ಪಾದಯಾತ್ರೆ ಸ್ಥಗಿತ; ಅನಿವಾರ್ಯ ಕ್ರಮ


Team Udayavani, Jan 14, 2022, 6:30 AM IST

Untitled-1

ಮೇಕೆದಾಟು ಕುಡಿಯುವ ನೀರು ಯೋಜನೆ ಸಂಬಂಧ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಒಂದು ಕಡೆ ಹೈಕೋರ್ಟ್‌ ಚಾಟಿ, ಮತ್ತೂಂದು ಕಡೆ ಹೆಚ್ಚುತ್ತಿರುವ  ಕೊರೊನಾದಿಂದಾಗಿ ಕಾಂಗ್ರೆಸ್‌ ನಾಯಕರು ಸದ್ಯಕ್ಕೆ ಪಾದಯಾತ್ರೆ  ಸ್ಥಗಿತ ಮಾಡುತ್ತಿರುವುದಾಗಿ ಹೇಳಿ ತಮ್ಮ ತಮ್ಮ ಊರುಗಳಿಗೆ ವಾಪಸ್‌ ಆಗಿದ್ದಾರೆ.

ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಹಮ್ಮಿಕೊಳ್ಳಲಾಗಿದ್ದ ಈ ಪಾದಯಾತ್ರೆ ಅತ್ಯವಶ್ಯವಾಗಿಯೇ ಇತ್ತು. ಮೇಕೆದಾಟುವಿನಲ್ಲಿ ಅಣೆಕಟ್ಟೊಂದನ್ನು ಕಟ್ಟಿ ವಿದ್ಯುತ್‌ ಉತ್ಪಾದನೆ ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದರ ಈ ಆಶಯಗಳನ್ನು ಯಾರೂ ಬೇಡ ಎನ್ನಲು ಸಾಧ್ಯವೇ ಇಲ್ಲ. ಆದರೆ ತಮಿಳುನಾಡಿನ ವಿರೋಧ ಮತ್ತು ಇತರ ರಾಜಕೀಯ ಲಾಭ ಹಾಗೂ ನಷ್ಟಗಳ ಕಾರಣದಿಂದಾಗಿ ಈ ಯೋಜನೆಯನ್ನು  ಇದುವರೆಗೆ ಜಾರಿ ಮಾಡಲಾಗಿಲ್ಲ. ಕೇಂದ್ರದ ಮಟ್ಟದಲ್ಲಿ ಬರುವ ಸರಕಾರಗಳೂ ಈ ಬಗ್ಗೆ ಕಠಿನ ನಿರ್ಧಾರ ತೆಗೆದುಕೊಳ್ಳಲು  ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ತಮಿಳುನಾಡಿನ ಪ್ರಾದೇಶಿಕ ರಾಜಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಸದ್ಯ ಪಾದಯಾತ್ರೆಯಂಥ ಪ್ರತಿಭಟನೆಗಳನ್ನು ಯಾರೂ ಬೇಡ ಎನ್ನಲು ಸಾಧ್ಯವೇ ಇಲ್ಲ. ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವುದು ಪಾದಯಾತ್ರೆ ಹಮ್ಮಿಕೊಂಡಿರುವ ವೇಳೆ. ಈಗ ದೇಶಾದ್ಯಂತ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜ. 1ರಿಂದ ಈಚೆಗೆ ಕೇಸುಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇದಕ್ಕೆ ಒಮಿಕ್ರಾನ್‌ ಕಾರಣ ಎನ್ನುವುದು ತಜ್ಞರ ಮಾತು. ಹೀಗಾಗಿ ಸೂಪರ್‌ ಸ್ಪ್ರೆಡ್ಡರ್‌ ರೀತಿ ವರ್ತಿಸುವ ಪಾದಯಾತ್ರೆಯಂಥ ಜನಸೇರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಒಳಿತು. ಈಗ ಹಿಂದೆಗೆದುಕೊಳ್ಳುವುದಕ್ಕಿಂತ ಆರಂಭ ಮಾಡುವ ಮುನ್ನವೇ ಕೊರೊನಾವನ್ನು ಗಮನದಲ್ಲಿ ಇರಿಸಿಕೊಂಡು ಮುಂದೊಂದು ದಿನ ಪಾದಯಾತ್ರೆ ಹಮ್ಮಿಕೊಳ್ಳಬಹುದಿತ್ತು. ಏಕೆಂದರೆ, ಈಗಾಗಲೇ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಲಿ ಅವರಂಥ ಹಲವಾರು ಪ್ರಮುಖ ನಾಯಕರಿಗೇ ಕೊರೊನಾ ದೃಢಪಟ್ಟಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಇತರ ಪ್ರಮುಖ ನಾಯಕರೆಲ್ಲರೂ ಇವರ ಸಂಪರ್ಕಿತರೇ ಆಗಿದ್ದಾರೆ. ಈಗ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮಧ್ಯಪ್ರವೇಶಿಸಿ ಪಾದಯಾತ್ರೆ ಸœಗಿತ ಮಾಡಲು ಹೇಳಿರುವುದು ಸರಿಯಾದ ಕ್ರಮವೇ ಆಗಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಪಾದಯಾತ್ರೆಯ ಬೇಡಿಕೆಯನ್ನು ಈಡೇರಿಸುವುದಾಗಿ ಪತ್ರಮುಖೇನ ಕಾಂಗ್ರೆಸ್‌ ನಾಯಕರಿಗೆ ಭರವಸೆ ನೀಡಿದ್ದಾರೆ. ಈ ಕೆಲಸವನ್ನು  ಪಾದಯಾತ್ರೆ ಆರಂಭಿಸುವ ಮುನ್ನವೇ ಮಾಡಿದ್ದರೆ ಒಳ್ಳೆಯದಿತ್ತು.  ಆಗ ಕಾಂಗ್ರೆಸ್‌ ನಾಯಕರನ್ನು ಕರೆಸಿ, ಮಾತುಕತೆ ಮಾಡಿ ಈ ಯೋಜನೆಗಾಗಿ ಒಟ್ಟಾಗಿಯೇ ಹೋರಾಟ ಮಾಡೋಣ ಎಂದು ಮನವೊಲಿಕೆ ಮಾಡಬಹುದಿತ್ತು. ಈ ಮೂಲಕ ಕೊರೊನಾ ಹಬ್ಬುವಿಕೆಯನ್ನು  ತಡೆಯಬಹುದಿತ್ತು.

