಹರಕೆ ತತ್ಕಾಲ ಸ್ವಸಮಾಧಾನಕ್ಕೆ ಮನಸ್ಸಿನ ತುಡಿತವಾಗಬಹುದಷ್ಟೆ. ಅದರೆ ಯುಕ್ತಾಯುಕ್ತ ಯೋಚಿಸದಿದ್ದರೆ ಪರಿಣಾಮ ಘೋರವೆ. ಭಕ್ತಿ ಆತ್ಮವಿಶ್ವಾಸ ಹೆಚ್ಚಿಸುವ ಸಾಧನವಾಗಬೇಕೇ ಪರಂತು ಅದು ಪರಾಕಾಷ್ಠೆ ತಲುಪಿ ಅನಾಹುತಕ್ಕೆ ಎಡೆಯಾಗುವುದಲ್ಲ. ಲಾರ್ಡ್‌ ಬೆಂಟಿಕ್‌ ಮತ್ತು ರಾಜಾ ರಾಂ ಮೋಹನರಾಯ್‌ ಒಂದೆಡೆ ಕಲೆತು ರಾಜಕೀಯ ಮರೆತು ದೀರ್ಘ‌ವಾಗಿ ಚರ್ಚಿಸಿದರು. ಅವರಿಗೆ ಮಾನವ, ಮನುಷ್ಯತ್ವ, ಸಮಾಜದ ಹೊರತಾಗಿ ಆ ಕ್ಷಣಗಳಲ್ಲಿ ಮತ್ತೇನೂ ಕಾಣಲಿಲ್ಲ. ನಾನು ಆಳುವವರ ಪೈಕಿ, ನೀವು ಆಳಿಸಿಕೊಳ್ಳುವವರ ಪೈಕಿ ಎನ್ನುವುದನ್ನು ಬದಿಗಿಡೋಣ. ಸಮಾಜಕ್ಕೆ ಅತಿ ಕಂಟಕಪ್ರಾಯವಾಗಿರುವ ಈ ಕಲ್ಪಿಸಿಕೊಳ್ಳಲೂ ಅಸಾಧ್ಯವಾದ “ಸತೀ’
ಪದಟಛಿತಿಗೆ ಹೇಗಾದರೂ ಮಾಡಿ ಅಂತ್ಯ ಕಾಣಿಸೋಣ ಎಂದೇ ಬೆಂಟಿಂಕ್‌ ವಿಷಯಕ್ಕೆ ಬಂದಿದ್ದರು. ಇಬ್ಬರೂ ಗಂಭೀರ ಹೋರಾಟಕ್ಕೆ ಪಣ ತೊಟ್ಟರು. ಜನರಿಗೆ ಸಾಧಕ
ಬಾಧಕಗಳನ್ನು ಮುಟ್ಟಿಸಿದರು. ಕಾಣುವ ಇಹ ಮುಖ್ಯ, ಕಾಣದ ಪರ ಅಲ್ಲ ಎಂಬ ಸಂದೇಶ ಬಿತ್ತಿದರು. ಅಂತು ಅನಿಷ್ಟ ಪದಟಛಿತಿ ನಿರ್ಮೂಲನೆಯಾಯಿತು. ಬೆಂಟಿಕ್‌, ರಾಯ್‌ ಧೀಮಂತ ಸಮಾಜ ಸುಧಾರಕರಾಗಿ ಇತಿಹಾಸದಲ್ಲಿ ಚಿರಸ್ಥಾಯಿಯಾದರು. ಸಾರಾಂಶವಿಷ್ಟು.

ಸರ್ವಸಮ್ಮತವೂ ಪರಿಕಲ್ಪನಾತ್ಮಕವೂ ಆದ ಆಚರಣೆಗಳನ್ನು ಉಳಿಸಿಕೊಳ್ಳಲಡ್ಡಿಯಿಲ್ಲ. ಆದರೆ ಅವನ್ನು ಉಳಿಸಿಕೊಳ್ಳುವುದೇ ಒಂದು ಅತಿಶಯವನ್ನಾಗಿಸಿಕೊಳ್ಳಬಾರದು.

– ಬಿಂಡಿಗನವಿಲೆ ಭಗವಾನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯ ಸಭೆಗೆ ಬಿಜೆಪಿ ಪಟ್ಟಿ ಸಿದ್ಧ

ರಾಜ್ಯ ಸಭೆಗೆ ಬಿಜೆಪಿ ಪಟ್ಟಿ ಸಿದ್ಧ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ವಿದ್ಯಾರ್ಥಿ ನಿಲಯಗಳಲ್ಲಿ 45,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಬೆಂಗಳೂರಿನಿಂದ ಬೀದರ್‌ಗೆ ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಂತ ಚಿಕಿತ್ಸೆ: ನಾವೇನು ಮುನ್ನೆಚ್ಚರಿಕೆ ವಹಿಸಬೇಕು?

ದಂತ ಚಿಕಿತ್ಸೆ: ನಾವೇನು ಮುನ್ನೆಚ್ಚರಿಕೆ ವಹಿಸಬೇಕು?

ಹಿರಿಯ ನಾಗರಿಕರ ಆರೈಕೆ: ಇರಲಿ ಹೆಚ್ಚಿನ ಕಾಳಜಿ

ಹಿರಿಯ ನಾಗರಿಕರ ಆರೈಕೆ: ಇರಲಿ ಹೆಚ್ಚಿನ ಕಾಳಜಿ

ಮನೆ ಬಾಗಿಲಿಗೆ ಅಂಚೆ ವ್ಯವಹಾರ: ಏನು? ಹೇಗೆ?

ಬದುಕು ಬದಲಾಗಿದೆ, ನಾವೂ ಬದಲಾಗೋಣ; ಮನೆ ಬಾಗಿಲಿಗೆ ಅಂಚೆ ವ್ಯವಹಾರ: ಏನು? ಹೇಗೆ?

ಬ್ಯಾಂಕ್‌ ವ್ಯವಹಾರ: ಏನು? ಹೇಗೆ?

ಬದುಕು ಬದಲಾಗಿದೆ, ನಾವೂ ಬದಲಾಗೋಣ; ಬ್ಯಾಂಕ್‌ ವ್ಯವಹಾರ: ಏನು? ಹೇಗೆ?

ಬದುಕು ಬದಲಾಗಿದೆ, ನಾವೂ ಬದಲಾಗೋಣ ; ಮಾರುಕಟ್ಟೆಗೆ ಪಯಣ…ಇರಲಿ ಕಟ್ಟೆಚ್ಚರ

ಬದುಕು ಬದಲಾಗಿದೆ, ನಾವೂ ಬದಲಾಗೋಣ ; ಮಾರುಕಟ್ಟೆಗೆ ಪಯಣ…ಇರಲಿ ಕಟ್ಟೆಚ್ಚರ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ರಾಜ್ಯ ಸಭೆಗೆ ಬಿಜೆಪಿ ಪಟ್ಟಿ ಸಿದ್ಧ

ರಾಜ್ಯ ಸಭೆಗೆ ಬಿಜೆಪಿ ಪಟ್ಟಿ ಸಿದ್ಧ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ವಿದ್ಯಾರ್ಥಿ ನಿಲಯಗಳಲ್ಲಿ 45,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಬೆಂಗಳೂರಿನಿಂದ ಬೀದರ್‌ಗೆ ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.