Udayavni Special

ಚುನಾವಣ ಖರ್ಚಿನ ಮಿತಿ ಹೆಚ್ಚಳ ; ಪಾರದರ್ಶಕತೆ ಮುಖ್ಯ

Team Udayavani, Oct 23, 2020, 6:11 AM IST

Editorial

ಚುನಾವಣ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚಿನ ಮಿತಿಯನ್ನು 10 ಪ್ರತಿಶತ ಏರಿಕೆ ಮಾಡಿದೆ. ಕೋವಿಡ್‌ನ‌ ಈ ಸಮಯದಲ್ಲಿ ಚುನಾವಣ ಪ್ರಚಾರ ವೈಖರಿಗಳೂ ಬದಲಾಗಿರುವುದರಿಂದ, ಅಭ್ಯರ್ಥಿಗಳಿಗೆ ಅಧಿಕ ಖರ್ಚಿನ ಅಗತ್ಯ ಎದುರಾಗುತ್ತದೆ ಎನ್ನುವ ದೃಷ್ಟಿಯಿಂದ ಹೀಗೆ ಮಾಡಲಾಗಿದೆ. ಇನ್ಮುಂದೆ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಭ್ಯರ್ಥಿ 28 ಲಕ್ಷ ರೂಪಾಯಿಯ ಬದಲು 30.8 ಲಕ್ಷ ರೂಪಾಯಿ ಖರ್ಚು ಮಾಡಬಹುದಾಗಿದೆ. ಇನ್ನು ಲೋಕಸಭೆಗೆ ಚುನಾವಣೆಗೆ 70 ಲಕ್ಷದಷ್ಟಿದ್ದ ಮಿತಿಯನ್ನು 77 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 2014ರ ಚುನಾವಣೆಗೂ ಮುನ್ನ ಚುನಾವಣ ಆಯೋಗ ಪ್ರಚಾರ ಖರ್ಚಿನ ಮಿತಿ ಯನ್ನು ಹೆಚ್ಚಿಸಿತ್ತು, ಈಗ ಆರು ವರ್ಷಗಳ ನಂತರ ಮತ್ತೆ ಪರಿಷ್ಕರಣೆ ಮಾಡಿದೆ. ಪ್ರಾಮಾಣಿಕ ಅಭ್ಯರ್ಥಿ ಯಾಗಿದ್ದರೆ, ಈ ನಿಗದಿತ ಮೊತ್ತದ ವ್ಯಾಪ್ತಿಯಲ್ಲೇ ಖರ್ಚನ್ನು ಸರಿದೂಗಿ ಸು ತ್ತಾನಾದರೂ, ಇಲ್ಲಿಯವರೆಗಿನ ಚುನಾವಣ ಪ್ರಚಾರ ವೈಖರಿ ಗಳನ್ನೆಲ್ಲ ನೋಡುತ್ತಾ ಬಂದವರಿಗೆ, ರಾಜಕಾರಣಿಗಳು ಈ ನಿಯಮವನ್ನು ನಿರ್ವಿಘ್ನವಾಗಿ ಉಲ್ಲಂ ಸುತ್ತಾ ಬರುತ್ತಾರೆ ಎನ್ನುವುದು ತಿಳಿದೇ ಇದೆ. ಈ ವಿಚಾರದಲ್ಲಿ ಕೆಲವೊಮ್ಮೆ ಪಕ್ಷಗಳು ಎದುರಾಳಿ ನಾಯಕರ ವಿರುದ್ಧ ದೂರು ನೀಡುತ್ತಲೇ ಬಂದಿದ್ದಾವಾದರೂ, ಇಂಥ ಅಕ್ರಮವನ್ನು ತಡೆಯಲು ಸಾಧ್ಯವಾಗಿಯೇ ಇಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣಾ ಸಮಯದಲ್ಲಿ ಹರಿದುಬರುವ ದೇಣಿಗೆಯ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಎಲಕ್ಟೋರಲ್‌ ಬಾಂಡ್‌ಗಳನ್ನು ತರಲಾಗಿದೆ. ಆದರೆ ಈ ಕ್ರಮ ಗಳಿಂದಲೂ ಅಕ್ರಮವನ್ನು ತಡೆಯಲು ಪೂರ್ಣವಾಗಿ ಸಾಧ್ಯವಿಲ್ಲ ಎನ್ನುವುದು ಪರಿಣತರ ಅಭಿಪ್ರಾಯ.

