ಕಾಮನ್‌ವೆಲ್ತ್‌ ಸಾಧನೆ ಒಲಿಂಪಿಕ್ಸ್‌ನಲ್ಲೂ ಮುಂದುವರೆಯಲಿ


Team Udayavani, Aug 9, 2022, 6:00 AM IST

ಕಾಮನ್‌ವೆಲ್ತ್‌ ಸಾಧನೆ ಒಲಿಂಪಿಕ್ಸ್‌ನಲ್ಲೂ ಮುಂದುವರೆಯಲಿ

ಜು.28ಕ್ಕೆ ಉದ್ಘಾಟನೆಗೊಂಡ ಕಾಮನ್‌ವೆಲ್ತ್‌ ಗೇಮ್ಸ್‌ ಆ.8ಕ್ಕೆ ಮುಗಿದುಹೋಗಿದೆ. ಲಾನ್‌ ಬೌಲ್ಸ್‌ನಂತಹ ಭಾರತಕ್ಕೆ ತೀರಾ ಅಪರಿಚಿತ ಎನಿಸಿದ್ದ ಕ್ರೀಡೆಯಲ್ಲೂ ನಾವು ಪದಕ ಗೆದ್ದಿದ್ದೇವೆ. 2018ರ ಗೋಲ್ಡ್‌ ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶೂಟಿಂಗ್‌ ಇತ್ತು. ಆಗ ಶೂಟಿಂಗ್‌ನ 16 ಪದಕ ಸೇರಿ ಭಾರತಕ್ಕೆ ಬಂದಿದ್ದು ಒಟ್ಟು 66 ಪದಕಗಳು. ಈ ಬಾರಿ ಶೂಟಿಂಗ್‌ ನಡೆದಿಲ್ಲ. ಅದರ ಗೈರಿನಲ್ಲೂ ಭಾರತೀಯರ ಒಟ್ಟು ಪದಕಗಳ ಸಂಖ್ಯೆ 61! ಅಂದರೆ ಇಲ್ಲಿ ಕಡಿಮೆಯಾಗಿದ್ದು ಕೇವಲ 5 ಪದಕಗಳು! ಇದರರ್ಥ ಇಷ್ಟೇ: ಭಾರತೀಯರು ಉಳಿದ ಕ್ರೀಡೆಗಳಲ್ಲಿ ಬಹಳ ಪ್ರಗತಿ ಸಾಧಿಸಿದ್ದಾರೆ. ಶೂಟಿಂಗ್‌ ಇಲ್ಲವೆಂಬ ಕಾರಣಕ್ಕೆ ಪದಕಪಟ್ಟಿ ಸೊರಗಲು ಬಿಟ್ಟಿಲ್ಲ. ಭಾರತೀಯರ ಪಾಲಿಗೆ ಇದು ಆಶಾದಾಯಕ ಸಂಗತಿ.

ಈ ಬಾರಿ ವೇಟ್‌ಲಿಫ್ಟಿಂಗ್‌ ಮೂಲಕ ಭಾರತೀಯರ ಪದಕ ಬೇಟೆ ಆರಂಭವಾಯಿತು. ಕುಸ್ತಿ, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಟಿಟಿಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಮಹಿಳಾ ಟಿ20, ಮಹಿಳಾ ಹಾಕಿಯಲ್ಲಿ ಅಂತಿಮ ಹಂತದಲ್ಲಿ ಭಾರತಕ್ಕೆ ನಿರಾಶೆ ಎದುರಾದರೂ, ಇಲ್ಲಿ ತಂಡದ ಆಟದ ಗುಣ ಮಟ್ಟದಲ್ಲಿ ಭಾರೀ ಏರಿಕೆಯಾಗಿದ್ದು ಮುಖ್ಯವಾಗುತ್ತದೆ. ಪುರುಷರ ಹಾಕಿಯಲ್ಲಿ ಭಾರತೀಯರು ನಿರೀಕ್ಷೆಯಂತೆ ಫೈನಲ್‌ಗೇರಿದರೂ ಆಸ್ಟ್ರೇಲಿಯ ದ ಅಭೇದ್ಯ ಕೋಟೆಯೆದುರು ಮತ್ತೆ ವೈಫ‌ಲ್ಯ ಅನುಭವಿಸಿ, ಬೆಳ್ಳಿಗೆ ಸಮಾಧಾನಪಟ್ಟರು. ಇಲ್ಲಿ ಮಾತ್ರ ಭಾರತ ಸುಧಾರಿಸಲೇ ಬೇಕಾಗಿದೆ!

