ಚಿತ್ರರಂಗದಲ್ಲಿ ಸೃಷ್ಟಿಯಾಗಿದೆ ನಿರ್ವಾತ ಆಧಾರಸ್ತಂಭವಾಗಿದ್ದ ಅಂಬಿ


Team Udayavani, Nov 26, 2018, 6:00 AM IST

file-photos-ambarish-bnp-3.jpg

ಶನಿವಾರ ನಿಜಕ್ಕೂ ದುರಂತದ ದಿನ. ಕಾಲುವೆಗೆ ಬಸ್‌ ಉರುಳಿ 30 ಜನ ಸಾವನ್ನಪ್ಪಿದ್ದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮಂಡ್ಯದ ಗಂಡೂ ಧರೆ ತೊರೆದಿದ್ದಾರೆ

ಕನ್ನಡದ ಹಿರಿಯ ನಟ, ರಾಜಕಾರಣಿ ಅಂಬರೀಷ್‌ ನಿಧನ, ಅವರ ಅಭಿಮಾನಿ ಮತ್ತು ಸ್ನೇಹ ಬಳಗಕ್ಕೆ ಅತೀವ ನೋವನ್ನುಂಟುಮಾಡಿದೆ. ರಾಜಕುಮಾರ್‌, ವಿಷ್ಣುವರ್ಧನ್‌ರ ನಿಧನಾನಂತರ ಅಕ್ಷರಶಃ ಕನ್ನಡ ಚಿತ್ರೋದ್ಯಮದ ಹಿರಿಯಣ್ಣನಾಗಿ ಬದಲಾಗಿದ್ದರು ಅಂಬರೀಷ್‌. ಇತ್ತೀಚಿನ ಕೆಲ ವರ್ಷಗಳಿಂದ ಅಂಬರೀಷ್‌ಅವರನ್ನು ಕನ್ನಡ ಚಿತ್ರರಂಗದ ಆಧಾರಸ್ತಂಭ ಎಂದೇ ಭಾವಿಸಲಾಗಿತ್ತು. 

ಸ್ಯಾಂಡಲ್‌ವುಡ್‌ನ‌ಲ್ಲಿನ ಆಂತರಿಕ ಕಲಹಗಳಿಗೆ ತಮ್ಮ ನೇರ ನಿಷ್ಠುರ ನುಡಿಗಳೊಂದಿಗೆ ಅಂತ್ಯಹಾಡುತ್ತಿದ್ದರು ಅಂಬರೀಷ್‌. ಇತ್ತೀಚೆಗಷ್ಟೇ ಶ್ರುತಿ ಹರಿಹರನ್‌-ಅರ್ಜುನ್‌ ಸರ್ಜಾ ಮಿಟೂ ಪ್ರಕರಣದಲ್ಲಿ ಅಂಬರೀಷ್‌ ಇಬ್ಬರನ್ನೂ ಕೂಡಿಸಿ ವಿವಾದಕ್ಕೆ ಅಂತ್ಯ ಹಾಡಲು ಪ್ರಯತ್ನಿಸಿದ್ದು ಇಲ್ಲಿ ಉಲ್ಲೇಖನೀಯ.  ಈಗ ಅವರ ನಿರ್ಗಮನ ಚಿತ್ರರಂಗದಲ್ಲೂ ಬಹುದೊಡ್ಡ ನಿರ್ವಾತವನ್ನು ಸೃಷ್ಟಿಸಲಿದೆ.  

ಅಂಬರೀಷ್‌ ನಂತರ ಯಾರು ಎನ್ನುವ ಪ್ರಶ್ನೆಗೆ ತಕ್ಷಣ ಉತ್ತರ ಸಿಗುವುದು ಕಷ್ಟ. ಡಾ. ರಾಜ್‌ಕುಮಾರ್‌ ಇದ್ದಾಗ “ಅಪ್ಪಾಜಿ’ ಎಂಬ ಅವರ ವರ್ಚಸ್ಸು ಚಿತ್ರರಂಗವನ್ನು ಒಂದಾಗಿ ಹಿಡಿದಿಟ್ಟುಕೊಂಡಿತ್ತು. ಅವರು ನಿರ್ಗಮಿಸಿದ ನಂತರ ಚಿತ್ರರಂಗವನ್ನು ಅಂಬರೀಷ್‌ “ಅಣ್ಣ’ ” ಮಾಮ’ನಾಗಿ ಒಂದಾಗಿಟ್ಟಿದ್ದರು. ಜಗಳಗಳು, ಭಿನ್ನಾಭಿಪ್ರಾಯಗಳು ತಲೆದೋರಿದಾಗ ಎಂದಿನ ತಮ್ಮ ಮಂಡ್ಯ ಶೈಲಿಯಲ್ಲಿ ಬೈದು ಬುದ್ಧಿವಾದ ಹೇಳುತ್ತಿದ್ದರು. 

