ಕಿರಿಯರ ಪರಾಕ್ರಮ, ಭಾರತೀಯ ಕ್ರಿಕೆಟ್‌ಗಿದೆ ಉಜ್ವಲ ಭವಿಷ್ಯ


Team Udayavani, Feb 5, 2018, 8:55 AM IST

cricket.jpg

ಭಾರತದ ಎಳೆಯರು ಅಂಡರ್‌ 19 ವಿಶ್ವಕಪ್‌ ಟ್ರೋಫಿಯನ್ನು ದಾಖಲೆಯ ನಾಲ್ಕನೇ ಬಾರಿ ಗೆದ್ದ ಮೇಲೆ ತಂಡದ ಅಜೇಯ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಯುವ ಪ್ರತಿಭೆಗಳು ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದು, ದೇಶದ ಕ್ರಿಕೆಟಿಗೆ ಉಜ್ವಲ ಭವಿಷ್ಯ ಗೋಚರಿಸುತ್ತಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಈ ಎಳೆಯರು ಖಂಡಿತವಾಗಿ ದೊಡ್ಡ ಸದ್ದು ಮಾಡುತ್ತಾರೆ ಎಂಬ ಅರಿವಿದ್ದೇ ತರಬೇತುದಾರ ರಾಹುಲ್‌ ದ್ರಾವಿಡ್‌, “ಐಪಿಎಲ್‌ ಹರಾಜು ಪ್ರತಿವರ್ಷ ಇರುತ್ತೆ. ಆದರೆ, ವಿಶ್ವಕಪ್‌ ಗೆಲ್ಲುವಂಥ ಉಜ್ವಲ ಅವಕಾಶ ಸಿಗುವುದು ವಿರಳ’ ಎಂದು ಕಿವಿಮಾತು ಹೇಳಿದರು. ಎಲ್ಲ ಆಟಗಾರರೂ ತಮ್ಮ ಮೊಬೈಲ್‌ಗ‌ಳನ್ನು ಸ್ವಿಚ್‌ ಆಫ್ ಮಾಡಿ, ಆಟದ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಿದ್ದರು. ಅದರ ಫ‌ಲ ಈಗ ಕಣ್ಣ ಮುಂದಿದೆ.

ಈ ಸಲದ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯವನ್ನು ಭರ್ತಿ 100 ರನ್ನುಗಳಿಂದ ಬಗ್ಗುಬಡಿದು ಆತ್ಮವಿಶ್ವಾಸ ವೃದ್ಧಿಸಿಕೊಂಡ ಪೃಥ್ವಿ ಶಾ ಬಳಗ ಎಲ್ಲ ಪಂದ್ಯಗಳನ್ನು ಗೆಲ್ಲುತ್ತಲೇ ಮುನ್ನಡೆಯಿತು. ಪಪುವಾ ನ್ಯೂಗಿನಿ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯಗಳನ್ನು ಏಕಪಕ್ಷೀಯವಾಗಿ 10 ವಿಕೆಟ್‌ಗಳಿಂದ ಗೆದ್ದರೆ, ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 131 ರನ್ನು ಗಳಿಂದ ಮಣಿಸಿತು. ಸೆಮಿಫೈನಲ್‌ನಲ್ಲಿ ಮುಖಾಮುಖೀಯಾದ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು 203 ರನ್ನುಗಳ ಭಾರೀ ಅಂತರದಿಂದ ಬಗ್ಗುಬಡಿದ ಪರಿ ಅದ್ಭುತ. ಫೈನಲ್‌ನಲ್ಲಿ ಮತ್ತೆ ಕಾಂಗರೂ ವಿರುದ್ಧ 8 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಂಪಾದಿಸಿ ಟ್ರೋಫಿಗೆ ಮುತ್ತಿಕ್ಕಿತು.