ಚುನಾವಣ ಆಯೋಗದ ಕಟ್ಟುನಿಟ್ಟಾದ ನಿಯಮಗಳ ಹೊರತಾಗಿಯೂ ಅಭ್ಯರ್ಥಿಗಳು ನಿಗದಿತ ಪ್ರಮಾಣಕ್ಕಿಂತಲೂ ಲೆಕ್ಕತಪ್ಪಿ ಖರ್ಚು ಮಾಡುತ್ತಲೇ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಂತೂ ಚುನಾವಣೆಗಳಲ್ಲಿ ಧನಬಲದ ಪ್ರದರ್ಶನ ಬಿಡು ಬೀಸಾಗಿಯೇ ನಡೆಯುತ್ತಿದೆ. ಚುನಾವಣ ಖರ್ಚುಗಳಿಗಾಗಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಚಂದಾ ಸಂಗ್ರಹಿಸಲು ವ್ಯಾಪಕವಾಗಿ ಅಭಿಯಾನ ನಡೆಸುತ್ತಾರೆ. ಇನ್ನು ಪಕ್ಷಗಳೂ ಸಹ ಹಣ ಚೆಲ್ಲಲು ಸಿದ್ಧವಿರುವ ಅಭ್ಯರ್ಥಿಗಳಿಗೇ ಹೂಮಾಲೆ ಹಾಕುತ್ತಾ ಬರುತ್ತಿವೆ. ಈ ಕಾರಣಕ್ಕಾಗಿಯೇ ಪೋಸ್ಟರ್‌, ಬ್ಯಾನರ್‌, ಬೃಹತ್‌ ಕಟೌಟ್‌ಗಳು, ಟೆಲಿವಿಷನ್‌, ಅಂತರ್ಜಾಲದಲ್ಲಿ ಅಗಣಿತ ಜಾಹೀರಾತುಗಳ ಸಾಗರವೇ ಕಾಣಿ ಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮತದಾರರಿಗೆ ನೇರವಾಗಿ ಹಣ ಅಥವಾ ಮದ್ಯ ಆಮಿಷ ಒಡ್ಡಿ ಮತಗಳನ್ನು ಖರೀದಿ ಮಾಡುವ ಪರಿಪಾಠವೂ ಎಲ್ಲಾ ಕಟ್ಟುನಿಟ್ಟಾದ ಕ್ರಮಗಳ ನಡುವೆ ಮುಂದುವರಿದೇ ಇದೆ. ಈ ಹಣ-ಹೆಂಡದ ಗದ್ದಲದಲ್ಲಿ ಚಿಕ್ಕ ಪಕ್ಷಗಳು ಅಥವಾ ಪ್ರಾಮಾಣಿಕ ಸ್ವತಂತ್ರ ಅಭ್ಯರ್ಥಿಗಳ ಧ್ವನಿಯೇ ಅಡಗಿಹೋಗುತ್ತದೆ.

ಇಲ್ಲಿ ಜವಾಬ್ದಾರಿ ಕೇವಲ ರಾಜಕಾರಣಿಗಳು ಹಾಗೂ ಚುನಾವಣ ಆಯೋಗದ ಮೇಲಷ್ಟೇ ಇಲ್ಲ. ಮತದಾರರು ಎಲ್ಲಿಯವರೆಗೂ ಹಣದ ಆಮಿಷಕ್ಕೆ ಒಳಗಾಗು ವುದನ್ನು ನಿಲ್ಲಿಸುವುದಿಲ್ಲವೋ, ಜಾಹೀರಾತುಗಳ ಅಬ್ಬರಗಳಿಗೆ ಮರುಳಾಗುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ರಾಜಕೀಯ ಪಕ್ಷಗಳು ಇಂಥ ಕಳ್ಳ ಮಾರ್ಗ ವನ್ನು ಹುಡುಕಿಕೊಳ್ಳುತ್ತಲೇ ಇರುತ್ತವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ ಕೇಳಿದ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ ಕೇಳಿದ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರೇಟರ್‌ ಹೈದರಾಬಾದ್‌ ಪಾಲಿಕೆ ಚುನಾವಣೆ : “ಜೋ ಜೀತಾ ವಹೀ ಸಿಕಂದರ್‌’

ಗ್ರೇಟರ್‌ ಹೈದರಾಬಾದ್‌ ಪಾಲಿಕೆ ಚುನಾವಣೆ : “ಜೋ ಜೀತಾ ವಹೀ ಸಿಕಂದರ್‌’

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಿಲ್ಲದ ಪಾಕ್‌ ಪುಂಡಾಟ ತಕ್ಕ ಪಾಠ ಕಲಿಸಿ

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಿಲ್ಲದ ಪಾಕ್‌ ಪುಂಡಾಟ ತಕ್ಕ ಪಾಠ ಕಲಿಸಿ

ಖಾಸಗಿ ಶಾಲೆಗಳ ಎಚ್ಚರಿಕೆ; ಸೌಹಾರ್ದಯುತ ಪರಿಹಾರ ಮುಖ್ಯ

ಖಾಸಗಿ ಶಾಲೆಗಳ ಎಚ್ಚರಿಕೆ; ಸೌಹಾರ್ದಯುತ ಪರಿಹಾರ ಮುಖ್ಯ

ಉಗ್ರ ದಮನದ ಹಾದಿಯಲ್ಲಿ ಭಾರತೀಯ ಸೇನೆಯ ಪಾರಮ್ಯ

ಉಗ್ರ ದಮನದ ಹಾದಿಯಲ್ಲಿ ಭಾರತೀಯ ಸೇನೆಯ ಪಾರಮ್ಯ

ಈ ವರ್ಷ ಶಾಲೆ ಇಲ್ಲ; ಹೆಚ್ಚಿದ ಪೋಷಕರ ಜವಾಬ್ದಾರಿ

ಈ ವರ್ಷ ಶಾಲೆ ಇಲ್ಲ; ಹೆಚ್ಚಿದ ಪೋಷಕರ ಜವಾಬ್ದಾರಿ

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

KUD

ಪೊಲೀಸ್‌ ಗೈರು: ದಲಿತ ಕುಂದುಕೊರತೆ ಸಭೆ ರದ್ದು

NEWBORN

ಆಚಾರ್ಯ ಎಲೈವ್‌: ನವಜಾತ ಶಿಶುವಿನ ಆರೈಕೆ, ಅಂತರಾಷ್ಟ್ರೀಯ ವಿಚಾರ ಸಂಕಿರಣ

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.