ಒಂದು ರಾಷ್ಟ್ರ, ಒಂದೇ ವೇತನ ದಿನ ಸ್ವಾಗತಾರ್ಹ ಚಿಂತನೆ


Team Udayavani, Nov 19, 2019, 4:25 AM IST

cc-34

ಕೇಂದ್ರ ಸರ್ಕಾರವು ಔಪಚಾರಿಕ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ “ಒನ್‌ ನೇಷನ್‌, ಒನ್‌ ಪೇ ಡೇ'(ಒಂದು ರಾಷ್ಟ್ರ, ಒಂದೇ ವೇತನ ದಿನ) ಜಾರಿಗೆ ತರಲು ಯೋಚಿಸುತ್ತಿದೆ. ಈ ವ್ಯವಸ್ಥೆಯು ಲಾಗೂ ಆದರೆ ಎಲ್ಲಾ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ನೌಕರರು ಮತ್ತು ಕರ್ಮಚಾರಿಗಳಿಗೆ ಒಂದೇ ದಿನವೇ ವೇತನ ಸಿಗುತ್ತದೆ. ಕೇಂದ್ರ ಸಚಿವ ಸಂತೇಷ್‌ ಗಂಗವಾರ್‌ ಅವರು ಕಳೆದ ಶುಕ್ರವಾರ ಸೆಂಟ್ರಲ್‌ ಅಸೋಸಿಯೇಷನ್‌ ಆಫ್ ಪ್ರೈವೇಟ್‌ ಸೆಕ್ಯೂರಿಟಿ ಇಂಡಸ್ಟ್ರೀಗಳು ಆಯೋಜಿಸಿದ್ದ ಸೆಕ್ಯುರಿಟಿ ಲೀಡರ್‌ಶಿಪ್‌ ಶೃಂಗದಲ್ಲಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ಸಂಬಂಧಿಸಿದ ಕಾನೂನು ಬೇಗನೇ ಸಿದ್ಧವಾಗಬೇಕು ಎಂದು ಖುದ್ದು ಪ್ರಧಾನಿ ಮೋದಿಯವರೂ ಬಯಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ದೇಶಾದ್ಯಂತ ಔಪಚಾರಿಕ ವಲಯದ ನೌಕರರಿಗೆ ಏಕದಿನಕ್ಕೇ ವೇತನ ದೊರಕುವುದರಿಂದ ಅವರಿಗೆಲ್ಲ ನೆಮ್ಮದಿಯಂತೂ ಸಿಗಲಿದೆ.

ಈಗಲೂ ಅನೇಕ ಸ್ತರಗಳಲ್ಲಿ ವೇತನದ ವಿಷಯದಲ್ಲಿ ಅನಿಶ್ಚಿತತೆ ಇದೆ. ಇದರಿಂದಾಗಿ ಕೆಲಸಗಾರರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ದಿನನಿತ್ಯದ ಖರ್ಚುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು, ಬ್ಯಾಂಕ್‌ನಲ್ಲಿ ಆರ್‌ಡಿಯಂಥ ಸ್ಕೀಮುಗಳನ್ನು ತೆರೆಯಲು ಹಿಂದೇಟು ಹಾಕುವಂತಾಗಿದೆ. ಈ ಆರ್ಥಿಕ ಅಸುರಕ್ಷೆಯು ಅವರನ್ನು ಮಾನಸಿಕ ತೊಳಲಾಟಕ್ಕೂ ತಳ್ಳುತ್ತಿದೆ. ಒಂದೊಂದು ಕಡೆ ತಮ್ಮಂಥದ್ದೇ ವೃತ್ತಿಯಲ್ಲಿರುವವರಿಗೆ ತಿಂಗಳ ಆರಂಭದಲ್ಲೋ ಅಥವಾ ಇನ್ನಾéವುದೋ ಸಮಯಕ್ಕೋ ಸರಿಯಾಗಿ ಸಂಬಳ ಸಿಗುತ್ತದೆ ಆದರೆ ನಮಗೆ ನಿಶ್ಚಿತ ಸಮಯದಲ್ಲಿ ಸಂಬಳ ಬರುವುದಿಲ್ಲ ಎಂಬ ಅಸಮಧಾನ ಮೊದಲಿನಿಂದಲೂ ಇದೆ. ಇದರ ಪರಿಣಾಮ ಅವರ ಕೆಲಸದ ಮೇಲೂ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ವೇತನ ಯಾವ ದಿನ ಬರುತ್ತದೆ ಎಂದು ನಿರ್ಧಾರವಾಗಿಬಿಟ್ಟರೆ ನೌಕರರಲ್ಲೂ ಒಂದು ರೀತಿಯ ಸುರಕ್ಷತಾ ಭಾವ ಬರುತ್ತದೆ. ಅನಿಶ್ಚಿತತೆಯೂ ದೂರವಾಗುತ್ತದೆ. ಆಗ ಅವರು ತಮ್ಮ ಖರ್ಚುಗಳ ವಿಚಾರದಲ್ಲಿ ತಾತ್ಕಾಲಿಕವಷ್ಟೇ ಅಲ್ಲದೆ, ದೂರಗಾಮಿ ಯೋಜನೆಗಳನ್ನೂ ರೂಪಿಸಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಉಳಿತಾಯ ಅಥವಾ ಹೂಡಿಕೆ ಬಗ್ಗೆಯೂ ಅವರು ಯೋಚಿಸಲಾರಂಭಿಸುತ್ತಾರೆ.

