ಇದಕ್ಕಿಲ್ಲವೇ ಕೊನೆ?

Team Udayavani, Dec 23, 2017, 11:24 AM IST

ವಿಜಯಪುರ ನಗರದಲ್ಲಿ ಶಾಲಾ ಬಾಲಕಿಯನ್ನು ಹಾಡುಹಗಲೇ ಅಪಹರಿಸಿ ಅತ್ಯಾಚಾರವೆಸಗಿ ಕೊಂದು ಹಾಕಿರುವ ಘಟನೆ ಕಾನೂನಿಂದಷ್ಟೇ ಅತ್ಯಾಚಾರಗಳನ್ನು ತಡೆಗಟ್ಟಲು ಅಸಾಧ್ಯ ಎನ್ನುವುದನ್ನು ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಬೆಳಗ್ಗೆ ಸ್ನೇಹಿತೆಯ ಜತೆಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲೆಯನ್ನು ಆರೇಳು ಮಂದಿಯಿದ್ದ ದುರುಳರ ಗುಂಪೊಂದು ಅಪಹರಿಸಿ ಅತ್ಯಾಚಾರವೆಸಗಿದ ಬಳಿಕ ಉಸಿರುಕಟ್ಟಿಸಿ ಕೊಂದು ಹಾಕಿದೆ. ಯಥಾಪ್ರಕಾರ ನಾಡಿನಾದ್ಯಂತ ಈ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರೀಯ ಮಟ್ಟದಲ್ಲೂ ಈ ಘಟನೆ ಗಮನಸೆಳೆದಿದೆ.

ಮೊಂಬತ್ತಿ ಮೆರವಣಿಗೆ, ಮಾನವ ಸರಪಳಿ, ಧರಣಿ, ಮುಷ್ಕರ ನಡೆಯುತ್ತಿದೆ. ಸರಕಾರ ಒಂದಷ್ಟು ಲಕ್ಷ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತದೆ. ನಾಯಕರು ಘಟನೆ ಮಾನವೀಯತೆಗೆ ವಿರುದ್ಧವಾದುದು, ಕಠಿಣ ಶಿಕ್ಷೆ ನೀಡುತ್ತೇವೆ ಎಂಬಿತ್ಯಾದಿ ಮಾಮೂಲಿ ಹೇಳಿಕೆಗಳನ್ನು ಕೊಟ್ಟು ತಮ್ಮ ಕರ್ತವ್ಯ ಮುಗಿಸುತ್ತಾರೆ. ಎಲ್ಲವೂ ನಾಲ್ಕು ದಿನ ಮಾತ್ರ. ಘಟನೆ ಹಳತಾದಂತೆ ಈ ಪ್ರಕರಣವೂ ನೇಪಥ್ಯಕ್ಕೆ ಸರಿಯುತ್ತದೆ. ಮತ್ತೂಮ್ಮೆ ಎಚ್ಚರವಾಗಬೇಕಾದರೆ ಈ ಮಾದರಿಯ ಇನ್ನೊಂದು ಕೃತ್ಯ ನಡೆಯಬೇಕು. ಇದು ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಕ್ರಮ. ಹಾಗೊಂದು ವೇಳೆ ಕಾನೂನಿನಿಂದ ಅಥವ ಉಗ್ರ ಪ್ರತಿಭಟನೆಗಳಿಂದ ಅತ್ಯಾಚಾರಗಳನ್ನು ತಡೆಯಲು ಸಾಧ್ಯ ಎಂದಿದ್ದರೆ ಐದು ವರ್ಷದ ಹಿಂದೆ ಇಡೀ ದೇಶದ ಅಂತಃಕರಣವನ್ನೇ ಕಲಕಿದ ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರ ಕಡಿಮೆ ಆಗಬೇಕಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹೆಚ್ಚಾಗಿದೆ. ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ರೂಪಿಸಲಾಯಿತು. ಇದೇ ಮೊದಲ  ಬಾರಿಗೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ನಿಯಮವನ್ನು ಸೇರ್ಪಡೆಗೊಳಿಸಲಾಯಿತು. ಅತ್ಯಾಚಾರ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ ಹಲವು ಅಂಶಗಳನ್ನು ಅಂತರ್ಗತಗೊಳಿಸಿಕೊಳ್ಳಲಾಯಿತು. ಜತೆಗೆ ಸಂತ್ರಸ್ತ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ 1000 ಕೋ. ರೂ. ನಿಧಿಯ ನಿರ್ಭಯಾ ನಿಧಿಯನ್ನು ಸ್ಥಾಪಿಸಲಾಯಿತು. ಆದರೆ ಯಾವುದರಿಂದಲೂ ಸಮಸ್ಯೆ ಬಗೆಹರಿಯಲಿಲ್ಲ.

