ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

Team Udayavani, Jul 6, 2022, 6:00 AM IST

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ತಮಿಳುನಾಡು ರಾಜ್ಯಕ್ಕೆ ಸ್ವಾಯತ್ತತೆ ಕೊಡಬೇಕು ಎಂದು ಆಗ್ರಹಿಸಿರುವ ಡಿಎಂಕೆ ನಾಯಕ, ಮಾಜಿ ಕೇಂದ್ರ ಸಚಿವ ಎ. ರಾಜಾ ಅವರು ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸ್ವಾಯತ್ತತೆ ನೀಡದೇ ಹೋದರೆ, ತಮಿಳುನಾಡನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಿ ಎಂಬ ಬೇಡಿಕೆ ಇಡಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದು, ಇದು ರಾಜಕೀಯ ವಲಯದಲ್ಲಿ ತೀರಾ ಆಕ್ರೋಶಕ್ಕೂ ಕಾರಣವಾಗಿದೆ.

ಅಂದ ಹಾಗೆ, ತಮಿಳುನಾಡಿನ ಈ ಪ್ರತ್ಯೇಕ ರಾಷ್ಟ್ರ “ಥಣಿ ನಾಡು” ಬೇಡಿಕೆ ಇಂದಿನದ್ದೇನಲ್ಲ. ಅದು ಡಿಎಂಕೆ ಹುಟ್ಟುಹಾಕಿದ ಪೆರಿಯಾರ್‌ ಅವರ ಕಲ್ಪನೆ. ತಮಿಳಿಗರಿಗಾಗಿಯೇ ಪ್ರತ್ಯೇಕ ದೇಶವೊಂದು ಬೇಕು ಎಂದು ಅವರು ವಾದಿಸಿದ್ದರು. ಅಂದರೆ, ಸ್ವಯಂ ಗೌರವ ಹೊಂದಿರುವ ತಮಿಳಿಗರಿಗಾಗಿ ದ್ರಾವಿಡ ನಾಡು ಎಂಬ ದೇಶ ರಚನೆಯಾಗಬೇಕು ಎಂದು ಆಗ್ರಹಿಸಿದ್ದರು.
ಆದರೆ 1963ರಲ್ಲಿ ಡಿಎಂಕೆ ದ್ರಾವಿಡ ನಾಡು ಎಂಬ ಬೇಡಿಕೆಯನ್ನು ಕೈಬಿಟ್ಟು, ಅನಂತರದ ದಿನಗಳಲ್ಲಿ ರಾಜ್ಯಗಳಿಗೆ ತನ್ನದೇ ಆದ ಸ್ವಾಯತ್ತವಿರಬೇಕು ಎಂಬ ಬೇಡಿಕೆಯನ್ನು ಮುಂದುವರಿಸಿಕೊಂಡು ಬಂದಿತ್ತು. 1969ರಲ್ಲಿ ಪಿ.ವಿ.ರಾಜಮನ್ನಾರ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಮಾಡಿದ್ದ ಡಿಎಂಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಬಂಧ ಹೇಗಿರಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿತ್ತು. 1971 ಮತ್ತು 1974ರಲ್ಲಿಯೂ ತಮಿಳುನಾಡಿಗೆ ಸ್ವಾಯತ್ತ ಸ್ಥಾನ ನೀಡಬೇಕು ಎಂಬ ಹಕ್ಕೊತ್ತಾಯ ಮಾಡಿ, ತಮಿಳುನಾಡು ವಿಧಾನಸಭೆಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಎಲ್ಲವೂ ಇತಿಹಾಸದ ಕಥೆಗಳು. ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನ ಸ್ವಾಯತ್ತ ವಿಚಾರ ನನೆಗುದಿಗೆ ಬಿದ್ದಿತ್ತು. ಆದರೆ ಈಗ ಎ.ರಾಜಾ ಅವರ ವಿವಾದಾತ್ಮಕ ಮಾತಿನ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.

ಅಖಂಡ ಭಾರತ ಸದೃಢವಾಗಿದೆ. ಯಾವುದೇ ದೇಶದ ಬೆದರಿಕೆಗೂ ಬಗ್ಗದ ಸ್ಥಿತಿಯಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಹೆಸರು ಪಡೆದುಕೊಂಡಿದೆ. ಅತ್ಯಂತ ಮುಂದುವರಿದ ದೇಶಗಳೂ ಭಾರತ ವೆಂದರೆ, ತಲೆ ಎತ್ತಿ ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ. ಇಂಥ ಹೊತ್ತಿ ನಲ್ಲಿ ದೇಶವನ್ನು ಒಡೆಯುವ ಮಾತು ಯಾವುದೇ ಕಾರಣಕ್ಕೂ ಸಲ್ಲದು. ಇದು ತಮಿಳುನಾಡಿನ ರಾಜಕಾರಣಿಗಳಿಗೆ ಅರ್ಥವಾದರೆ ಒಳಿತು.