ಅಂಬರೀಷ್‌ ಅವರ ಭಾಷಾ ವೈಖರಿಯ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಲೇ ಇದ್ದವು. ಮಾತು ಒರಟು ಆದರೆ ಮನಸ್ಸು ಮಗುವಿನದ್ದು ಎಂದು ಅಂಬರೀಷ್‌ ಅವರನ್ನು ಬಲ್ಲವರು ಸಮರ್ಥಿಸುತ್ತಿದ್ದರೆ, ಆ ಭಾಷೆ ಎಲ್ಲರೂ ಸಹಿಸುವಂಥದ್ದಲ್ಲ ಎನ್ನುವುದು ಪ್ರತಿವಾದವಾಗಿತ್ತು. ಆದರೆ ಇದೆಲ್ಲದರ ನಡುವೆ ಎಲ್ಲರೂ ಒಪ್ಪುತ್ತಿದ್ದ ಅಂಶವೆಂದರೆ, ಅಂಬರೀಷ್‌ ನಿಜಕ್ಕೂ ಮಾನವೀಯ ಮೌಲ್ಯಗಳನ್ನು ಪಾಲಿಸಿಕೊಂಡು ಬಂದ ಭಾವನಾತ್ಮಕ ವ್ಯಕ್ತಿ ಎನ್ನುವುದ‌ು. ಕಲಿಯುಗದ ಕರ್ಣ ಎಂಬ ಅಭಿದಾನಕ್ಕೆ ತಕ್ಕಂತೆ ದಾನ ಧರ್ಮಗಳನ್ನು ಮಾಡುತ್ತಿದ್ದ ಅಂಬರೀಶ್‌ ಈ ವಿಷಯವನ್ನು ತಮ್ಮ ಪ್ರೊಫೈಲ್‌ಗೆ ಸೇರಿಸಿಕೊಳ್ಳುವುದನ್ನು ಬಯಸುತ್ತಿರಲಿಲ್ಲ. ನೊಂದು ಬಂದವರಿಗೆ ಬರೀ ಬಾಯಿ ಮಾತಲ್ಲಷ್ಟೇ ಅಲ್ಲ, ನಿಜಕ್ಕೂ ಸಹಾಯ ಮಾಡಿ ಸಾಂತ್ವನ ನೀಡುತ್ತಿದ್ದರು ಅಂಬರೀಷ್‌. 

ಕೇಂದ್ರದಲ್ಲಿ ಸಂಸದರಾಗಿ, ಸಚಿವರಾಗಿಯೂ ದುಡಿದಿದ್ದ ಅವರು, ಸಿನೆಮಾ ಮತ್ತು ನಿಜಜೀವನದಲ್ಲಿ ಗುರುತಿಸಿಕೊಂಡಷ್ಟು ರಾಜಕಾರಣದಲ್ಲಿ ಸದ್ದು ಮಾಡಲಿಲ್ಲ. ಬಹುಶಃ ರಾಜಕೀಯದಲ್ಲಿನ ಜಟಿಲತಂತ್ರಗಳು ಅವರ ಗುಣಕ್ಕೆ ಅಷ್ಟಾಗಿ ಒಗ್ಗಲಿಲ್ಲವೆನಿಸುತ್ತದೆ. ಹೀಗಾಗಿ ಅವರ ಬಹುತೇಕ ಜನಸೇವೆಯ ಕೈಂಕರ್ಯವೂ ರಾಜಕೀಯೇತರವಾಗಿಯೇ ಆದದ್ದು ಎನ್ನಬಹುದೇನೋ. 

