ತ್ವರಿತಗತಿಯಲ್ಲಿ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ ಮುಗಿಯಲಿ

Team Udayavani, Jan 8, 2022, 6:20 AM IST

ತ್ವರಿತಗತಿಯಲ್ಲಿ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ ಮುಗಿಯಲಿ

ಕಳೆದ ನಾಲ್ಕು ತಿಂಗಳ ಕಾಲ ಸ್ಥಗಿತವಾಗಿದ್ದ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ ಆರಂಭಕ್ಕೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಈ ಪ್ರಕ್ರಿಯೆ ಶುರುವಾಗಲಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ, ಕಳೆದ ಅಕ್ಟೋಬರ್‌ನಲ್ಲೇ ಕೌನ್ಸೆಲಿಂಗ್‌ ಆರಂಭವಾಗಿ, ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ ಕೇಂದ್ರ ಸರಕಾರ ಆರ್ಥಿಕ ದುರ್ಬಲ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧಾರ ತೆಗೆದುಕೊಂಡಿದ್ದು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಬಾಗಿಲು ಬಡಿಯಲಾಗಿತ್ತು. ಈ ವಿಚಾರಣೆಯಿಂದಾಗಿ ನಾಲ್ಕು ತಿಂಗಳ ಅನಂತರ ಕೌನ್ಸೆಲಿಂಗ್‌ಗೆ ಒಪ್ಪಿಗೆ ಸಿಕ್ಕಿದೆ.

ನೀಟ್‌ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಆರಂಭವಾಗದೇ ಇರುವುದಕ್ಕೆ ಪ್ರಮುಖ ಕಾರಣವೇ ಆರ್ಥಿಕವಾಗಿ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರ. ಈ ವರ್ಗಕ್ಕೆ ವಾರ್ಷಿಕ 8 ಲಕ್ಷ ರೂ. ಗರಿಷ್ಠ ಆದಾಯ ಮಿತಿ ನಿಗದಿ ಮಾಡಿದ್ದು ಕೆಲವು ವಿದ್ಯಾರ್ಥಿಗಳ ಆಕ್ಷೇಪಕ್ಕೆ ಕಾರಣವಾಗಿತ್ತು. ಈಗಾಗಲೇ ಇರುವ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಕ್ಕೆ ಮೀಸಲಾತಿ ನೀಡಿ, ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿದರೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬುದು ವಿದ್ಯಾರ್ಥಿಗಳ ವಾದವಾಗಿತ್ತು. ಅಲ್ಲದೆ 8 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು ಯಾವ ಮಾನದಂಡದಲ್ಲಿ ನಿರ್ಧಾರ ಮಾಡಲಾಗಿದೆ ಎಂಬ ಪ್ರಶ್ನೆಯೂ ಉದ್ಭವವಾಗಿತ್ತು.

ಈ ಬಗ್ಗೆ ವಿಚಾರಣೆ ನಡೆಯುತ್ತಿರುವಾಗಲೇ ಕೇಂದ್ರ ಸರಕಾರ ಅಜಯ್‌ ಭೂಷಣ್‌ ಪಾಂಡೆ ಅವರ ನೇತೃತ್ವದಲ್ಲಿ ಸಾಧಕ – ಬಾಧಕಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು 8 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು ಒಪ್ಪಿಕೊಳ್ಳಬಹುದು ಎಂದು ಹೇಳಿ, ಸುಪ್ರೀಂ ಕೋರ್ಟ್‌ಗೆ ವರದಿ ನೀಡಿತ್ತು. ಶುಕ್ರವಾರ ಸುಪ್ರೀಂ ಕೋರ್ಟ್‌ ಮಧ್ಯಾಂತರ ಆದೇಶ ನೀಡಿದ್ದು, ಅಜಯ್‌ ಭೂಷಣ್‌ ಪಾಂಡೆ ಅವರ ಶಿಫಾರಸನ್ನು ಒಪ್ಪಿಕೊಂಡಿದೆ. ಈ ಮೂಲಕ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಡಬ್ಲ್ಯುಎಸ್‌ನವರಿಗೆ ಮೀಸಲಾತಿ ನೀಡಿಯೇ ಕೌನ್ಸೆಲಿಂಗ್‌ ಆರಂಭಿಸುವಂತೆ ಆದೇಶ ನೀಡಿದೆ. ಅಲ್ಲದೆ ಮುಂದಿನ ಮಾರ್ಚ್‌ನಲ್ಲಿ ಈ ಆರ್ಥಿಕವಾಗಿ ದುರ್ಬಲರಾಗಿ ನೀಡಿರುವ ಮೀಸಲಾತಿ ಸಂಬಂಧ ಸಂಪೂರ್ಣ ವಿಚಾರಣೆ ನಡೆಸುವುದಾಗಿಯೂ ಸುಪ್ರೀಂ ತಿಳಿಸಿದೆ.

