ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಫ್ಘನ್ನರಿಗೆ ನೆರವು ಸಿಗಲಿ


Team Udayavani, Aug 14, 2021, 6:00 AM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಫ್ಘನ್ನರಿಗೆ ನೆರವು ಸಿಗಲಿ

ನೆರೆಯ ಆಫ್ಘಾನಿಸ್ಥಾನದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನೆರವು ಬೇಕಾಗಿದೆ. ಈಗಾಗಲೇ ಹೆಚ್ಚು  ಕಡಿಮೆ ಮೂರನೇ ಎರಡರಷ್ಟು ಭಾಗವನ್ನು ತಾಲಿಬಾನ್‌ ಉಗ್ರರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಅಫ್ಘಾನಿಸ್ಥಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್‌ ಅನ್ನೂ ತಾಲಿಬಾನಿಯರು ತಮ್ಮ ವಶಕ್ಕೆ ಪಡೆದಿದ್ದು, ಈಗಾಗಲೇ ಕಾಬೂಲ್‌ ಸನಿಹಕ್ಕೆ ಬಂದಿದ್ದಾರೆ. ಇದರ ನಡುವೆಯೇ ಅಮೆರಿಕ ತನ್ನ 3,000 ಯೋಧರನ್ನು ಅಫ್ಘಾನಿಸ್ಥಾನಕ್ಕೆ  ಕಳುಹಿಸಿದ್ದು, ಬಾಕಿ ಉಳಿದಿರುವ ಸಿಬಂದಿಯನ್ನು ತ್ವರಿತಗತಿಯಲ್ಲಿ ವಾಪಸ್‌ ಕರೆಸಿಕೊಳ್ಳುತ್ತಿದೆ.

ಸದ್ಯ ಕಾಬೂಲ್‌ನಿಂದ 50 ಕಿ.ಮೀ. ದೂರದಲ್ಲಿರುವ ಲೋಗರ್‌ ಪ್ರಾಂತ್ಯದ ರಾಜಧಾನಿಯನ್ನೂ ವಶಕ್ಕೆ ಪಡೆಯಲಾಗಿದೆ. ಇದಾದ ಬಳಿಕ ರಾಜಧಾನಿ ಕಾಬೂಲ್‌ನತ್ತ ಉಗ್ರರು ತೆರಳಲಿದ್ದಾರೆ. ಹೀಗಾಗಿಯೇ ಅಮೆರಿಕ, ಭಾರತದಂತೆ ಉಳಿದ ದೇಶಗಳೂ ತಮ್ಮ ರಾಯಭಾರ ಕಚೇರಿಗಳ ಸಿಬಂದಿಯನ್ನು ವಾಪಸ್‌ ಕರೆಸಿಕೊಳ್ಳುವಲ್ಲಿ ನಿರತವಾಗಿವೆ.

ಇತ್ತ ಗುರುವಾರವಷ್ಟೇ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌, ತಾಲಿಬಾನಿಯರ ವಕ್ತಾರರಂತೆ ಮಾತನಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಅಫ್ಘಾನಿಸ್ಥಾನದ ಅಧ್ಯಕ್ಷ ಹುದ್ದೆಯಲ್ಲಿ ಘನಿ ಇರುವವರೆಗೂ ತಾಲಿಬಾನ್‌ ಉಗ್ರರು, ಶಾಂತಿ ಮಾತುಕತೆ ನಡೆಸುವುದಿಲ್ಲ ಎಂದೂ ಇಮ್ರಾನ್‌ ಹೇಳಿದ್ದಾರೆ. ಈ ಮೂಲಕ ಉಗ್ರರ ಪ್ರತಿನಿಧಿಯಂತೆಯೇ ಅವರು ಮಾತನಾಡುತ್ತಿದ್ದಾರೆ. ಇದು ಕೂಡ ತಾಲಿಬಾನ್‌ ಉಗ್ರರಿಗೆ ಪಾಕಿಸ್ಥಾನ ಎಲ್ಲ ನೆರವು ಕೊಡುತ್ತಿದೆ ಎಂಬ ಅನುಮಾನ ಮೂಡಿದೆ.