ನಿರ್ಭಯಾ ಪ್ರಕರಣದಲ್ಲಿ ಓರ್ವ ಅಪರಾಧಿ ಕೃತ್ಯ ಎಸಗುವಾಗ ಅಪ್ರಾಪ್ತ ವಯಸ್ಕನಾಗಿದ್ದ ಎಂಬ ಕಾರಣಕ್ಕೆ ಬರೀ ಮೂರು ವರ್ಷದ ಜೈಲು ಶಿಕ್ಷೆ ಅನುಭವಿಸಿ ಕಾನೂನಿನ ಲೋಪವನ್ನು ಬಳಸಿಕೊಂಡು ಪಾರಾಗಿದ್ದಾನೆ. ಉಳಿದವರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ನಮ್ಮ ನಿಧಾನಗತಿಯ ನ್ಯಾಯದಾನ ವ್ಯವಸ್ಥೆಯಲ್ಲಿ ಈ ಪ್ರಕರಣ ಪೂರ್ತಿಯಾಗಿ ಇತ್ಯರ್ಥವಾಗಲು ಇನ್ನೆಷ್ಟು ವರ್ಷ ಬೇಕಾದೀತು ಎಂದು ಹೇಳುವುದು ಕಷ್ಟ. ನಿರ್ಭಯಾ ಪ್ರಕರಣದ ಬಳಿಕವೂ ಈ ಮಾದರಿಯ ಅಥವಾ ಅದಕ್ಕಿಂತಲೂ ಘೋರ ಅತ್ಯಾಚಾರ ಘಟನೆಗಳು ಸಂಭವಿಸಿವೆ. ಪೆಪ್ಪರ್‌ ಸ್ಪ್ರೆà, ಹೆಲ್ಪ್ ನಂಬರ್‌, ಪ್ಯಾನಿಕ್‌ ಬಟನ್‌ನಂತಹ ಸುರಕ್ಷಾ ವಿಧಾನಗಳೆಲ್ಲ ದಾರುಣವಾಗಿ ವಿಫ‌ಲಗೊಂಡು ನಮ್ಮ ವ್ಯವಸ್ಥೆಯ ಟೊಳ್ಳುತನವೆಲ್ಲ ಬಯಲುಗೊಂಡಿದೆ. ವಿಜಯಪುರ ಘಟನೆ ಅದಕ್ಕೊಂದು ಹೆಚ್ಚುವರಿ ಸೇರ್ಪಡೆಯಷ್ಟೇ. ಒಟ್ಟಾರೆಯಾಗಿ ಹೇಳುವುದಾದರೆ ಜಗತ್ತಿನ ಅತಿ ಶ್ರೇಷ್ಠ ದೇಶವಾಗಲು ಹೊರಟಿರುವ ದೇಶದಲ್ಲಿ ಮಹಿಳೆಯರಿಗೆ ಮಾತ್ರ ರಕ್ಷಣೆಯಿಲ್ಲ ಎನ್ನುವುದು ಪದೇ ಪದೇ ಸಂಭವಿಸುತ್ತಿರುವ ಘಟನೆಗಳಿಂದ ಸಾಬೀತಾಗುತ್ತಿರುತ್ತದೆ.  ಇನ್ನು ಅತ್ಯಾಚಾರ ನಡೆದಾಗ ಕೆಲವು ವ್ಯಕ್ತಿಗಳು ನೀಡುವ ಹೇಳಿಕೆಗಳಂತೂ ಅತ್ಯಾಚಾರಕ್ಕಿಂತಲೂ ಹೆಚ್ಚು ಕಠೊರವಾಗಿರುತ್ತದೆ. ಆಕೆ ಆ ಹೊತ್ತಿನಲ್ಲಿ ಏಕಾಗಿ ಅಲ್ಲಿಗೆ ಹೋದಳು? ಆಕೆ ಸಭ್ಯ ಉಡುಪು ಧರಿಸಬೇಕಿತ್ತು, ರಾತ್ರಿ ಹೋಗುವಾಗ ಜತೆಗೆ ಅಣ್ಣನನ್ನೋ, ತಂದೆಯನ್ನೋ ಕರೆದುಕೊಂಡು ಹೋಗಬೇಕಿತ್ತು ಎಂಬಿತ್ಯಾದಿ ಸಲಹೆಗಳು ಮತ್ತು ಪ್ರಶ್ನೆಗಳನ್ನು ಮಹಿಳೆ ಎದುರಿಸಬೇಕಾಗುತ್ತದೆ.