ವಿಶೇಷವೆಂದರೆ ಭಾರತೀಯರು ಹೆಸರೇ ಕೇಳಿರದ ಲಾನ್‌ ಬೌಲ್ಸ್‌ ನಂತಹ ಕ್ರೀಡೆಯಲ್ಲೂ ಭಾರತಕ್ಕೆ ಒಂದು ಚಿನ್ನ, ಒಂದು ಬೆಳ್ಳಿ ಲಭಿಸಿದೆ. ಪ್ಯಾರಾ ಪವರ್‌ಲಿಫ್ಟಿಂಗ್‌, ಟೇಬಲ್‌ ಟೆನಿಸ್‌ ಸ್ಪರ್ಧೆಗಳಲ್ಲೂ ಪದಕಗಳು ಲಭಿ ಸಿದವು. ಇವೆಲ್ಲ ಐತಿಹಾಸಿಕ ಸಾಧನೆಗಳು. ಯಾವುದರಲ್ಲಿ ಹಿಂದೆಲ್ಲ ನಮಗೆ ನಿರೀಕ್ಷೆಗಳೇ ಇರಲಿಲ್ಲವೋ ಅಂತಹ ಕಡೆಯೂ ಭರವಸೆಗಳು ಹುಟ್ಟಿಕೊಂಡಿವೆ. ಬಹುಶಃ ಹೀಗೆಯೇ ಸಾಗಿದರೆ 2026 ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯರು ಅಗ್ರ 2 ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವುದು ಖಚಿತ.

ಈ ಬಾರಿ ಕುಸ್ತಿಯಲ್ಲಿ 6, ಟೇಬಲ್‌ ಟೆನಿಸ್‌ 4, ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ತಲಾ 3 ಚಿನ್ನದ ಪದಕಗಳು ಬಂದಿವೆ. ಈ ಸಾಧನೆಗಳನ್ನು ನಾವು ಮಹತ್ವದ್ದಾಗಿಯೇ ಪರಿಗಣಿಸಬೇಕು. ಭಾರತ ತೀವ್ರ ವೈಫ‌ಲ್ಯ ಕಾಣುತ್ತಿರುವ ಕ್ಷೇತ್ರವೆಂದರೆ ಅಥ್ಲೆಟಿಕ್ಸ್‌. ಇಲ್ಲಿ ಸುಧಾರಿಸಿಕೊಳ್ಳಲೇಬೇಕಾಗಿದೆ. ಭಾರತಕ್ಕೆ ಅಥ್ಲೆಟಿಕ್ಸ್‌ ಮೂಲಕ ಈ ಬಾರಿ ಬಂದಿದ್ದು 1 ಚಿನ್ನ, 4 ಬೆಳ್ಳಿ, 3 ಕಂಚು ಸೇರಿದಂತೆ ಒಟ್ಟು 8 ಪದಕಗಳು ಮಾತ್ರ. ಗರಿಷ್ಠ ಸ್ಪರ್ಧೆಗಳು ನಡೆಯುವ ವಿಭಾಗವಿದು. ಇಲ್ಲಿ ಯಾವುದೇ ದೇಶ ಕುಸಿತ ಕಂಡರೆ ಅದು ಒಟ್ಟಾರೆ ಫ‌ಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳು ದಕ್ಕಬೇಕಾದರೆ ಅಥ್ಲೆಟಿಕ್ಸ್‌ನಲ್ಲಿ ಸುಧಾರಣೆ ಮುಖ್ಯವಾಗಿದೆ.

