ಪಂಚ ರಾಜ್ಯ ಚುನಾವಣೆ : ಯಾರಿಗೆ ಮತದಾರನ ಮಣೆ?


Team Udayavani, Dec 11, 2018, 6:00 AM IST

d-124.jpg

ತೀವ್ರ  ಕುತೂಹಲಕ್ಕೆ ಕಾರಣವಾಗಿರುವ ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶ ಇಂದು ಹೊರಬೀಳಲಿದೆ. ತೆಲಂಗಾಣವನ್ನು ಹೊರತುಪಡಿಸಿದರೆ, ಛತ್ತೀಸ್‌ಗಡ, ಮಧ್ಯಪ್ರದೇಶ, ಮಿಜೋರಾಂ ಮತ್ತು ರಾಜಸ್ಥಾನಗಳಲ್ಲಿ  ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ.. 2019ರ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದೇ ಈ ಚುನಾವಣೆಗಳನ್ನು ನೋಡಲಾಗುತ್ತದಾದ್ದರಿಂದ, ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರೂ ಅಖಾಡಕ್ಕೆ ಧುಮುಕಿ ಮತದಾರರ ಮನಸ್ಸು ಸೆಳೆಯಲು ಕಸರತ್ತು ನಡೆಸಿದರು… ಮತದಾರ ಯಾರತ್ತ ಮುಖ ಮಾಡಬಹುದು? ಚುನಾವಣೋತ್ತರ ಸಮೀಕ್ಷೆಗಳು ಏನನ್ನುತ್ತವೆ? ಅಧಿಕಾರಕ್ಕೇರಿಸುವ  ಮ್ಯಾಜಿಕ್‌  ನಂಬರ್‌ ಯಾವುದು? ಇಲ್ಲಿದೆ ಮಾಹಿತಿ…

ರಾಜಸ್ಥಾನ
ಮ್ಯಾಜಿಕ್‌ ನಂಬರ್‌ : 101

ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರದ ಗದ್ದುಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಬದಲಾಗುತ್ತಲೇ ಇದೆ. ಕಳೆದ 25 ವರ್ಷಗಳಿಂದಲೂ ಈ ಪದ್ಧತಿ ನಡೆದುಕೊಂಡೇ ಬಂದಿರುವುದು ವಿಶೇಷ. “ಮಹಾರಾಣಿ’ ವಸುಂಧರಾ ರಾಜೇ ನೇತೃತ್ವದಲ್ಲಿ ಬಿಜೆಪಿ ಮತ್ತು ಅಶೋಕ್‌ ಗೆಹೊಟ್‌-ಸಚಿನ್‌ ಪೈಲಟ್‌ ನೇತೃತ್ವದಲ್ಲಿ ಕಾಂಗ್ರೆಸ್‌ ನಡುವೆ ಈಗ ಪೈಪೋಟಿ ಇದೆ. ಚುನಾವಣಾ ಪೂರ್ವ-ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಮತದಾರರು ಕಾಂಗ್ರೆಸ್‌ಗೆ ಮನ್ನಣೆ ಕೊಡಲಿದ್ದಾರೆ, ಆಡಳಿತ ವಿರೋಧಿ ಅಲೆ ರಾಜೀ ಅವರನ್ನು ಗದ್ದುಗೆಯಿಂದ ಕೆಳಕ್ಕಿಳಿಸಲಿದೆ ಎನುತ್ತಿವೆ. ಆದರೆ ರಾಜೇ ಈ ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗೆ ಮಾಡುತ್ತಾರಾ? ಅಥವಾ ಕಾಂಗ್ರೆಸ್‌ಗೆ ಮೇಲುಗೈಯಾಗುತ್ತದಾ ನೋಡಬೇಕು.
ಕಳೆದ ಚುನಾವಣೆ: ಅಂದಿನ ಮುಖ್ಯಮಂತ್ರಿ ಅಶೋಕ್‌ ಗೆಹೊÉàಟ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್‌, ವಸುಂಧರಾ ರಾಜೆ ನೇತೃತ್ವದ ಸರ್ಕಾರದೆದುರು ಸೋತಿತು. ಬಿಜೆಪಿ 163 ಸ್ಥಾನದಲ್ಲಿ ಗೆದ್ದರೆ, ಕಾಂಗ್ರೆಸ್‌ನ ಬಲ ಕೇವಲ 21ಕ್ಕೆ ಸೀಮಿತವಾಗಿತ್ತು. 
ಒಟ್ಟು ಸ್ಥಾನ: 200   
ಮೀಸಲು ಸ್ಥಾನಗಳು: ಎಸ್‌ಸಿ-34, ಎಸ್‌ಟಿ-25