ಟೂರ್ನಿಯುದ್ದಕ್ಕೂ ಅತ್ಯುದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಶುಭಮನ್‌ ಗಿಲ್‌ ಒಂದು ಶತಕ, ನಾಲ್ಕು ಅರ್ಧ ಶತಕಗಳೊಂದಿಗೆ 372 ರನ್‌ ಸಂಪಾದಿ ಸಿದರು. ವಯಸ್ಸಿನ ದಾಖಲೆಯ ಪರೀಕ್ಷೆಯಲ್ಲಿ ಗೆದ್ದು ಆಡಿದ ಮನ್‌ಜೋತ್‌ ಕಾಲಾÅ ಫೈನಲ್‌ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದರು. ನಾಯಕನ ಆಟವಾಡಿ ಟೂರ್ನಿಯಲ್ಲಿ 261 ರನ್‌ ಸಂಪಾದಿಸಿದ ಪೃಥ್ವಿ 
ಶಾ, ಆರು ಪಂದ್ಯಗಳಿಂದ 16 ವಿಕೆಟ್‌ ಬೇಟೆಯಾಡಿದ ಅನುಕೂಲ್‌ ರಾಯ್‌, 145 ಕಿ.ಮೀ. ವೇಗದಲ್ಲಿ ಬೆಂಕಿ ಚೆಂಡುಗಳನ್ನೆಸೆದ ಕಮಲೇಶ್‌ ನಾಗರಕೋಟಿ ಹಾಗೂ ಶಿವಂ ಮಾವಿ – ಇಶಾನ್‌ ಪೋರೆಲ್‌ ಸ್ಪಿನ್‌ ಮೋಡಿಗೆ ಜಗತ್ತೇ ನಿಬ್ಬೆರಗಾಯಿತು. ವಿದೇಶಿ ಪಿಚ್‌ಗಳಲ್ಲಿ ಆಡುವುದು ಭಾರತೀಯರಿಗೆ ತುಸು ಕಷ್ಟವೇ. ಇಂಥ‌ ಸನ್ನಿವೇಶದಲ್ಲಿ ಎರಡು ವಾರ ಮೊದಲೇ ನ್ಯೂಜಿಲ್ಯಾಂಡ್‌ಗೆ ತೆರಳಿ, ಮೂರು ಅಭ್ಯಾಸ ಪಂದ್ಯಗಳನ್ನಾಡಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಜತೆಗೆ ಸತತ ಪರಿಶ್ರಮದಿಂದ ದ್ರಾವಿಡ್‌ ಪಡೆ ಮಾಡಿದ ಸಾಧನೆ ಉಲ್ಲೇಖನೀಯ.

ಭಾರತದ ಗೆಲುವಿನ ಬಹುಪಾಲು ಶ್ರೇಯ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಸಲ್ಲುತ್ತದೆ. ಅದಕ್ಕಾಗಿಯೇ ಬಹುಮಾನ ಮೊತ್ತದ ಸಿಂಹ ಪಾಲು ಅವರಿಗೆ ಅರ್ಹವಾಗಿಯೇ ಸಂದಿದೆ. ಫೀಲ್ಡಿಂಗ್‌ ಕೋಚ್‌ ಅಭಯ ಶರ್ಮಾ ಹಾಗೂ ಬೌಲಿಂಗ್‌ ಕೋಚ್‌ ಪರಾಸ್‌ ಮ್ಹಾಂಬ್ರೆ ಕೊಡುಗೆಯೂ ದೊಡ್ಡದೇ. ಈ ಗೆಲುವನ್ನು ‘ಗೋಡೆ’ ಬಣ್ಣಿಸಿದ್ದು ಹೀಗೆ: “ಇದು ಕ್ರಿಕೆಟಿಗರ ಕೊನೆಯ ಸಾಧನೆ ಅಲ್ಲ. ಸುದೀರ್ಘ‌ ಕಾಲ ನೆನಪಲ್ಲಿ ಉಳಿಯುವ ಸ್ಮರಣೀಯ ಸಾಧನೆ. ಈ ತಂಡ ಪ್ರತಿಭಾನ್ವಿತರ ಗೊಂಚಲು. ಭವಿಷ್ಯದಲ್ಲಿ ಇದಕ್ಕಿಂತ ಮಿಗಿಲಾದ ಸಾಧನೆಗಳನ್ನು ಅವರು ಮಾಡಲಿದ್ದಾರೆ. ಭಾರತದ ವಿಶ್ವಕಪ್‌ ಗೆಲುವಿನಲ್ಲಿ ಕ್ರಿಕೆಟಿಗರ ಸಾಂ ಕ ಪರಿಶ್ರಮ ಎದ್ದು ಕಾಣುತ್ತದೆ. ಯಶಸ್ಸಿಗಾಗಿ ಸಹಾಯಕ ಸಿಬಂದಿಯೂ ಶಕ್ತಿಮೀರಿ ಶ್ರಮಿಸಿದ್ದಾರೆ.’