ತಮಿಳುನಾಡಿನ ಈ ಮನೋಭಾವ ಹೊಸದೇನಲ್ಲ. ಅಕ್ಕಪಕ್ಕದ ರಾಜ್ಯಗಳ ಜತೆಗೂ ಅದು ಜಗಳವಾಡುತ್ತಲೇ ಬಂದಿದೆ. ಕಾವೇರಿ ವಿಚಾರದಲ್ಲಂತೂ ಕರ್ನಾಟಕದ ವಿರುದ್ಧ ಇತಿಹಾಸದಿಂದಲೂ ಕಾನೂನು ಸಮರ ಮಾಡಿಕೊಂಡೇ ಬರುತ್ತಿದೆ. ಒಂದು ರೀತಿಯಲ್ಲಿ ಈ ಅಂತಾರಾಜ್ಯ ಜಲ ವಿವಾದ ಅಲ್ಲಿನ ರಾಜಕಾರಣಿಗಳಿಗೆ ಓಟ್‌ಬ್ಯಾಂಕ್‌ ರಾಜಕಾರಣದಂಥಾಗಿದೆ.

ಹೊಂದಿಕೊಂಡು ಹೋಗುವ ಸ್ವಭಾವವಂತೂ ಇಲ್ಲವೇ ಇಲ್ಲ. ಅಲ್ಲದೆ, ತನ್ನ ಮೂಗಿನ ನೇರಕ್ಕೆ ನಡೆಯದೇ ಹೋದರೆ, ಅದು ಎಂಥದ್ದೇ ಜಗಳಕ್ಕೂ ಸಿದ್ಧವಾಗಿ ನಿಂತಿರುತ್ತದೆ ಎಂಬುದು ಇತಿಹಾಸ ನಮಗೆ ತೋರಿಸಿಕೊಟ್ಟಿದೆ. ಏನೇ ಆಗಲಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಮುಂದೆಯೇ ಎ.ರಾಜಾ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿದ್ದರೂ, ಸಿಎಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಡೇ ಪಕ್ಷ ರಾಜಾಗೆ ಇಂಥ ಮಾತು ಸಲ್ಲದು ಎಂದಾದರೂ ಹೇಳಬೇಕಾಗಿತ್ತು.

ಟಾಪ್ ನ್ಯೂಸ್

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

tdy-8

ಮೊಸರು ಕುಡಿಕೆ ಆಡುವವರಿಗೆ ಕ್ರೀಡಾ ಮೀಸಲಾತಿ!

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

1-dsfsdf

ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

tdy-2

ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ರೀಡಾ ಮೀಸಲು ಎಲ್ಲ ಇಲಾಖೆಗಳಿಗೆ ವಿಸ್ತರಣೆ ಸ್ವಾಗತಾರ್ಹ

ಕ್ರೀಡಾ ಮೀಸಲು ಎಲ್ಲ ಇಲಾಖೆಗಳಿಗೆ ವಿಸ್ತರಣೆ ಸ್ವಾಗತಾರ್ಹ

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ

ಶತಮಾನೋತ್ಸವಕ್ಕೆ ಭಾರತದ ಕೀರ್ತಿ ಇನ್ನಷ್ಟು ಬೆಳೆಯಲಿ

ಶತಮಾನೋತ್ಸವಕ್ಕೆ ಭಾರತದ ಕೀರ್ತಿ ಇನ್ನಷ್ಟು ಬೆಳೆಯಲಿ

ಶತಮಾನೋತ್ಸವ‌ ಸಂಭ್ರಮದ ಹೊತ್ತಿಗೆ ಇನ್ನಷ್ಟು ಬೆಳಗಲಿ ಭಾರತ

ಶತಮಾನೋತ್ಸವ‌ ಸಂಭ್ರಮದ ಹೊತ್ತಿಗೆ ಇನ್ನಷ್ಟು ಬೆಳಗಲಿ ಭಾರತ

ಹಬ್ಬಗಳ ಸಂಭ್ರಮದಲ್ಲಿ ಕೋವಿಡ್ ನಿಯಮ ಪಾಲನೆಯಾಗಲಿ

ಹಬ್ಬಗಳ ಸಂಭ್ರಮದಲ್ಲಿ ಕೋವಿಡ್ ನಿಯಮ ಪಾಲನೆಯಾಗಲಿ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

tdy-8

ಮೊಸರು ಕುಡಿಕೆ ಆಡುವವರಿಗೆ ಕ್ರೀಡಾ ಮೀಸಲಾತಿ!

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

1re

ವಿದ್ಯಾರ್ಥಿಗಳ ಹೋರಾಟ ಯಶಸ್ವಿ: ವಾಡಿ ಇಂದಿರಾಗಾಂಧಿ ವಸತಿ ಶಾಲೆ ಸ್ಥಳಾಂತರ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.