Udayavni Special

ಮೋಟಾರ್‌ ವಾಹನ ತಿದ್ದುಪಡಿ ಬಿಲ್ : ರಸ್ತೆ ಸುರಕ್ಷತೆಯ ಸವಾಲು:


Team Udayavani, Jul 18, 2019, 5:21 AM IST

u-36

ದೇಶದಲ್ಲಿನ ರಸ್ತೆ ಅಪಘಾತಗಳ ಗ್ರಾಫ್ ಮೇಲೇರುತ್ತಿರುವುದನ್ನು ನೋಡಿದರೆ, ರಸ್ತೆ ಸುರಕ್ಷತೆಯ ಬಗ್ಗೆ ನಮ್ಮ ಒಟ್ಟಾರೆ ವ್ಯವಸ್ಥೆ ಎಷ್ಟು ನಿಷ್ಕಾಳಜಿಯಿಂದಿದೆ ಎನ್ನುವುದು ಅರ್ಥವಾಗುತ್ತದೆ. ಪ್ರತಿ ನಿತ್ಯವೂ ತೀವ್ರತರ ರಸ್ತೆ ಅಪಘಾತಗಳ ಸುದ್ದಿ ಒಂದಲ್ಲ ಒಂದು ಕಡೆಯಿಂದ ಕೇಳಿಬರುತ್ತಲೇ ಇರುತ್ತದೆ. ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಚಾಲಕನ ನಿರ್ಲಕ್ಷ್ಯದಿಂದಾಗಿ ಪಾಂಡವಪುರ ಸಮೀಪದ ವಿ.ಸಿ. ನಾಲೆಗೆ ಖಾಸಗಿ ಬಸ್ಸೊಂದು ಉರುಳಿ ಮೂವತ್ತು ಜನ ಮೃತಪಟ್ಟ ಹೃದಯವಿದ್ರಾವಕ ಘಟನೆಗೆ ನಮ್ಮ ರಾಜ್ಯ ಸಾಕ್ಷಿಯಾಯಿತು. ನಮ್ಮಲ್ಲಿ ಅಂತಲ್ಲ, ಪ್ರತಿ ರಾಜ್ಯದಲ್ಲೂ ಈ ರೀತಿಯ ಅವಗಢಗಳು ವರದಿಯಾಗುತ್ತಲೇ ಇರುತ್ತವೆ. ಕಳೆದ ತಿಂಗಳಷ್ಟೇ ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಬಸ್‌ ಅಪಘಾತಗಳಲ್ಲೂ ಬಹಳ ಸಂಖ್ಯೆಯಲ್ಲಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಎರಡೂ ದುರ್ಘ‌ಟನೆಗಳಲ್ಲಿದ್ದ ಒಂದು ಸಾಮ್ಯತೆಯೇನೆಂದರೆ, ಎರಡರಲ್ಲೂ ಪೂರ್ವನಿರ್ಧರಿತ ಕ್ಷಮತೆಗಿಂತ ಮೂರು ಪಟ್ಟು ಹೆಚ್ಚು ಜನ ಪಯಣಿಸುತ್ತಿದ್ದರು ಎನ್ನುವುದು.

