ಉಗ್ರ ಪೋಷಣೆ ನಿಲ್ಲಿಸದ ನೆರೆ ರಾಷ್ಟ್ರ; ಪಾಕ್‌ ಅನ್ನು ಮೂಲೆಗುಂಪಾಗಿಸಿ

Team Udayavani, Jul 29, 2020, 9:46 AM IST

ಉಗ್ರ ಪೋಷಣೆ ನಿಲ್ಲಿಸದ ನೆರೆ ರಾಷ್ಟ್ರ; ಪಾಕ್‌ ಅನ್ನು ಮೂಲೆಗುಂಪಾಗಿಸಿ

ಪಾಕಿಸ್ಥಾನವು ತನ್ನೊಡಲಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆ ಮತ್ತು ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಬಹಳ ಸಮಯದಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿವೆ. ಭಾರತವು ಇನ್ನೊಂದೆಡೆ ದಶಕಗಳಿಂದ ಪಾಕ್‌ ಹೇಗೆ ಉಗ್ರರನ್ನು ಪೋಷಿಸುತ್ತಿದೆ ಎನ್ನುವ ಸತ್ಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪುರಾವೆ ಸಹಿತ ಕಾಲಕಾಲಕ್ಕೆ ಎದುರಿಡುತ್ತಲೇ ಇರುತ್ತದೆ. ಆದರೆ ಈ ಎಲ್ಲ ಒತ್ತಡದ ಅನಂತರವೂ ಪಾಕಿಸ್ಥಾನ ತನ್ನ ಬುದ್ಧಿಯನ್ನು ಮಾತ್ರ ಬಿಡುತ್ತಲೇ ಇಲ್ಲ. ಪಾಕ್‌ನಲ್ಲೀಗ ಐಸಿಸ್‌ನಂಥ ಉಗ್ರ ಸಂಘಟನೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿವೆ.

ಆದಾಗ್ಯೂ ಎಫ್ಎಟಿಎಫ್ ಕಪ್ಪುಪಟ್ಟಿಯಲ್ಲಿ ಬೀಳುವ ಅಪಾಯ ಎದುರಾದಾಗಲೆಲ್ಲ ಪಾಕಿಸ್ಥಾನ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದಂತೆ, ಕೆಲವು ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದಂತೆ ತೋರಿಸುತ್ತಿದೆಯಾದರೂ ವಾಸ್ತವ ಇದಕ್ಕೆ ತದ್ವಿರುದ್ಧವಾಗಿರುತ್ತದೆ ಎನ್ನುವುದು ಜಗತ್ತಿಗೆ ಸ್ಪಷ್ಟವಾಗಿದೆ. ಇಮ್ರಾನ್‌ ಸರಕಾರ, ಪಾಕ್‌ನಲ್ಲಿರುವ ಜಾಗತಿಕ ಮೋಸ್ಟ್‌ ವಾಂಟೆಡ್‌ ಉಗ್ರರ ಹೆಸರುಗಳನ್ನು ತನ್ನ ಕಪ್ಪು ಪಟ್ಟಿಯಲ್ಲಿ ಸೇರಿಸದೇ ಇರುವುದು ಇದಕ್ಕೊಂದು ತಾಜಾ ಉದಾಹರಣೆ. ವಿಶ್ವಸಂಸ್ಥೆಯ ಒಂದು ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಲಾಗಿದ್ದು, ಈಗಲೂ ಅಲ್‌ಕಾಯಿದಾ, ಇಸ್ಲಾಮಿಕ್‌ ಸ್ಟೇಟ್‌ ಮತ್ತು ತೆಹ್ರೀಕ್‌-ಎ-ತಾಲಿಬಾನ್‌ ಪಾಕಿಸ್ಥಾನದಂಥ ದೊಡ್ಡ ಉಗ್ರ ಸಂಘಟನೆಗಳು ಪಾಕಿಸ್ಥಾನಿ ನೆಲದಿಂದಲೇ ನಿರ್ವಿಘ್ನವಾಗಿ ಉಗ್ರಕೃತ್ಯಗಳನ್ನು ನಡೆಸುತ್ತಿವೆ.

ಉಗ್ರ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಡುವ ವಿಶ್ವಸಂಸ್ಥೆಯ ತಂಡವು ಈ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿರುವುದು ಸಹಜವೇ ಆಗಿದೆ. ಯಾವ ಉಗ್ರರ ಹೆಸರು ಕಪ್ಪು ಪಟ್ಟಿಯಲ್ಲಿ ಇರಬೇಕಿತ್ತೋ ಅವರೆಲ್ಲರ ಹೆಸರನ್ನೂ ಪಾಕ್‌ ಸರಕಾರ ತನ್ನ ಪಟ್ಟಿಯಿಂದ ಹೊರಗಿಟ್ಟು ರಕ್ಷಿಸುತ್ತಿದೆ. ತೆಹ್ರೀಕ್‌-ಎ-ತಾಲಿಬಾನ್‌ ಪಾಕಿಸ್ಥಾನ್‌ ಮುಖ್ಯಸ್ಥ ಅಮೀರ್‌ ನೂರ್‌ ವಲಿ ಮಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಲಾಗಿದೆ. ಆದರೆ ಈಗಲೂ ಇಮ್ರಾನ್‌ ಖಾನ್‌ ಸರಕಾರ‌ ಈ ಕ್ರೂರಿಯನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ಬದಲಾಗಿ, ಆತ ಮತ್ತಷ್ಟು ಬಲಿಷ್ಠವಾಗಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದೆ ಎನ್ನುತ್ತಾರೆ ರಕ್ಷಣಾ ಪರಿಣತರು.

ಆದರೆ ಭಾರತವನ್ನು ಹೊರತುಪಡಿಸಿದರೆ, ಯಾವೊಂದು ದೇಶವೂ ಸಹ ಪಾಕಿಸ್ಥಾನಕ್ಕೆ ಇದಿರೇಟು ನೀಡುವ ಕೆಲಸ ಮಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಲೇಬೇಕಾಗಿದೆ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದನ್ನು ತಡೆಗಟ್ಟಲು ಇರುವ ಜಾಗತಿಕ ಕಣ್ಗಾವಲು ಸಂಸ್ಥೆ (ಎಫ್ಎಟಿಎಫ್)ಯ ಕಪ್ಪು ಪಟ್ಟಿಯಲ್ಲಿ ಮುಂದಿನ ಬಾರಿಯಾದರೂ ಪಾಕ್‌ ಸೇರ್ಪಡೆಗೊಳ್ಳುವಂತೆ ಮಾಡಬೇಕಿದೆ. ಎಫ್ಎಟಿಎಫ್ ಕಪ್ಪುಪಟ್ಟಿಯಿಂದ ಪಾಕ್‌ ಅನ್ನು ಬಚಾವ್‌ ಮಾಡುತ್ತಿರುವ ರಾಷ್ಟ್ರಗಳ ಮೇಲೆ ಒತ್ತಡ ಸೃಷ್ಟಿಸುವ ಕೆಲಸವೂ ಮುಖ್ಯವಾಗಿ ಆಗಬೇಕಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.