Udayavni Special

ಕೋವಿಡ್‌ಗೆ ತುತ್ತಾಗುತ್ತಿರುವ ಜನನಾಯಕರು: ಎಲ್ಲರಿಗೂ ಇದೆ ಅಪಾಯ


Team Udayavani, Sep 25, 2020, 6:05 AM IST

ಕೋವಿಡ್‌ಗೆ ತುತ್ತಾಗುತ್ತಿರುವ ಜನನಾಯಕರು: ಎಲ್ಲರಿಗೂ ಇದೆ ಅಪಾಯ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ದೇಶದ ಪ್ರಮುಖ ಹಾಟ್‌ ಸ್ಪಾಟ್‌ಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಕೋವಿಡ್‌ 19 ಹಾವಳಿ ನಿಲ್ಲುತ್ತಲೇ ಇಲ್ಲ.

ಜನ ಸಾಮಾನ್ಯರು, ಜನನಾಯಕರು ಈ ವೈರಸ್‌ಗೆ ತುತ್ತಾಗುತ್ತಲೇ ಇದ್ದಾರೆ.

ರಾಜ್ಯದಲ್ಲಿ ಒಂದು ವಾರದಲ್ಲಿ ಮೂವರು ಜನಪ್ರತಿನಿಧಿಗಳು ಕೋವಿಡ್ 19ನಿಂದ ಮೃತಪಟ್ಟಿದ್ದಾರೆ.

ಕಳೆದ ಗುರುವಾರ ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ, ಸೆ. 23ರಂದು ಕೇಂದ್ರ ರೈಲ್ವೇ ಖಾತೆ ಸಹಾಯಕ ಸಚಿವ, ಬಿಜೆಪಿ ಹಿರಿಯ ನಾಯಕ ಸುರೇಶ್‌ ಅಂಗಡಿ ಹಾಗೂ ಸೆ.24ರಂದು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ನಾರಾಯಣ ರಾವ್‌ ನಿಧನ ಹೊಂದಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ರಾಜಕಾರಣಿಗಳಲ್ಲಿ ಅನೇಕರಿಗೆ ಕೋವಿಡ್‌ ಸೋಂಕು ತಗಲಿದೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ರಾಜಕಾರಣಿಗಳು ಈಗ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿರುವ ಹೊತ್ತಲ್ಲೇ, ಚೇತರಿಕೆಯ ಪ್ರಮಾಣದಲ್ಲೂ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ.

ಅನ್ಯ ರೋಗಗಳಿಗೆ ಹೋಲಿಸಿದರೆ ಕೋವಿಡ್‌ ಮರಣ ದರ ಕಡಿಮೆಯಿದೆ ಎನ್ನುವುದೇನೋ ಸತ್ಯವೇ, ಆದರೆ  ಪ್ರತಿ ಜೀವವೂ ಅಮೂಲ್ಯವಾಗಿರುವುದರಿಂದಾಗಿ ಜನಸಾಮಾನ್ಯರಾಗಿರಲಿ, ರಾಜಕಾರಣಿಯಾಗಿರಲಿ ಒಂದೊಂದು ಸಾವೂ ಕೂಡ ಸಂಬಂಧಿಕರಿಗೆ, ಮನೆಯವರಿಗೆ, ಬೆಂಬಲಿಗರಿಗೆ ಅಪರಿಮಿತ ಯಾತನೆಯನ್ನು ಕೊಡುವಂಥದ್ದು.

ಅತ್ಯುತ್ತಮ ಆರೋಗ್ಯ ಸೇವೆ ಪಡೆಯುವ ಜನನಾಯಕರಿಗೇ ಹೀಗೆ ಆಗುತ್ತಿರುವಾಗ, ಜನಸಾಮಾನ್ಯರ ಪಾಡೇನು ಎನ್ನುವ ಪ್ರಶ್ನೆ ಎದುರಾಗುತ್ತಿದೆ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ ಕೋವಿಡ್ 19ನ ಗುಣಲಕ್ಷಣಗಳು ಅದು ಮಾಡಬಹುದಾದ ಹಾನಿಯ ಬಗ್ಗೆ ಈಗಲೂ ವಿಜ್ಞಾನ ವಲಯದಲ್ಲಿ ಒಂದು ಸ್ಪಷ್ಟತೆ ಮೂಡಿಲ್ಲ, ಅದಕ್ಕೆ ಲಸಿಕೆಯೂ ಸಿದ್ಧವಾಗಿಲ್ಲ, ನಿರ್ದಿಷ್ಟ ಚಿಕಿತ್ಸಾ ವಿಧಾನಗಳೂ ಅದಕ್ಕೆ ಇಲ್ಲ. ಹೀಗಾಗಿ, ಅಪಾಯ ಎಲ್ಲರಿಗೂ ಇದ್ದೇ ಇದೆ. ಜನಸಾಮಾನ್ಯರಿಗಂತೂ ತುಸು ಹೆಚ್ಚೇ ಸವಾಲುಗಳು (ಚಿಕಿತ್ಸೆಯ ವೆಚ್ಚ ಸೇರಿದಂತೆ) ಇರುತ್ತವೆ.

