Udayavni Special

ಆಡಳಿತ ಸುಗಮವಾಗಿ ಸಾಗಲಿ


Team Udayavani, Nov 29, 2019, 5:52 AM IST

DD-47

ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರಲ್ಲೂ ತತ್ವ-ಸಿದ್ಧಾಂತಗಳು ಬೇರೆಯಾಗಿರುವ ಪಕ್ಷಗಳನ್ನೊಳಗೊಂಡಿರುವ ಸರಕಾರವನ್ನು ಮುನ್ನಡೆಸುವುದು ಹಗ್ಗದ ಮೇಲಿನ ನಡಿಗೆ ಎನ್ನುವುದಕ್ಕೆ ಕರ್ನಾಟಕದ್ದೇ ಇತ್ತೀಚೆಗಿನ ಉದಾಹರಣೆಯಿದೆ.

ಮಹಾರಾಷ್ಟ್ರದಲ್ಲಿ ಬಹುಮತದ ಸರಕಾರವೊಂದು ರಚನೆಯಾಗಿ ಚುನಾವಣೆ ಮುಗಿದ 35 ದಿನಗಳ ನೆಲೆಸಿದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಂತಾಗಿದೆ. ಶಿವಸೇನೆಯ ನೇತೃತ್ವದಲ್ಲಿ, ಎನ್‌ಸಿಪಿಯ ಮಧ್ಯಸ್ಥಿಕೆಯಲ್ಲಿ ರಚನೆಯಾಗಿರುವ ಮಹಾ ವಿಕಾಸ್‌ ಅಘಾಡಿ (ಎಂವಿಎ) ಎಂಬ ಹೊಸ ಮೈತ್ರಿಕೂಟದ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು, ಮುಖ್ಯಮಂತ್ರಿಯಾಗಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಕ್ರಮವಾಗಿ ದ್ವಿತೀಯ, ತೃತೀಯ ಮತ್ತು ಚತುರ್ಥ ಸ್ಥಾನಗಳನ್ನು ಗಳಿಸಿದ ಪಕ್ಷಗಳು ಜೊತೆಗೂಡಿ ಪ್ರಥಮ ಸ್ಥಾನ ಗಳಿಸಿದ ಪಕ್ಷವನ್ನು ಅಧಿಕಾರದಿಂದ ದೂರವಿಡುವಲ್ಲಿ ಸಫ‌ಲವಾಗಿವೆ. ಭಿನ್ನ ಸಿದ್ಧಾಂತಗಳುಳ್ಳ ಪಕ್ಷಗಳು ಎಂದು ಮಾತ್ರವಲ್ಲದೆ ಚುನಾವಣೆಯಲ್ಲಿ ಕಟ್ಟಾ ಎದುರಾಳಿಗಳಂತೆ ಕಾದಾಡಿದ ಪಕ್ಷ ಗಳು ಫ‌ಲಿತಾಂಶ ಪ್ರಕಟವಾದ ಬಳಿಕ ಪರಸ್ಪರ ಕೈಜೋಡಿಸಿದ ರಾಜಕೀಯ ಬೆಳವಣಿಗೆಯ ನೈತಿಕತೆಯ ಪ್ರಶ್ನೆಯೇನೆ ಇದ್ದರೂ ಈ ಮೈತ್ರಿಕೂಟ ಮಹಾ ರಾಷ್ಟ್ರದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ದೂರಗಾಮಿಯಾದ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಯಿದೆ.

