ಭರವಸೆ ಹುಟ್ಟಿಸಿದ ಚುನಾವಣ ಆಯೋಗದ ಹೆಜ್ಜೆ 

Team Udayavani, Jan 26, 2021, 6:30 AM IST

 ಭರವಸೆ ಹುಟ್ಟಿಸಿದ ಚುನಾವಣ ಆಯೋಗದ ಹೆಜ್ಜೆ 

ರಾಷ್ಟ್ರೀಯ ಮತದಾರ ದಿನವಾದ ಸೋಮವಾರದಂದು ಚುನಾವಣ ಆಯೋಗ ವಿದ್ಯುನ್ಮಾನ ಆಧಾರಿತ ಮತದಾರರ ಗುರುತಿನ ಚೀಟಿ ನೀಡುವ ಯೋಜನೆಗೆ ಚಾಲನೆ ನೀಡಿದೆ. ಈ ವರ್ಷ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಡಿಜಿಟಲ್‌ ರೂಪದ ಮತದಾರರ ಗುರುತಿನ ಚೀಟಿಯನ್ನು ಅನುಷ್ಠಾನಗೊಳಿಸಲು ಆಯೋಗ ಸಜ್ಜಾಗಿರುವುದು ಸ್ವಾಗತಾರ್ಹ.

ವರ್ಷದಿಂದ ವರ್ಷಕ್ಕೆ ಮತದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮತದಾರರು ದೂರದಲ್ಲಿದ್ದುಕೊಂಡೇ ಮತ ಚಲಾಯಿಸುವ ರಿಮೋಟ್‌ ವೋಟಿಂಗ್‌ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯನ್ನೂ ಆರಂಭಿಸಲು ಆಯೋಗ ತಯಾರಿ ನಡೆಸಿದೆ. ಈ ಎರಡನೇ ಘೋಷಣೆಯನ್ನು ಪರಿಣತರು, ಮುಂದಿನ ದಿನಗಳಲ್ಲಿ ಅನಿವಾಸಿ ಭಾರತೀಯರಿಗೂ ಎಲೆಕ್ಟ್ರಾನಿಕ್‌ ಅಂಚೆ ಮತದಾನದ ಹಕ್ಕು ದಯಪಾಲಿಸುವ ಪರಿಕಲ್ಪನೆಯ ಭಾಗ ಎಂದು ವಿಶ್ಲೇಷಿಸುತ್ತಿದ್ದಾರೆ. ಅದೇನಾದರೂ ನಿಜವಾದರೆ, ಭಾರತೀಯ ಚುನಾವಣಾ ಪ್ರಕ್ರಿಯೆಯಲ್ಲಿ ಗಮನಾರ್ಹವೆನ್ನುವಂಥ ಬದಲಾವಣೆ ಆಗಲಿದೆ. ಆದಾಗ್ಯೂ, ಚುನಾವಣ ಆಯೋಗ ಈ ವಿಚಾರವನ್ನು ಸ್ಪಷ್ಟಪಡಿಸಿಲ್ಲವಾದರೂ ಇಂಥದ್ದೊಂದು ನಿರೀಕ್ಷೆಯನ್ನಂತೂ ಈ ನಡೆ ಹುಟ್ಟುಹಾಕಲಿದೆ.

ವಿದೇಶಾಂಗ ಸಚಿವಾಲಯದ 2018ರ ವರದಿಯ ಪ್ರಕಾರ, ಇಂದು ಪ್ರಪಂಚದ ವಿವಿಧ ಮೂಲೆಯಲ್ಲಿರುವ ಭಾರತೀಯರ ಸಂಖ್ಯೆ 3.2 ಕೋಟಿಯಷ್ಟಿದೆ. ಇದರಲ್ಲಿ ಭಾರತೀಯ ಪೌರತ್ವ ಹೊಂದಿರುವವರ ಸಂಖ್ಯೆ 1.3 ಕೋಟಿಯಿದ್ದರೆ, ಉಳಿದವರು ಅನ್ಯ ರಾಷ್ಟ್ರಗಳ ಪೌರತ್ವ ಪಡೆದಿದ್ದಾರೆ ಅಥವಾ ಅನ್ಯ ರಾಷ್ಟ್ರಗಳಲ್ಲೇ ಜನಿಸಿದವರು. ಇವರಲ್ಲಿ ಸರಿಸುಮಾರು 60 ಲಕ್ಷ ಜನರು ಮತದಾನದ ವಯೋಮಿತಿ ಹೊಂದಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ಕಳೆದ ವರ್ಷ ವರದಿ ಮಾಡಿತ್ತು, ಉದ್ಯೋಗ ಅರಸಿ ವಿದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಅನೇಕರು ದಶಕಗಳಿಂದ ವಿದೇಶಗಳಲ್ಲಿದ್ದರೂ ಆ ರಾಷ್ಟ್ರಗಳ ಪೌರತ್ವವನ್ನೂ ಪಡೆದಿರುವುದಿಲ್ಲ. ಹೀಗಾಗಿ ಆ ರಾಷ್ಟ್ರಗಳಲ್ಲೂ ಮತದಾನ ಮಾಡಲಾಗದೇ, ಭಾರತದಲ್ಲೂ ಮತ ಚಲಾಯಿಸಲಾಗದೆ ಪರದಾಡುತ್ತಲೇ ಇದ್ದಾರೆ. ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾಯ್ನಾಡಿಗೆ ಬಂದು ಮತದಾನ ಮಾಡಿಹೋಗುವವರೂ ಇದ್ದಾರಾದರೂ ಇದೊಂದು ದುಬಾರಿ ಬಾಬತ್ತೇ ಸರಿ.

ಈ ಹಿನ್ನೆಲೆಯಲ್ಲಿಯೇ ಕಳೆದ ನವೆಂಬರ್‌ ತಿಂಗಳಲ್ಲಿ ಚುನಾವಣ ಆಯೋಗ ಎನ್‌ಆರ್‌ಐಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನ ನೀಡುವ ಅವಕಾಶ ಕೊಡುವ ನಿಟ್ಟಿನಲ್ಲಿ ಸಲ್ಲಿಸಿದ್ದ ಶಿಫಾರಸು ಈ ಜನವರ್ಗದಲ್ಲಿ ಅಪಾರ ಉತ್ಸಾಹವಂತೂ ಮೂಡಿಸಿದೆ. ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದ ಆಯೋಗ, ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್‌ ಪೋಸ್ಟಲ್‌ ಬ್ಯಾಲೆಟ್‌ ಸಿಸ್ಟಂ(ಇಟಿಪಿಬಿಎಸ್‌) ವ್ಯವಸ್ಥೆಯನ್ನು ವಿಸ್ತರಿಸಲು ತಾನು ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸಜ್ಜಾಗಿರುವುದಾಗಿ ಹೇಳಿತ್ತು. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಸ್ಸಾಂ, ಪ.ಬಂಗಾಲ, ಕೇರಳ ಹಾಗೂ ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣೆಯ ಸಮಯದಲ್ಲಿ ಈ ಅವಕಾಶ ಅವರಿಗೆ ಒದಗಿಬರುವುದು ಅನುಮಾನವೇ ಆದರೂ ಮುಂದಿನ ಸಮಯದಲ್ಲಿ ಬದಲಾವಣೆಯ ಸಾಧ್ಯತೆಯಂತೂ ಗೋಚರಿಸುತ್ತಿದೆ.

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.