ಟಾಪ್ ನ್ಯೂಸ್

27

ಪಂಪಾಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಪ್ರಕರಣ; ಸ್ಥಳೀಯರ ಆಕ್ರೋಶ

21nirani

ದಲಿತ ಯುವಕನ ಹತ್ಯೆ: ಆರೋಪಿಗಳಿಗೆ ಕಠಿಣ ಕಾನೂನು ಕ್ರಮ: ಸಚಿವ ನಿರಾಣಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

20death

ಕುಣಿಗಲ್‌: ಪ್ರತ್ಯೇಕ ಪ್ರಕರಣ ಇಬ್ಬರು ನೇಣುಬಿಗಿದು ಆತ್ಮಹತ್ಯೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಲಾಭ ಗಳಿಸಿದ ಷೇರು ಯಾವುದು…

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಮೇ.27ರಂದು ಲಾಭ ಗಳಿಸಿದ ಷೇರು ಯಾವುದು…

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇಳಿಕೆ ಅಪಾಯಕಾರಿ

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇಳಿಕೆ ಅಪಾಯಕಾರಿ

ದಾವೋಸ್‌ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯುವುದು ಬೇಡ

ದಾವೋಸ್‌ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯುವುದು ಬೇಡ

ಚೀನಕ್ಕೆ ಬಿಸಿ ಮುಟ್ಟಿಸುವಲ್ಲಿ ಕ್ವಾಡ್‌ ಯಶಸ್ವಿ

ಚೀನಕ್ಕೆ ಬಿಸಿ ಮುಟ್ಟಿಸುವಲ್ಲಿ ಕ್ವಾಡ್‌ ಯಶಸ್ವಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ರಾಜ್ಯಗಳೂ ವ್ಯಾಟ್‌ ಇಳಿಕೆ ಮಾಡಿ ನಿರಾಳತೆ ನೀಡಲಿ

ರಾಜ್ಯಗಳೂ ವ್ಯಾಟ್‌ ಇಳಿಕೆ ಮಾಡಿ ನಿರಾಳತೆ ನೀಡಲಿ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಪಿಎಂಇಜಿಪಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ; ಶ್ರೀನಿವಾಸ ರೆಡ್ಡಿ

ಪಿಎಂಇಜಿಪಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ; ಶ್ರೀನಿವಾಸ ರೆಡ್ಡಿ

27

ಪಂಪಾಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಪ್ರಕರಣ; ಸ್ಥಳೀಯರ ಆಕ್ರೋಶ

ಎಸ್‌ಒಪಿ ರಸಗೊಬ್ಬರ ಚೀಲದಲ್ಲಿ ರಂಗೋಲಿಪುಡಿ!

ಎಸ್‌ಒಪಿ ರಸಗೊಬ್ಬರ ಚೀಲದಲ್ಲಿ ರಂಗೋಲಿಪುಡಿ!

21nirani

ದಲಿತ ಯುವಕನ ಹತ್ಯೆ: ಆರೋಪಿಗಳಿಗೆ ಕಠಿಣ ಕಾನೂನು ಕ್ರಮ: ಸಚಿವ ನಿರಾಣಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.