ಸಂಸ್ಕಾರ, ಸಂಸ್ಕೃತಿ, ಸದ್ವಿಚಾರಗಳ ಆಗರ ಸಂಸ್ಕೃತ


Team Udayavani, Aug 26, 2018, 6:00 AM IST

z-21.jpg

ಪರರ ಆಕ್ರಮಣ, ವರ್ಗವೈಷಮ್ಯ, ಸಂಸ್ಕೃತಿಯ ಮೇಲಿನ ದಾಳಿ ಮುಂತಾದ ಕಾರಣಗಳಿಂದ ಕೆಲಕಾಲ ಸಂಸ್ಕೃತವು ಜನಮಾನಸದಿಂದ ದೂರ ಉಳಿದದ್ದುಂಟು, ಆದರೆ ಕಣ್ಮರೆಯಾಗಿಲ್ಲ. ಮತ್ತೆ ಮತ್ತೆ ಆತ್ಮಸ್ಥೈರ್ಯದಿಂದ ಮೇಲೆದ್ದು ತಾನು ಅವಿನಾಶಿ ಎಂಬುದನ್ನು ತೋರಿಸಿಕೊಟ್ಟಿದೆ.

ಶ್ರಾವಣದ ಪೂರ್ಣಿಮೆಯು ಸಂಸ್ಕೃತಭಾಷಾ ಪ್ರಿಯರಿಗೆ ವಿಶೇಷ ಆನಂದದ ದಿನ, ಯಾಕೆಂದರೆ ಇದು ಸಂಸ್ಕೃತ ಭಾಷೆಯ ಸಂಭ್ರಮದ ಹಬ್ಬ. ಜೀವನ ಸಂಸ್ಕಾರವನ್ನು, ಸಂಸ್ಕೃತಿಯನ್ನು, ಜೀವನ ಪ್ರೀತಿಯನ್ನು, ಮಹತ್ತರ ಧ್ಯೇಯಗಳನ್ನು ಬೆಳೆಸುವ ಭಾಷೆ ಸಂಸ್ಕೃತ. ಸಂಸ್ಕೃತಿಃ ಸಂಸ್ಕೃತಾಶ್ರಿತಾ ಎಂಬ ಮಾತಿನಂತೆ ಅದ್ವಿತೀಯವಾದ ಭಾರತೀಯ ಸನಾತನ ಸಂಸ್ಕೃತಿಯು ಈ ಭಾಷೆಯನ್ನೇ ಅವಲಂಬಿಸಿದೆ. 

ವೇದಕಾಲದಿಂದಾರಂಭಿಸಿ ಇಂದಿನ ತನಕ ಅಮೂಲ್ಯವಾದ ಜ್ಞಾನರಾಶಿಯನ್ನು ತನ್ನಲ್ಲಿ ಹುದುಗಿಸಿಕೊಂಡಿರುವುದಷ್ಟೇ ಅಲ್ಲದೇ ಅನೇಕಾನೇಕ ಸೃಷ್ಟಿ ರಹಸ್ಯಗಳನ್ನು ತನ್ನಲ್ಲಿರಿಸಿಕೊಂಡು ಅದನ್ನು ಅನ್ವೇಷಣೆ ಮಾಡಲು ಹೊರಟ ಸಾಧಕನಿಗೆ ಮಾತ್ರವೇ ತನ್ನ ವಿಶ್ವರೂಪದರ್ಶನ ಮಾಡಿಸುವ, ಜೀವನವನ್ನು ಸಾರ್ಥಕತೆಯತ್ತ ಕೊಂಡೊಯ್ಯುವ ಸಾಮರ್ಥ್ಯ ಈ ಭಾಷೆಗಿದೆ.