ಚೇತರಿಕೆ ಕಂಡವರು ಹಠಾತ್ತನೆ ಅಸ್ವಸ್ಥರಾಗುವುದು, ಪದೆಪದೆ ಜ್ವರಕ್ಕೆ ಈಡಾಗುವಂಥ ಉದಾಹರಣೆಗಳು ಸಾಕಷ್ಟು ವರದಿಯಾಗುತ್ತಿವೆ. ಹೃದ್ರೋಗ, ಶ್ವಾಸಕೋಶ, ಸಕ್ಕರೆ ಕಾಯಿಲೆಯಂಥ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ವಯೋವೃದ್ಧರಿಗೆ ಈ ವೈರಾಣು ಮರಣಾಂತಕವಾಗಿ ಪರಿಣಮಿಸುತ್ತಿದೆ.

ಚೇತರಿಕೆಯಾದರೂ ಅನೇಕರಲ್ಲಿ ದೀರ್ಘ‌ಕಾಲಿಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ದುರಂತವೆಂದರೆ, ಇಷ್ಟೆಲ್ಲ ಆಗುತ್ತಿದ್ದರೂ ಈ ರೋಗದ ಕುರಿತು ಭಾರತಾದ್ಯಂತ ಒಂದು ರೀತಿಯ ಅಸಡ್ಡೆಯ ಮನೋಭಾವ ಹೆಚ್ಚಾಗಿರುವುದು ಕಂಡುಬರುತ್ತಿದೆ.

ಇದು ಒಂದು ವಾರದ ಜ್ವರವಷ್ಟೇ, ಏನೂ ಆಗಲ್ಲ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಈ ಕಾರಣಕ್ಕಾಗಿಯೇ, ಲಕ್ಷಣಗಳು ಕಾಣಿಸಿಕೊಂಡರೂ ಅನೇಕರು ಪರೀಕ್ಷೆಗಳನ್ನೇ ಮಾಡಿಸಿಕೊಳ್ಳುತ್ತಿಲ್ಲ. ಪರೀಕ್ಷೆ ಮಾಡಿಸಿಕೊಳ್ಳದೆ ದಿನಗಳನ್ನು ದೂಡುವುದರಿಂದ, ರೋಗ ಉಲ್ಬಣಿಸುವ ಸಾಧ್ಯತೆ ಅಧಿಕವಿರುತ್ತದೆ. ನೆನಪಿರಲಿ, ನೀವು ಆರೋಗ್ಯವಂತರಾಗಿರಬಹುದು, ಆದರೆ ನಿಮ್ಮಿಂದ ಇತರರಿಗೆ ಸೋಂಕು ಹರಡಿ ಅದು ಅವರಿಗೆ ಮರಣಾಂತಕವಾಗಬಲ್ಲದು.

ಬಹುಶಃ ಮಾಧ್ಯಮಗಳಲ್ಲಿ ಈ ಕುರಿತು ಮೊದಲಿನಷ್ಟು ವರದಿಯಾಗದೆ ಇರುವುದು, ಚೇತರಿಕೆಯ ಪ್ರಮಾಣದಲ್ಲಿ ಹೆಚ್ಚಳ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಅಪಾಯವೇ ದೂರವಾಗಿಬಿಟ್ಟಿದೆ ಎಂಬಂಥ ಮನಃಸ್ಥಿತಿ ಹುಟ್ಟಿಕೊಂಡಿರಬಹುದು.

ಸಾಂಕ್ರಾಮಿಕಗಳು ಜನಸಾಮಾನ್ಯರು ಹಾಗೂ ಜನನಾಯಕರು ಎಂದು ಭೇದಭಾವ ಮಾಡುವುದಿಲ್ಲ. ಎಲ್ಲರೂ ಈಗ ಅಪಾಯವನ್ನು ಎದುರಿಸುತ್ತಿದ್ದಾರೆ. ಎಲ್ಲರೂ ಸುರಕ್ಷತ ಕ್ರಮಗಳನ್ನು ಅಸಡ್ಡೆಯಿಂದ ನೋಡದೆ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಪಾಲನೆಗೆ, ಮಾಸ್ಕ್ ಧರಿಸುವಿಕೆಗೆ, ಜ್ವರ ಕಾಣಿಸಿಕೊಂಡರೆ ತ್ವರಿತವಾಗಿ ಪರೀಕ್ಷೆಗಳಿಗೆ ಮುಂದಾಗುವುದು ಬಹಳ ಮುಖ್ಯ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

ಅಭ್ಯಾಸ ಮಾಡುತ್ತಿರುವ ರೋಹಿತ್ ಔಟ್, ಗಾಯಗೊಂಡಿರುವ ಮಯಾಂಕ್ ಇನ್: ಏನಿದು ಟೀಂ ಇಂಡಿಯಾ ರಾಜಕೀಯ?

