ಮೋದಿ ರಷ್ಯಾ ಭೇಟಿ ಸಂಬಂಧ ಪುನಶ್ಚೇತನಕ್ಕೆ ಸಹಕಾರಿ 


Team Udayavani, May 22, 2018, 6:00 AM IST

16.jpg

ಭಯೋತ್ಪಾದನೆ ನಿಗ್ರಹ, ಆರ್ಥಿಕ ಸಹಭಾಗಿತ್ವ,  ಪರಮಾಣು ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಉಭಯ ದೇಶಗಳು ಕಾರ್ಯಯೋಜನೆಗಳನ್ನು ಹಾಕಿಕೊಳ್ಳುವ ಅಗತ್ಯವಿದೆ.

ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ರಷ್ಯಾ ಭೇಟಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೊಸ ಮಜಲಿಗೊಯ್ಯುವ ನಿರೀಕ್ಷೆ ಮೂಡಿಸಿದೆ. ಸೋಚಿಯಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜಾಗತಿಕವಾಗಿ ಮಹತ್ವ ಪಡೆದುಕೊಂಡಿರುವ ಹಲವಾರು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆರಂಭದಿಂದಲೂ ಭಾರತ ಮತ್ತು ರಷ್ಯಾ ನಡುವೆ ಅತ್ಯುತ್ತಮ ವಾದ ದ್ವಿಪಕ್ಷೀಯ ಸಂಬಂಧವಿತ್ತು. ರಷ್ಯಾವನ್ನು ಭಾರತದ ಆಪತಾºಂಧವ ದೇಶ ಎಂದೇ ಅರಿಯಲಾಗುತ್ತಿತ್ತು. ಭಾರತಕ್ಕೆ ಅಗತ್ಯವಿರುವ ಶಸ್ತ್ರಾÕಸ್ತ್ರ ಮಾತ್ರವಲ್ಲದೆ ಆಹಾರ ಧಾನ್ಯಗಳು ಕೂಡಾ ರಷ್ಯಾದಿಂದಲೇ ಬರುತ್ತಿದ್ದವು.ಆದರೆ ಕ್ರಮೇಣ ಭಾರತ ಆಹಾರ ಉತ್ಪಾದನೆ ಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಶಸ್ತ್ರಾಸ್ತ್ರ ಆಮದು ಈಗಲೂ ನಡೆಯುತ್ತಿದ್ದರೂ ಅದರ ಪ್ರಮಾಣ ತುಸು ಕಡಿಮೆಯಾಗಿದೆ. 

ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ಅಮೆರಿಕ ಸಂಬಂಧ ಗಾಢ ವಾಗುತ್ತಿದ್ದು, ಇದರಿಂದಾಗಿ ರಷ್ಯಾ ದೂರವಾಗುತ್ತಿದೆ ಎಂಬ ಕಳವಳವಿದೆ. ಭಾರತದ ಈ ತಂತ್ರಕ್ಕೆ ಎದುರಾಗಿ ರಷ್ಯಾ, ಪಾಕಿಸ್ಥಾನ ಮತ್ತು ಚೀನವನ್ನು ತನ್ನ ನಿಕಟ ವಲಯಕ್ಕೆ ಸೇರಿಸಿಕೊಂಡಿದೆ. ಅದರಲ್ಲೂ ರಷ್ಯಾ ಮತ್ತು ಪಾಕಿಸ್ಥಾನದ ಗೆಳೆತನ ಭಾರತದ ಪಾಲಿಗೆ ಬಿಸಿ ತುಪ್ಪವಾಗಿತ್ತು. 2016ರಲ್ಲಿ ಈ ದೇಶಗಳ ಜಂಟಿ ಸಮರಾಭ್ಯಾಸವನ್ನು ನಡೆಸಿ ಭಾರತದ ಕಳವಳವನ್ನು ಇನ್ನಷ್ಟು ಹೆಚ್ಚಿಸಿವೆ. ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸಮರಾ ಭ್ಯಾಸವನ್ನು ಮುಂದೂಡ ಬೇಕು ಎನ್ನುವ ಭಾರತದ ಕೋರಿಕೆಗೂ ರಷ್ಯಾ ಮನ್ನಣೆ ನೀಡಿರಲಿಲ್ಲ. ಹೀಗೆ ಎರಡು ಶತ್ರು ರಾಷ್ಟ್ರಗಳನ್ನು ರಷ್ಯಾ ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ವ್ಯೂಹ ರಚಿಸಿ ದಾಗ ರಷ್ಯಾ ಜತೆಗಿನ ಸಂಬಂಧ ಸುಧಾರಣೆ ಆಗುವ ಸಾಧ್ಯತೆಯಿಲ್ಲ ಎನ್ನುವ ಆತಂಕ ಎದುರಾಗಿತ್ತು. ಇದೀಗ ಅನೌಪ ಚಾರಿಕ ಮಾತುಕತೆ ಗಾಗಿ ನರೇಂದ್ರ ಮೋದಿ ಯನ್ನು ಆಹ್ವಾನಿಸಿರುವುದರಿಂದ ಈ ಆತಂಕ ನಿವಾರಣೆಗೆ ವೇದಿಕೆ ಸಿದ್ಧ ವಾಗಬಹುದು. 18 ವರ್ಷದ ಹಿಂದೆ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಪುಟಿನ್‌ ಭಾರತ-ರಷ್ಯಾ ವ್ಯೂಹಾತ್ಮಕ ಸಹ ಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದು ಸೋವಿಯತ್‌ ರಷ್ಯಾ ಪತನದ ಬಳಿಕ ಉಭಯ ದೇಶಗಳ ನಡುವಿನ ಮೊದಲ ಒಪ್ಪಂದವಾಗಿತ್ತು. ದ್ವಿಪಕ್ಷೀಯ ಸಂಬಂಧ ವರ್ಧನೆಯೇ ಒಪ್ಪಂದದ ಮೂಲ ಆಶಯವಾಗಿತ್ತು. ಆದರೆ ಅನಂತರ ನಡೆದ ಜಾಗತಿಕ ರಾಜಕೀಯ ಪಲ್ಲಟಗಳಿಂದಾಗಿ ಈ ಒಪ್ಪಂದ ನೇಪಥ್ಯಕ್ಕೆ ಸರಿದಿತ್ತು. ಇದೀಗ ಮೋದಿ ಭೇಟಿಯಿಂದ ಈ ಒಪ್ಪಂದ ಮರುಜೀವ ಪಡೆಯುವ ನಿರೀಕ್ಷೆಯಿದೆ. ಭಯೋತ್ಪಾದನೆ ನಿಗ್ರಹ, ರಕ್ಷಣಾ ಸಹಭಾಗಿತ್ವ, ಆರ್ಥಿಕ ಸಹಭಾಗಿತ್ವ, ವ್ಯಾಪಾರ ಸಂಬಂಧ, ಬಾಹ್ಯಾಕಾಶ ವಿಜ್ಞಾನ, ಪರಮಾಣು ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಉಭಯ ದೇಶಗಳು ಜಂಟಿಯಾಗಿ ಕಾರ್ಯ ಯೋಜನೆಗಳನ್ನು ಹಾಕಿ ಕೊಳ್ಳುವ ಅಗತ್ಯವಿದೆ. ಈಗಲೂ ದೇಶದ ಶೇ. 60ರಷ್ಟು ಶಸ್ತ್ರಾಸ್ತ್ರಗಳು ರಷ್ಯಾ ದಿಂದ ಆಮದು ಮಾಡಿಕೊಂಡವುಗಳಾಗಿವೆ. ಇವುಗಳ ನಿರ್ವಹಣೆಗೆ ರಷ್ಯಾ ಜತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ಅನಿವಾರ್ಯತೆಯಿದೆ. 

