Udayavni Special

ಸರಿಯಾದ ಎದಿರೇಟು


Team Udayavani, Feb 20, 2020, 6:00 AM IST

wall-29

ಬ್ರಿಟಿಶ್‌ ಸಂಸದೆ ಡೆಬ್ಬಿ ಅಬ್ರಹಾಂ ಅವರ ವಿಸಾ ರದ್ದುಗೊಳಿಸಿ ಹಾಗೂ ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದೆ ಭಾರತ. ಈ ಎರಡೂ ಪ್ರಕರಣಗಳಲ್ಲಿ ಭಾರತ ಕಾಶ್ಮೀರ ನಮ್ಮ ಆಂತರಿಕ ವಿಚಾರ. ಇದರಲ್ಲಿ ಮೂಗು ತೂರಿಸುವ ಯಾವ ಪ್ರಯತ್ನವನ್ನೂ ಸಹಿಸುವುದಿಲ್ಲ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿಯೇ ತಿಳಿಸಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ತೀರ್ಮಾನದಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದ ಎರಡು ವಿದೇಶಿ ಪ್ರಯತ್ನಗಳನ್ನು ಭಾರತ ಸರಿಯಾಗಿಯೇ ಎದುರಿಸಿದೆ. ಒಂದು ಬ್ರಿಟಿಶ್‌ ಸಂಸದೆ ಡೆಬ್ಬಿ ಅಬ್ರಹಾಂ ಅವರ ವಿಸಾ ರದ್ದುಗೊಳಿಸಿದ್ದು ಹಾಗೂ ಇನ್ನೊಂದು ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದು. ಈ ಎರಡೂ ಪ್ರಕರಣಗಳಲ್ಲಿ ಭಾರತ ಕಾಶ್ಮೀರ ನಮ್ಮ ಆಂತರಿಕ ವಿಚಾರ. ಇದರಲ್ಲಿ ಮೂಗು ತೂರಿಸುವ ಯಾವ ಪ್ರಯತ್ನವನ್ನೂ ಸಹಿಸುವುದಿಲ್ಲ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿಯೇ ತಿಳಿಸಿದೆ.

ಬ್ರಿಟನ್‌ನ ಲೇಬರ್‌ ಪಕ್ಷದ ಸಂಸದೆಯಾಗಿರುವ ಡೆಬ್ಬಿ ಅಬ್ರಹಾಂ ಕಾಶ್ಮೀರಕ್ಕೆ ಸಂಬಂಧಿಸಿದ ಬ್ರಿಟನ್‌ನ ಸಂಸದೀಯ ತಂಡದ ಅಧ್ಯಕ್ಷೆಯೂ ಆಗಿದ್ದಾರೆ. ಕೇಂದ್ರ ಸರಕಾರ ಆ.5ರಂದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಅವರು ಪದೇ ಪದೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಾನು ಪಾಕಿಸ್ಥಾನ ಪರವಲ್ಲ ಅಥವಾ ಭಾರತ ವಿರೋಧಿ ಅಲ್ಲ ಎಂದು ಡೆಬ್ಬಿ ಹೇಳುತ್ತಿದ್ದರೂ ಅವರ ನಿಲುವುಗಳು ಅವರ ಒಲವು ಎತ್ತ ಕಡೆ ಎಂಬುದನ್ನು ತಿಳಿಸುತ್ತದೆ. ಇಂಥ ಪೂರ್ವಗ್ರಹ ಪೀಡಿತ ಧೋರಣೆಯನ್ನು ಹೊಂದಿರುವವರು ಕಾಶ್ಮೀರಕ್ಕೆ ಭೇಟಿಯಿತ್ತು, ಯಾವ ರೀತಿಯ ವರದಿ ಸಲ್ಲಿಸಬಹುದು ಎಂಬುದು ನಿರೀಕ್ಷಿತವೇ. ಹೀಗಾಗಿ ಡೆಬ್ಬಿ ಅಬ್ರಹಾಂ ಅನ್ನು ವಿಮಾನ ನಿಲ್ದಾಣದಿಂದಲೇ ವಾಪಸು ಕಳುಹಿಸಿದ ಕ್ರಮ ಸಮರ್ಥನೀಯ. ಈ ಮೂಲಕ ನಮ್ಮ ಸಾರ್ವಭೌಮ ವಿಚಾರಗಳಲ್ಲಿ ಅನವಶ್ಯಕವಾಗಿ ಹಸ್ತಕ್ಷೇಪ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದೇವೆ.