ಇಲ್ಲಿಗೆ ಒಂದು ಲೆಕ್ಕಾಚಾರದಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಇದ್ದ ಒಂದು ಹಂತದ ಅಡೆತಡೆಗಳು ಮುಗಿದಿವೆ. ಇನ್ನು ಮುಂದಾದರೂ ಯುಜಿ-ನೀಟ್‌ ಕೌನ್ಸೆಲಿಂಗ್‌ಗಿಂತ ಮುಂಚಿತವಾಗಿಯೇ ಪಿಜಿ-ನೀಟ್‌ ಬರೆದಿರುವ ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ಅನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಕೊರೊನಾ ಕಾಲದಲ್ಲಿ ವೈದ್ಯರ ಕೊರತೆಯನ್ನು ನೀಗಿಸಿದವರು ಇವರೇ ಆಗಿದ್ದು, ಒಮ್ಮೆ ಈ ವಿದ್ಯಾರ್ಥಿಗಳು ವೈದ್ಯಕೀಯ ಪಿಜಿಗೆ ಸೇರಿಕೊಂಡರೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನೆರವಾಗುತ್ತಾರೆ. ಈ  ಮೂಲಕವಾದರೂ ವೈದ್ಯರ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇವರು ಎಂಬಿಬಿಎಸ್‌ ಅನ್ನು ಮುಗಿಸಿ ಸ್ನಾತಕೋತ್ತರಕ್ಕೆ ಬಂದಿರುತ್ತಾರೆ. ಇವರ ಸೇವೆಯನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ. ಅಲ್ಲದೆ ಕಳೆದ ನಾಲ್ಕು ತಿಂಗಳಿಂದ ಪಿಜಿ ಕೋರ್ಸ್‌ಗೆ ಸೇರಲು ತುದಿಗಾಲಲ್ಲಿ ನಿಂತಿರುವ ವೈದ್ಯರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.

ಟಾಪ್ ನ್ಯೂಸ್

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

16DC

ಮಂಗಳೂರು: ಆ. 14ರ ವರೆಗೆ ಸೆಕ್ಷನ್‌ 144 ಮುಂದುವರಿಕೆ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

1-adadasd

ಶೀಘ್ರದಲ್ಲೇ ಮಹಾ ಸಂಪುಟ ವಿಸ್ತರಣೆ; ಫಡ್ನವೀಸ್‌ ಗೆ ಪ್ರಮುಖ ಖಾತೆ?

ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟ

ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟ

ಕಿಡ್ನ್ಯಾಪ್‌ ಕೇಸ್‌ಗೆ “ಡಿಜಿಟಲ್‌’ ಸುಖಾಂತ್ಯ! 9 ವರ್ಷದ ನಂತರ ಕುಟುಂಬ ಸೇರಿದ ಯುವತಿ

ಕಿಡ್ನ್ಯಾಪ್‌ ಕೇಸ್‌ಗೆ “ಡಿಜಿಟಲ್‌’ ಸುಖಾಂತ್ಯ! 9 ವರ್ಷದ ನಂತರ ಕುಟುಂಬ ಸೇರಿದ ಯುವತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ ಉತ್ತಮ ನಿರ್ಧಾರ

ಎಲ್ಲ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ ಉತ್ತಮ ನಿರ್ಧಾರ

ಉಚಿತ ಕೊಡುಗೆ ಮೇಲೆ ನಿಯಂತ್ರಣ ಹೆಜ್ಜೆ ಸ್ವಾಗತಾರ್ಹ

ಉಚಿತ ಕೊಡುಗೆ ಮೇಲೆ ನಿಯಂತ್ರಣ ಹೆಜ್ಜೆ ಸ್ವಾಗತಾರ್ಹ

ಜಗತ್ತಿಗೆ ಈಗ ಮತ್ತೊಂದು ಯುದ್ಧದ ಅಗತ್ಯವಿಲ್ಲ

ಜಗತ್ತಿಗೆ ಈಗ ಮತ್ತೊಂದು ಯುದ್ಧದ ಅಗತ್ಯವಿಲ್ಲ

ಮಳೆ ಅವಾಂತರ ಮಾನವನಿಗೆ ಎಚ್ಚರಿಕೆ !

ಮಳೆ ಅವಾಂತರ ಮಾನವನಿಗೆ ಎಚ್ಚರಿಕೆ !

ವ್ಯರ್ಥ ವಾದಗಳ ಬಿಟ್ಟು ಜನ ಪರ, ಜನಹಿತ ಚರ್ಚೆಗಳು ನಡೆಯಲಿ

ವ್ಯರ್ಥ ವಾದಗಳ ಬಿಟ್ಟು ಜನ ಪರ, ಜನಹಿತ ಚರ್ಚೆಗಳು ನಡೆಯಲಿ

MUST WATCH

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

udayavani youtube

ಒಂದು ಮೂಟೆಯ ಗೊಬ್ಬರದ ದುಡ್ಡಿನಲ್ಲಿ ೧ವರ್ಷದ ಜೀವಾಮೃತ ತಯಾರು ಮಾಡಬಹುದು!

ಹೊಸ ಸೇರ್ಪಡೆ

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

16DC

ಮಂಗಳೂರು: ಆ. 14ರ ವರೆಗೆ ಸೆಕ್ಷನ್‌ 144 ಮುಂದುವರಿಕೆ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

15-loan

ಬೀದಿಬದಿ ವರ್ತಕರು ಸಾಲ ಸೌಲಭ್ಯ ಬಳಸಿಕೊಳ್ಳಿ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.