ಕುದುರೆಗಳನ್ನೆಲ್ಲ ಕದ್ದವರು ಯಾರು?

Team Udayavani, Nov 29, 2019, 5:38 AM IST

ನಾವು ಚುನಾವಣಾ ಸಮಯದಲ್ಲಿನ ಪ್ರತಿಯೊಂದು ಮೀಟಿಂಗ್‌ನಲ್ಲೂ ದೇವೇಂದ್ರ ಫ‌ಡ್ನವೀಸ್‌ ಅವರೇ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದೆವಲ್ಲ, ಆವಾಗ ಯಾಕೆ ಶಿವಸೇನೆಯವರು ಸವಾಲು ಹಾಕಲಿಲ್ಲ? ಏಕೆ ಈ ವಿಷಯದಲ್ಲಿ ನಮ್ಮನ್ನು ಪ್ರಶ್ನಿಸಲಿಲ್ಲ?

ಮೊದಲನೆಯದಾಗಿ, ಜನಾದೇಶವನ್ನು ಮುರಿಯುವ ಕೆಲಸ ಮಾಡಿದ್ದು ಯಾರು? ಶಿವಸೇನೆಯಿಂದಲೇ ಈ ಕೆಲಸವಾಯಿತು ಎನ್ನುವುದು ಸ್ಪಷ್ಟ. ಆದರೆ ಅದನ್ನು ಮಾತ್ರ ಯಾರೂ ಪ್ರಶ್ನಿಸುವುದಿಲ್ಲ. ಒಂದು ಸಿದ್ಧಾಂತ/ ವಿಚಾರಧಾರೆಯನ್ನು ಕೈಬಿಟ್ಟು, ಚುನಾವಣೆಯ ಪೂರ್ವದಲ್ಲಾದ ಮೈತ್ರಿಯನ್ನು ಬಿಟ್ಟು ಈ ಮೂರೂ ಪಕ್ಷಗಳು ಒಂದಾಗಲು ಮುಂದಾದಾಗ, ಎಲ್ಲರೂ ಅವುಗಳ ಬೆನ್ನು ತಟ್ಟಲಾರಂಭಿಸಿದರು. ಒಬ್ಬ ಪತ್ರಕರ್ತರಿದ್ದಾರೆ, ನಾನು ಅವರ ಹೆಸರು ತೆಗೆದುಕೊಳ್ಳುವುದಿಲ್ಲ.

ಅವರಂತೂ, “ಈ ಮೂರೂ ಪಕ್ಷಗಳು ಭಾರತದಲ್ಲಿ ಕ್ರಾಂತಿ ಮಾಡಿವೆ’ ಎಂದುಬಿಟ್ಟರು! ಆದರೆ ಮರುದಿನ ಯಾವಾಗ ಅಜಿತ್‌ ದಾದಾ ನಮಗೆ ಸಪೋರ್ಟ್‌ ಮಾಡಿದರೋ, ಆಗ ಈ ಪತ್ರಕರ್ತರು, “ಬಿಜೆಪಿ ಇಂಥ ಕೆಲಸ ಹೇಗೆ ಮಾಡಬಲ್ಲದು?’ ಎಂದು ಪ್ರಶ್ನಿಸಿದರು. ಆಗ ಅವರ ಕ್ರಾಂತಿಯ ಹವಾ ಠುಸ್‌ ಎಂದಿತು!
ನಾನು ದೇಶದ ಜನತೆಗೆ ಕೇಳುವುದಿಷ್ಟೆ-ಜನಾದೇಶವನ್ನು ಭಂಗಗೊಳಿಸಿದವರು ಯಾರು? ನಾವಂತೂ ಖಂಡಿತ ಅಲ್ಲ. ನಾವು ಒಬ್ಬೇ ಎಂಎಲ್‌ಎಗಳಿಗೆ ಕ್ಯಾಂಪ್‌ ಹಾಕಲಿಲ್ಲ, ಎಂಎಲ್‌ಎಗಳನ್ನು ಹೋಟೆಲ್‌ಗಳಲ್ಲಿ ಬಂಧಿಸಿಡಲಿಲ್ಲ. ನಮ್ಮ ಎಲ್ಲಾ ಶಾಸಕರೂ ಆರಾಮಾಗಿ ಓಡಾಡುತ್ತಿದ್ದರು.