ಮಧ್ಯಪ್ರದೇಶ
ಮ್ಯಾಜಿಕ್‌ ನಂಬರ್‌ : 116

ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷದಿಂದ ಬಿಜೆಪಿ  ಆಡಳಿತವಿದೆ. ಈ ಪೈಕಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರದ್ದೇ 12 ವರ್ಷದ ಆಡಳಿತ. ಈ ಬಾರಿ ಕಾಂಗ್ರೆಸ್‌ ಬಿಜೆಪಿಗೆ ಪ್ರಬಲ ಪೈಪೋಟಿ ಕೊಡಲಿದೆ ಎನ್ನುವುದನ್ನು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಹಲವು ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎನ್ನಲಾಗುತ್ತದೆ. ಆರಂಭದಲ್ಲಿ ಬಿಜೆಪಿಯನ್ನೆದುರಿಸಲು ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಡುವೆ ಮಹಾಮೈತ್ರಿ ನಡೆಯುವ ಸೂಚನೆ ಇತ್ತು. ಆದರೆ ಹೆಚ್ಚಿನ ಸ್ಥಾನಗಳನ್ನು ತನಗೆ ನೀಡಬೇಕು ಎಂಬ ಮಾಯಾವತಿ  ಹಠ ಮೈತ್ರಿ ಸಾಧ್ಯತೆಯನ್ನು ನುಂಗಿ ಹಾಕಿತು. ಇದುವರೆಗೆ ಹಿಂದುತ್ವ ಸಂಬಂಧಿ ವಿಚಾರಗಳನ್ನು ತಪ್ಪಿಯೂ ಆಡದಿದ್ದ ಕಾಂಗ್ರೆಸ್‌ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಗೋವು, ರಾಮ, ದೇಗುಲ ವಿಚಾರಗಳನ್ನು ಪ್ರಸ್ತಾಪಿಸಿದೆ. ರಾಮ ವನ ಗಮನ ಪಥ, ಗೋಮೂತ್ರ ಉತ್ಪಾದನೆ, ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಗೋ ಶಾಲೆ ಸ್ಥಾಪಿಸುವ ಮಾತುಗಳನ್ನಾಡಿದೆ ಕಾಂಗ್ರೆಸ್‌. 
ಕಳೆದ ಚುನಾವಣೆ: 163 ಸ್ಥಾನ ಪಡೆದು ಬಿಜೆಪಿ ಗದ್ದುಗೆ ಉಳಿಸಿಕೊಂಡರೆ, ಕಾಂಗ್ರೆಸ್‌ ಮತ್ತು ಬಿಎಸ್‌ಪಿ ತಲಾ 58 ಮತ್ತು 4 ಸ್ಥಾನಗಳಿಗೆ ಸೀಮಿತವಾಗಿದ್ದವು. 
ಒಟ್ಟು ಸ್ಥಾನ: 230  
ಮೀಸಲು ಸ್ಥಾನಗಳು: ಎಸ್‌ಸಿ-35, ಎಸ್‌ಟಿ-47

