ಮಹಿಳಾ ಬಾಕ್ಸಿಂಗ್‌ನಲ್ಲಿ 6 ಚಿನ್ನ ಗೆದ್ದು ಸಾಧನೆ: ಶಹಬ್ಟಾಸ್‌ ಮೇರಿ


Team Udayavani, Nov 27, 2018, 6:00 AM IST

x-16.jpg

ವಿಶ್ವ ಮಹಿಳಾ ಬಾಕ್ಸಿಂಗ್‌ ಕೂಟದಲ್ಲಿ ಅತಿ ಹೆಚ್ಚು 6 ಚಿನ್ನದ ಪದಕ ಗೆದ್ದ ಮೊದಲ ಬಾಕ್ಸರ್‌ ಎಂಬ ಕೀರ್ತಿಗೆ ಪಾತ್ರರಾಗಿರುವ ಮೇರಿ ಕೋಮ್‌ ಬದುಕು ಮತ್ತು ಸಾಧನೆ ಮಹಿಳೆಯರಿಗೆ ಮಾತ್ರವಲ್ಲದೆ, ಎಲ್ಲ ಕ್ರೀಡಾಪಟುಗಳಿಗೂ ಸ್ಫೂರ್ತಿಯಾಗುವಂಥದ್ದು. ದಿಲ್ಲಿಯಲ್ಲಿ ನಡೆಯುತ್ತಿರುವ ವನಿತಾ ವಿಶ್ವ ಬಾಕ್ಸಿಂಗ್‌ ಕೂಟದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೇರಿ ಕೋಮ್‌ ತನ್ನ ಎದುರಾಳಿ ಉಕ್ರೇನ್‌ನ ಹನ್ನಾ ಒಕ್‌ಹುಟಾ ಅವರನ್ನು 5-0 ಅಂತರದಿಂದ ಸೋಲಿಸಿ ಐತಿಹಾಸಿಕ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೇರಿ ಆಟ ಎಷ್ಟು ಪರಿಪೂರ್ಣವಾಗಿತ್ತೆಂದರೆ ಎಲ್ಲ ಐವರು ರೆಫ‌ರಿಗಳು ಅವರ ಪರವಾಗಿ ಅಂಕಗಳನ್ನು ನೀಡಿದ್ದರು. ಈ ಮೂಲಕ ಆಟಕ್ಕೆ ವಯಸ್ಸು ಅಡ್ಡಿಯಲ್ಲ ಎನ್ನುವುದನ್ನು ಮೇರಿ ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ. ಆರು ಚಿನ್ನದ ಪದಕದೊಂದಿಗೆ ಮೇರಿ ಕೋಮ್‌ ಕ್ಯೂಬಾದ ಪುರುಷರ ಬಾಕ್ಸಿಂಕ್‌ ವಿಭಾಗದ ದಿಗ್ಗಜ ಫೆಲಿಕ್ಸ್‌ ಸಾವೊನ್‌ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಓರ್ವ ಮಹಿಳೆಯಾಗಿ ಅದೂ ಈಶಾನ್ಯ ಭಾಗದ ರಾಜ್ಯದಿಂದ ಬಂದ ಮಹಿಳೆಯೊಬ್ಬರು ಮಾಡಿದ ಈ ಸಾಧನೆಯಿಂದ ಇಡೀ ದೇಶ ಹೆಮ್ಮೆ ಪಡುವಂತಾಗಿದೆ. 

ಮೇರಿಕೋಮ್‌ಗೀಗ 35ರ ಹರೆಯ. ಮೂರು ಮಕ್ಕಳ ತಾಯಿ ಅವರು. ಇತ್ತೀಚೆಗೆ ರಾಜ್ಯಸಭಾ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದಾರೆ. ಇಷ್ಟು ಮಾತ್ರವಲ್ಲ ಯುವ ಬಾಕ್ಸರ್‌ಗಳಿಗೆ ತರಬೇತಿ ಕೊಡುವ ಒಂದು ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ. ಇಷ್ಟೆಲ್ಲ ಕಾರ್ಯ ಬಾಹುಳ್ಯದ ಒತ್ತಡದ ನಡುವೆಯೂ ಮೇರಿ ತನ್ನ ಪ್ರೀತಿಯ ಕ್ರೀಡೆಯನ್ನು ಕಡೆಗಣಿಸಲಿಲ್ಲ. ಬೇರೆ ಯಾರೇ ಆಗಿದ್ದರೂ ಇಷ್ಟು ಪದಕಗಳನ್ನು ಗೆದ್ದ ಬಳಿಕ ಕಣದಿಂದ ನಿವೃತ್ತಿ ಘೋಷಿಸುತ್ತಿದ್ದರು. ಆದರೆ ಮೇರಿ ಕೋಮ್‌ ಉತ್ಕಟ ಬಾಕ್ಸಿಂಗ್‌ ಪ್ರೀತಿ ಅವರನ್ನು ನಿವೃತ್ತಿ ಪಡೆಯಲು ಬಿಡಲಿಲ್ಲ. ದೃಢ ಸಂಕಲ್ಪ ಮತ್ತು ಸತತ ಸಾಧನೆ ಅವರನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. 

