ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ


Team Udayavani, May 18, 2022, 6:00 AM IST

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

ರಷ್ಯಾ-ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕವಾಗಿ ಸೃಷ್ಟಿಯಾಗಿರುವ ಆರ್ಥಿಕ ಅನಿಶ್ಚಿತತೆ, ಆರ್ಥಿಕ ದಿವಾಳಿಗೆ ಸಿಲುಕಿ ನಲುಗಿ ಹೋಗಿರುವ ನೆರೆ ರಾಷ್ಟ್ರಗಳಲ್ಲಿನ ರಾಜಕೀಯ ಅರಾಜಕತೆ ಮತ್ತು ನಿರಂತರವಾಗಿ ಕಾಡುತ್ತಿರುವ ಹವಾಮಾನ ವೈಪರೀತ್ಯಗಳ ಪರಿಣಾಮ ಭಾರತ ಹಣದುಬ್ಬರದ ನಾಗಾಲೋಟಕ್ಕೆ ಸಾಕ್ಷಿಯಾಗುತ್ತಿದೆ. ವಾರದ ಹಿಂದೆಯಷ್ಟೇ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ದೇಶದ ಚಿಲ್ಲರೆ ಹಣದುಬ್ಬರ ಎಪ್ರಿಲ್‌ ತಿಂಗಳಿನಲ್ಲಿ ಶೇ.7.79ರಷ್ಟಾಗಿದ್ದು ಇದು ಸರಿಸುಮಾರು 8 ವರ್ಷಗಳಲ್ಲಿಯೇ ಅತ್ಯಧಿಕವಾದುದಾಗಿದೆ. ಇದೀಗ ಮಂಗಳವಾರ ಬಿಡುಗಡೆಯಾದ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಪ್ರಮಾಣ ಎಪ್ರಿಲ್‌ ತಿಂಗಳಿನಲ್ಲಿ ಶೇ.15.08ರಷ್ಟು ದಾಖಲಾಗಿದ್ದು ತೀವ್ರ ಆತಂಕಕ್ಕೆಡೆ ಮಾಡಿದೆ.

ತೈಲೋತ್ಪನ್ನಗಳು, ಲೋಹಗಳು, ಕಚ್ಚಾತೈಲ, ನೈಸರ್ಗಿಕ ಇಂಧನ, ಆಹಾರ ಪದಾರ್ಥಗಳು, ಆಹಾರೇತರ ಉತ್ಪನ್ನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ#ನ್ನಗಳು ಸಹಿತ ಬಹುತೇಕ ಎಲ್ಲ ವಲಯಗಳಲ್ಲೂ ಸಗಟು ಹಣದುಬ್ಬರ ಏರುಗತಿಯಲ್ಲಿರುವುದು ಒಂದಿಷ್ಟು ಚಿಂತೆಗೀಡುಮಾಡಿದೆ. ಇನ್ನು ಉತ್ಪಾದನ ವಲಯವೂ ಕೂಡ ಹಣದುಬ್ಬರ ಹೆಚ್ಚಳದಿಂದ ಹೊರತಾಗಿಲ್ಲ.

