Editorial: ವರ್ಷಕ್ಕೆರಡು ಬಾರಿ ಪ್ರವೇಶಾತಿ: ಸಾಧಕ-ಬಾಧಕ ಚರ್ಚೆಯಾಗಲಿ


Team Udayavani, Jun 12, 2024, 5:24 AM IST

Bi-annual Admission: Pros and Cons Let’s discuss

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ನೀಡಲು ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆ ಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಅನುಮತಿ ನೀಡಿದೆ. ಯುಜಿಸಿಯ ಈ ನಿರ್ಧಾರ ಸ್ವಾಗತಾರ್ಹವಾದರೂ ಜಾರಿಗೂ ಮುನ್ನ ಇದರ ಸಾಧಕ-ಬಾಧಕಗಳ ಕುರಿತಂತೆ ಇನ್ನಷ್ಟು ವಿಸ್ತೃತ ಅಧ್ಯಯನ ನಡೆಸುವ ಅಗತ್ಯವಿದೆ. ಶೈಕ್ಷಣಿಕ ಸಾಲಿನಲ್ಲಿ ಎರಡು ಬಾರಿ ಅಂದರೆ ಜುಲೈ-ಆಗಸ್ಟ್‌ ಮತ್ತು ಜನವರಿ-ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ವಿ.ವಿ.ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ನಿಗದಿತ ಅವಧಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಯುಜಿಸಿಯ ಈ ನಿರ್ಧಾರದಿಂದ ಬಹಳಷ್ಟು ಅನುಕೂಲವಾಗಲಿದೆ. ಇದರ ಜತೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿ.ವಿ.ಗಳು ತಮ್ಮಲ್ಲಿ ಲಭ್ಯವಿರುವ ಬೋಧಕ ವರ್ಗ, ಪ್ರಯೋಗಾಲಯ, ಕೊಠಡಿ ಮತ್ತಿತರ ಸೌಲಭ್ಯ ಯಾ ವ್ಯವಸ್ಥೆಗಳನ್ನು ಅತ್ಯಂತ ಯೋಜನಾಬದ್ಧವಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ. ಈ ಹೊಸ ವ್ಯವಸ್ಥೆಯ ಜಾರಿಯಿಂದ ಉದ್ಯಮಗಳು ಮತ್ತು ಕಂಪೆನಿಗಳು ವರ್ಷಕ್ಕೆ ಎರಡು ಬಾರಿ ಕ್ಯಾಂಪಸ್‌ ಸಂದರ್ಶನ ನಡೆಸಿ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶ ಲಭಿಸಲಿದೆ. ಇದರಿಂದ ಸಹಜವಾಗಿಯೇ ಪದವೀಧರ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಅವಕಾಶಗಳು ಇನ್ನಷ್ಟು ಹೆಚ್ಚಲಿವೆ. ವಿದೇಶಗಳಲ್ಲಿ ಇಂತಹ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿರುವುದರಿಂದ ಶೈಕ್ಷಣಿಕ ಸಹಯೋಗ, ವಿದ್ಯಾರ್ಥಿಗಳ ವಿನಿಮಯ ಮತ್ತಿತರ ಶೈಕ್ಷಣಿಕ ಸಂಬಂಧ ವೃದ್ಧಿಗೆ ಈ ವಿನೂತನ ಕ್ರಮ ಪೂರಕವಾಗಲಿದೆ. ಇದೇ ವೇಳೆ ವರ್ಷಕ್ಕೆ ಎರಡು ಬಾರಿ ಪ್ರವೇಶಾತಿ ಎಲ್ಲ ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯವಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಯುಜಿಸಿ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹುದೇ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ದಾಖಲಾತಿಯಲ್ಲಿ ಭಾರೀ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಈಗ ಈ ವ್ಯವಸ್ಥೆಯನ್ನು ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸಲು ಯುಜಿಸಿ ತೀರ್ಮಾನಿಸಿದೆ.

ವಿದ್ಯಾರ್ಥಿಗಳ ಭವಿಷ್ಯ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆಂಬ ದೂರದೃಷ್ಟಿಯಿಂದ ಯುಜಿಸಿಯ ಈ ನಿರ್ಧಾರ ಕೈಗೊಂಡಿದೆ. ಆದರೆ ಈ ವ್ಯವಸ್ಥೆ ಜಾರಿ ವೇಳೆ ಯಾವುದೇ ಆತುರ ಸಲ್ಲದು. ಪ್ರತೀ ಹಂತದಲ್ಲೂ ಯುಜಿಸಿ ಎಚ್ಚರಿಕೆ ಹೆಜ್ಜೆ ಇರಿಸಬೇಕು. ದೇಶದಲ್ಲಿನ ಹಲವಾರು ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಮೂಲ ಸೌಕರ್ಯ ಸಹಿತ ಇತರ ಸೌಲಭ್ಯಗಳ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ವರ್ಷಕ್ಕೆ ಎರಡೆರಡು ಬಾರಿ ಪ್ರವೇಶಾತಿಗೆ ಅವಕಾಶ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳು ಮತ್ತವರ ಹೆತ್ತವರಿಂದ ಶುಲ್ಕದ ಹೆಸರಿನಲ್ಲಿ ಹಣ ಸುಲಿಗೆ ಮಾಡುವ ದಂಧೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಇಳಿಯದಂತೆ ಯುಜಿಸಿ ಕಣ್ಗಾವಲಿರಿಸಬೇಕು.

ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಗೂ, ತರಗತಿ ಕಲಿಕೆಗೂ ಅಜಗಜಾಂತರವಿರುವುದರಿಂದ ಅಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ವಿ.ವಿ., ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಅದನ್ನು ಅಳವಡಿಸುವುದು ಅಷ್ಟೇನೂ ಸುಲಭಸಾಧ್ಯವಲ್ಲ. ಬೋಧಕ ವರ್ಗದ ಮೇಲೂ ಹೆಚ್ಚುವರಿ ಒತ್ತಡ ಬೀಳುವುದರ ಜತೆಯಲ್ಲಿ ಅದು ಬೋಧನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವೆಲ್ಲದರ ಕುರಿತಂತೆ ಯುಜಿಸಿ ಇನ್ನಷ್ಟು ಗಂಭೀರ ಅಧ್ಯಯನ ನಡೆಸಿ, ಹೊಸ ವ್ಯವಸ್ಥೆಯ ಸಮರ್ಪಕ ಜಾರಿಗೆ ಸ್ಪಷ್ಟ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು. ಇದಾದ ಬಳಿಕವಷ್ಟೆ ಈ ನಿರ್ಧಾರವನ್ನು ಜಾರಿಗೆ ತಂದಲ್ಲಿ ಯುಜಿಸಿಯ ಉದ್ದೇಶಿತ ಗುರಿ ಈಡೇರಲು ಸಾಧ್ಯ.

Ad

ಟಾಪ್ ನ್ಯೂಸ್

ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಸಾವು…

Oldest Elephant: ಬದುಕಿನ ಯಾನ ನಿಲ್ಲಿಸಿದ ವತ್ಸಲಾ.. ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ

Rekha-Gupta-CM

ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್‌ ರದ್ದುಗೊಳಿಸಿದ ಸರಕಾರ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ

Shivasene–MLA–Assult

ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್‌ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!

Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ

Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vidhana-Soudha

Editorial: ಸಿಇಒಗಳಿಂದ ಕಾಮಗಾರಿ ಪರಿಶೀಲನೆ ನಿರಂತರ ಆಗಲಿ

Water

Editorial: ಜಲಗಣತಿ ದೇಶದ ನೀರಾವರಿ ಸಮಸ್ಯೆಗೆ ಪರಿಹಾರ ಸೂಚಿಸಲಿ

9

Editorial: ಗ್ರಾಮೀಣ ಸರಕಾರಿ ಸಾರಿಗೆ ವ್ಯವಸ್ಥೆ ಶೀಘ್ರ ಸುಧಾರಣೆಯಾಗಲಿ

1

ನಗರ ಭಾಗದಲ್ಲಿ ಎಸ್‌ಟಿಪಿಗಳ ಅನುಷ್ಠಾನಕ್ಕೆ ನಿರ್ದೇಶನ ಅಗತ್ಯ

heart attack

ಯುವ ಹೃದಯಗಳಿಗೆ ಆಘಾತ ಪ್ರಾಮಾಣಿಕ ಅಧ್ಯಯನ ನಡೆಯಲಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

3

Kundapura: ಹೊಟೇಲ್‌ನಲ್ಲಿ ಹ*ಲ್ಲೆ; ಪ್ರಕರಣ ದಾಖಲು

24

Udyavara: ಕಂಟೈನರ್‌ಗೆ ಪಿಕಪ್‌ ಢಿಕ್ಕಿ; ಓರ್ವ ಸಾವು

4

Sullia: ವಿದ್ಯುತ್‌ ಶಾಕ್‌; ವ್ಯಕ್ತಿ ಸಾವು

dw

Sullia: ಜಾರಿ ಬಿದ್ದು ವೃದ್ಧೆ ಸಾವು

Mangaluru: ಮಾದಕ ವಸ್ತು ಸಾಗಾಟ; ಮೂವರ ಸೆರೆ

Mangaluru: ಮಾದಕ ವಸ್ತು ಸಾಗಾಟ; ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.