ಸಿಡಿ ಪ್ರಕರಣ ಶೀಘ್ರ ಇತ್ಯರ್ಥವಾಗಲಿ


Team Udayavani, Mar 12, 2021, 6:40 AM IST

ಸಿಡಿ ಪ್ರಕರಣ ಶೀಘ್ರ ಇತ್ಯರ್ಥವಾಗಲಿ

ರಾಜ್ಯ ಮತ್ತು ರಾಷ್ಟ್ರ  ಮಟ್ಟದಲ್ಲಿ  ತಲ್ಲಣ ಉಂಟು ಮಾಡಿರುವ ಸಿಡಿ ಪ್ರಕರಣ ಈಚೆಗೆ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ಸಮಾಜದಲ್ಲಿ ಅಸಹ್ಯ ಹುಟ್ಟಿಸುವಂತೆ ಮಾಡಿರುವುದಂತೂ ಸತ್ಯ. ಹಲವು ತಿರುವುಗಳನ್ನು ಪಡೆದುಕೊಂಡ ಪ್ರಕರಣ ಈಗ ತನಿಖೆಯ ಮಟ್ಟಕ್ಕೆ ಮುಟ್ಟಿದೆ.

ಗೌರವಯುತ ಸಮಾಜದಲ್ಲಿ  ಸಾರ್ವಜನಿಕ ಜೀವನದಲ್ಲಿ ಇರುವವರು ಹೇಗೆ ನಡೆದುಕೊಂಡರೂ ಅದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಅಶ್ಲೀಲ ವೀಡಿಯೋ ಪ್ರಕರಣ ಹಾಗೂ ಇನ್ನಷ್ಟು ಸಿಡಿಗಳಿವೆ ಎಂಬ ಬೆದರಿಕೆಗಳನ್ನು ಗಮನಿಸುತ್ತಾ ಹೋದರೆ, ನಮ್ಮ ಸಾರ್ವಜನಿಕ ಜೀವನ ತಳ ಮುಟ್ಟಿದೆ ಎಂದು ಹೇಳಲೇಬೇಕಾಗುತ್ತದೆ. ಇಡೀ ದೇಶದಲ್ಲಿ ಕರ್ನಾಟಕದ ರಾಜಕಾರಣಿಗಳು ಹಾಗೂ ರಾಜಕೀಯ ನಡೆಗಳು ಎಂದಿಗೂ ಆದರ್ಶವಾದುದು ಎಂಬ ಹೆಗ್ಗಳಿಕೆ ಪಡೆದಿತ್ತು. ಇತಿಹಾಸದಲ್ಲಿ ಕರ್ನಾಟಕದ ರಾಜಕಾರಣ ಘನತೆ ತಪ್ಪಿ ಹೆಜ್ಜೆ ಹಾಕಿದ ಪ್ರಸಂಗಗಳು ಭಾರೀ ಅಪರೂಪ. ಆದರೆ ಇಂಥ ಪ್ರಕರಣಗಳು ರಾಜ್ಯದ ಘನತೆಯನ್ನು ಮೂರಾಬಟ್ಟೆ ಮಾಡಿದೆ.

ಈ ಸಿಡಿ ಸಂಪೂರ್ಣ ನಕಲಿಯಾಗಿದೆ ಎಂದು ಪ್ರಕರಣದಲ್ಲಿ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಮೇಶ್‌ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿದ್ದಾರೆ. ಒಬ್ಬ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಹೆಣ್ಣಿನ ಅಸಹಾಯಕತೆಯನ್ನು ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಅಪರಾಧವೋ, ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ತೆರೆಗೆ ಸರಿಸಲು ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಬಲಿಪಶು ಮಾಡುವುದೂ ಕೂಡ ಅಷ್ಟೇ ಗಂಭೀರ ಅಪರಾಧವಾಗುತ್ತದೆ. ಈಗ ಬಿಡುಗಡೆಯಾಗಿರುವ ವೀಡಿಯೋ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ಪ್ರಕರಣವನ್ನು ಸರಕಾರ ಎರಡು ಆಯಾಮಗಳಲ್ಲಿ ತನಿಖೆ ನಡೆಸುವ ಅಗತ್ಯವಿದ್ದು, ಅಧಿಕಾರದಾಸೆ ತೋರಿಸಿ ಮಹಿಳೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆನ್ನುವ ಆರೋಪ ಹಾಗೂ ರಾಜಕೀಯವಾಗಿ ತೇಜೋವಧೆ ಮಾಡಲು ಷಡ್ಯಂತ್ರ ಮಾಡಿ ನಕಲಿ ಸಿಡಿ ಸೃಷ್ಟಿಸಲಾಗಿದೆ ಎನ್ನುವ ಆರೋಪ. ಎರಡೂ ಬೆಳವಣಿಗೆಗಳು ಅನೈತಿಕತೆಯನ್ನೇ ಬಿಂಬಿಸುತ್ತವೆ.