ಸಂಸ್ಕೃತ ಭಾಷೆಯಿಲ್ಲದ ಸಮಾಜವೆಂದರೆ ಆತ್ಮನಿಲ್ಲದ ಶರೀರವಿದ್ದಂತೆ. ಭಾರತ ದೇಶಕ್ಕೂ ಈ ಭಾಷೆಗೂ ಅಷ್ಟೊಂದು ಅವಿನಾಭಾವ ಸಂಬಂಧ. ನಮ್ಮ ರಾಷ್ಟ್ರದ ಇತಿಹಾಸದ ಸರಿಯಾದ ಪರಿಜ್ಞಾನಕ್ಕೆ ಸಂಸ್ಕೃತ ಅನಿವಾರ್ಯ. ಒಂದು ಕಾಲಘಟ್ಟದಲ್ಲಿ ಸಮಾಜದಲ್ಲಿ ಸಮೃದ್ಧವಾಗಿ ಬೆಳೆದು ಆಡುಭಾಷೆಯಾಗಿ ಪ್ರತಿಯೊಬ್ಬ ಭಾರತೀಯನ ಮನೆ-ಮನಗಳನ್ನು ಬೆಳಗಿದ ಭಾಷೆಯಿದು. ಸಾಮಾನ್ಯ ಜನರೂ ಕೂಡ ಈ ಭಾಷಾ ಮಾಧ್ಯಮದ ಮೂಲಕ ಸಂಸ್ಕಾರ, ಸಂಸ್ಕೃತಿ, ಸದಾಚಾರ, ಸದ್ವಿಚಾರಗಳನ್ನು ತಮ್ಮಲ್ಲಿ ಬೆಳೆಸಿಕೊಂಡಿದ್ದರು. ಅನೇಕ ಶಾಸ್ತ್ರ ಗ್ರಂಥ‌ಗಳ ರೂಪದಲ್ಲಿ ನಾವು ಸಂಸ್ಕೃತವನ್ನು ನೋಡಿದಾಗ ಇದು ಆ ಕಾಲಘಟ್ಟದಲ್ಲಿ ಜನಸಾಮಾನ್ಯರ ವ್ಯವಹಾರದ ಮತ್ತು ಆಡುಭಾಷೆಯಾಗಿತ್ತು ಎಂಬುದು ಅರಿವಿಗೆ ಬರುತ್ತದೆ. 

ನಾವು ಸಂಸ್ಕೃತವನ್ನು ಕೇವಲ ಒಂದು ಭಾಷೆಯನ್ನಾಗಿ ಮಾತ್ರ ಸ್ವೀಕರಿಸಲಿಲ್ಲ, ಬದಲಿಗೆ ಭಾರತೀಯತೆಯ ಅಸ್ಮಿತೆಯನ್ನಾಗಿ ನೋಡಿದ್ದೇವೆ. ಇಂತಹ ವಿಶಿಷ್ಟವಾದ ಭಾಷೆಯ ಬಗ್ಗೆ ನಮ್ಮ ದೇಶದ ಹಿರಿಯರು, ಮಹಾತ್ಮರು ತಮ್ಮ ಅಭಿಪ್ರಾಯವನ್ನು ಹೇಗೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಗಮನಿಸೋಣ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಡಾ|ಕುವೆಂಪು ಅವರು ಸಂಸ್ಕೃತ ಮಾತೆಯನ್ನು ಕುರಿತು ಹೀಗೆ ಹೇಳಿದ್ದಾರೆ.

