ಬಳಕೆಯಲ್ಲಿ ಎಚ್ಚರಿಕೆಯಿರಲಿ ಸಾಮಾಜಿಕ ಮಾಧ್ಯಮಕ್ಕೆ ಆಧಾರ್‌ ಸಂಯೋಜನೆ

Team Udayavani, Aug 22, 2019, 5:58 AM IST

ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮದ್ರಾಸ್‌ ಹೈಕೋರ್ಟಿನಲ್ಲಿ ದಾಖಲಾಗಿರುವ ಫೇಸ್‌ಬುಕ್‌ಗೆ ಆಧಾರ್‌ ಸಂಯೋಜಿಸ ಬೇಕೆಂಬ ದೂರು ಹಾಗೂ ಇದೇ ಮಾದರಿಯ ಇತರ ದೂರುಗಳನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸಬೇಕೆಂದು ಫೇಸ್‌ಬುಕ್‌ ಮನವಿ ಮಾಡಿದ್ದು, ಇದರ ವಿಚಾರಣೆ ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌, ವಾಟ್ಸ್‌ಆ Âಪ್‌ ಮತ್ತಿತರ ವಿಚಾರ ವಿನಿಮಯ ವೇದಿಕೆಗಳನ್ನು ಆಧಾರ್‌ ಅಥವಾ ಈ ಮಾದರಿಯ ಯಾವುದಾದರೊಂದು ಸರಕಾರಿ ದಾಖಲೆ ಜೊತೆಗೆ ಬೆಸೆದು ಈ ಖಾತೆಗಳಿಗೆ ಒಂದು ಉತ್ತರದಾಯಿತ್ವವನ್ನು ಕೊಡಬೇಕೆಂಬ ಪ್ರಯತ್ನ ಪ್ರಾರಂಭವಾಗಿ ಕೆಲ ಸಮಯವಾಗಿದೆ. ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರವೇ ಕಪ್ಪುಹಣ ಬಯಲಿಗೆಳೆಯುವ ಸಲುವಾಗಿ ಜನರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರಕಾರಿ ದಾಖಲೆಗೆ ಸಂಯೋಜಿಸ ಬೇಕೆಂಬ ಪ್ರಸ್ತಾವ ಇಟ್ಟಿತ್ತು ಹಾಗೂ ಇದಕ್ಕೆ ಆ ಸಂದರ್ಭದಲ್ಲಿ ಬಲವಾದ ವಿರೋಧವೂ ವ್ಯಕ್ತವಾಗಿತ್ತು. ಇದಾದ ಬಳಿಕ ತಮಿಳುನಾಡು ಸರಕಾರ ಫೇಸ್‌ಬುಕ್‌ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡ ಬೇ ಕೆಂದು ಅಧಿಕೃತವಾಗಿಯೇ ಆದೇಶ ಹೊರಡಿಸಿದ್ದು, ಇದರ ವಿರುದ್ಧ ಫೇಸ್‌ಬುಕ್‌ ನ್ಯಾಯಾಲಯದ ಮೆಟ್ಟಿಲೇರಿದೆ.

ಸುಳ್ಳು ಸುದ್ದಿ ಹರಡುವುದು, ಹಿಂಸೆಗೆ ಪ್ರಚೋದನೆ ನೀಡುವುದು, ತೇಜೋವಧೆ ಮಾಡುವುದು, ದ್ವೇಷ ಹರಡು ವುದು ಸೇರಿದಂತೆ ವಿವಿಧ ರೀತಿಯ ಸೈಬರ್‌ ಅಪರಾಧಗಳನ್ನು ತಡೆಯುವ ಸಲುವಾಗಿ ಜನರ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಉತ್ತರದಾಯಿತ್ವ ಇರುವುದು ಅಗತ್ಯ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಕೆಲ ತಾಸುಗಳ ಮಟ್ಟಿಗೆ ಇಂಟರ್‌ನೆಟ್‌ ನಿರ್ಬಂಧವನ್ನು ಸಡಿಲಿಸಿದಾಗ ನಡೆದ ಹಿಂಸಾಚಾರಕ್ಕೆ ಸಾಮಾಜಿಕ ಮಾಧ್ಯಮ ಗಳಲ್ಲಿ ಹರಡಿದ ದ್ವೇಷ ಸಂದೇಶಗಳು ಕಾರಣವಾಗಿದ್ದವು. ಇದು ಪತ್ತೆಯಾ ಗುತ್ತಿದ್ದಂತೆಯೇ ಅಲ್ಲಿ ಮರಳಿ ಇಂಟರ್‌ನೆಟ್‌ಗೆ ನಿರ್ಬಂಧ ಹೇರಲಾಗಿದೆ. ಈ ಘಟನೆಯನ್ನು ಸರಕಾರ ತನ್ನ ವಾದಕ್ಕೆ ಸಮರ್ಥನೆಯಾಗಿ ಬಳಸಿಕೊಂಡಿದೆ.