ಅಭ್ಯಾಸ ಮಾಡುತ್ತಿರುವ ರೋಹಿತ್ ಔಟ್, ಗಾಯಗೊಂಡಿರುವ ಮಯಾಂಕ್ ಇನ್: ಏನಿದು ಟೀಂ ಇಂಡಿಯಾ ರಾಜಕೀಯ?

ಕೊಲೆಸ್ಟ್ರಾಲ್‌ ನಿವಾರಕ ಕಾಮ ಕಸ್ತೂರಿಯಲ್ಲಿದೆ ಆರೋಗ್ಯದ ಗುಟ್ಟು

ಕೊಲೆಸ್ಟ್ರಾಲ್‌ ನಿವಾರಕ ಕಾಮ ಕಸ್ತೂರಿಯಲ್ಲಿದೆ ಆರೋಗ್ಯದ ಗುಟ್ಟು

ಚೀನಾದ ಬೆದರಿಕೆಗೆ ಜಗ್ಗಲ್ಲ: ಭಾರತಕ್ಕೆ ಎಲ್ಲಾ ರೀತಿಯ ನೆರವು; ಅಮೆರಿಕ ಘೋಷಣೆ

ಚೀನಾದ ಬೆದರಿಕೆಗೆ ಜಗ್ಗಲ್ಲ: ಭಾರತಕ್ಕೆ ಎಲ್ಲಾ ರೀತಿಯ ನೆರವು; ಅಮೆರಿಕ ಘೋಷಣೆ

ಯುದ್ಧಕ್ಕೂ ಮೊದಲು ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ: ಸಚಿವ ಕೆ ಸುಧಾಕರ್

ಯುದ್ಧಕ್ಕೂ ಮೊದಲು ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ: ಸಚಿವ ಕೆ ಸುಧಾಕರ್

ಪತಿ – ಪತ್ನಿ ನಡುವೆ ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!

ಪತಿ – ಪತ್ನಿ ನಡುವೆ ಜಗಳ ಬಿಡಿಸಲು ಬಂದ ಮಾವನನ್ನೇ ಕೊಂದ ಅಳಿಯ!

ಹಾಡಹಗಲೇ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ, ಆರೋಪಿ ಬಂಧನ

ಹಾಡಹಗಲೇ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ, ಆರೋಪಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

usa-india

2+2 ಮಾತುಕತೆ ; ಬಿಕ್ಕಟ್ಟಿನ ನಡುವೆ ಬಲವರ್ಧನೆ

ಹಬ್ಬದ ಸಂಭ್ರಮದ ನಡುವೆ…ಸುರಕ್ಷತೆಗೆ ಆದ್ಯತೆ ನೀಡಿ

ಹಬ್ಬದ ಸಂಭ್ರಮದ ನಡುವೆ…ಸುರಕ್ಷತೆಗೆ ಆದ್ಯತೆ ನೀಡಿ

Editorial

ಚುನಾವಣ ಖರ್ಚಿನ ಮಿತಿ ಹೆಚ್ಚಳ ; ಪಾರದರ್ಶಕತೆ ಮುಖ್ಯ

ಸರಕಾರಿ ನೌಕರರ ಸದ್ಬಳಕೆಯಾಗಲಿ

ಸರಕಾರಿ ನೌಕರರ ಸದ್ಬಳಕೆಯಾಗಲಿ

ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಪರಿಹಾರ ಕಾರ್ಯವೇ ಸವಾಲು

ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಪರಿಹಾರ ಕಾರ್ಯವೇ ಸವಾಲು

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

Jammu Kashmir

ಜಮ್ಮು, ಕಾಶ್ಮೀರ, ಲಡಾಖ್‌ನಲ್ಲಿ ಇನ್ನು ಭಾರತೀಯರು ಜಮೀನು ಖರೀದಿಸಬಹುದು

cm-tdy-1

ಶ್ರದ್ಧಾಭಕ್ತಿಯ ವಿಜಯ ದಶಮಿ

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

Ballary-tdy-2

ದಸರಾ ಗೊಂಬೆಗಳಿಟ್ಟು ಪೂಜೆ

ballary-tdy-1

ಧರ್ಮದ ಗುಡ್ಡದಲ್ಲಿ ಪಲ್ಲಕ್ಕಿ ಮಹೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.