Udayavni Special

ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕಾರಿ

Team Udayavani, Feb 18, 2020, 6:20 AM IST

election

ಪ್ರತಿಸಲ ಚುನಾವಣೆ ಮುಗಿದ ಕೂಡಲೇ ಚುನಾವಣಾ ಆಯೋಗ ಚಲಾವಣೆಯಾದ ಒಟ್ಟು ಮತಗಳ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಒಂದು ವೇಳೆ ಮತದಾನ ಪ್ರಮಾಣ ಶೇ.80 ಆಗಿದ್ದರೆ ಅತ್ಯುತ್ತಮ ಮತದಾನ ಎಂದು ಖುಷಿ ಪಡುತ್ತೇವೆ. ಈ ಸಂದರ್ಭದಲ್ಲಿ ಉಳಿದ ಶೇ. 20 ಮಂದಿ ಮತದಾರರು ಏಕೆ ಮತದಾನ ಮಾಡಿಲ್ಲ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಅದೇ ಮತದಾನ ಪ್ರಮಾಣ ಶೇ.50ಕ್ಕಿಂತೂ ಕಡಿಮೆಯಿದ್ದರೆ ಉಳಿದ ಶೇ. 50 ಮತದಾರರು ಏಕೆ ಬರಲಿಲ್ಲ ಎಂಬ ಚರ್ಚೆ ಪ್ರಾರಂಭವಾಗುತ್ತದೆ.ಎರಡೂ ಸಂದರ್ಭಗಳಲ್ಲಿ ಮತ ಹಾಕದವರು ಆಲಸಿಗಳು, ಜವಾಬ್ದಾರಿ ಮರೆತವರು ಎಂದು ಜರೆಯುವುದು ಸಾಮಾನ್ಯ. ಆದರೆ ಅವರು ಮತದಾನ ಮಾಡದೇ ಇರುವುದಕ್ಕೆ ಬೇರೆ ಕಾರಣಗಳೂ ಇರಬಹುದು ಎಂಬುದನ್ನು ಹೆಚ್ಚಿನವರು ಯೋಚಿಸುವುದಿಲ್ಲ. ಬಹುತೇಕ ಮಂದಿಗೆ ಮತ ಹಾಕುವ ಇಚ್ಚೆ ಇದ್ದರೂ ಮತ ಚಲಾಯಿಸುವ ಸೌಲಭ್ಯ ಇರುವುದಿಲ್ಲ. ಏಕೆಂದರೆ ಅವರು ತಮ್ಮ ನೋಂದಾಯಿತ ಮತ ಕ್ಷೇತ್ರದಲ್ಲಿ ಇರುವುದಿಲ್ಲ.

ಉದ್ಯೋಗ ನಿಮಿತ್ತ ಜನರು ವಲಸೆ ಹೋಗುವುದು ಮಾಮೂಲು ಪ್ರಕ್ರಿಯೆ. ಹೀಗೆ ವಲಸೆ ಹೋದವರ ಮತ ಚಲಾವಣೆಯಾಗಬೇಕಾದರೆ ಅವರು ಮತದಾನದ ದಿನದಂದು ತಮ್ಮ ಮತಕ್ಷೇತ್ರಗಳಲ್ಲಿ ಇರಬೇಕಾಗುತ್ತದೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ತಮಿಳುನಾಡಿನ ಯಾವುದೋ ಒಂದು ನಗರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಬಿಹಾರದ ಒಬ್ಬ ವ್ಯಕ್ತಿಗೆ ಮತದಾನ ಮಾಡಬೇಕಾದರೆ ಹೋಗಲು ಮೂರು ದಿನ, ವಾಪಾಸು ಬರಲು ಮೂರು ದಿನ, ಊರಿನಲ್ಲಿ ಉಳಿಯಲು ಮೂರು ದಿನ ಹೀಗೆ ಕನಿಷ್ಠ 10 ದಿನದ ರಜೆ ಸಿಗಬೇಕು. ಜೊತೆಗೆ ಹೋಗಿ ಬರುವ ಪ್ರಯಾಣದ ಖರ್ಚುವೆಚ್ಚಗಳನ್ನು ಭರಿಸಬೇಕು. ಎಲ್ಲರೂ ಇಷ್ಟು ಅನುಕೂಲವಂತರಾಗಿರುವುದಿಲ್ಲ. ಈ ಕಾರಣಕ್ಕೆ ಯಾವ ಚುನಾವಣೆಯಲ್ಲೂ ಶೇ. 100ರಷ್ಟು ಮತ ಚಲಾವಣೆಯಾಗುವುದಿಲ್ಲ. ಆದರೆ ಈ ವಾಸ್ತವ ಸ್ಥಿತಿಯ ಬಗ್ಗೆ ಹೆಚ್ಚಿನವರು ಗಂಭೀರವಾದ ಚಿಂತನೆ ನಡೆಸಿದಂತೆ ಕಾಣುವುದಿಲ್ಲ.