ಮಹಾರಾಷ್ಟ್ರದ ರಾಜಕೀಯದಲ್ಲಿ ಸುಮಾರು ಅರ್ಧ ಶತಮಾನದಷ್ಟು ಕಾಲ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುವ ಶಿವಸೇನೆಗೆ ಎರಡನೇ ಸಲ ರಾಜ್ಯ ಭಾರ ಮಾಡುವ ಅವಕಾಶ ಸಿಕ್ಕಿದೆ. ಇಷ್ಟು ಮಾತ್ರವಲ್ಲದೆ ಠಾಕ್ರೆ ಪರಿವಾರದ ಸದಸ್ಯರೊಬ್ಬರು ನೇರವಾಗಿಯೇ ಅಧಿಕಾರ ಸೂತ್ರವನ್ನು ಹಿಡಿಯುತ್ತಿರುವುದು ಈ ಸಲದ ವಿಶೇಷತೆಗಳಲ್ಲೊಂದು. ಈ ಮೂಲಕ ಠಾಕ್ರೆ ಪರಿವಾರದ ರಾಜ ಕೀಯ ಮಾತೋಶ್ರೀಯಿಂದ ಅಧಿಕಾರ ಕೇಂದ್ರವಾಗಿರುವ “ಮಂತ್ರಾಲಯ’ಕ್ಕೆ ವರ್ಗಾವಣೆಯಾದಂತಾಗಿದೆ. ಠಾಕ್ರೆ ಪರಿವಾರಕ್ಕೆ ರಾಜಕೀಯದ ಪಟ್ಟುಗಳು ಕರಗತವಾಗಿದ್ದರೂ ಆಡಳಿತ ನಡೆಸಿದ ನೇರ ಅನುಭವವಿಲ್ಲ. ಹೀಗಾಗಿ ಉದ್ಧವ ಠಾಕ್ರೆಯ ಆಡಳಿತ ಹೇಗಿರಬಹುದು ಎಂಬ ಕುತೂಹಲ ದೇಶಾದ್ಯಂತ ಇದೆ.

ಮಹಾರಾಷ್ಟ್ರ ಅತಿ ಹೆಚ್ಚು ಕೈಗಾರಿಕೀರಣಗೊಂಡಿರುವ ರಾಜ್ಯ ಮಾತ್ರವಲ್ಲದೆ ದೇಶದ ಆರ್ಥಿಕ ಚಟುವಟಿಕೆಗಳ ಕೇಂದ್ರ ಸ್ಥಾನವೂ ಹೌದು. ಮುಂಬಯಿಗೆ ವಾಣಿಜ್ಯ ರಾಜಧಾನಿ ಎಂಬ ಹಿರಿಮೆ ಇದೆ. ದೇಶದ ಜಿಡಿಪಿಗೆ ಶೇ. 15 ಕೊಡುಗೆ ಈ ರಾಜ್ಯದಿಂದ ಸಲ್ಲುತ್ತದೆ. ಇಂಥ ರಾಜ್ಯ ಬಹುಕಾಲ ರಾಜಕೀಯ ಅಸ್ಥಿರತೆ ಯಿಂದ ನಲುಗಿದರೆ ಅದರ ಪರಿಣಾಮ ಮಹಾರಾಷ್ಟ್ರದ ಮೇಲೆ ಮಾತ್ರವಲ್ಲದೆ ಇಡೀ ದೇಶದ ಆರ್ಥಿಕತೆಯ ಮೇಲೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿರುವ ಪಕ್ಷಗಳು ಆಡಳಿತ ನಡೆಸುವಲ್ಲೂ ಇದೇ ಮಾದರಿಯನ್ನು ಮೇಲ್ಪಂಕ್ತಿಯಾಗಿರಿಸಿಕೊಂಡು ಮುಂದುವರಿಯಬೇಕು.

ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರಲ್ಲೂ ತತ್ವ-ಸಿದ್ಧಾಂತಗಳು ಬೇರೆಯಾಗಿರುವ ಪಕ್ಷಗಳನ್ನೊಳಗೊಂಡಿರುವ ಸರಕಾರವನ್ನು ಮುನ್ನಡೆಸುವುದು ಹಗ್ಗದ ಮೇಲಿನ ನಡಿಗೆ ಎನ್ನು ವುದಕ್ಕೆ ಕರ್ನಾಟಕದ್ದೇ ಇತ್ತೀಚೆಗಿನ ಉದಾಹರಣೆಯಿದೆ. ರಾಜಕೀಯ ವಿಶ್ಲೇಷಕರು ಇಂಥ ಮೈತ್ರಿಕೂಟವನ್ನು ಖೀಚಡಿ ಸರಕಾರ ಎಂದು ಕರೆಯುತ್ತಾರೆ. ಈ ಖೀಚಡಿ ಕೆಟ್ಟುಹೋಗದಂತೆ ನೋಡಿಕೊಳ್ಳುವ ಜಾಣ್ಮೆಯನ್ನು ಸರಕಾರದಲ್ಲಿ ಪಾಲು ದಾರಿಕೆ ಹೊಂದಿರುವ ಮೂರೂ ಪಕ್ಷಗಳು ತೋರಿಸಿದರೆ ಇಷ್ಟೆಲ್ಲ ಪರದಾಡಿ ಸರಕಾರ ರಚಿಸಿದ್ದಕ್ಕೆ ಸಾರ್ಥಕವಾಗಬಹುದು.

ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆಗೆ ಕೈಜೋಡಿಸುವ ಮೂಲಕ ಶಿವಸೇನೆ ರಾಜಕೀಯವಾಗಿ ದೊಡ್ಡ ರಿಸ್ಕನ್ನೇ ತೆಗೆದುಕೊಂಡಿದೆ. ಈ ಮೈತ್ರಿಯಿಂದ ದೊಡ್ಡ ಮಟ್ಟದ ಲಾಭ ಅಥವಾ ನಷ್ಟ ಆಗುವುದಿದ್ದರೆ ಅದು ಶಿವಸೇನೆಗೆ. ಉಳಿದಂತೆ ಎನ್‌ಸಿಪಿ ಕಿಂಗ್‌ಮೇಕರ್‌ ಆಗಿ ಮೆರೆಯಬಹುದು. ಕಾಂಗ್ರೆಸ್‌ಗೆ ಆದದ್ದೆಲ್ಲ ಲಾಭವೇ. ನಾಲ್ಕನೇ ಸ್ಥಾನಗಳಿಸಿಯೂ ಸರಕಾರದಲ್ಲಿ ಪಾಲುದಾರ ಪಕ್ಷವಾ ಗಲು ಅವಕಾಶ ಸಿಕ್ಕಿದ್ದು ಅದರ ಅದೃಷ್ಟವೆಂದೇ ಹೇಳಬೇಕು. ಬಿಜೆಪಿ ಕಟ್ಟುವ ದ್ರೋಹದ ಹಣೆಪಟ್ಟಿ, ಅಧಿಕಾರಕ್ಕಾಗಿ ಹಿಂದುತ್ವ ಕಾರ್ಯಸೂಚಿಯನ್ನು ಬಲಿ ಕೊಟ್ಟ ಆರೋಪ ಇತ್ಯಾದಿ ಟೀಕೆಗಳನ್ನು ಎದುರಿಸುವ ಸವಾಲು ಉದ್ಧವ ಠಾಕ್ರೆ ಮೇಲೆ ಇದೆ.

ಸರಕಾರ ರಚಿಸಲು ಎಲ್ಲ ಪಕ್ಷಗಳಿಗೆ ಇದ್ದದ್ದು ಬಿಜೆಪಿಯ ಭಯ ಎನ್ನುವುದು ರಹಸ್ಯ ಸಂಗತಿಯೇನಲ್ಲ. ಹಾಗೆಂದು ಈ ವಿಚಾರವನ್ನು ಅಭಿವೃದ್ಧಿಯ ವಿಚಾರಕ್ಕೆ ಎಳೆದು ತರುವುದು ಸರಿಯಾಗುವುದಿಲ್ಲ. ಹಿಂದಿನ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಹಲವಾರು ಬೃಹತ್‌ ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಮುಂದುವರಿಸಲು ರಾಜಕೀಯ ವೈರ ಅಡ್ಡಿಯಾಗಬಾರದು. ಈಗಾಗಲೇ ಬುಲೆಟ್‌ ಟ್ರೈನ್‌ ಯೋಜನೆಗೆ ಹಣ ಕೊಡುವುದಿಲ್ಲ ಎಂಬಂಥ ಮಾತುಗಳನ್ನು ಮೈತ್ರಿಕೂಟದ ನಾಯಕರು ಹೇಳುತ್ತಿದ್ದಾರೆ. ಬುಲೆಟ್‌ ಟ್ರೈನ್‌ ಬಿಜೆಪಿಯ ಯೋಜನೆಯಲ್ಲ ಬದಲಾಗಿ ದೇಶಕ್ಕಾಗಿ ಇರುವ ಯೋಜನೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಪರಸ್ಪರ ಸಹಕಾರ ಮನೋಭಾವ ಇರುವುದು ಬಹಳ ಅಗತ್ಯ. ಈ ನೆಲೆಯಲ್ಲಿ ಹೇಳುವುದಾದರೆ ಉದ್ಧವ ಠಾಕ್ರೆ ನೀಡುವ ಆಡಳಿತ ದೇಶದ ಮುಂದಿನ ರಾಜಕೀಯಕ್ಕೂ ದಿಕ್ಸೂಚಿಯಾಗಬಹುದು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ವಶಕ್ಕೆ