ಕಿರಿಯರ ಸಾಧನೆಗೆ ಸ್ಫೂರ್ತಿಯಾದ ದ್ರಾವಿಡ್‌ ಹಿರಿಯರ ತಂಡದ ತರಬೇತುದಾರ ಆಗಬೇಕೆಂಬ ಆಗ್ರಹ ಈಗ ವ್ಯಕ್ತವಾಗುತ್ತಿದೆ. ಆದರೆ, ಕಠಿನ ಪರಿಶ್ರಮ ಒಲ್ಲದ, ವಿದೇಶಿ ಟೂರ್ನಿಗಳೆಂದರೆ ಪತ್ನಿ- ಪ್ರೇಯಸಿಯೊಂದಿಗೆ ಸುತ್ತಾಡುತ್ತ ಶಾಪಿಂಗ್‌ ಮಾಡುವ ಅವಕಾಶಗಳೆಂದು ನಂಬಿರುವ ಹಾಗೂ ತಾವು ಕಲಿಯುವುದೇನೂ ಉಳಿದಿಲ್ಲ ಎಂಬ ಭ್ರಮೆಯಲ್ಲಿರುವ ಸ್ಟಾರ್‌ ಆಟಗಾರರು ತಾಳ್ಮೆಯ ಮೂರ್ತಿಯೇ ಆಗಿರುವ ದ್ರಾವಿಡ್‌ ಮಾತು ಕೇಳುವರೇ? ಆಟಗಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆನ್ನುವ ಕಾರಣಕ್ಕೇ ಅಲ್ಲವೇ ರವಿಶಾಸಿŒಗೆ ಮಣೆ ಹಾಕಿದ್ದು?

ಐಪಿಎಲ್‌ನ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದ ರಹಾನೆ, ಜಡೇಜಾ ಮೊದಲಾದವರೀಗ ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿದ್ದಾರೆ. ಕಿರಿಯರ ತಂಡಕ್ಕೆ ತರಬೇತಿ ನೀಡುವುದು ದ್ರಾವಿಡ್‌ ಆಯ್ಕೆ. ಪ್ರತಿಭೆಗಳನ್ನು ಗುರುತಿಸಿ, ಅವಕಾಶ ನೀಡಿ, ಶುದ್ಧ ಹಾಗೂ ಶಿಸ್ತುಬದ್ಧ ಕ್ರಿಕೆಟ್‌ ಆಡುವಂತೆ ಪ್ರೇರೇಪಿಸುವ ಅವರು, ಸೋತಾಗ ಸಿಡಿಮಿಡಿಗೊಳ್ಳದೆ ಯಶಸ್ಸಿನ ಪಾಠ ಹೇಳಿಕೊಡು ತ್ತಾರೆ. ಪ್ರಶಂಸೆಯ ಸುರಿಮಳೆಯೇ ಆಗುತ್ತಿದ್ದರೂ ಅವುಗಳನ್ನೂ ಸಮಚಿತ್ತ ದಿಂದಲೇ ಸ್ವೀಕರಿಸುವ ದ್ರಾವಿಡ್‌ ಯುವ ಕ್ರಿಕೆಟಿಗರಿಗೆ ಪರಮಗುರು. ಅವರ ಗರಡಿಯಲ್ಲಿ ವಿಶ್ವ ದರ್ಜೆಯ ಕ್ರಿಕೆಟಿಗರು ಮೂಡಿ ಬರುತ್ತಾರೆಂದು ವಿಶ್ವಾಸದಿಂದ ಹೇಳಬಹುದು.

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.