ಒಟ್ಟಾರೆಯಾಗಿ ಅತ್ಯಾಚಾರಕ್ಕೆ ಮಹಿಳೆಯೂ ಕಾರಣ ಎಂದು ಸಾಧಿಸಿ ತೋರಿಸುವುದರಲ್ಲಿ ಕೆಲವರಿಗೇನೂ ಖುಷಿ. ಯಾರೂ ಈ ಸಮಸ್ಯೆಯ ಆಳಕ್ಕಿಳಿದು ಪರಿಹಾರ ಕಂಡುಕೊಳ್ಳುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಹಾಗೇ ನೋಡಿದರೆ ಬರೀ ಪೊಲೀಸರಿಂದ ಅಥವಾ ಕಾನೂನಿನಿಂದ ಬಗೆಹರಿಯುವ ಸಮಸ್ಯೆ ಇದಲ್ಲ. ಮುಖ್ಯವಾಗಿ ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಇದು ಸಾಧ್ಯವಾಗಬೇಕಾದರೆ ಮನೆಯಲ್ಲಿ ಮಕ್ಕಳನ್ನು ಬೆಳೆಸುವ ವಿಧಾನವೇ ಬದಲಾಗಬೇಕು. ಗಂಡು ಮಗುವೇ ಶ್ರೇಷ್ಠ, ಹೆಣ್ಣು ಅವನ ಅಡಿಯಾಳಾಗಿಯೇ ಇರಬೇಕೆಂಬ ಪುರುಷ ಪ್ರಧಾನ ಚಿಂತನಾಕ್ರಮ ಬದಲಾಗಬೇಕು. ಮಹಿಳೆಯ ದೇಹದಲ್ಲಿ ಸಮಾಜದ, ಸಮುದಾಯದ, ಮನೆತನದ ಗೌರವ, ಘನತೆಯನ್ನು ಕಾಣುವ ಮನೋಧರ್ಮವನ್ನು ಬದಲಾಯಿಸಿಕೊಳ್ಳಬೇಕು.ಹೆಣ್ಣನ್ನು ಭೋಗದ ಸರಕಲ್ಲ, ಅವಳ ದೇಹ ಉಂಡು ಬಿಸಾಕುವ ಬಾಳೆ ಎಲೆಯಲ್ಲ, ಪುರುಷನಷ್ಟೇ ಮಹಿಳೆಗೂ ತನ್ನ ದೇಹದ ಮೇಲೆ ಅಧಿಕಾರವಿದೆ, ಅದನ್ನು ಉಲ್ಲಂ ಸುವುದು ಅಪರಾಧ ಎಂಬ ಅರಿವವನ್ನು ಮೂಡಿಸಬೇಕು. ಮಹಿಳೆಯ ಕುರಿತಾಗಿರುವ ಚಿಂತನಾಕ್ರಮವನ್ನು ಬದಲಾಗುವ ತನಕ ಆಕೆಯ ಮೇಲಾಗುತ್ತಿರುವ ದೌರ್ಜನ್ಯಗಳು ಕಡಿಮೆಯಾಗುವುದಿಲ್ಲ. ಇದಕ್ಕೆ ನಮ್ಮ ಸಮಾಜ ತಯಾರಿದೆಯೇ?