ಈ ವಾದದಲ್ಲಿ ವಾಸ್ತವಾಂಶ ಇದೆ. ಡಿಜಿಟಲ್‌ ಮಾಧ್ಯಮಗಳ ಕ್ರಾಂತಿಯ ಬಳಿಕ ಇದಕ್ಕೆ ಸಂಬಂಧಿಸಿದ ಅಪರಾಧ ಕೃತ್ಯಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾ ಗಿವೆ. ಗೋ ಕಳ್ಳರು ಮತ್ತು ಮಕ್ಕಳ ಕಳ್ಳರೆಂದು ಭಾವಿಸಿ ಅಮಾಯಕ ಜನ ರನ್ನು ಉದ್ರಿಕ್ತ ಗುಂಪುಗಳು ಥಳಿಸಿ ಕೊಂದ ಹಲವು ಪ್ರಕರಣಗಳು ನಡೆದಿವೆ. ಫೇಸ್‌ಬುಕ್‌, ವಾಟ್ಸ್‌ಆ Âಪ್‌ನಂಥ ಮಾಧ್ಯಮಗಳು ಉಗ್ರ ರಿಗೆ ಸಂದೇಶ ರವಾನಿಸಲು ಸುಲಭ ದಾರಿಯಾಗಿವೆ. ತೇಜೋವಧೆ ಗಳಂಥ ಕೃತ್ಯ ನಡೆಸಲು ಸಾಮಾಜಿಕ ಮಾಧ್ಯಮ ಹೆಚ್ಚು ಬಳಕೆಯಾಗು ತ್ತಿರುವುದು ದುರದೃಷ್ಟಕರ ಬೆಳವಣಿಗೆ.

ಆದರೆ ಇದು ಸಾಮಾಜಿಕ ಮಾಧ್ಯಮಗಳ ಒಂದು ಮುಖ ಮಾತ್ರ. ಈ ಮಾಧ್ಯಮ ಅಭಿವ್ಯಕ್ತಿಯ ಮುಕ್ತ ವೇದಿಕೆಯಾಗಿದ್ದು, ಸಾಂಪ್ರದಾಯಿಕ ಮಾಧ್ಯಮಗಳಿರುವ ಮಿತಿಗಳು ಮತ್ತು ನಿರ್ಬಂಧಗಳು ಇದಕ್ಕಿಲ್ಲ. ಸಾಮಾಜಿಕ ಮಾಧ್ಯಮಗಳಿಂದಾಗಿ ಅನೇಕ ಹಗರಣಗಳನ್ನು ಬೆಳಕಿಗೆ ತರಲು ಸಾಧ್ಯವಾಗಿದೆ, ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಇದು ನೆರವಾದ ಎಷ್ಟೋ ಪ್ರಕರಣಗಳಿವೆ. ಮುಖ್ಯವಾಗಿ ಅಧಿಕಾರದಲ್ಲಿರು ವವರನ್ನು ಪ್ರಶ್ನಿಸಲು ಸಾಮಾಜಿಕ ಮಾಧ್ಯಮಕ್ಕಿಂತ ಪ್ರಶಸ್ತವಾದ ವೇದಿಕೆ ಇನ್ನೊಂದಿಲ್ಲ. ಈ ಮಾಧ್ಯಮವನ್ನು ಸರಕಾರಿ ದಾಖಲೆ ಜತೆಗೆ ಸಂಯೋಜಿ ಸುವುದು ಎಂದರೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೂಗುದಾರ ತೊಡಿಸಿದಂತೆಯೇ. ಸಾಮಾಜಿಕ ಮಾಧ್ಯಮವನ್ನು ಆಧಾರ್‌ಗೆ ಬೆಸೆದರೆ ಕಳೆದ ವರ್ಷ ಸುಪ್ರೀಂ ಕೋಟೇì ಎತ್ತಿ ಹಿಡಿದಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ  ಆಗುತ್ತದೆ. ಅಲ್ಲದೆ ಕೋಟ್ಯಂತರ ಜನರ ಗೌಪ್ಯ ಮಾಹಿತಿಗಳನ್ನೆಲ್ಲ ಖಾಸಗಿ ಕಂಪೆನಿಗಳ ಕೈಯಲ್ಲಿಟ್ಟಂತಾಗುತ್ತದೆ. ಈ ಡೇಟಾ ಬೇರೆ ಉದ್ದೇಶಗಳಿಗೆ ಬಳಕೆಯಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯಿದೆ ಎಂಬ ವಾದದಲ್ಲೂ ತಥ್ಯವಿದೆ. ಇದು ಬಹಳ ಸಂಕೀರ್ಣ, ಸೂಕ್ಷ್ಮ ವಿಚಾರ. ಖಾಸಗಿತನದ ಹಕ್ಕು ಮತ್ತು ಶಾಸನಾತ್ಮಕ ಹಕ್ಕಿನ ನಡುವೆ ಸಮತೋಲನ ಕಾಪಾಡುವ ಗುರುತರ ಹೊಣೆ ನ್ಯಾಯಾಲಯದ ಮೇಲಿದೆ. ಜನರ ದಾಖಲೆಗಳನ್ನು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಸಂಯೋಜನೆ ಮಾಡುವ ಬದಲು ಈ ಮಾದರಿಯ ಮಾಧ್ಯಮಗಳನ್ನು ವಿವೇಚನೆಯಿಂದಲೂ ಎಚ್ಚರಿಕೆಯಿಂದಲೂ ಬಳಸುವ ಅರಿವು ಮೂಡಿಸಲು ಯತ್ನಿಸುವುದು ಹೆಚ್ಚು ಸರಿಯಾದ ವಿಧಾನ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ದೇಶದ ರಸ್ತೆಗಳನ್ನು ಹೆಚ್ಚು ಸುರಕ್ಷಿತ ಮತ್ತು ಶಿಸ್ತುಬದ್ಧವಾಗಿಸಬೇಕು ಎಂಬ ಆಶಯದಿಂದ ರೂಪಿಸಲಾಗಿದ್ದ ಹೊಸ ಸಾರಿಗೆ ನಿಯಮವನ್ನು ಕರ್ನಾಟಕದಲ್ಲೂ ದುರ್ಬಲಗೊಳಿಸಲಾಗಿದೆ....

  • ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಕಾರ್ಪೊರೇಟ್‌ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ...

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

ಹೊಸ ಸೇರ್ಪಡೆ