“”…ಸಾಮಗಾನದ ವಾಣಿಯಿಂದ ಮಾಡಿದ ಮೂರ್ತಿ 
ನೀನೇತಾ ಸಂಸ್ಕೃತದ ವಾಗೆªàವಿ! 
ಆರ್ಯರಾಗಿಹ ನಾವು ನಿನ್ನ 
ಮೊಲೆಪಾಲ ಸವಿಯಿಲ್ಲದೆಯೇ ಬದುಕುವೆವೇ? 
ನೀನಿಲ್ಲದೆಲ್ಲಿಯದು ಭರತ ಖಂಡದ ಬದುಕು? ಸಂಪತ್ತು? ಸಂಸ್ಕೃತಿ?”
ತಮ್ಮ ಅನುಪಮ ಸಾಹಿತ್ಯ “ಗೀತಾಂಜಲಿ’ಗೆ ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದಂತಹ ರವೀಂದ್ರನಾಥ್‌ ಟ್ಯಾಗೋರ್‌ರವರು 
ಕೂಡ ಸಂಸ್ಕೃತದ ಬಗ್ಗೆ ಅತ್ಯಂತ ಆಸಕ್ತಿಯನ್ನು ಹೊಂದಿದ್ದರು. ಅವರು  ಈ ಭಾಷೆಯನ್ನು ಸರಳವಾಗಿ ಪ್ರತಿಯೊಬ್ಬ ವ್ಯಕ್ತಿಯು ಹೇಗೆ ಕಲಿಯಬಹುದು ಎನ್ನುವುದನ್ನು ಅಧ್ಯಯನ ಮಾಡಿ “ಸಂಸ್ಕೃತ ಶಿಕ್ಷಾ’ ಮತ್ತು “ಸಂಸ್ಕೃತ ಪ್ರವೇಶ’ ಎಂಬ ಎರಡು ಪುಸ್ತಕಗಳನ್ನು ರಚನೆ ಮಾಡಿದರು. ಅವರು ಸಂಸ್ಕೃತದ ಬಗ್ಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೇಗೆ ಮತ್ತು ಯಾಕೆ ಓದಬೇಕೆನ್ನುವುದನ್ನು ಹೀಗೆ ಹೇಳುತ್ತಾರೆ- “ಇಂದಿನ ಆಧುನಿಕ ಮಹಿಳೆಯರು ಸಂಸ್ಕೃತ ಕಲಿಯಬೇಕಾದ್ದು ಅತಿ ಅವಶ್ಯ ಎಂಬುದು ನನ್ನ ದೃಢವಾದ ಅಭಿಪ್ರಾಯ’.

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಮದ್ರಾಸ್‌ನಲ್ಲಿ ಒಂದು ದಿನ ಭಾಷಣ ಮಾಡುತ್ತಾ ಭಾರತೀಯರು ಸಂಸ್ಕೃತ ಶಬ್ದಗಳ ಉಚ್ಚಾರಣೆ ಮಾಡಿದರೂ ಸಾಕು ಅವರಲ್ಲಿ ಒಂದು ಬಗೆಯ ಗೌರವದ ಭಾವ ಎಚ್ಚೆತ್ತುಕೊಳ್ಳುತ್ತದೆ ಎಂದಿದ್ದರು. ಅಲ್ಲದೇ.. “ಸಂಸ್ಕೃತವನ್ನೋದು ಅದರ ಜೊತೆಗೆ ಪಾಶ್ಚಾತ್ಯ ವಿಜ್ಞಾನದ ಬಗ್ಗೆಯೂ ಚರ್ಚಿಸು’ ಎಂದಿದ್ದರು ವಿವೇಕಾನಂದರು. ಅಷ್ಟೇ ಅಲ್ಲ, ಅವರು ಮಹಾ ಸಮಾಧಿಯಾಗುವ ಕೆಲವೇ ಗಂಟೆಗಳ ಮೊದಲು ಮಠದ ಬ್ರಹ್ಮಚಾರಿಗಳಿಗೆ ಮೂರು ತಾಸು ನಿರಂತರವಾಗಿ ಸಂಸ್ಕೃತ ವ್ಯಾಕರಣದ ಪಾಠವನ್ನು ಮಾಡುತ್ತಾರೆ. ಹೀಗೆ ಕೊನೆಯ ಉಸಿರಿರುವವರೆಗೂ ಅವರು ಸಂಸ್ಕೃತದ ಬಗ್ಗೆ ಅಭಿಮಾನವನ್ನೂ ಪ್ರೀತಿಯನ್ನೂ ತೋರಿಸುತ್ತಾರೆ.