ಈ ರೀತಿಯ ಪ್ರಕರಣಗಳಲ್ಲಿ  ಪ್ರಾಮಾಣಿಕ ತನಿಖೆಯಾಗಿ ಆದಷ್ಟು ಶೀಘ್ರ ಸತ್ಯಾಂಶ ಹೊರಬರಬೇಕಿದೆ.  ಸಿಡಿ ಪ್ರಕರಣದಿಂದ ರಾಜಕೀಯ ವ್ಯವಸ್ಥೆ ಹಾಗೂ ರಾಜಕಾರಣಿಗಳ ಬಗ್ಗೆ  ಜನರಿಗಿರುವ ಕೀಳು ಭಾವನೆ ಯನ್ನು ಹೊಡೆದೋಡಿಸಲು ಈ ತನಿಖೆ ಅತ್ಯಂತ ಮಹತ್ವದ್ದಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಕೊಡಿಸುವ ಕೆಲಸ ಮಾಡಿದರೆ, ಅಧಿಕಾರಸ್ಥರು ಅಧಿಕಾರದ ದುರುಪಯೋಗ ಪಡಿಸಿಕೊಳ್ಳುವುದು ಹಾಗೂ ಅಧಿಕಾರದಲ್ಲಿರುವವರ ವಿರುದ್ಧ  ತೇಜೋವಧೆ ಮಾಡಲು ಅನೈತಿಕ ರೀತಿಯಲ್ಲಿ ಷಡ್ಯಂತ್ರ ಮಾಡುವುದಕ್ಕೆ ಪಾಠ ಕಲಿಸಿದಂತಾ

ಗುತ್ತದೆ. ಅಲ್ಲದೇ, ಆಗಿರುವ ಬೆಳವಣಿಗೆ ಬಗ್ಗೆ ಸಾರ್ವಜನಿಕರಲ್ಲಿರುವ ಕುತೂಹಲ, ಗೊಂದಲ, ಅನುಮಾನಗಳಿಗೆ ಉತ್ತರ ಸಿಕ್ಕಂತಾಗುತ್ತದೆ.  ಜತೆ ಜತೆಗೆ ಖಾಸಗಿ ವಿಚಾರಗಳನ್ನು ಮುನ್ನೆಲೆಗೆ ತಂದು ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಬ್ಲಾಕ್‌ವೆುàಲ್‌ ಪ್ರವೃತ್ತಿಗೂ ಕಡಿವಾಣ ಹಾಕುವುದು ಈಗಿನ ತುರ್ತು ಅಗತ್ಯವಾಗಿದೆ.

ಟಾಪ್ ನ್ಯೂಸ್

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

satish jarkiholi

ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್

ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?

vote

ಮೈಸೂರಿನಲ್ಲಿ ಸಂವಾದ ;ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪರಿಷತ್ ಅಭ್ಯರ್ಥಿಗಳು ತಬ್ಬಿಬ್ಬು

ಕೋವಿಡ್ ತಡೆಗೆ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಿ: ಸಿದ್ದರಾಮಯ್ಯ ಸಲಹೆ

ಕೋವಿಡ್ ತಡೆಗೆ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಿ: ಸಿದ್ದರಾಮಯ್ಯ ಸಲಹೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

hgfjghgfd

ಲಸಿಕೆ ಪಡೆಯದವರಿಗೆ ಸರಕಾರಿ ಸವಲತ್ತು ಕೊಡಬೇಡಿ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಹೊಸ ರೂಪಾಂತರಿ ಒಮಿಕ್ರಾನ್‌ ಬಗ್ಗೆ ಇರಲಿ ಎಚ್ಚರಿಕೆ

ಹೊಸ ರೂಪಾಂತರಿ ಒಮಿಕ್ರಾನ್‌ ಬಗ್ಗೆ ಇರಲಿ ಎಚ್ಚರಿಕೆ

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

IMG-20211203-WA0017

ಧರ್ಮಸ್ಥಳ: ಕೆರೆಕಟ್ಟೆ ಉತ್ಸವವನ್ನು ನೋಡುವುದೇ ಒಂದು ಚಂದ

14minority

ಅಲ್ಪ ಸಂಖ್ಯಾತರ ಶೋಷಣೆಗೆ ಖಂಡನೆ

13protest

ಗೋವುಗಳ ಸಮೇತ ಗ್ರಾಪಂಗೆ ರೈತರ ಮುತ್ತಿಗೆ

milk rate

ರೈತರ ಹಾಲಿನ ಖರೀದಿ ದರ ಕನಿಷ್ಠ 30ರೂ.ಗೆ ಏರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.