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ಪೊಲೀಸರ ವಶಕ್ಕೆ

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲುಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

00

ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ

ಪರಿಸರ ಸ್ನೇಹಿ ದೀಪಾವಳಿಗೆ ಒತ್ತು: ಗೋಮಯ ಹಣತೆ ಬಳಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ

ಪರಿಸರ ಸ್ನೇಹಿ ದೀಪಾವಳಿಗೆ ಒತ್ತು: ಗೋಮಯ ಹಣತೆ ಬಳಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ

“ನಾವು ಬಿಜೆಪಿ ವಿರೋಧಿಗಳೇ ಹೊರತು ದೇಶ ವಿರೋಧಿಗಳಲ್ಲ : ಫಾರೂಕ್ ಅಬ್ದುಲ್ಲಾ

“ನಾವು ಬಿಜೆಪಿ ವಿರೋಧಿಗಳೇ ಹೊರತು ದೇಶ ವಿರೋಧಿಗಳಲ್ಲ : ಫಾರೂಕ್ ಅಬ್ದುಲ್ಲಾ

ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾರು ದ್ರೋಹ ಬಗೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ:ಡಿಕೆಶಿ

ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾರು ದ್ರೋಹ ಬಗೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ:ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಬ್ಬದ ಸಂಭ್ರಮದ ನಡುವೆ…ಸುರಕ್ಷತೆಗೆ ಆದ್ಯತೆ ನೀಡಿ

ಹಬ್ಬದ ಸಂಭ್ರಮದ ನಡುವೆ…ಸುರಕ್ಷತೆಗೆ ಆದ್ಯತೆ ನೀಡಿ

Editorial

ಚುನಾವಣ ಖರ್ಚಿನ ಮಿತಿ ಹೆಚ್ಚಳ ; ಪಾರದರ್ಶಕತೆ ಮುಖ್ಯ

ಸರಕಾರಿ ನೌಕರರ ಸದ್ಬಳಕೆಯಾಗಲಿ

ಸರಕಾರಿ ನೌಕರರ ಸದ್ಬಳಕೆಯಾಗಲಿ

ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಪರಿಹಾರ ಕಾರ್ಯವೇ ಸವಾಲು

ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಪರಿಹಾರ ಕಾರ್ಯವೇ ಸವಾಲು

ದೇಶದ ಕೆಲವೆಡೆ ಸಾಮುದಾಯಿಕ ಪ್ರಸರಣ; ಕೂಲಂಕಷ ಅಧ್ಯಯನವಾಗಲಿ

ದೇಶದ ಕೆಲವೆಡೆ ಸಾಮುದಾಯಿಕ ಪ್ರಸರಣ; ಕೂಲಂಕಷ ಅಧ್ಯಯನವಾಗಲಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಹನಿಟ್ರ್ಯಾಪ್‌: 5.45 ಲಕ್ಷ ರೂ. ದರೋಡೆ; ಬಂಧನ

ಹನಿಟ್ರ್ಯಾಪ್‌: 5.45 ಲಕ್ಷ ರೂ. ದರೋಡೆ; ಬಂಧನ

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ವಶಕ್ಕೆ

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ಪೊಲೀಸರ ವಶಕ್ಕೆ

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲುಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

00

ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.