Udayavni Special

ಭಾರತದ ಹೆಮ್ಮೆ ಹಿಮಾ ದಾಸ್‌ ಮೂಡಿಬರಲಿ ಇನ್ನಷ್ಟು ಪ್ರತಿಭೆ


Team Udayavani, Jul 16, 2018, 8:59 AM IST

hima.jpg

ಫಿನ್‌ಲಾÂಂಡ್‌ನ‌ಲ್ಲಿ ಜರಗಿದ 20ರ ಕೆಳಹರೆಯದವರ ಐಎಎಫ್ ಜಾಗತಿಕ ಕ್ರೀಡಾಕೂಟದ 400 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಅಸ್ಸಾಮಿನ ಹುಡುಗಿ ಹಿಮಾ ದಾಸ್‌ ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧರಾಗಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಕೂಟದ ಓಟದ ಸ್ಪರ್ಧೆಗಳಲ್ಲಿ ಭಾರತದ ಮಹಿಳೆಯರು ಪ್ರಶಸ್ತಿ ಗೆದ್ದಿರುವುದು ಇದೇ ಮೊದಲು. ಹೀಗಾಗಿ ಹಿಮಾ ದಾಸ್‌ ಗೆದ್ದಿರುವ ಚಿನ್ನದ ಪದಕದ ತೂಕ ಇನ್ನೂ ಹೆಚ್ಚಾಗಿದೆ. ಇಡೀ ದೇಶ ಹೆಮ್ಮೆ ಪಡುವಂತಹ ಸಾಧನೆಯನ್ನು ಈ ಹಳ್ಳಿಗಾಡಿನ ಹುಡುಗಿ ಮಾಡಿದ್ದಾರೆ. ಪಿ.ಟಿ. ಉಷಾ ಹಾಗೂ ಇತರ ಕೆಲವು ಮಂದಿ ಕ್ರೀಡಾಪಟುಗಳು ಏಷ್ಯನ್‌ ಗೇಮ್ಸ್‌ನಂಥ ಕ್ರೀಡಾಕೂಟಗಳಲ್ಲಿ ಪಾರಮ್ಯ ಸಾಧಿಸಿದ ದಿನಗಳಿದ್ದವು. ಆದರೆ ಈ ಒಂದು ತಲೆಮಾರಿನ ಓಟ ಮುಗಿದ ಬಳಿಕ ಭಾರತೀಯ ಅಥ್ಲೆಟಿಕ್‌ ಕಳಾಹೀನವಾಗಿತ್ತು. ಹಿಮಾ ದಾಸ್‌ ಸಾಧನೆ ಮತ್ತೂಮ್ಮೆ ದೇಶದ ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿದೆ.

ಒಂದು ವರ್ಷದ ಹಿಂದೆಯಷ್ಟೇ 400 ರೇಸ್‌ ಅಭ್ಯಾಸ ಪ್ರಾರಂಭಿಸಿದ ಹಿಮಾ ಮೊದಲ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲೇ ಚಿನ್ನ ಗೆಲ್ಲುವ ಸಾಧನೆ ಮಾಡಿರುವುದು ಬೆರಗು ಮೂಡಿಸಿದೆ. ಆರಂಭದಲ್ಲಿ ಹಿಮಾ 100 ಮತ್ತು 200 ಮೀಟರ್‌ ರೇಸ್‌ಗಳಲ್ಲಿ ಭಾಗವಹಿಸು ತ್ತಿ ದ್ದರು. ಆದರೆ ನಿಧಾನಗತಿಯಿಂದ ಓಟ ಪ್ರಾರಂ ಭಿಸಿ ಅಂತಿಕ ಕ್ಷಣದಲ್ಲಿ ವೇಗ ಪಡೆದುಕೊಳ್ಳುವ ಓಟದ ಶೈಲಿ ಈ ರೇಸ್‌ಗಳಿಗಿಂತ ಹೆಚ್ಚು 400 ಮೀಟರ್‌ ರೇಸ್‌ಗೆ ಸರಿ ಹೊಂದುತ್ತದೆ. ಕೋಚ್‌ ಈ ಅಂಶವನ್ನು ಗುರುತಿಸಿ 400 ಮೀ. ರೇಸ್‌ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ ಪರಿಣಾಮವಾಗಿ ದೇಶ ಅಪರೂಪದ ಕ್ರೀಡಾ ಸಾಧಕಿಯನ್ನು ಕಾಣುವಂತಾಗಿದೆ. ಹಿಮಾ ಸಾಧನೆಯ ಹಿಂದೆ ಕೋಚ್‌ ಪಾತ್ರವನ್ನು ಮರೆಯುವಂತಿಲ್ಲ. ಉಳಿದವರು ಓಟದ ಅಂತಿಮ ಚರಣಕ್ಕೆ ಬಂದಾಗ ಬಳಲುವುದು ಸಾಮಾನ್ಯ. ಆದರೆ ಹಿಮಾ ದಾಸ್‌ ಅಂತಿಮ ಚರಣದಲ್ಲೇ ಚೈತನ್ಯ ಪಡೆದುಕೊಳ್ಳುತ್ತಾರೆ. ಇದು ಅಪರೂಪದ ಸಾಮರ್ಥ್ಯ.

ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾರ್‌, ಕುಸ್ತಿಯ ಕಲಿ ಸಾಕ್ಷಿ ಮಲಿಕ್‌, ಆರ್ಚರಿ ಸಾಧಕಿ ದೀಪಿಕಾ ಕುಮಾರಿ, ಸ್ಕ್ವಾಶ್‌ ಆಟ ಗಾರ್ತಿ ದೀಪಿಕಾ ಪಳ್ಳಿಕ್ಕಲ್‌, ಟೆನಿಸ್‌ ಆಟಗಾರ್ತಿ ಸಿಂಧು ಹೀಗೆ ಅಂತರಾಷ್ಟ್ರೀ ಮಟ್ಟದಲ್ಲಿ ದೇಶಕ್ಕೆ ಕೀತಿ ತಂದುಕೊಡುತ್ತಿರುವ ಕುವರಿಯರ ಸಂಖ್ಯೆ ಹೆಚ್ಚುತ್ತಿದೆ. ಹೆಣ್ಣು ಮಗು ಹೊರೆ ಎಂಬ ಪರಂಪರಾಗತ ನಂಬಿಕೆಯಿನ್ನೂ ಜೀವಂತವಾಗಿರುವಾಗಲೇ ಇದನ್ನು ಸುಳ್ಳು ಮಾಡಲೋ ಎಂಬಂತೆ ಹೆಣ್ಣು ಮಕ್ಕಳು ಕ್ರೀಡೆಯೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದು ನಿಜ ವಾದ ಮಹಿಳಾ ಸಬಲೀಕರಣದಂತೆ ಕಾಣುತ್ತಿದೆ. ಒಂದೆಡೆ ಹೆಣ್ಣು ಭ್ರೂಣಗಳ ಹತ್ಯೆ ತಡೆಯಲು ಬೇಟಿ ಬಚಾವೊ ಬೇಟಿ ಪಢಾವೋ ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದ್ದರೆ ಇನ್ನೊಂದೆಡೆ ಅದೇ ಹೆಣ್ಣು ಮಕ್ಕಳು ದೇಶದ ಕೀರ್ತಿ ಪತಾಕೆಯನ್ನು ಜಗದೆಲ್ಲೆಡೆ ಹಾರಿಸುತ್ತಿರುವುದು ಒಂದು ರೀತಿಯಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯ ವಿಡಂಬನೆಯಂತೆಯೂ ಕಾಣಿಸುತ್ತಿದೆ. 

ಚಿನ್ನದ ಪದಕ ಗೆದ್ದ ಬೆನ್ನಿಗೆ ಹಿಮಾ ದಾಸ್‌ಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ರಾಜ್ಯದ ಉಪಮುಖ್ಯಮಂತ್ರಿ ಡಾ| ಪರಮೇಶ್ವರ 10 ಲ. ರೂ. ಬಹುಮಾನ ಘೋಷಿಸಿದ್ದಾರೆ. ಇದೇ ರೀತಿ ಹಲವು ರಾಜ್ಯಗಳು ಬಹುಮಾನಗಳನ್ನು ಘೋಷಿಸಿವೆ. ಕೇಂದ್ರ ಸರಕಾರ 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದ ತನಕದ ಎಲ್ಲ ಖರ್ಚುವೆಚ್ಚವನ್ನು ಭರಿಸುವುದಾಗಿ ಹೇಳಿದೆ. ಆದರೆ ಇದೇ ವೇಳೆ ದೇಶದ ಹಳ್ಳಿಗಾಡುಗಳಲ್ಲಿ ಇರುವ ಅದೆಷ್ಟೋ ಹಿಮಾ ದಾಸ್‌ಗಳನ್ನು ಶೋಧಿಸುವ ಕೆಲಸವೂ ಆಗಬೇಕು. ಕ್ರೀಡಾ ಕ್ಷೇತ್ರದಲ್ಲಿ ನಮಗೆ ಗಮನಾರ್ಹವಾದ ಸಾಧನೆ ಮಾಡಲು ಸಾಧ್ಯವಾಗದಿರುವುದಕ್ಕೆ ಪ್ರೋತ್ಸಾಹ ಕೊರತೆಯೂ ಕಾರಣ ಎನ್ನುವುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ.

ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ ನೀಡಲೆಂದೇ ಭಾರತೀಯ ಕ್ರೀಡಾ ಪ್ರಾಧಿಕಾರ ಇದ್ದರೂ ಇಲ್ಲಿ ತರಬೇತಿ ಪಡೆದವರಿಗಿಂತ ಹಿಮಾ ದಾಸ್‌ ಅವರಂತೇ ಹಳ್ಳಿಗಾಡುಗಳಲ್ಲಿ ಆಡಿ-ಓಡಿ ಅಭ್ಯಾಸ ಮಾಡಿದವರೇ ಪದಕ ಗೆಲ್ಲುವ ಸಾಧನೆ ಮಾಡುತ್ತಿದ್ದಾರೆ ಎನ್ನುವುದು ಗಮನಾರ್ಹ ಅಂಶ. ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಲು ನಮ್ಮ ಕ್ರೀಡಾ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳುವ ಅಗತ್ಯವಿದೆ.

ಟಾಪ್ ನ್ಯೂಸ್

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

fcxgxdfrd

ರಾಜ್ಯಕ್ಕೆ ಬಂದ ಲೋಕಸಭೆ ಸಭಾಧ್ಯಕ್ಷರಿಗೆ ಅಗೌರವ ಸಲ್ಲ: ಹೆಚ್.ಡಿ.ಕುಮಾರಸ್ವಾಮಿ

bhjgutyi

ತರಾತುರಿಯಲ್ಲಿ ತಂಬಾಕು ಹರಾಜು ಪ್ರಕ್ರಿಯೆ | ಸಂಸದ ಪ್ರತಾಪ್ ಸಿಂಹಗೆ ರೈತರಿಂದ ಘೇರಾವ್

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಹಾರ ನಿರ್ಧಾರ ತಡವಾದರೂ ಉತ್ತಮವಾದ ಕ್ರಮ

ಪರಿಹಾರ ನಿರ್ಧಾರ ತಡವಾದರೂ ಉತ್ತಮವಾದ ಕ್ರಮ

ಭಯೋತ್ಪಾದನೆಯ ಮೂಲೋತ್ಪಾಟನೆಗೆ ಮೊಳಗೀತೇ ರಣಕಹಳೆ?

ಭಯೋತ್ಪಾದನೆಯ ಮೂಲೋತ್ಪಾಟನೆಗೆ ಮೊಳಗೀತೇ ರಣಕಹಳೆ?

ಸಾರ್ವಜನಿಕ ದೂರುಗಳ ವಿಲೇವಾರಿಯಲ್ಲಿ ಅಸಡ್ಡೆ ಬೇಡ 

ಸಾರ್ವಜನಿಕ ದೂರುಗಳ ವಿಲೇವಾರಿಯಲ್ಲಿ ಅಸಡ್ಡೆ ಬೇಡ 

Untitled-1

ಶಿಕ್ಷಕರ ವರ್ಗಾವಣೆ ವಿಘ್ನ ನಿವಾರಣೆಯಾಗಲಿ

ಹೈಕೋರ್ಟ್‌ ಆದೇಶದ ನೆಪದಲ್ಲಿ ಶುಲ್ಕಕ್ಕಾಗಿ ಕಿರುಕುಳ ಸಲ್ಲದು

ಹೈಕೋರ್ಟ್‌ ಆದೇಶದ ನೆಪದಲ್ಲಿ ಶುಲ್ಕಕ್ಕಾಗಿ ಕಿರುಕುಳ ಸಲ್ಲದು

MUST WATCH

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಹೊಸ ಸೇರ್ಪಡೆ

ಹುಣಸೂರಲ್ಲಿ ಸೆ.27ರ ಬಂದ್‌ಗೆ ಬೆಂಬಲಿಸುವಂತೆ ವಿವಿಧ ಸಂಘಟನೆಗಳ ಮನವಿ

ಹುಣಸೂರಲ್ಲಿ ಸೆ.27ರ ಬಂದ್‌ಗೆ ಬೆಂಬಲಿಸುವಂತೆ ವಿವಿಧ ಸಂಘಟನೆಗಳ ಮನವಿ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ಮಾರ್ಗನ್‌ಗೆ 24 ಲಕ್ಷ ರೂ. ದಂಡ

ಮಾರ್ಗನ್‌ಗೆ 24 ಲಕ್ಷ ರೂ. ದಂಡ

ಬಾಸ್ಕೆಟ್‌ಬಾಲ್‌ ಪಟು ಸತ್ನಾಮ್‌ ವೃತ್ತಿಪರ ಕುಸ್ತಿಗೆ ಹಾಜರ್‌!

ಬಾಸ್ಕೆಟ್‌ಬಾಲ್‌ ಪಟು ಸತ್ನಾಮ್‌ ವೃತ್ತಿಪರ ಕುಸ್ತಿಗೆ ಹಾಜರ್‌!

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.