ಆದರೆ ಇನ್ನೊಂದೆಡೆ ಯಾರು ಕ್ಯಾಂಪ್‌ಗಳನ್ನು ಹಾಕಿದರೋ ಅವರದ್ದು ದೋಷವಿಲ್ಲವಂತೆ, ಯಾರು ತಮ್ಮ ಶಾಸಕರನ್ನು ಹೋಟೆಲ್‌ಗಳಲ್ಲಿ ಕೂಡಿಟ್ಟರೋ ಅವರದ್ದೂ ದೋಷವಿಲ್ಲವಂತೆ, ಯಾರು ಚುನಾವಣಾ ಪೂರ್ವ ಮೈತ್ರಿಯನ್ನು ಮುರಿದು ಸರ್ಕಾರ ರಚಿಸುತ್ತಿದ್ದಾರೋ ಅವರದ್ದೂ ದೋಷವಿಲ್ಲವಂತೆ, ಆದರೆ ಜನಾದೇಶವಿದ್ದ ನಮ್ಮದೇ ಎಲ್ಲ ದೋಷವಂತೆ!

ಏನಕೇನ ಪ್ರಕಾರೇಣ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರದಿಂದ ಹೊರಗಿಡಲು ಎಲ್ಲಾ ಮೌಲ್ಯಗಳನ್ನು, ಸಿದ್ಧಾಂತಗಳನ್ನು ಮುರಿದು-ತಿರುಚಿ ಸರ್ಕಾರ ಮಾಡಿದ್ದಲ್ಲದೇ, ಇದನ್ನು ಭಾರತೀಯ ಜನತಾ ಪಾರ್ಟಿಯ ವೈಫ‌ಲ್ಯ ಎಂಬಂತೆ ಬಿಂಬಿಸಲು ಹೊರಟಿರುವುದು ಇದೆಯಲ್ಲ, ಇಂಥ ಅಪಪ್ರಚಾರವನ್ನು ದೇಶವಾಸಿಗಳು ನಂಬುವುದಿಲ್ಲ. ಏನು ನಡೆಯುತ್ತಿದೆ ಎನ್ನುವುದು ಜನರಿಗೆ ಚೆನ್ನಾಗಿ ತಿಳಿದಿದೆ ಹಾಗೂ ದೇಶವಾಸಿಗಳೊಂದಿಗೆ ನಮ್ಮ ಸಂವಾದವೂ ಉತ್ತಮವಾಗಿದೆ.

ನಾನೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದಾಗ್ಯೂ ದೇವೇಂದ್ರ ಫ‌ಡ್ನವಿಸ್‌ ಅವರು ಈ ವಿಚಾರವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಏನೆಂದರೆ, ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಕೊಡುತ್ತೇವೆ ಎಂಬ ಆಶ್ವಾಸನೆಯನ್ನು ನಾವು ಎಂದೂ ಕೊಟ್ಟಿರಲಿಲ್ಲ. ಈ ರೀತಿಯ ಭರವಸೆ ಕೊಡುವುದಕ್ಕೆ ಯಾವ ತರ್ಕವೇ ಇಲ್ಲ. ಏಕೆಂದರೆ ನಮ್ಮ ಮುಖ್ಯಮಂತ್ರಿ(ಫ‌ಡ್ನವಿಸ್‌) ಅಲ್ಲಿ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರು. ಮೊದಲನೆಯದಾಗಿ, ನಮ್ಮದೇ ದೊಡ್ಡ ಪಾರ್ಟಿಯಾಗಿತ್ತು, ದೊಡ್ಡ ಪಾರ್ಟಿ ಆಗಿದೆ. ಹೀಗಾಗಿ, ನಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗುವುದು ತರ್ಕಬದ್ಧವಾಗಿದೆ.

ನಾವು ಒಂದು ವೇಳೆ ಶಿವಸೇನೆಗೆ ಈ ರೀತಿಯ ಭರವಸೆ ನೀಡಿದ್ದೇ ಆಗಿದ್ದರೆ, ಚುನಾವಣಾ ಪ್ರಚಾರದುದ್ದಕ್ಕೂ ಶಿವಸೇನೆಯವರು, ಅದರಲ್ಲೂ ಮುಖ್ಯವಾಗಿ ಸ್ವಯಂ ಉದ್ದವ್‌ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ನಮ್ಮೊಂದಿಗೆ ವೇದಿಕೆ ಹಂಚಿಕೊಂಡರಲ್ಲ ಆಗೇಕೆ ಅವರು ಈ ವಿಚಾರವನ್ನು ಮಾತನಾಡಲಿಲ್ಲ? ನಾವು ಪ್ರತಿಯೊಂದು ಮೀಟಿಂಗ್‌ನಲ್ಲೂ ದೇವೇಂದ್ರ ಫ‌ಡ್ನವೀಸ್‌ ಅವರೇ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದೆವಲ್ಲ, ಆವಾಗ ಯಾಕೆ ಶಿವಸೇನೆಯವರು ಸವಾಲು ಹಾಕಲಿಲ್ಲ? ಏಕೆ ಈ ವಿಷಯದಲ್ಲಿ ನಮ್ಮನ್ನು ಪ್ರಶ್ನಿಸಲಿಲ್ಲ? ಆದರೆ ಚುನಾವಣಾ ಫ‌ಲಿತಾಂಶ ಬಂದ ನಂತರ, ಭಾರತೀಯ ಜನತಾ ಪಾರ್ಟಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದಕ್ಕೆ ಸಾಧ್ಯವಿಲ್ಲ ಎಂದು ಶಿವಸೇನೆಗೆ ಅರ್ಥವಾಯಿತು. ಆಗ ಇವರು ಶುರುವಿಟ್ಟರು!