ಬಹುತೇಕ ಅಪಘಾತಗಳು ಚಾಲಕನ ನಿರ್ಲಕ್ಷ್ಯದಿಂದಾಗಿಯೇ ಆಗುತ್ತಿವೆ. ಈ ಸಮಸ್ಯೆಯನ್ನು ಹೇಗೆ ತಗ್ಗಿಸುವುದು ಎನ್ನುವುದೇ ಈಗ ಇರುವ ಸವಾಲು. ಭಾರತದಲ್ಲಿ ರಸ್ಥೆ ಸುರಕ್ಷತೆ ಮತ್ತು ಪರಿವಾಹನ ಸಂಬಂಧಿತ ಕಾಯ್ದೆ-ಕಾನೂನುಗಳು ಹಳೆಯವೇ ಇವೆ. ಇದಕ್ಕಿಂತಲೂ ಗಂಭೀರ ಸಂಗತಿಯೆಂದರೆ, ಈ ಕಾನೂನುಗಳನ್ನೂ ಜನ ಅನಾಯಾಸವಾಗಿ ಉಲ್ಲಂಘಿಸುತ್ತಲೇ ಇದ್ದಾರೆ ಎನ್ನುವುದು. ಕಾನೂನಿನ ಬಗ್ಗೆ ಯಾರಿಗೂ ಭಯವೇ ಉಳಿದಿಲ್ಲ. ಹೀಗಾಗಿ ಎಲ್ಲಿಯವರೆಗೂ ಕಾನೂನಿನ ಪುನರ್‌ ರಚನೆ ಆಗುವುದಿಲ್ಲವೋ, ನವ ಕಾನೂನುಗಳು ಕಟ್ಟು ನಿಟ್ಟಾಗಿ ಜಾರಿಯಾಗುವುದಿಲ್ಲವೋ ಅಲ್ಲಿಯವರೆಗೂ ಅವಘಡಗಳ ಪ್ರಮಾಣವೇನೂ ತಗ್ಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು ಮಂಡಿಸಿದ ಮೋಟಾರ್‌ ವಾಹನ ತಿದ್ದುಪಡಿ ವಿಧೇಯಕ 2019 ಶ್ಲಾಘನೀಯ. ವಾಹನ, ರಸ್ತೆ ಮತ್ತು ಚಾಲಕರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮಗಳ ಪ್ರಸ್ತಾಪಗಳು ಇದರಲ್ಲಿವೆ. ವಿಶೇಷ ಸಂಗತಿಯೆಂದರೆ, ಈ ವಿಧೇಯಕದಲ್ಲಿ ಚಾಲನಾ ಪರವಾನಗಿ ಸಂಬಂಧಿ ನಿಯಮಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪ್ರಸ್ತಾಪವಿದೆ. ದೇಶದಲ್ಲಿನ 30 ಪ್ರತಿಶತಕ್ಕೂ ಹೆಚ್ಚು ಡ್ರೈವಿಂಗ್‌ ಲೈಸೆನ್ಸ್‌ಗಳು ನಕಲಿ ಎಂದು ಖುದ್ದು ಸಚಿವರೇ ಒಪ್ಪಿಕೊಂಡಿದ್ದಾರೆ. ವಾಸ್ತವದಲ್ಲಿ ಈ ಪ್ರಮಾಣ ಇನ್ನೂ ಅಧಿಕವೇ ಇರುವ ಸಾಧ್ಯತೆ ಇದೆ. ತಿದ್ದುಪಡಿ ವಿಧೇಯಕದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಲಾಗೂ ಮಾಡುವ ಪ್ರಸ್ತಾಪವಿದೆ. ಅಲ್ಲದೇ ಈ ವಿಧೇಯಕವು: ವಾಹನಗಳಲ್ಲಿ ತಾಂತ್ರಿಕ ದೋಷವಿದ್ದರೆ ಸಂಬಂಧಿತ ನಿರ್ಮಾತೃ ಕಂಪನಿಯು ಅದನ್ನು ವಾಪಸ್‌ ಪಡೆಯಬೇಕಾಗುತ್ತದೆ ಎಂದೂ, ಹೊಸ ವಾಹನಗಳ ಪರೀಕ್ಷಣಾ ಪ್ರಕ್ರಿಯೆಯನ್ನು ಬದಲಿಸಿ, ಅದನ್ನು ಇನ್ನಷ್ಟು ಬಿಗಿಗೋಳಿಸಲಾಗುತ್ತದೆಂದೂ ಹೇಳುತ್ತದೆ. ಇನ್ನು ಟಯರ್‌ ಕಂಪನಿಗಳನ್ನೂ ಉತ್ತರಾದಿಯನ್ನಾಗಿಸುವ ಪ್ರಸ್ತಾಪವಿದೆ. ಒಂದು ವೇಳೆ ವಾಹನ ಅಥವಾ ಟಯರ್‌ನಲ್ಲಿನ ದೋಷದಿಂದಾಗಿ ಅವಘಡ ನಡೆದರೆ, ಸಂಬಂಧಿಸಿದ ಕಂಪನಿಗಳೇ ಕಾರಣೀಕರ್ತವಾಗುತ್ತವೆ. ಇದೇ ರೀತಿಯಲ್ಲೇ ಹೆದ್ದಾರಿ ನಿರ್ಮಾಣ ಕಂಪನಿಗಳ ಸುತ್ತಲೂ ಬಿಗಿ ನಿಯಮಗಳನ್ನು ರಚಿಸಲಾಗಿದೆ.