 ಖ್ಯಾತ ವಿಜ್ಞಾನಿ, ಭಾರತರತ್ನ ಸರ್‌ ಸಿ.ವಿ.ರಾಮನ್‌ರವರು “ಭಾರತದಲ್ಲಿ ಹುಟ್ಟಿದ ಎಲ್ಲರೂ ಸಂಸ್ಕೃತದಲ್ಲಿ ಓದಲು ಬರೆಯಲು ಮಾತನಾಡಲು ಸಮರ್ಥರಾಗಬೇಕು. ಸಂಸ್ಕೃತ ಜೀವಿಸಿರದ ಭಾಷೆ ಎಂದು ಹೇಳುವುದು ಶುದ್ಧ ತಪ್ಪು. ಅದು ಜೀವಂತ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ, ಇಂದು ಎಲ್ಲ ಕಡೆಯೂ ಇಂಗ್ಲೀಷಿನ ಬಳಕೆಯಿದೆ. ಅದನ್ನು ಬಿಡುವ ದಿನ ಎಂದು ಬಂದೀತೋ ನಾ ಕಾಣೆ. ಅದನ್ನು ಬಿಟ್ಟ ಪಕ್ಷದಲ್ಲಿ ಅದರ ಸ್ಥಾನದಲ್ಲಿ ಇರುವ ಯೋಗ್ಯತೆಯನ್ನು ಹೊಂದಿರುವ ಭಾಷೆಯೆಂದರೆ ಸಂಸ್ಕೃತವೊಂದೇ. ಸಂಸ್ಕೃತಭಾಷೆಯ ಪ್ರಭಾವವಿಲ್ಲದವರಿಲ್ಲ. ಆದ್ದರಿಂದ ಶಿಕ್ಷಣದಲ್ಲಿ ಇದರ ಕಲಿಕೆ ಕಡ್ಡಾಯವಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದರು. 

“ಪರದೇಶದ ಸಾಹಿತ್ಯದಿಂದ ನಾವು ಸ್ಫೂರ್ತಿಯನ್ನು ಪಡೆದಿದ್ದೇವೆ. ಇನ್ನು ಮುಂದೆಯೂ ಪಡೆಯಬೇಕು. ಆದರೆ, ವೇದ ಉಪನಿಷತ್ತುಗಳ ಕಾಲದಿಂದ ನಮ್ಮಲ್ಲೆ ಬೆಳೆದ ಸಂಸ್ಕೃತಸಾಹಿತ್ಯದಲ್ಲಿ ನಮ್ಮ ಜನಾಂಗದ ಜೀವನಾಡಿಯು ಮಿಡಿಯುತ್ತಿದೆ. ನಮ್ಮ ರಾಮಾಯಣ, ಮಹಾಭಾರತಗಳಂಥ ಕಾವ್ಯಗಳನ್ನು ನೋಡಿದರೆ ಅದಕ್ಕಿಂತ ಮಹತ್ವವುಳ್ಳ ಕಥೆಗಳನ್ನು ಮತ್ತೆ ಯಾರೂ ಕಟ್ಟಿಲ್ಲ ವೆನಿಸುತ್ತದೆ. ಪಾಶ್ಚಾತ್ಯರಿಗೆ ಪುರಾತನ ಗ್ರೀಕ್‌ ಸಾಹಿತ್ಯವು ಹೇಗೋ ನಮಗೆ ನಮ್ಮ ಪುರಾಣ ಇತಿಹಾಸಗಳೂ ಹಾಗೆಯೇ. ಆ ಕಥೆಗಳು ಸಾವಿರಾರು ವರ್ಷಗಳ ಕಾಲ ನಮ್ಮ ಜನಾಂಗದ ಪ್ರತಿಭೆಯಲ್ಲೆ ನೆನೆದು ಅನುಪಮವಾದ ಸಂಪತ್ತನ್ನೂ ಭಾವ ಸಂಪತ್ತನ್ನೂ ಗಳಿಸಿಕೊಂಡಿವೆ. ಆದ್ದರಿಂದಲೇ ಅವು ನಮ್ಮ ಜೀವನದಲ್ಲಿ ಬೇರ್ಪಡಿಸಲಾರದಂತೆ ಬೆರೆತು ಇಂದಿಗೂ ಜನಜೀವನವನ್ನು ರೂಪುಗೊಳಿಸುತ್ತದೆ. ಈ ಸಾಹಿತ್ಯ ನಿಧಿಯನ್ನು ನಾವು ಮರೆಯಲಾಗದು’ ಎನ್ನುತ್ತಾರೆ ಕನ್ನಡದ ಖ್ಯಾತ ಬರಹಗಾರರಾಗಿದ್ದ ಎ.ಎನ್‌.ಮೂರ್ತಿರಾಯರು.  