ಮೇರಿ ಕೋಮ್‌ ಬಾಕ್ಸಿಂಗ್‌ ಕಣಕ್ಕಿಳಿದು ಎರಡು ದಶಕವಾಗುತ್ತಾ ಬಂತು. ಅವರ ಕ್ರೀಡಾ ಬದುಕು ಹಲವು ಏರಿಳಿತಗಳನ್ನು ಕಂಡಿದೆ. ನಡುವೆ ಒಮ್ಮೆ ನಿರ್ವಹಣೆ ಕಳೆಗುಂದಿದಾಗ ನಿವೃತ್ತಿಯಾಗುವುದು ಒಳ್ಳೆಯದು ಎಂಬ ಸಲಹೆಗಳೂ ಬಂದಿದ್ದವು. ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿದ್ದಾಗ ಮೇರಿ ಬಾಕ್ಸಿಂಗ್‌ ಗ್ಲೌಸ್‌ಗಳನ್ನು ತೂಗು ಹಾಕುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅಷ್ಟು ಬೇಗ ಸೋಲೊಪ್ಪುವವರಾಗಿರಲಿಲ್ಲ ಮೇರಿ. ಬಾಕ್ಸಿಂಗ್‌ಗೆ ತನ್ನಲ್ಲಿನ್ನೂ ಸಾಕಷ್ಟು  ಸಾಮರ್ಥ್ಯ ಉಳಿದಿದೆ ಎಂದು ಅವರಿಗೆ ತಿಳಿದಿತ್ತು. ಹೀಗಾಗಿ ಅವರು ತವರಿನಲ್ಲಿ ನಡೆಯುವ ವಿಶ್ವ ಬಾಕ್ಸಿಂಗ್‌ ಕೂಟಕ್ಕಾಗಿ ತಯಾರಿ ನಡೆಸತೊಡಗಿದರು. ಎರಡು ವರ್ಷದ ಸತತ ಸಾಧನೆ ಈಗ ಬಂಗಾರದ ಪದಕವಾಗಿ ಕೊರಳಲ್ಲಿ ಶೋಭಿಸುತ್ತಿದೆ. ಈ ಗೆಲುವನ್ನು ದೇಶಕ್ಕೆ ಅರ್ಪಿಸುವ ಮೂಲಕ ಮೇರಿ ಜನರು ತನ್ನ ಮೇಲಿಟ್ಟ ಅಭಿಮಾನ ಮತ್ತು ಪ್ರೀತಿಗೆ ತಕ್ಕ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. 

ಮೇರಿ ಕೋಮ್‌ ಬಾಕ್ಸಿಂಗ್‌ ಕಣದಲ್ಲಿರಲಿ, ಇಲ್ಲದಿರಲಿ ಅವರ ಬದುಕು ಸದಾ ಸ್ಫೂರ್ತಿದಾಯಕ. ಏನೇನೂ ಮೂಲಸೌಕರ್ಯಗಳಿಲ್ಲದ ಮಣಿಪುರದ ಹಳ್ಳಿಯಿಂದ ಬಂದ ಮಹಿಳೆಯೊಬ್ಬರು ಪ್ರಾದೇಶಿಕ, ವರ್ಣ, ಲಿಂಗ ಮತ್ತು ಭಾಷಾ ತಾರತಮ್ಯವನ್ನು ಮೆಟ್ಟಿ ನಿಂತು ಮಾಡಿದ ಈ ಸಾಧನೆ ಖಂಡಿತ ಅಧ್ಯಯನ ಯೋಗ್ಯ. ಈಗಾಗಲೇ ಅವರು ಒಂದು ಸಿನಿಮಾಕ್ಕೆ ಪ್ರೇರಣೆಯಾಗಿದ್ದಾರೆ. ಅವರು ಪ್ರಕೃತಿಯ ಮಡಿಲಲ್ಲಿ ಸಹಜವಾಗಿ ಅರಳಿದ ಕ್ರೀಡಾ ಪ್ರತಿಭೆ ಎನ್ನುವುದು ಇನ್ನೊಂದು ಹೆಗ್ಗಳಿಕೆ. 

ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ ಎನ್ನುವುದಕ್ಕೆ ಮೇರಿ ಕೋಮ್‌ ಅವರಂಥ ಉದಾಹರಣೆಗಳು ಧಾರಾಳ ಇವೆ. ಅದರಲ್ಲೂ ಇತ್ತೀಚೆಗಿನ ದಿನಗಳಲ್ಲಿ ಕ್ರೀಡಾ ಕೂಟಗಳಲ್ಲಿ ಗ್ರಾಮೀಣ ಭಾಗದಲ್ಲಿ ಬೆಳೆದ ಮಹಿಳೆಯರು ಮಾಡುತ್ತಿರುವ ಸಾಧನೆ ಗಮನಾರ್ಹವಾಗಿದೆ. ಆದರೆ, ಇಂಥ ಪ್ರತಿಭೆಗಳನ್ನು ಹುಡುಕಿ ತೆಗೆದು ತಯಾರುಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ನಾವಿನ್ನೂ ಪೂರ್ಣವಾಗಿ ಸಫ‌ಲರಾಗಿಲ್ಲ. ಗೆದ್ದ ಕ್ರೀಡಾಪಟುಗಳಿಗೆ ಒಂದಿಷ್ಟು ಬಹುಮಾನವನ್ನೋ ಅಥವಾ ಪ್ರಶಸ್ತಿಯನ್ನೋ ಕೊಡುವುದರಿಂದಷ್ಟೇ ನಾವು ಕ್ರೀಡೆಯನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲ. ಇನ್ನೊಂದಿಷ್ಟು ಕ್ರೀಡಾಂ ಗಣ ಗಳನ್ನು ಅಥವಾ ಈಜುಕೊಳಗಳನ್ನು ನಿರ್ಮಿಸುವುದೇ ಕ್ರೀಡೆಯಲ್ಲಿ ಸರಕಾರ ಮಾಡುವ ಸಾಧನೆಯಲ್ಲ. ಯುವ ಜನಾಂಗವನ್ನು ಕ್ರೀಡೆಯತ್ತ ಆಕರ್ಷಿಸುವಂಥ ವಾತಾವರಣವೊಂದು ದೇಶದಲ್ಲಿ ನಿರ್ಮಾಣವಾಗಬೇಕು. ಇದು ಸಾಧ್ಯವಾಗಬೇಕಾದರೆ ಮೇರಿ ಕೋಮ್‌ರಂಥ ಸಾಧಕರನ್ನು ಕಾಳಜಿಯಿಂದ ನೋಡಿಕೊಳ್ಳುವ ವ್ಯವಸ್ಥೆಯೊಂದು ನಮ್ಮಲ್ಲಿರಬೇಕು. ಆಗ ಮಾತ್ರ ಇನ್ನೂ ಹಲವು ಮೇರಿ ಕೋಮ್‌ರನ್ನು ನಾವು ತಯಾರಿಸಬಹುದು. 

ಒಲಿಂಪಿಕ್‌ ಕೂಟದಲ್ಲಿ ಚಿನ್ನ ಗೆದ್ದಿಲ್ಲ ಎಂಬ ಕೊರಗೊಂದು ಮೇರಿ ಕೋಮ್‌ಗೆ ಇದೆ. 2016ರ ವಿಶ್ವ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಕಣದಿಂದ ಹೊರಬಿದ್ದು, ಒಲಿಂಪಿಕ್ಸ್‌ಗೆ ತೇರ್ಗಡೆಯಾಗದೇ ಹೋದದ್ದು ಇಡೀ ದೇಶಕ್ಕೆ ಬೇಸರವುಂಟು ಮಾಡಿದ ಘಟನೆ. ಈ ಕೊರತೆಯನ್ನು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿವಾರಿಸಬೇಕೆಂಬ ಹಂಬಲವನ್ನು ಅವರು ಹೊಂದಿದ್ದಾರೆ. ಐಒಸಿ ಮೇರಿ ಸ್ಪರ್ಧಿಸುವ 48 ಕೆಜಿ ವಿಭಾಗವನ್ನು ಉಳಿಸಿಕೊಂಡರೆ ಮೇರಿ ಒಲಿಂಪಿಕ್ಸ್‌ ಚಿನ್ನ ಗೆದ್ದು ತರಲಿದ್ದಾರೆ ಎಂಬ ನಿರೀಕ್ಷೆ ದೇಶದ್ದು. 

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಹೊಸ ರೂಪಾಂತರಿ ಒಮಿಕ್ರಾನ್‌ ಬಗ್ಗೆ ಇರಲಿ ಎಚ್ಚರಿಕೆ

ಹೊಸ ರೂಪಾಂತರಿ ಒಮಿಕ್ರಾನ್‌ ಬಗ್ಗೆ ಇರಲಿ ಎಚ್ಚರಿಕೆ

ಮುಗಿಯದ ಕೋವಿಡ್‌ ರೂಪಾಂತರ ಪರ್ವ!

ಮುಗಿಯದ ಕೋವಿಡ್‌ ರೂಪಾಂತರ ಪರ್ವ!

ಜನಸಂಖ್ಯೆ ನಿಯಂತ್ರಣದಲ್ಲಿ ಭಾರತದ ಯಶಸ್ಸು 

ಜನಸಂಖ್ಯೆ ನಿಯಂತ್ರಣದಲ್ಲಿ ಭಾರತದ ಯಶಸ್ಸು 

ಕಾಲಮಿತಿಯೊಳಗೆ ತಾ.ಪಂ., ಜಿ.ಪಂ. ಗಡಿಗಳನ್ನು ನಿಗದಿಪಡಿಸಲಿ

ಕಾಲಮಿತಿಯೊಳಗೆ ತಾ.ಪಂ., ಜಿ.ಪಂ. ಗಡಿಗಳನ್ನು ನಿಗದಿಪಡಿಸಲಿ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.