ಚಿಲ್ಲರೆ ಹಣದುಬ್ಬರದ ಜತೆ ಜತೆಯಲ್ಲಿ ಸಗಟು ಹಣದುಬ್ಬರವೂ ಆಘಾತಕಾರಿ ಏರಿಕೆ ದಾಖಲಿಸಿರುವ ಹಿನ್ನೆಲೆಯಲ್ಲಿ ಆರ್‌ ಬಿಐನ ಹಣಕಾಸು ನೀತಿ ಸಮಿತಿ ಜೂನ್‌ನ ಸಭೆಯಲ್ಲಿ ಮತ್ತೆ ರೆಪೋ ದರವನ್ನು ಇನ್ನಷ್ಟು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ. ವಾರಗಳ ಹಿಂದೆಯಷ್ಟೇ ಆರ್‌ಬಿಐ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರೆಪೋ ದರವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿತ್ತು. ರೆಪೋ ದರ ಹೆಚ್ಚಳದಿಂದಾಗಿ ಸಾಲಗಳ ಮೇಲಿನ ಬಡ್ಡಿಯ ದರವನ್ನು ಬ್ಯಾಂಕ್‌ಗಳು ಈಗಾಗಲೇ ಹೆಚ್ಚಿಸಿದ್ದು ಇದು ಸಾಮಾನ್ಯ ಗ್ರಾಹಕನ ಮೇಲೆ ಮತ್ತೂಂದು ಹೊಡೆತವನ್ನು ನೀಡಿದೆ. ರೆಪೋ ದರ ಹೆಚ್ಚಳದಿಂದಾಗಿ ಹಣದ ಚಲಾವಣೆಗೆ ತಡೆ ಹಾಕಿದಂತಾಗಿ ತನ್ನಿಂತಾನೆ ಹಣದುಬ್ಬರ ಒಂದಿಷ್ಟು ನಿಯಂತ್ರಣಕ್ಕೆ ಬರುತ್ತದೆ. ಅದೇನಿದ್ದರೂ ದೀರ್ಘ‌ ಕಾಲೀನ ಪರಿಹಾರದ ಮಾತು. ರೂಪಾಯಿ ಅಪಮೌಲ್ಯಕ್ಕೆ ತಡೆ, ಕಚ್ಚಾತೈಲ ಬೆಲೆ ಏರುಗತಿಯಲ್ಲಿದ್ದರೂ ಆ ಹೊರೆಯನ್ನು ನೇರವಾಗಿ ಗ್ರಾಹಕರ ಹೆಗಲಿಗೆ ಹೊರಿಸದೆ ಈ ಹೆಚ್ಚುವರಿ ಹೊರೆಯನ್ನು ಸರಕಾರ, ತೈಲ ಕಂಪೆನಿ ಗಳು ಮತ್ತು ಗ್ರಾಹಕರಿಗೆ ಸಮಾನವಾಗಿ ವರ್ಗಾಯಿಸಿದ್ದಲ್ಲಿ ಈಗ ಸೃಷ್ಟಿ ಯಾಗಿರುವ ಹಣದುಬ್ಬರದ ಏರುಬ್ಬರಕ್ಕೆ ಕಡಿವಾಣ ಹಾಕಲು ಸಾಧ್ಯವಿತ್ತು. ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ತೈಲಬೆಲೆಗಳನ್ನು ಪರಿಷ್ಕರಿ ಸಲು ತೈಲ ಕಂಪೆನಿಗಳಿಗೆ ಅನುಮತಿ ನೀಡದಿದ್ದ ಸರಕಾರ ಫ‌ಲಿತಾಂಶ ಘೋಷಣೆಯಾದ ತತ್‌ಕ್ಷಣ ತೈಲ ಬೆಲೆ ಪರಿಷ್ಕರಣೆಗೆ ಅನುಮತಿ ನೀಡಿತ್ತು ಎಂಬುದನ್ನಿಲ್ಲಿ ಉಲ್ಲೇಖೀಸಲೇಬೇಕು. ತೈಲ ಬೆಲೆಗಳ ಮೇಲೆ ಸರಕಾರ ಹಿಡಿತ ಸಾಧಿಸಿದ್ದೇ ಆದಲ್ಲಿ ಸಹಜವಾಗಿಯೇ ಬೆಲೆ ಏರಿಕೆಯ ನಾಗಾಲೋಟಕ್ಕೆ ತಡೆ ಬೀಳಲಿದೆ. ತನ್ಮೂಲಕ ಆರ್ಥಿಕತೆಯೂ ಸ್ಥಿರಗೊಳ್ಳಲು ಸಾಧ್ಯ. ಈಗಾಗಲೇ ಮಳೆಗಾಲ ಆರಂಭವಾಗಿದ್ದು ಹಲವೆಡೆ ಹವಾಮಾನ ವೈಪರೀತ್ಯಗಳು ಬಾಧಿಸಲಾರಂಭಿಸಿವೆ. ಇದು ಜನರನ್ನು ಸಂಕಷ್ಟಕ್ಕೀಡು ಮಾಡಲಿದೆ. ಸರಕಾರ ಜನಸಾಮಾನ್ಯರನ್ನು ಬೆಲೆ ಏರಿಕೆ ಸಮಸ್ಯೆಯ ಸುಳಿಯಿಂದ ಮೇಲೆತ್ತದೇ ಇದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಈ ಬಗ್ಗೆ ಕೇಂದ್ರ ಹೆಚ್ಚಿನ ಗಮನಹರಿಸಿ ಜನಸಾಮಾನ್ಯರ ಹಿತಕ್ಕೆ ಧಕ್ಕೆಯಾಗದಂತೆ ಒಂದಿಷ್ಟು ಬಿಗು ನಿಲುವನ್ನು ತಾಳುವುದು ಅತ್ಯವಶ್ಯ.

ಟಾಪ್ ನ್ಯೂಸ್

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MANIPUR ARMY

Manipur ಗಲಭೆ: ವಿದೇಶಿ ಉಗ್ರರ ಕೈವಾಡ ಆತಂಕಕಾರಿ ಬೆಳವಣಿಗೆ

sammati sex

18+: ಸಮ್ಮತಿ ವಯಸ್ಸು ಇಳಿಕೆ ಮಾಡದಿರುವ ನಿಲುವು ಸ್ವಾಗತಾರ್ಹ

ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

drought

Karnataka: ಬರ ನಿರ್ವಹಣೆ: ಕೇಂದ್ರ, ರಾಜ್ಯ ಸರಕಾರಗಳು ಕಾರ್ಯೋನ್ಮುಖವಾಗಲಿ

supreme court

Supreme Court: ಸುಪ್ರೀಂ ಎಚ್ಚರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.