ಜಿ.ಪಿ.ರಾಜರತ್ನಂ ಅವರು ಸಂಸ್ಕೃತಕ್ಕೆ ತಮ್ಮ ಅಭಿಮಾನವನ್ನು ಹೀಗೆ ತೋರಿಸುತ್ತಾರೆ - “ವಾಲ್ಮೀಕಿ ಮಹರ್ಷಿಯ ಶ್ರೀಮದ್‌ರಾಮಾಯಣವು ಮೂಲತಃ ಯಾವ ಭಾಷೆಯಲ್ಲಿ ರಚನೆ ಯಾಯಿತೋ ಆ ಭಾಷೆಗೆ ಸಂಸ್ಕೃತವೆಂದು ಹೆಸರು. ಬೆಟ್ಟಗಳು, ನದಿಗಳು ಇರುವವರೆಗೆ ವಾಲ್ಮೀಕಿಯ ರಾಮಕಥೆಯು ಇರುವುದೆಂದು ಬ್ರಹ್ಮನ ಆದೇಶವಾದರೆ, ವಾಲ್ಮೀಕಿಯ ರಾಮಕಥೆ ಇರುವವರೆಗೆ ಸಂಸ್ಕೃತವು ಇರುವುದೆಂಬುದು ಶತಸ್ಸಿದ್ದ. ಎಲ್ಲಿಯವರೆಗೆ ಈ ದೇಶದಲ್ಲಿ ಧರ್ಮವಿರುತ್ತದೋ ಅಲ್ಲಿಯವರೆಗೆ ಸಂಸ್ಕೃತ ಇದ್ದೇ ಇರುತ್ತದೆ’
“ಜಗತ್ತಿನಲ್ಲಿ ಸಂಸ್ಕೃತ ಭಾಷೆಯೊಂದೇ ವೈಜ್ಞಾನಿಕ ಆಧಾರವು
ಳ್ಳದ್ದು ಇನ್ಯಾವುದೇ ಭಾಷೆಗೆ ಈ ಯೋಗ್ಯತೆ ಇಲ್ಲ. ಸಂಸ್ಕೃತದಿಂದ ನಮಗೆ ಲಭಿಸುವ ಜ್ಞಾನವು ಅತ್ಯಧಿಕ ತಾರ್ಕಿಕವುಳ್ಳದ್ದಾಗಿದೆ. ಈ ತಾರ್ಕಿಕ ಆಧಾರವು ಕೇವಲ ಆಧ್ಯಾತ್ಮಿಕ ಉದ್ದೇಶಕ್ಕಾಗಿಯೇ ಅಲ್ಲ ವೈಜ್ಞಾನಿಕ ಚಿಂತನೆಗಾಗಿಯೂ ಆಗಿದೆ’ ಎನ್ನುತ್ತಾರೆ ಖ್ಯಾತ ಅಣುವಿಜ್ಞಾನಿ ಡಾ. ರಾಜಾರಾಮಣ್ಣ. 