ನಕಲಿ ಲೈಸೆನ್ಸ್‌ ಮಾಡಿಸುವ ದಂಧೆಯ ಬೆನ್ನು ಹತ್ತಿದರೆ ದೇಶದ ಲಕ್ಷಾಂತರ ಆರ್‌ಟಿಒ ಕಚೇರಿಗಳಲ್ಲಿನ ತಿಮಿಂಗಲಗಳು ಸಿಕ್ಕಿ ಬೀಳುವುದು ನಿಶ್ಚಿತ. ಇನ್ನು, ಅವಘಡದ ಸಮಯದಲ್ಲಿ ತಪ್ಪೆಸಗಿದ ಜನರಿಗೆ/ ಕಂಪನಿಗಳಿಗೆ ವಿಧಿಸಲು ಪ್ರಸ್ತಾಪಿಸಲಾಗಿರುವ ಭಾರೀ ಮೊತ್ತದ ದಂಡದ ಪ್ರಮಾಣವೇ ಸಾಕು, ಜನರಲ್ಲಿ ಎಚ್ಚರಿಕೆ- ಭಯ ಹುಟ್ಟಿಸಲು. ಆದರೆ, ಇದಕ್ಕಿಂತಲೂ ಮುಖ್ಯವಾಗಿ ಕಾನೂನಿನ ಪ್ರಾಮಾಣಿಕ ಅನುಷ್ಠಾನವೂ ಮುಖ್ಯವಾಗುತ್ತದೆ. ದುರಂತವೆಂದರೆ, ರಸ್ತೆ ಸುರಕ್ಷತೆಯಂಥ ಮಹತ್ತರ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ತಾಳಮೇಳವೇ ಇಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ಮೋಟಾರ್‌ ವಾಹನ ವಿಧೇಯಕಕ್ಕೆ ವಿರೋಧ ಎದುರಾಗಿದೆ. ಈ ಕಾನೂನು ತಮ್ಮ ಅಧಿಕಾರ ಕಸಿದುಕೊಳ್ಳಲಿದೆ ಎನ್ನುವುದು ರಾಜ್ಯಗಳ ವಾದ. ಕಳೆದ ಬಾರಿಯೂ ಲೋಕಸಭೆಯಲ್ಲಿ ಈ ವಿಧೇಯಕ ಅನುಮೋದನೆಗೊಂಡಿತ್ತು, ಆದರೆ ರಾಜ್ಯಸಭೆಯಲ್ಲಿ ಪೆಟ್ಟು ತಿಂದಿತು. ಆದಾಗ್ಯೂ ಇದರ ಅನುಷ್ಠಾನ ರಾಜ್ಯಗಳಿಗೆ ಬಿಟ್ಟ ವಿಷಯ ಕೇಂದ್ರ ಸಾರಿಗೆ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಅನುಷ್ಠಾನದ ವಿಷಯದಲ್ಲೇ ಭಿನ್ನಾಭಿಪ್ರಾಯ ಇದ್ದಾಗ, ರಸ್ತೆ ಸುರಕ್ಷತೆಯ ವಿಚಾರದಲ್ಲಿ ಬಲಿಷ್ಠ ಕಾನೂನುಗಳು ರೂಪುಗೊಳ್ಳುವುದಾದರೂ ಹೇಗೆ, ಅವು ಅನುಷ್ಠಾನವಾಗುವುದಾದರೂ ಹೇಗೆ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

ಇಂದಿನಿಂದ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಸಹಾಯವಾಣಿ: ನಳಿನ್ ಕುಮಾರ್

ಇಂದಿನಿಂದ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಸಹಾಯವಾಣಿ: ನಳಿನ್ ಕುಮಾರ್

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಕೋವಿಡ್ 19 ಪಾಸಿಟಿವ್ ಬದಲು ನೆಗಟಿವ್ ಅಂತ ವರದಿ ಕೊಟ್ಟು ಯಡವಟ್ಟು!

ಕೋವಿಡ್ 19 ಪಾಸಿಟಿವ್ ಬದಲು ನೆಗಟಿವ್ ಅಂತ ವರದಿ ಕೊಟ್ಟು ಯಡವಟ್ಟು! ವ್ಯಕ್ತಿಗಾಗಿ ತೀವ್ರ ಶೋಧ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ರಾಮಾಯಣದ “ಸುಗ್ರೀವ” ಪಾತ್ರಧಾರಿ ಶ್ಯಾಮ್ ಸುಂದರ್ ಕಾಲಾನಿ ವಿಧಿವಶ

ರಾಮಾಯಣದ “ಸುಗ್ರೀವ” ಪಾತ್ರಧಾರಿ ಶ್ಯಾಮ್ ಸುಂದರ್ ಕಾಲಾನಿ ವಿಧಿವಶ, ಗಣ್ಯರ ಸಂತಾಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಎಲ್ಲ ವರ್ಗದವರಿಗೂ ನೆರವು ಅಗತ್ಯ

ಎಲ್ಲ ವರ್ಗದವರಿಗೂ ನೆರವು ಅಗತ್ಯ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಮಾವು ಮಾರಾಟಕ್ಕೆ ತೊಂದರೆ ಇಲ್ಲ

ಮಾವು ಮಾರಾಟಕ್ಕೆ ತೊಂದರೆ ಇಲ್ಲ

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

09-April-28

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ-ಪರಿಶೀಲನೆ

09-April-27

ಚಪ್ಪರದಾಂಜನೇಯ ಸ್ವಾಮಿಗೆ ವಿಶೇಷ ಪೂಜೆ

ಕೋವಿಡ್ ವಿರುದ್ಧ ಹೋರಾಟದ ಮುಂಚೂಣಿ ಪಡೆ ಬದಲಿಸಲು ನಿರ್ಧಾರ

ಕೋವಿಡ್ ವಿರುದ್ಧ ಹೋರಾಟದ ಮುಂಚೂಣಿ ಪಡೆ ಬದಲಿಸಲು ನಿರ್ಧಾರ