ಮೋದಿ ಪೋಸ್ಟರ್‌ ಹಾಕಿ ಚುನಾವಣೆ ಗೆದ್ದ ಶಿವಸೇನೆ: ಶಿವಸೇನೆಯ ಪ್ರತಿಯೊಬ್ಬ ನಾಯಕನು ನಮ್ಮೊಂದಿಗೆ ಕೈಜೋಡಿಸಿಯೇ ಚುನಾವಣೆಯಲ್ಲಿ ಗೆದ್ದಿದ್ದಾನೆ. ಆ ಪಕ್ಷದ ಪ್ರತಿಯೊಬ್ಬ ನಾಯಕರೂ ಮೋದಿಯವರ ಪೋಸ್ಟರ್‌ ಹಾಕಿದ್ದರು. ಬಿಜೆಪಿಯವರ ವಿಧಾನಸಭಾ ಕ್ಷೇತ್ರಗಳಿಗಿಂತ, ಶಿವಸೇನೆಯ ವಿಧಾನಸಭಾ ಕ್ಷೇತ್ರಗಳಲ್ಲಿನ ಮೋದಿಯವರ ಕಟೌಟ್‌ಗಳು ದೊಡ್ಡವಿದ್ದವು! ಈ ವಿಷಯ ದೇಶದ ಹಾಗೂ ಮಹಾರಾಷ್ಟ್ರದ ಜನತೆಗೆ ತಿಳಿದಿಲ್ಲವೇ?

ಕುದುರೆ ವ್ಯಾಪಾರ ಮಾಡುತ್ತಿರುವವರು ಯಾರು?: ನಮ್ಮದೂ ಮೈತ್ರಿಯಿತ್ತು(ಬಿಜೆಪಿ-ಶಿವಸೇನೆ), ಅವರದ್ದೂ ಮೈತ್ರಿಯಿತ್ತು(ಕಾಂಗ್ರೆಸ್‌-ಎನ್‌ಸಿಪಿ). ಅವರೆಲ್ಲರೂ “ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ’ ಎಂದು ಆರೋಪಿಸಲು ಬಂದರು. ನಾನು ಅವರಿಗೆ ಹೇಳುವುದಿಷ್ಟೆ- ಒಂದು, ಎರಡು ಕುದುರೆಯ ವಿಷಯ ಬಿಡಿ, ನೀವು ಇಡೀ ಶಿವಸೇನೆಯ ಅಶ್ವಬಲವನ್ನೇ(ಮುಖ್ಯಮಂತ್ರಿ ಹುದ್ದೆ ನೀಡಿ) ಕದ್ದುಬಿಟ್ಟಿರಲ್ಲ?

ಮುಖ್ಯಮಂತ್ರಿ ಹುದ್ದೆಯ ಆಸೆ ತೋರಿಸಿ ಸಮರ್ಥನೆ ಪಡೆಯುವುದು ಕುದುರೆ ವ್ಯಾಪಾರವಲ್ಲವೇನು? ನಾನು ಶರದ್‌ ಪವಾರ್‌ಜೀ ಮತ್ತು ಸೋನಿಯಾಜೀಗೆ ಹೇಳುವುದಿಷ್ಟೆ- ಒಮ್ಮೆ , ನಿಮ್ಮದೇ ಪಕ್ಷದವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿ ನೋಡಿ! ಆಗ ಶಿವಸೇನೆ ನಿಮ್ಮನ್ನು ಬೆಂಬಲಿಸುತ್ತದಾ ಎಂದು ನೋಡೋಣ! ಅಜಮಾಸು 100 ಸೀಟುಗಳಿರುವ ಮೈತ್ರಿಯೊಂದು, ಕೇವಲ 56 ಸೀಟುಗಳಿರುವ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಕೊಡುತ್ತಿದೆಯಲ್ಲ, ಇದು ಕುದುರೆ ವ್ಯಾಪಾರವಲ್ಲವೇ?

– ಅಮಿತ್‌ ಶಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