ಛತ್ತೀಸ್‌ಗಡ
ಮ್ಯಾಜಿಕ್‌ ನಂಬರ್‌ : 46

ಬುಡಕಟ್ಟು ರಾಜ್ಯ ಛತ್ತೀಸ್‌ಗಡದ 90 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಿತು. ನಕ್ಸಲರ ಬೆದರಿಕೆಗಳ ನಡುವೆಯೂ ಸರಾಸರಿ ಶೇ.74.10 ರಷ್ಟು ಮತ ದಾಖಲಾಗಿದೆ. 2000ರಿಂದ 2003ರವರೆಗೆ ಅಜಿತ್‌ ಜೋಗಿ (ಅವರು ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿ ತಮ್ಮದೇ ಪಕ್ಷ ಸ್ಥಾಪಿಸಿದ್ದಾರೆ) ನೇತೃತ್ವದಲ್ಲಿ ಕಾಂಗ್ರೆಸ್‌ ಛತ್ತೀಸ್‌ಗಡದಲ್ಲಿ ಅಧಿಕಾರದಲ್ಲಿತ್ತು, ಆದರೆ 2003ರಿಂದ ಇಲ್ಲಿಯವರೆಗೂ, ಅಂದರೆ ಕಳೆದ 15 ವರ್ಷಗಳಿಂದ ಛತ್ತೀಸ್‌ಗಡದಲ್ಲಿ ರಮಣ್‌ ಸಿಂಗ್‌ ನೇತೃತ್ವದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಪ್ರತಿಬಾರಿಯೂ ಬಿಜೆಪಿ ಕಾಂಗ್ರೆಸ್‌ ನಡುವೆಯೇ ತೀವ್ರ ಪೈಪೋಟಿ ನಡೆದು, ರೋಮಾಂಚಕಾರಿ ಫ‌ಲಿತಾಂಶಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತು. ಈ ಬಾರಿಯೂ ಕಾಂಗ್ರೆಸ್‌ ಮತ್ತು ಬಿಜೆಪಿಯ ನಡುವೆಯೇ ಜಿದ್ದಾಜಿದ್ದಿಯಿದೆೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ ಪಿ), ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ನೇತೃತ್ವದ ಜನತಾ ಕಾಂಗೆೆಸ್‌ ಛತ್ತೀಸ್‌ಗಡ (ಜೆ) ಮತ್ತು ಕಮ್ಯೂನಿ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮೈತ್ರಿ ಮಾಡಿಕೊಂಡಿರುವುದು ಚುನಾವಣೆಗೆ ಹೊಸ ಟ್ವಿಸ್ಟ್ ಕೊಟ್ಟಿತಾದರೂ ಈ ಮೈತ್ರಿ ಮೇಲುಗೈ ಸಾಧಿಸುವುದು ಕಷ್ಟ ಎನ್ನುತ್ತವೆ ಸಮೀಕ್ಷೆಗಳು.
ಕಳೆದ ಚುನಾವಣೆ: 90 ವಿಧಾನಸಭಾ ಸ್ಥಾನಗಳ ಛತ್ತೀಸ್‌ಗಡದಲ್ಲಿ ಕಳೆದ ಬಾರಿ ಬಿಜೆಪಿ 49 ಸ್ಥಾನ ಪಡೆದು ಸರ್ಕಾರ ರಚಿಸಿತ್ತು. ಕಾಂಗ್ರೆಸ್‌ಗೆ ಅಂದು ದಕ್ಕಿದ್ದು 39 ಸ್ಥಾನಗಳು.
ಒಟ್ಟು ಸ್ಥಾನ: 90  
ಮೀಸಲು ಸ್ಥಾನಗಳು: ಎಸ್‌ಸಿ-10, ಎಸ್‌ಟಿ-29