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ರಾಜ್ಯ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಗೊಂಡಿದೆ. ಅಧಿಕಾರಕ್ಕೆ ಬಂದಾಗಿನಿಂದಲೂ ಪರಸ್ಪರ ಅಪನಂಬಿಕೆಯಿಂದಲೇ ಕುಂಟುತ್ತಾ ಸಾಗುತ್ತಿದ್ದ ಎಚ್...

 • ಚಂದ್ರನ ಮೇಲೆ ಮಾನವ ಹೆಜ್ಜೆಯೂರಿದ ಸುವರ್ಣ ಮಹೋತ್ಸವ ಆಚರಣೆಯಾದ ಎರಡೇ ದಿನಗಳಲ್ಲಿ ಇಸ್ರೊ ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2ನ್ನು ಯಶಸ್ವಿಯಾಗಿ ನೆರವೇರಿಸಿದೆ....

 • ಭಯೋತ್ಪಾದಕ ಹಾಫಿಜ್‌ ಸಯೀದ್‌ನನ್ನು ಪಾಕಿಸ್ಥಾನದ ಪೊಲೀಸರು ಕಳೆದ ವಾರ ಬಂಧಿಸಿ ಜೈಲಿಗಟ್ಟಿದ್ದಾರೆ. 2001ರಲ್ಲಿ ನಡೆದ ಸಂಸತ್‌ ಮೇಲಿನ ದಾಳಿಯ ಬಳಿಕ ಹಾಫಿಜ್‌ ಸೆರೆಯಾಗುತ್ತಿರುವುದು...

 • ಕಳೆದೊಂದು ವಾರದಿಂದ ಕಲ್ಲು ಎಸೆದ ಜೇನುಗೂಡಿನಂತಾಗಿರುವ ರಾಜ್ಯ ರಾಜಕೀಯ ಸ್ಥಿತಿ ಇನ್ನೂ ಅತಂತ್ರವಾಗಿಯೇ ಉಳಿದಿರುವುದು ಕಳವಳಕಾರಿ. ಸದನದಲ್ಲಿ ವಿಶ್ವಾಸಮತ...

 • ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಸಿದ ಹೋರಾಟದಲ್ಲಿ ಭಾರತ ಗೆದ್ದಿದೆ. ಬುಧವಾರ ಈ ನ್ಯಾಯಾಲಯದ 16 ನ್ಯಾಯಾಧೀಶರ...

ಹೊಸ ಸೇರ್ಪಡೆ

 • ಸುರೇಶ ಯಳಕಪ್ಪನವರ ಹಗರಿಬೊಮ್ಮನಹಳ್ಳಿ: ಕಳೆದ ವರ್ಷ ತುಂಗಾಭದ್ರಾ ನದಿ ತುಂಬಿದ್ದರಿಂದ ತಾಲೂಕಿನ ಹಿನ್ನೀರು ಪಾತ್ರದ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ...

 • ಹುಬ್ಬಳ್ಳಿ: ಮಹಾನಗರ ಪಾಲಿಕೆ ಹಳೇ ಹುಬ್ಬಳ್ಳಿಯನ್ನು ನಿರ್ಲಕ್ಷಿಸಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಗಮನಿಸಿದರೆ ನಿವಾಸಿಗಳ...

 • •ವೆಂಕೋಬಿ ಸಂಗನಕಲ್ಲು ಬಳ್ಳಾರಿ: 'ಬಡವರ ಬಂಧು' ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲ ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ...

 • ದಾವಣಗೆರೆ: ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ....ಎಂದು ಘೋಷಣೆ ಮಾಡಬೇಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ...

 • ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಿಸದಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ...

 • ಜಗಳೂರು: ಭದ್ರಾ ಮೇಲ್ದಂಡೆ ಜಗಳೂರು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮಾಡದಂತೆ ಮತ್ತು ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ನೀರಾವರಿ...