Udayavni Special

ಸಂಪುಟ ಭರ್ತಿ: ರಾಜ್ಯದ ಅಭಿವೃದ್ಧಿಗೆ ಆದ್ಯತೆಯಿರಲಿ

Team Udayavani, Jan 15, 2021, 6:36 AM IST

ಸಂಪುಟ ಭರ್ತಿ: ರಾಜ್ಯದ ಅಭಿವೃದ್ಧಿಗೆ ಆದ್ಯತೆಯಿರಲಿ

ಕಳೆದ ಒಂದೂವರೆ ವರ್ಷದಿಂದ ಸರಕಾರ ರಚನೆಗೆ ಕಾರಣಕರ್ತ ರಾದವರಿಗೆ ಸ್ಥಾನಮಾನ ಕಲ್ಪಿಸುವುದು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಹುಮುಖ್ಯವಾಗಿತ್ತು. ಇದರ ಜತೆಗೆ ಪ್ರವಾಹ, ಕೋವಿಡ್ ನಿರ್ವಹಣೆ ಸವಾಲು ಸಹ ಸರಕಾರಕ್ಕೆ ಎದುರಾಗಿತ್ತು. ಪ್ರವಾಹ, ಕೊರೊನಾ ನಿರ್ವಹಣೆ ನಡುವೆಯೂ ಎದುರಾದ ಉಪ ಚುನಾವಣೆ ಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಸರಕಾರ ಭದ್ರಪಡಿಸಿಕೊಂಡಿದೆ. ಒಂದಿಬ್ಬರು ಹೊರತುಪಡಿಸಿದರೆ ಉಳಿದವರೆಲ್ಲರಿಗೂ ಸ್ಥಾನಮಾನಗಳೂ ಲಭಿಸಿವೆ. ಸಂಪುಟ ಇದೀಗ ಭರ್ತಿಯಾಗಿದೆ. ಉಳಿದ  ಎರಡೂಕಾಲು ವರ್ಷ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕಾಗಿದೆ. ಕೊರೊನಾ, ಪ್ರವಾಹದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದು ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿಗೆ ವೇಗ ಕೊಡಬೇಕಾಗಿದೆ.

ಸಂಪುಟ ವಿಸ್ತರಣೆ ಅನಂತರದ ವಿದ್ಯಮಾನಗಳು ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಜುಗರ ತಂದಿರುವು ದಂತೂ ಹೌದು. ಆದರೆ ಇದನ್ನು ನಿಭಾಯಿಸುವ ಸಾಮರ್ಥ್ಯ ಬಿಜೆಪಿ ಹಾಗೂ ಯಡಿಯೂರಪ್ಪ ಅವರಿಗೆ ಇದೆ. ದಿಲ್ಲಿ ವರಿಷ್ಠರಿಗೆ ಏನು ಬೇಕಾದರೂ ದೂರು ಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿರುವುದರ ಹಿಂದೆ ಕಠಿನ ಎಚ್ಚರಿಕೆ ಅಥವಾ ಸಂದೇಶ ಇರಬಹುದು.  ಆದರೆ ಆಡಳಿತ ಯಂತ್ರ ಸುಸೂತ್ರವಾಗಿ

ನಡೆಯಬೇಕಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಅವರ ಮೇಲೆ ಇದೆ.ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ ಸಹಜ. ಆದರೆ ಅದನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದು ಮುಖ್ಯ. ಯಡಿಯೂರಪ್ಪ ಅವರು ಬೇಸರಗೊಂಡಿರುವವರನ್ನು ಕರೆದು ಮಾತನಾಡಬೇಕು. ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ದಿಲ್ಲಿ ವರಿಷ್ಠರು ಸಹ  ಬಹಿರಂಗ ಅಸಮಾಧಾನ, ಹೇಳಿಕೆ, ಆರೋಪಗಳಿಗೆ ಅವಕಾಶ ಮಾಡಿಕೊಡಬಾರದು.  ಈ ಹಿಂದೆ ಕಾಂಗ್ರೆಸ್‌ ಸರಕಾರದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಒಂದೇ ಒಂದು ದಿನವೂ ತಮ್ಮ ವಿರುದ್ಧ ದಿಲ್ಲಿವರೆಗೂ ದೂರು ಹೋಗಲು ಬಿಟ್ಟಿರಲಿಲ್ಲ. ಒಂದೊಮ್ಮೆ ದೂರು ಹೋದರೂ ಅಲ್ಲಿ ಅದಕ್ಕೆ ಸ್ಪಂದನೆ ದೊರೆಯುತ್ತಿರಲಿಲ್ಲ. ನಿಮ್ಮದೇನಿದ್ದರೂ ಅಲ್ಲೇ ಮಾತನಾಡಿ ಬಗೆಹರಿಸಿಕೊಳ್ಳಿ ಎಂಬ ಕಿವಿಮಾತು ಹೇಳಲಾಗುತ್ತಿತ್ತು. ಆ ರೀತಿ ಹೈಕಮಾಂಡ್‌ ಕಟ್ಟುನಿಟ್ಟಾಗಿ ಇದ್ದ ಕಾರಣ ಸಿದ್ದರಾಮಯ್ಯ ಸುಸೂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಯಿತು. ಸಂಪುಟ ವಿಸ್ತರಣೆ ವಿಚಾರದಲ್ಲಿನ ಅಸಮಾಧಾನ ಬೇರೆ ರೀತಿಯ ಸ್ವರೂಪ ಪಡೆದುಕೊಳ್ಳುವ ಮುನ್ನ ಬಿಜೆಪಿ ವರಿಷ್ಠರು ಮಧ್ಯಪ್ರವೇಶ ಮಾಡಬೇಕು. ಅಭಿವೃದ್ಧಿ ದೃಷ್ಟಿಯಿಂದ ಹೊಂದಿಕೊಂಡು ಹೋಗುವಂತೆ ಸೂಚನೆ ನೀಡಬೇಕು.

ಈಗ ಸಂಪುಟವೂ ಯಡಿಯೂರಪ್ಪ ಅವರ ಆಶಯದಂತೆ ಬಹುತೇಕ ಭರ್ತಿ ಆಗಿದೆ.  ಮುಖ್ಯಮಂತ್ರಿ ಯಡಿಯೂರಪ್ಪ  ಮತ್ತವರ ಸಂಪುಟ  ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಬಗ್ಗೆ ಗಮನಹರಿಸಬೇಕಾಗಿದೆ.

ಟಾಪ್ ನ್ಯೂಸ್

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳು ಅಗತ್ಯ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳು ಅಗತ್ಯ

ಇಂದಿನಿಂದ ಒಲಿಂಪಿಕ್ಸ್‌: ಚೀರ್ಸ್‌ ಫಾರ್‌ ಇಂಡಿಯಾ

ಇಂದಿನಿಂದ ಒಲಿಂಪಿಕ್ಸ್‌: ಚೀರ್ಸ್‌ ಫಾರ್‌ ಇಂಡಿಯಾ

ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ; ಇನ್ನೂ ಎಚ್ಚರಿಕೆ ಅಗತ್ಯ

ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ; ಇನ್ನೂ ಎಚ್ಚರಿಕೆ ಅಗತ್ಯ

ಪಿಯುಸಿ ಪಾಸಾದ ಮಕ್ಕಳ ಭವಿಷ್ಯಕ್ಕೆ ಸಿಗಲಿ ಭದ್ರ ಬುನಾದಿ

ಪಿಯುಸಿ ಪಾಸಾದ ಮಕ್ಕಳ ಭವಿಷ್ಯಕ್ಕೆ ಸಿಗಲಿ ಭದ್ರ ಬುನಾದಿ

MUST WATCH

udayavani youtube

ಹೀಗೆ ಮಾಡಿದರೆ ಪರಿಸರಕ್ಕೆ ಅನುಕೂಲ, DIAPER ತ್ಯಾಜ್ಯ !

udayavani youtube

ಕಾರು ಅಪಘಾತ: ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಗಂಭೀರ ಗಾಯ

udayavani youtube

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

udayavani youtube

ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಂತು 12 ಟಿಎಂಸಿ ನೀರು

udayavani youtube

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

ಹೊಸ ಸೇರ್ಪಡೆ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.