ಅಫ್ಘಾನಿಸ್ಥಾನದ ಕ್ರಿಕೆಟಿಗ ರಶೀದ್‌ ಖಾನ್‌ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಸಮುದಾಯದ ನೆರವು ಕೇಳಿದ್ದರು.

ನಮ್ಮ ದೇಶ ಉಗ್ರರ ಹಿಡಿತಕ್ಕೆ ಹೋಗುತ್ತಿದೆ, ದಯಮಾಡಿ ನೆರವಿಗೆ ಬನ್ನಿ ಎಂದಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಕೂಡ ಅಫ್ಘಾನಿಸ್ಥಾನದ ಬೆನ್ನಿಗೆ ನಿಲ್ಲುವುದು ಅನುಮಾನ. ಹೀಗಾಗಿ  ಕೆಲವೇ ದಿನಗಳಲ್ಲಿ ಇಡೀ ಅಫ್ಘಾನಿಸ್ಥಾನವೇ ಉಗ್ರರ ಕೈಗೆ ಹೋದರೂ ಅಚ್ಚರಿಯೇನಿಲ್ಲ.

ಒಂದು ವೇಳೆ  ಇಡೀ ಅಫ್ಘಾನಿಸ್ಥಾನ ತಾಲಿಬಾನ್‌ ಉಗ್ರರ ಕೈಗೆ ಹೋದರೆ, ಅಲ್ಲಿನ ಜನರ ಪರಿಸ್ಥಿತಿ ಹೇಳುವಂತಿಲ್ಲ. ಈಗಾಗಲೇ ಸಿರಿಯಾ, ಸಿಬಿಯಾ, ಇರಾಕ್‌ನಂಥ ದೇಶಗಳು ಉಗ್ರರ ಕೈಗೆ ಹೋಗಿ ಏನಾಗಿದೆ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿದೆ. ಮಾನವರ ಜೀವಕ್ಕಂತೂ ಬೆಲೆಯೇ ಇರುವುದಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯಗಳು ಈಗಲೇ ಎಚ್ಚೆತ್ತು, ಆ ದೇಶಕ್ಕೆ ಹೊಂದುವ ಹಾಗೆ ಶಾಂತಿ ಸೂತ್ರವೊಂದನ್ನು ರೂಪಿಸಬೇಕು. ಅಲ್ಲದೆ ಈಗಾಗಲೇ ತಾಲಿಬಾನ್‌ ಉಗ್ರರು ಅಲ್ಲಿನ ಸರಕಾರದ ಜತೆಗೆ ಮಾತುಕತೆಯನ್ನೂ ನಡೆಸುವ  ಯತ್ನ ನಡೆಸಿದ್ದಾರೆ. ಕೆಲವೊಂದು ದೇಶಗಳು ಇದರ ಮಧ್ಯಸ್ಥಿಕೆಯನ್ನೂ ಮಾಡಿವೆ. ಹೀಗಾಗಿ ಬೇಗನೇ ಅಲ್ಲಿನ ಪರಿಸ್ಥಿತಿ ಸುಧಾರಣೆಗೆ ಯತ್ನಿಸಬೇಕು.

ಹಾಗೆಯೇ ಪಾಕಿಸ್ಥಾನ ಮತ್ತು ಚೀನದಂಥ ದೇಶಗಳು ಅಫ್ಘಾನಿಸ್ಥಾನದ ಬೆಳವಣಿಗೆಯನ್ನು ತಮಗೆ ಬೇಕಾದ ಹಾಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳೂ ಇವೆ. ಅಫ್ಘಾನಿಸ್ಥಾನವನ್ನೇ ಮೂಲ ನೆಲೆಯನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ತಾಲಿಬಾನ್‌ ಉಗ್ರರನ್ನು ಎತ್ತಿಕಟ್ಟಿ ಕಾಶ್ಮೀರದಲ್ಲಿ ಅಶಾಂತಿ ಉಂಟು ಯತ್ನಿಸಬಹುದು.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.