ಅದೇ ನಮ್ಮ ದೇಶದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಸಂಸ್ಕೃತವನ್ನು ಕುರಿತು ಹೀಗೆ ಹೇಳುತ್ತಾರೆ - “ಭಾರತೀಯ ಸಂಸ್ಕೃತಿಯ ಚಿರಜ್ಞಾನವು ತುಂಬಿರುವ ಭಾಷೆ ಸಂಸ್ಕೃತ. ಅದನ್ನು ಓದದೆಯೇ ಯಾವೊಬ್ಬನೂ ಕೂಡ ಪೂರ್ಣ ವಿದ್ವಾಂಸ ಹಾಗೂ  ಭಾರತೀಯನಾಗಲಾರ. ಸಂಸೃತವು ದೇವಭಾಷೆ. ಆದ್ದರಿಂದ ಇದರ ಅಧ್ಯಯನ ಮತ್ತು ಸ್ವಾಧ್ಯಾಯದಿಂದ ಮನುಷ್ಯನು ತನ್ನಲ್ಲಿ ದೇವರಿಗೆ ಸಮವಾದ ಗುಣಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.’ ಭಾರತದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂರವರು “ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತದ 
ಸ್ಥಾನವು ಅತ್ಯುನ್ನತವಾದದ್ದು. ಇಂದು ಹೆಚ್ಚು ಜನರು ಸಂಸ್ಕೃತವನ್ನು ಓದಬೇಕೆಂದು ನಾನು ಬಯಸುತ್ತೇನೆ. 

ಸಂಸ್ಕೃತವು ನಮ್ಮ ದೇಶದ ಏಕತೆಯನ್ನು ಹೆಚ್ಚಿಸಿದೆ  ಮತ್ತು ಅದರಿಂದ ನಮ್ಮ ಎಲ್ಲ ಭಾಷೆಗಳಿಗೆ ಶಕ್ತಿಯು ಸಿಕ್ಕುತ್ತದೆ’ ಎಂದಿದ್ದಾರೆ. “ಸಂಸ್ಕೃತ ಮತ್ತು ಅದರ ಶಾಸ್ತ್ರಗಳು ಪ್ರಾಚೀನ ಭಾರತೀಯರು ಸಂಪಾದನೆ ಮಾಡಿಟ್ಟು ಹೋಗಿರುವ ಆಸ್ತಿ. ನಾವು ಅದನ್ನು ಎಂದು ಕಳೆದುಕೊಂಡು, ಅದಕ್ಕೂ ಈಗಾಗಲೇ ಆರಂಭವಾಗಿರುವಂತೆ ಭವತಿ ಭಿಕ್ಷಾಂ ದೇಹಿ ಎಂದು ಪಾಶ್ಚಾತ್ಯರ ಬಾಗಿಲಿಗೆ ಹೋಗಿ ನಿಲ್ಲುವೆವೋ ಅಲ್ಲಿಗೆ ನಮ್ಮ ಅಧಃಪತನವು ಪೂರ್ಣವಾಗುವುದು. ಸಂಸ್ಕೃತ ವ್ಯಾಸಂಗವು ಕಡಿಮೆಯಾಗುವುದೆಂದರೆ ಎಳೆಯ ಶಿಶುವಿಗೆ ತಾಯಿಯ ಹಾಲು ಕಡಿಮೆಯಾದ ಹಾಗೆ’ ಎಂಬುದು ಕನ್ನಡದ ಖ್ಯಾತ ಲೇಖಕ ಎ.ಆರ್‌.ಕೃಷ್ಣಶಾಸ್ತ್ರಿಯವರ ಅಭಿಪ್ರಾಯವಾಗಿತ್ತು. 

ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು “ಸಂಸ್ಕೃತ ಬಲ್ಲವನೇ ಸುಸಂಸ್ಕೃತ ಎನ್ನುವಷ್ಟರ ಮಟ್ಟಿಗೆ ಆ ಭಾಷೆಯಲ್ಲಿ ಜ್ಞಾನನಿಧಿ ಅಡಗಿದೆ.’ ಎಂದಿದ್ದಾರೆ. ವೇದ ಕಾಲದಿಂದಾರಂಭಿಸಿ ಇಂದಿನ ತನಕ ಅನುಪಮವಾದ ಸಾಹಿತ್ಯರಾಶಿಯನ್ನು ತಿಳಿಯಬೇಕಾದರೆ ನಮಗೆ ಸಂಸ್ಕೃತ ಅನಿವಾರ್ಯ. ಇದು ಸಂಸ್ಕೃತ ಸರಸ್ವತಿ, ಪ್ರವಾಹರೂಪದಲ್ಲಿ ಇದರ ಕಾವ್ಯಧಾರೆ ಹರಿದಿದೆ. ಇದು ವೈಜ್ಞಾನಿಕವಾದ ಭಾಷೆ, ಇದರಲ್ಲಿ ಅಡಗಿರುವ ತಥ್ಯಾಂಶಗಳನ್ನು ಅರಿಯಬೇಕಾದರೆ ಈ ಭಾಷೆಯನ್ನು ಓದಬೇಕು.

ನಮ್ಮ ದೇಶದ ಅಮೂಲ್ಯವಾದ ಸಂಪತ್ತು ಸಂಸ್ಕೃತ. ನಮ್ಮ ದೇಶದ ವೈಶಿಷ್ಟ್ಯವನ್ನು ಪ್ರಪಂಚಕ್ಕೆ ಸಾರುವ ಭಾಷೆ ಸಂಸ್ಕೃತ. ಇಂದು ಹೆಚ್ಚಿನ ದೇಶಗಳಲ್ಲಿ ಪ್ರಾಮುಖ್ಯವನ್ನು ಪಡೆಯುತ್ತಿರುವ ಭಾರತೀಯ ಪರಂಪರೆಯ ಹೆಮ್ಮೆಗಳಾದ ಯೋಗ, ಆಯುರ್ವೇದ, ಸಂಗೀತ, ಇನ್ನಿತರೆ ಕಲಾಪ್ರಕಾರಗಳು ಇವೆಲ್ಲವೂ ಹೊರಹೊಮ್ಮಿದ್ದು ಸಂಸ್ಕೃತದಿಂದಲೇ. ಇಂತಹ ವಿಷಯಗಳ ಪರಿಪೂರ್ಣ ಮಾಹಿತಿಯನ್ನೂ, ತಲಸ್ಪರ್ಶಿ ಜ್ಞಾನವನ್ನೂ ಪಡೆಯಬೇಕಾದರೆ ಈ ಭಾಷೆಯ ಅಧ್ಯಯನ ಅನಿವಾರ್ಯ.

ವಿಶ್ವಾದ್ಯಂತ ಇಂದು ನಮ್ಮ ಸಂಸ್ಕೃತಿಗೆ ದೊರೆಯುತ್ತಿರುವ ಗೌರವವನ್ನು ಗಮನಿಸಿದಾಗ ನಮಗೆ ಹೆಮ್ಮೆಯೆನಿಸುತ್ತದೆ. ಇದೇ ಗೌರವವನ್ನು ಮುಂದೆಯೂ ನಿರಂತರವಾಗಿ ಉಳಿಸಿಕೊಂಡು ಹೋಗಬೇಕಾದರೆ ಅದರ ಬಗ್ಗೆ ನಿರಂತರ ಅಧ್ಯಯನಗಳು ನಡೆಯಬೇಕು. ಭಾರತೀಯ ಇತಿಹಾಸದ ಪುಟ ತೆರೆದರೆ ನಮಗೆ ಆಗಾಗ ಅಲ್ಲಲ್ಲಿ ಸಂಸ್ಕೃತದ ಹ್ರಾಸವಾದಂತೆ ಕಂಡು ಬಂದರೂ ಅದು ತನ್ನ ಆತ್ಮಶಕ್ತಿಯಿಂದ ಪುನಃ ಪುಟಿದೆದ್ದು ತನ್ನ ತನವನ್ನೂ, ಅಂತಃಸತ್ವವನ್ನೂ ಪ್ರದರ್ಶಿಸಿದೆ.