ಅಥ್ಲೆಟಿಕ್ಸ್‌ ಭಾರತದ ಪಾಲಿಗೆ ಮರಳುಗಾಡೇನು ಅಲ್ಲ. ಈ ಬಾರಿ ಟ್ರಿಪಲ್‌ಜಂಪ್‌ನಲ್ಲಿ ಭಾರತೀಯರೇ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡಿದ್ದಾರೆ. ಇದು ಶ್ರೇಷ್ಠ ಸಾಧನೆ. ಲಾಂಗ್‌ಜಂಪ್‌ನಲ್ಲಿ ಭಾರತಕ್ಕೆ ಕೇವಲ 1 ಸೆ.ಮೀ.ನಲ್ಲಿ ಚಿನ್ನ ತಪ್ಪಿದೆ. ಈ ಅಥ್ಲೀಟ್‌ಗಳೆಲ್ಲ ಮುಂದಿನ ಒಲಿಂಪಿಕ್ಸ್‌ಗೆ ಸಿದ್ಧವಾಗುತ್ತಿದ್ದಾರೆ. ಸಂಬಂಧಪಟ್ಟ ಕ್ರೀಡಾಸಂಸ್ಥೆಗಳು ಟೊಂಕಕಟ್ಟಿದರೆ ಮುಂದಿನ ದಿನಗಳಲ್ಲಿ ವಿಶ್ವ ಕ್ರೀಡಾರಂಗದಲ್ಲಿ ಭಾರತ ಪ್ರಬಲವಾಗುವುದರಲ್ಲಿ ಸಂಶಯವೇ ಇಲ್ಲ.

 

ಟಾಪ್ ನ್ಯೂಸ್

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

ಪಿಎಫ್ಐ ಮೇಲೆ ದಾಳಿ: ಜನರ ಮುಂದೆ ದಾಳಿಯ ಸತ್ಯಾಂಶ ಇಡಬೇಕು; ಹೆಚ್.ಡಿ.ಕುಮಾರಸ್ವಾಮಿ

ಪಿಎಫ್ಐ ಮೇಲೆ ದಾಳಿ: ಜನರ ಮುಂದೆ ದಾಳಿಯ ಸತ್ಯಾಂಶ ಇಡಬೇಕು; ಹೆಚ್.ಡಿ.ಕುಮಾರಸ್ವಾಮಿ

ಪುಳಕಿತ್ ರೆಸಾರ್ಟ್ ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆಯ ಅಡ್ಡೆಯಾಗಿತ್ತು; ಮಾಜಿ ಉದ್ಯೋಗಿ

ಪುಳಕಿತ್ ರೆಸಾರ್ಟ್ ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆಯ ಅಡ್ಡೆಯಾಗಿತ್ತು; ಮಾಜಿ ಉದ್ಯೋಗಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ರೈತರ ಆಸ್ತಿ ಜಪ್ತಿಗೆ ತಡೆ: ದುರುಪಯೋಗವಾಗದಂತೆ ಎಚ್ಚರ ವಹಿಸಲಿ

ರೈತರ ಆಸ್ತಿ ಜಪ್ತಿಗೆ ತಡೆ: ದುರುಪಯೋಗವಾಗದಂತೆ ಎಚ್ಚರ ವಹಿಸಲಿ

ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಯಾಗಲಿ

ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಯಾಗಲಿ

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ದೂರದೃಷ್ಟಿ ಅಗತ್ಯ

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ದೂರದೃಷ್ಟಿ ಅಗತ್ಯ

ರಾಜಕೀಯ ಆರೋಪಗಳು ಎಲ್ಲೆ ಮೀರದಿರಲಿ

ರಾಜಕೀಯ ಆರೋಪಗಳು ಎಲ್ಲೆ ಮೀರದಿರಲಿ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.