ಶೇ. 100 ಮತ ಚಲಾವಣೆಯಾಗಬೇಕೆಂದು ಚುನಾವಣಾ ಆಯೋಗ ಕಳೆದ ಕೆಲವು ವರ್ಷಗಳಿಂದ ಗಂಭೀರವಾದ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ವಲಸೆ ಕಾರ್ಮಿಕರ ಮತದಾನದ ಸಮಸ್ಯೆಗಳನ್ನು ಬಗೆಹರಿಸದ ಹೊರತು ಶೇ. 100 ಮತದಾನವನ್ನು ಖಾತರಿಪಡಿಸುವುದು ಎಂದಿಗೂ ಅಸಾಧ್ಯ. ವಲಸೆ ಕಾರ್ಮಿಕರೆಂದರೆ ಬರೀ ಕೂಲಿ ಕೆಲಸ ಮಾಡುವವರು ಎಂದರ್ಥವಲ್ಲ. ಉದ್ಯೋಗ ನಿಮಿತ್ತವಾಗಿ ಬೇರೆ ಊರುಗಳಲ್ಲಿರುವವರೆಲ್ಲ ಈ ವರ್ಗದಲ್ಲಿ ಬರುತ್ತಾರೆ.

ಜನಪ್ರತಿನಿಧಿ ಕಾಯಿದೆಯ ಸೆಕ್ಷನ್‌ 20 ಪ್ರಕಾರ ವ್ಯಕ್ತಿ ಯಾವ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರುತ್ತಾನೋ ಆ ಕ್ಷೇತ್ರದ ಮತದಾರನಾಗಿ ನೋಂದಾಯಿಸಿಕೊಳ್ಳಬಹುದು. ಆದರೆ ಸಾಮಾನ್ಯ ನಿವಾಸಿಯಾಗಲು ಆತ ಕೆಲವೊಂದು ದಾಖಲೆಪತ್ರಗಳನ್ನು ಹೊಂದಿರಬೇಕಾಗುತ್ತದೆ. ಮುಖ್ಯವಾಗಿ ಅಲ್ಲಿನ ನಿವಾಸಿ ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳು. ಉದ್ಯೋಗಕ್ಕಾಗಿ ಊರೂರು ಅಲೆಯುವವರು ಪದೇ ಪದೆ ಇಂಥ ದಾಖಲೆಪತ್ರಗಳನ್ನು ಹೊಂದಿಸಿಕೊಳ್ಳುವುದು ಪ್ರಸಕ್ತ ವ್ಯವಸ್ಥೆಯಲ್ಲಿ ಬಹಳ ಕಷ್ಟದ ಕೆಲಸ. ಸರಕಾರಕ್ಕೆ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ಕೊಡಿಸುವ ಉತ್ಸುಕತೆಯಿದೆ. ಇದಕ್ಕೆ ಸಂಬಂಧಿಸಿದ ಮಸೂದೆ ಲೋಕಸಭೆಯಲ್ಲಿ ಮಂಜೂರು ಕೂಡ ಆಗಿದೆ. ಆದರೆ ವಲಸೆ ಕಾರ್ಮಿಕರಿಗೆ ಈ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಗಳು ಆಗಿಲ್ಲ.