ಪರರ ಆಕ್ರಮಣ, ವರ್ಗವೈಷಮ್ಯ, ಸಂಸ್ಕೃತಿಯ ಮೇಲಿನ ದಾಳಿ, ಪ್ರಾಂತೀಯ ಭಾಷಾ ವೈಭವವೇ ಮುಂತಾದ ಕಾರಣಗಳಿಂದ ಕೆಲಕಾಲ ಸಂಸ್ಕೃತವು ಜನಮಾನಸದಿಂದ ದೂರ ಉಳಿದ ದ್ದುಂಟು, ಆದರೆ ಕಣ್ಮರೆಯಾಗಿಲ್ಲ. ಮತ್ತೆ ಮತ್ತೆ ಆತ್ಮಸ್ಥೆ ರ್ಯದಿಂದ ಮೇಲೆದ್ದು ತಾನು ಅವಿನಾಶಿ ಎಂಬುದನ್ನು ತೋರಿಸಿಕೊಟ್ಟಿದೆ.

ನಮ್ಮ ಜೀವನದಲ್ಲಿ ಒಂದೊಂದು ಸಂದರ್ಭದಲ್ಲೂ ಸಂಸ್ಕೃತ ಹಾಸು ಹೊಕ್ಕಾಗಿದೆ. ಆಚಾರ-ವಿಚಾರಗಳು, ಚಿಂತನ ಮಂಥನ ಗಳು, ಕೊನೆಗೆ ನಮ್ಮೆಲ್ಲರ ಹೆಸರುಗಳಲ್ಲಿಯೂ ಸಂಸ್ಕೃತವೇ ತುಂಬಿದೆ.  ಭಾರತೀಯ ಮಹೋನ್ನತ ಪರಂಪರೆಯ ಜ್ಞಾನ ಶಾಖೆಗಳಾದ ಶಾಸ್ತ್ರಗಳ ಪೀಠಿಕೆ ಈ ಭಾಷೆಯಿಂದಲೇ ಆರಂಭ. ಜ್ಯೋತಿಷ್ಯ, ಸಾಂಖ್ಯ, ಶಿಕ್ಷಾ ಇತ್ಯಾದಿ ಎಲ್ಲವುಗಳ ಅಧ್ಯಯನ ಸಂಸ್ಕೃತದಿಂದಲೇ ಪ್ರಾರಂಭ. ಹೀಗೆ ಮಹೋನ್ನತವಾದ ಜೀವನ ಶೈಲಿಯೊಂದರ ಮೂಲ ಸಂಸ್ಕೃತ. ಈ ಭಾಷೆಯಿಲ್ಲದಿದ್ದರೆ ಭಾರತ ವನ್ನು ಊಹಿಸಲೂ ಆಗದು. ನಾವೆಲ್ಲ ಈ ಭಾರತದ ಸಂಜಾತರೇ ಆಗಿರುವ ಕಾರಣ ನಮಗೆ ಸಂಸ್ಕೃತ ಅನಿವಾರ್ಯ ವಾಗಬೇಕು. ಇಂದು ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಯೋಗಾ ಯುರ್ವೇದಾದಿಗಳನ್ನು ಇತರ ದೇಶದ ಬಂಧುಗಳಿಗೆ ಸಮರ್ಥ ವಾಗಿ ನಾವು ವಿತರಿಸಬೇಕಾದರೆ ನಾವು ಸಂಸ್ಕೃತ ಕಲಿತಿರಬೇಕು.

ಡಾ. ಗಣಪತಿ ಹೆಗಡೆ
ಸಂಸ್ಕೃತ ಉಪನ್ಯಾಸಕರು

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.