ಅಂಬರೀಷ್‌ ಯಾವ ಮಟ್ಟಕ್ಕೆ ಜನಮನ ಮುಟ್ಟಿದ್ದರೆನ್ನುವುದಕ್ಕೆ ರಾಜ್ಯ ಮತ್ತು ದೇಶಾದ್ಯಂತ ಅವರ ಅಭಿಮಾನಿಗಳು, ಗೆಳೆಯರು ಮಿಡಿಯುತ್ತಿರುವ ಕಂಬನಿಯೇ ಸಾಕ್ಷಿ. ಫೇಸ್‌ಬುಕ್‌, ಟ್ವಿಟರ್‌ನಲ್ಲಂತೂ ಅಂಬರೀಷ್‌ ಅವರಿಗೆ ನುಡಿನಮನಗಳೇ ಹರಿದಾಡುತ್ತಿವೆ. ಪ್ರಧಾನಿಗಳು, ದಕ್ಷಿಣ ಭಾರತ-ಉತ್ತರ ಭಾರತದ ನಟರು, ಕೇಂದ್ರ ಸಚಿವರು, ಪಕ್ಷಾತೀತವಾಗಿ ರಾಜಕಾರಣಿಗಳೆಲ್ಲರೂ ಸಲ್ಲಿಸುತ್ತಿರುವ ನಮನ ಅಂಬರೀಷ್‌ ಬದುಕಿನಲ್ಲಿ ಎಷ್ಟೆಲ್ಲ ಸಂಪಾದಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಕರ್ನಾಟಕಕ್ಕಂತೂ ಅಂಬರೀಷ್‌ ನಿಧನ ನಿಜಕ್ಕೂ ದೊಡ್ಡ ನಷ್ಟ. ಬೇಸರದ ಸಂಗತಿಯೆಂದರೆ, ರಾಜ್ಯಕ್ಕೆ, ಅದರಲ್ಲೂ ಮಂಡ್ಯದ ಜನರಿಗಂತೂ ಶನಿವಾರ ನಿಜಕ್ಕೂ ದುರಂತದ ದಿನ. ಕಾಲುವೆಗೆ ಬಸ್‌ ಉರುಳಿ 30 ಜನ ಸಾವನ್ನಪ್ಪಿದ್ದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮಂಡ್ಯದ ಗಂಡೂ ಧರೆ ತೊರೆದಿದ್ದಾರೆ. ಅಭಿಮಾನಿಗಳ ಮನಸ್ಸಿಗೆ ಸಾಂತ್ವನ, ಮೃತರ ಆತ್ಮಕ್ಕೆ ಶಾಂತಿ ದೊರಕುವಂತಾಗಲಿ. 

ಟಾಪ್ ನ್ಯೂಸ್

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಆರು ಮಂದಿ ಬಂಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರುನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೀಕೆಂಡ್‌ ಕರ್ಫ್ಯೂ ವಾಪಸಾತಿ ಉತ್ತಮ ನಿರ್ಧಾರ

ವೀಕೆಂಡ್‌ ಕರ್ಫ್ಯೂ ವಾಪಸಾತಿ ಉತ್ತಮ ನಿರ್ಧಾರ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ನವೋದ್ಯಮಗಳಿಗೆ ಮೂಲನಿಧಿ ತೀರ್ಮಾನ ಸ್ವಾಗತಾರ್ಹ

ನವೋದ್ಯಮಗಳಿಗೆ ಮೂಲನಿಧಿ ತೀರ್ಮಾನ ಸ್ವಾಗತಾರ್ಹ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ದ್ಡರಹಜಜಹಗ್ದಸಅ

ಪ್ಲಾಸ್ಟಿಕ್ ಮುಕ್ತ ಚಿಕ್ಕಮಗಳೂರು ಕನಸು

ಚವಬಗಜಹಗಗ

ಕಲಾ ಮಾಧ್ಯಮದ ಹಿಂದಿದೆ ಸಮಾಜ ಜಾಗೃತಿಯ ಆಶಯ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ದತಯಯಜಯಹಗ

ಸೊರಬ ಮಾರ್ಗವಾಗಿ ರೈಲ್ವೆ ಸಂಪರ್ಕಕ್ಕೆ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.