ಇದೀಗ ಚುನಾವಣಾ ಆಯೋಗ ಮತದಾರ ಇರುವ ಪ್ರದೇಶದಲ್ಲೇ ಮತ  ಚಲಾಯಿಸಲು ಅವಕಾಶ ಕೊಡುವ ಸೌಲಭ್ಯವನ್ನು ಒದಗಿಸುವ ಪ್ರಯತ್ನ ಪ್ರಾರಂಭಿಸಿರುವುದು ಈ ಹಿನ್ನೆಲೆಯಲ್ಲಿ ಒಂದು ಉತ್ತಮ ನಡೆ ಎನ್ನಬಹುದು. ಶೇ. 100 ಮತದಾನದ ಗುರಿಯನ್ನು ಈಡೇರಿಸಿಕೊಳ್ಳಲು ಈ ನಡೆ ಸಹಕಾರಿಯಾಗಬಹುದು. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ದೂರದ ಊರುಗಳಲ್ಲಿ ಇರುವ ಮತದಾರರನ್ನು ರಾಜಕೀಯ ಪಕ್ಷಗಳು ಅವರವರ ಮತಕ್ಷೇತ್ರಗಳಿಗೆ ತಮ್ಮ ಖರ್ಚಿನಲ್ಲಿ ಸಾಗಿಸಿ ಪರೋಕ್ಷವಾಗಿ ಅವರ ಮತ ಖರೀದಿಸುವಂಥ ಅಕ್ರಮಗಳಿಗೂ ಕಡಿವಾಣ ಬೀಳಬಹುದು. ಕೇರಳದಲ್ಲಿ ಪ್ರತಿಸಲ ಚುನಾವಣೆ ನಡೆದಾಗಲೂ ಗಲ್ಫ್ ದೇಶಗಳಲ್ಲಿರುವ ಮತದಾರರಿಗೆ ವಿಮಾನ ಟಿಕೆಟನ್ನು ರಾಜಕೀಯ ಪಕ್ಷಗಳು ಪ್ರಾಯೋಜಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಂತೆಯೇ ಮುಂಬಯಿಯಂಥ ನಗರಗಳಲ್ಲಿ ದುಡಿಯುವ ಕರಾವಳಿಯ ಜನರನ್ನು ಬಸ್‌, ರೈಲಿನ ಟಿಕೆಟ್‌ ಕೊಟ್ಟು ಚುನಾವಣೆ ದಿನಕ್ಕಾಗುವಾಗ ಕರೆಸಿಕೊಳ್ಳಲಾಗುತ್ತದೆ.ಕರಾವಳಿ ಭಾಗಗಳಲ್ಲಿ ದುಡಿಯುವ ಬಿಜಾಪುರ ಮತ್ತಿತರ ಕಡೆಗಳ ಜನರನ್ನು ಮತದಾನದ ದಿನಕ್ಕಾಗುವಾಗ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿ ಸಾಗಿಸುವ ಪದ್ಧತಿಯೂ ಇದೆ. ಇದೆಲ್ಲ ಮತದಾರರನ್ನು ಹಂಗಿನಲ್ಲಿ ಕೆಡವಿ ಮತಗಳಿಸುವ ತಂತ್ರಗಳು.ಇದು ಕೂಡ ಚುನಾವಣಾ ಅಕ್ರಮವೇ ಆಗುತ್ತದೆ. ಇಂಥ ಅಕ್ರಮಗಳನ್ನು ತಡೆಯಲು ವಲಸೆ ಕಾರ್ಮಿಕರು ಇದ್ದಲ್ಲೇ ಮತದಾನಕ್ಕೆ ಅವಕಾಶ ಕೊಡುವ ಸೌಲಭ್ಯ ಸಹಕಾರಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಎಲ್ಲ ವರ್ಗದವರಿಗೂ ನೆರವು ಅಗತ್ಯ

ಎಲ್ಲ ವರ್ಗದವರಿಗೂ ನೆರವು ಅಗತ್ಯ

ಸಾರ್ವಜನಿಕರ ಅಸಡ್ಡೆ ಮುಂಜಾಗ್ರತೆ ಮುಖ್ಯ

ಸಾರ್ವಜನಿಕರ ಅಸಡ್ಡೆ ಮುಂಜಾಗ್ರತೆ ಮುಖ್ಯ

ಕೊನೆಗೂ ದಕ್ಕಿದ ನ್ಯಾಯ

ಕೊನೆಗೂ ದಕ್ಕಿದ ನ್ಯಾಯ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