ತೆಲಂಗಾಣ
ಮ್ಯಾಜಿಕ್‌ ನಂಬರ್‌ : 60

ಪ್ರತ್ಯೇಕ ತೆಲಂಗಾಣ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಆ ರಾಜ್ಯದ ಮುಖ್ಯಮಂತ್ರಿಯಾದ ಕೆ. ಚಂದ್ರಶೇಖರರಾವ್‌ಗೆ, ಈ ಬಾರಿ ಅನಿರೀಕ್ಷಿತ ಎದುರಾಳಿಗಳು ಎದುರಾದರು. ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಕಾಂಗ್ರೆಸ್‌, ಸಿಪಿಐಎಂ ಮತ್ತು ತೆಲಂಗಾಣ ಜನ ಸಮಿತಿ ಜೊತೆಗೂಡಿ ರಚಿಸಿದ‌ “ಮಹಾಕುಟಮಿ’ ಕೆಸಿಆರ್‌ ವಿರುದ್ಧ ಭರಪೂರ ಪ್ರಚಾರ ನಡೆಸಿದವು. ಇನ್ನೊಂದೆಡೆಯಿಂದ ಬಿಜೆಪಿ ಮತ್ತು ಓವೈಸಿ ಪಕ್ಷವೂ ಜೋರು ಸದ್ದು ಮಾಡಿದವು. ಇಷ್ಟೊಂದು ಎದುರಾಳಿಗಳು ಇದ್ದರೂ ಮತ್ತೆ ಕೆ. ಚಂದ್ರಶೇಖರ ರಾವ್‌ ಅವರೇ ಅಧಿಕಾರಕ್ಕೆ ಏರಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು ಮತ್ತು ಚುನಾವಣಾ ಪೂರ್ವ-ಚುನಾವಣೋತ್ತರ ಸಮೀಕ್ಷೆಗಳು. 
ಕಳೆದ ಚುನಾವಣೆ: ಚಂದ್ರಶೇಖರ ರಾವ್‌ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ 63 ಸ್ಥಾನ ಪಡೆದು ಅಧಿಕಾರಕ್ಕೇರಿದರೆ, ಕಾಂಗ್ರೆಸ್‌ 21 ಮತ್ತು ನಾಯ್ಡು ನೇತೃತ್ವದ ಟಿಡಿಪಿಗೆ 15 ಸ್ಥಾನಗಳನ್ನು ಪಡೆದು ಸೋಲುಂಡವು.
ಒಟ್ಟು ಸ್ಥಾನ: 119  
ಮೀಸಲು ಸ್ಥಾನಗಳು: ಎಸ್‌ಸಿ-19, ಎಸ್‌ಟಿ-12

ಮಿಜೋರಾಂ
ಮ್ಯಾಜಿಕ್‌ ನಂಬರ್‌ : 21

ಸದ್ಯ ಈಶಾನ್ಯ ರಾಜ್ಯಗಳ ಪೈಕಿ ಮಿಜೋರಾಂನಲ್ಲಿ ಮಾತ್ರ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದೆ. ಹಾಲಿ ಮುಖ್ಯಮಂತ್ರಿ ಲಾಲ್ತನ್‌ ಹಾವ್ಲಾ 2008ರಿಂದ ಅಧಿಕಾರದಲ್ಲಿದ್ದಾರೆ. 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುನ್ನಡೆಸಿದ್ದ ಅವರು ಸತತ 2ನೇ ಬಾರಿಗೆ ಪಕ್ಷವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಅಲ್ಲಿ 1 ಲೋಕಸಭೆ ಮತ್ತು 1 ರಾಜ್ಯಸಭೆ ಸ್ಥಾನಗಳು ಇದ್ದು, ಅವೆರಡನ್ನೂ ಕಾಂಗ್ರೆಸ್‌ ನಾಯಕರೇ ಗೆದ್ದುಕೊಂಡಿದ್ದಾರೆ. ಈ ಬಾರಿ ಸೋಲುಂಡರೆ ಕಾಂಗ್ರೆಸ್‌ಗೆ ಬಹುದೊಡ್ಡ ಪೆಟ್ಟು ಬೀಳಲಿದೆ.
ಕಳೆದ ಚುನಾವಣೆ: 40 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್‌ 34 ಸ್ಥಾನ ಗೆದ್ದು ಗದ್ದುಗೆಗೇರಿತು. ಮಿಜೋ ನ್ಯಾಷನಲ್‌ ಫ್ರಂಟ್‌ ಮತ್ತು ಮಿಜೋರಾಮ್‌ ಪೀಪಲ್ಸ್‌ ಕಾನ್ಫರೆನ್ಸ್‌ ತಲಾ 5 ಸ್ಥಾನಗಳನ್ನು ಪಡೆದವು. 
ಒಟ್ಟು ಸ್ಥಾನ: 40
ಮೀಸಲು ಸ್ಥಾನಗಳು: ಎಸ್‌ಟಿ-39

ಬೆಳಗ್ಗೆ 8ರಿಂದ ಮತಎಣಿಕೆ ಆರಂಭ, ಸಂಜೆ ವೇಳೆಗೆ ಫ‌ಲಿತಾಂಶ ಘೋಷಣೆ
1,74,724 ಇವಿಎಂಗಳು ಬಳಕೆ
679 ಅಸೆಂಬ್ಲಿ ಸ್ಥಾನಗಳಲ್ಲಿ ನಡೆದಿದ್ದ ಚುನಾವಣೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.