ದೊಡ್ಡಣ್ಣ ಅಮೆರಿಕವೇ ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ಥಾನದ ದ್ವಿಪಕ್ಷೀಯ ವಿಚಾರ ಎಂದು ಹೇಳಿರುವಾಗ ಟರ್ಕಿಯಂಥ ಚಿಕ್ಕಪುಟ್ಟ ದೇಶಗಳು ಭಾರತ ವಿರೋಧಿ ನಿಲುವು ತಳೆಯುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಟರ್ಕಿಗೆ ಪಾಕಿಸ್ಥಾನದಿಂದ ಆಗಬೇಕಾದದ್ದೇನೂ ಇಲ್ಲ. ಏನಾದರೂ ಪ್ರಯೋಜನವಿದ್ದರೆ ಭಾರತದಿಂದ ಹೊರತು ಪಾಕ್‌ನಿಂದಲ್ಲ. ಅದಾಗ್ಯೂ ಎರ್ಡೊಗನ್‌ ಪಾಕ್‌ ಪರವಾಗಿ ನಿಂತಿರುವುದರ ಹಿಂದಿನ ಕಾರಣ ಧರ್ಮ ಮಾತ್ರ. ಪಾಕ್‌ ಸಂಸತ್ತಿನಲ್ಲೇ ಎರ್ಡೊಗನ್‌ ಕಾಶ್ಮೀರದ ಜನತೆ ಮಾಡುತ್ತಿರುವ ಹೋರಾಟ ಒಂದನೇ ವಿಶ್ವಯುದ್ಧದಲ್ಲಿ ಟರ್ಕಿಯ ಜನರು ವಿದೇಶಿ ಅಧಿಪತ್ಯದ ವಿರುದ್ಧ ನಡೆಸಿದ ಹೋರಾಟದಂತೆ ಎಂಬ ಅಸಂಗತ ಹೋಲಿಕೆಯನ್ನು ಮಾಡಿದ್ದರು.

ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಂಗವಾಗಿಯೇ ಮುಂದುವರಿಯಲಿದೆ. ಇತಿಹಾಸದ ಯಾವ ಕಾಲಘಟ್ಟದಲ್ಲೂ ಅದು ಪಾಕಿಸ್ಥಾನದ ಭಾಗವಾಗಿರಲಿಲ್ಲ. ಹೀಗಿರುವಾಗ ಕಾಶ್ಮೀರದಲ್ಲಿರುವುದು ವಿದೇಶಿ ಅಧಿಪತ್ಯ ಎಂದು ಹೇಳುವುದು ಪಾಕಿಸ್ಥಾನವನ್ನು ಖುಷಿಪಡಿಸುವ ಪ್ರಯತ್ನ ಮಾತ್ರ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಮಾತ್ರ ಆಜಾದಿ…ಆಜಾದಿ ಎಂದು ಕೂಗಾಡುತ್ತಾರೆಯೇ ಹೊರತು ಸಾಮಾನ್ಯ ಪ್ರಜೆಗಳಲ್ಲ ಎಂಬುದನ್ನು ಎರ್ಡೊಗನ್‌ಗೆ ಅರ್ಥ ಮಾಡಿಕೊಡುವ ಅಗತ್ಯವಿದೆ. ಎರ್ಡೊಗನ್‌ಗೆ ಇತಿಹಾಸವೂ ಗೊತ್ತಿಲ್ಲ, ರಾಜತಾಂತ್ರಿಕ ಸಂಬಂಧದ ಗಾಂಭೀರ್ಯತೆಯೂ ಗೊತ್ತಿಲ್ಲ. ಅವರ ಹೇಳಿಕೆ ಟರ್ಕಿ ಜೊತೆಗಿನ ಸಂಬಂಧದ ಮೇಲೆ ವ್ಯತಿರಕ್ತವಾದ ಪರಿಣಾಮ ಬೀರಲಿದೆ ಎಂದು ವಿದೇಶಾಂಗ ಇಲಾಖೆ ಸರಿಯಾಗಿಯೇ ತಿರುಗೇಟು ನೀಡಿದೆ.

ಜಮ್ಮು-ಕಾಶ್ಮೀರದ ವಿಧಿ ರದ್ದುಪಡಿಸಿರುವ ತೀರ್ಮಾನಕ್ಕೆ ಸಂಬಂಧಿಸಿದಂತೆ ತನ್ನಿಂದೇನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಪಾಕಿಸ್ಥಾನಕ್ಕೆ ಅರಿವಾಗಿದೆ. ಹೀಗಾಗಿ ಈ ಕುಟಿಲ ದೇಶ ಹೇಗಾದರೂ ಮಾಡಿ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಯ್ಯಲು ಪ್ರಯತ್ನಿಸುತ್ತಿದೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಈ ಪ್ರಯತ್ನ ಮಾಡಿ ಮುಖಭಂಗಕ್ಕೊಳಗಾಗಿದ್ದರೂ ತನ್ನ ಹತಾಶ ಪ್ರಯತ್ನಗಳನ್ನು ನಿಲ್ಲಿಸಿಲ್ಲ. ಇಂಥ ದೇಶಕ್ಕೆ ಇದೇ ರೀತಿ ಚುರುಕು ಮುಟ್ಟಿಸುತ್ತಿರಬೇಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಎಲ್ಲ ವರ್ಗದವರಿಗೂ ನೆರವು ಅಗತ್ಯ

ಎಲ್ಲ ವರ್ಗದವರಿಗೂ ನೆರವು ಅಗತ್ಯ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

08-April-25

ಕೊರೊನಾ ತಡೆಗೆ ಕಠಿಣ ಕ್ರಮ ಅನಿವಾರ್ಯ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

08-April-24

ಕೊರೊನಾ ತಡೆಗೆ ಶ್ರಮಿಸಿ: ಪಾಟೀಲ

ಅಗತ್ಯ ವಸ್ತುಗಳ ಬೆಲೆ ದೀಢೀರ್ ಏರಿಕೆ: ಸರಿಯಾದ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

ಅಗತ್ಯ ವಸ್ತುಗಳ ಬೆಲೆ ದೀಢೀರ್ ಏರಿಕೆ: ಸರಿಯಾದ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