ಇರಾನ್‌ನಲ್ಲಿ ತೈಲ ಉತ್ಪಾದನೆ ಕುಸಿತವಾಗಿರುವುದರಿಂದ ಭಾರತ ಪರ್ಯಾಯ ಮೂಲಗಳತ್ತ ಗಮನ ಹರಿಸುವ ಅಗತ್ಯ ಸೃಷ್ಟಿಯಾಗಿದೆ. ರಷ್ಯಾ ಭೇಟಿ ಫ‌ಲಪ್ರದವಾದರೆ ಅಲ್ಲಿರುವ ವಿಫ‌ುಲ ಇಂಧನ ಮೂಲಗಳ ಪ್ರಯೋಜನ ಭಾರತಕ್ಕಾಗಬಹುದು. ಶಾಂತಿಯುತ ಉದ್ದೇಶಗಳಿಗೆ ಪರಮಾಣು ಇಂಧನ ಬಳಸುವ ಭಾರತದ ಯೋಜನೆಗಳನ್ನು ರಷ್ಯಾ ಹಿಂದಿನಿಂದಲೂ ಬೆಂಬಲಿಸುತ್ತಿದೆ. ತಮಿಳುನಾಡಿನ ಕೂಡಂಕುಳಂನಲ್ಲಿ ನಿರ್ಮಾಣವಾಗಿರುವ ಅಣು ವಿದ್ಯುತ್‌ ಸ್ಥಾವರದಲ್ಲಿ ರಷ್ಯಾದ ಸಹ ಭಾಗಿತ್ವವಿದೆ. ಇನ್ನಷ್ಟು ಪರಮಾಣು ಕಾರ್ಯಕ್ರಮಗಳಿಗೆ ರಷ್ಯಾದ ಸಹ ಭಾಗಿತ್ವವನ್ನು ನಿರೀಕ್ಷಿಸಬಹುದು. ಬಾಹ್ಯಾಕಾಶ ವಿಜ್ಞಾನ ರಷ್ಯಾ ಸಹಭಾಗಿತ್ವ ಬಯಸುವ ಇನ್ನೊಂದು ಕ್ಷೇತ್ರ. ನಾಲ್ಕು ದಶಕದ ಹಿಂದೆ ರಷ್ಯಾ ನೆರವಿನಿಂದ ಭಾರತ ತನ್ನ ಮೊದಲ ಉಪಗ್ರಹ ಆರ್ಯಭಟವನ್ನು ಉಡಾವಣೆ ಮಾಡಿತ್ತು. ಅನಂತರ ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳು ಬಹಳಷ್ಟು ಸಾಧನೆ ಮಾಡಿವೆ. ಮೋದಿ ಭೇಟಿಯ ಫ‌ಲವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಭಾಗಿತ್ವ ಇನ್ನಷ್ಟು ಹೆಚ್ಚಳವಾಗಲಿದೆ. 

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.