ಈ ವಿಚಾರದಲ್ಲಿ ಕಾನೂನು ರಚನೆಯಾದರೆ, ಕಂಪನಿಗಳೂ ವೇತನದ ವಿಚಾರದಲ್ಲಿ ವಿಳಂಬ ಮಾಡುವುದಕ್ಕೆ ಆಗುವುದಿಲ್ಲ. ಕಂಪನಿಯ ಆಡಳಿತ ಮಂಡಳಿಗಳ ಮೇಲೆ ಈ ನಿಟ್ಟಿನಲ್ಲಿ ಒಂದು ರೀತಿಯ ಒತ್ತಡವೂ ನಿರ್ಮಾಣವಾಗುತ್ತದೆ. ಈ ನಿಯಮವನ್ನು ಆದಷ್ಟು ಬೇಗನೇ ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ. ಇದಷ್ಟೇ ಅಲ್ಲದೆ, ಯಾವುದೇ ದೇಶದಲ್ಲೇ ಆಗಲಿ, ಅಲ್ಲಿ ನೌಕರರ ವೇತನಗಳ ನಡುವೆ ಭಾರೀ ಎನಿಸುವಂಥ ಅಸಮಾನತೆ ಇರಬಾರದು. ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಗೌರವದಿಂದ ಬದುಕುವಷ್ಟು ಸಂಬಳವಂತೂ ಅತ್ಯಗತ್ಯವಾದದ್ದು. ಅಲ್ಲದೇ, ಮೂಲಸೌಕರ್ಯಗಳೂ ಎಲ್ಲರಿಗೂ ಸಿಗುವಂತಾಗಬೇಕು. ಈ ವಿಚಾರದಲ್ಲೂ ಮೋದಿ ಸರ್ಕಾರ ಚಿಂತನೆ ನಡೆಸಿದೆ. ಸಂತೋಷ್‌ ಗಂಗವಾರ್‌ ಅವರ ಪ್ರಕಾರ ಸರ್ಕಾರವು ಏಕರೂಪದ ಕನಿಷ್ಠ ವೇತನ ಕಾರ್ಯಕ್ರಮವನ್ನೂ ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆಯಂತೆ. ಒಟ್ಟಲ್ಲಿ ಈ ಎಲ್ಲಾ ಆಶಾದಾಯಕ ಕ್ರಮಗಳು ಕಾನೂನಾಗಿ ಅನುಷ್ಠಾನಕ್ಕೆ ಬಂದದ್ದೇ ಆದರೆ, ಅದು ನಿಜಕ್ಕೂ ಮೋದಿ ಸರ್ಕಾರದ ಮಹತ್ತರ ಹೆಜ್ಜೆಯೆನಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ವಿಳಂಬ ಸಲ್ಲ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.