Editorial; ಮರಾಠಿ ಶಿಕ್ಷಕರ ನೇಮಕ: ಸರಕಾರ ಮಧ್ಯಪ್ರವೇಶಿಸಲಿ


Team Udayavani, Jun 19, 2024, 6:00 AM IST

Recruitment of Marathi teachers: Government should intervene

ಇದುವರೆಗೆ ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ, ಆಡಳಿತಾತ್ಮಕವಾಗಿ ಕೇರಳಕ್ಕೆ ಸೇರಿರುವ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಮಾತ್ರ ಎದುರಿಸುತ್ತಿದ್ದ ಸಮಸ್ಯೆ ಈಗ ಮಹಾರಾಷ್ಟ್ರ -ಕರ್ನಾಟಕ ಗಡಿಭಾಗದ, ರಾಜ್ಯ ವಿಂಗಡನೆಯ ಲೆಕ್ಕದಲ್ಲಿ ಮಹಾರಾಷ್ಟ್ರಕ್ಕೆ ಸೇರಿರುವ ಕನ್ನಡ ಶಾಲೆಗಳ ಚಿಣ್ಣರು ಎದುರಿ ಸಲಾರಂಭಿಸಿದ್ದಾರೆ. ಈ ಭಾಗದ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರಕಾರವು 24 ಶಿಕ್ಷಕರನ್ನು ನೇಮಕ ಮಾಡಿದ್ದು, ಇವರಲ್ಲಿ 7 ಮಂದಿ ಮಾತ್ರ ಕನ್ನಡ ಬಲ್ಲವರು; ಇನ್ನುಳಿದ ಶಿಕ್ಷಕರಿಗೆ ಕನ್ನಡದ ಗಂಧಗಾಳಿಯೇ ಇಲ್ಲ ಎಂಬುದೇ ಮಕ್ಕಳ ಸಮಸ್ಯೆಗೆ ಕಾರಣ. ಮಹಾರಾಷ್ಟ್ರ ಸರಕಾರದ ಕನ್ನಡ, ಕರ್ನಾಟಕ ವಿರೋಧಿ ನೀತಿ-ನಿಲುವುಗಳಿಗೆ ಈ ನೇಮಕಾತಿ ಹೊಸ ಸೇರ್ಪಡೆಯಂತಿದೆ.

ಈ ಹಿಂದೆ ಕಾಸರಗೋಡು ಕಡೆಯ ಅನೇಕ ಕನ್ನಡ ಶಾಲೆಗಳಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಕನ್ನಡ ಬಾರದ, ಕೇವಲ ಮಲಯಾಳ ಮಾತ್ರ ಬಲ್ಲ ಶಿಕ್ಷಕರ ನೇಮಕಾತಿಯಿಂದ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದರು. ಮಕ್ಕಳೇ ಮುಂದೆ ನಿಂತು ಇಂತಹ ನೇಮಕಾತಿಯನ್ನು ತೀವ್ರವಾಗಿ ಪ್ರತಿಭಟಿಸಿ ಶಿಕ್ಷಕರು ಹಿಮ್ಮರಳಲು ಕಾರಣವಾಗಿದ್ದರು ಎಂಬುದು ಕೂಡ ಉಲ್ಲೇಖನೀಯ. ಈಗ ಇಂಥದ್ದೇ ಪರಿಸ್ಥಿತಿ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ನಿರ್ಮಾಣವಾಗಿದೆ. ಜತ್‌ ತಾಲೂಕಿನ ಶಾಲೆಗಳಿಗೆ 11 ಮತ್ತು ಸೊಲ್ಲಾಪುರ ಜಿಲ್ಲೆಯ ಶಾಲೆಗಳಿಗೆ 13 ಶಿಕ್ಷಕರ ನೇಮಕವಾಗಿದೆ. ಈ 24 ಮಂದಿ ಶಿಕ್ಷಕರ ಪೈಕಿ 7 ಮಂದಿಯನ್ನು ಬಿಟ್ಟರೆ ಉಳಿದ ಶಿಕ್ಷಕರಿಗೆ ಕನ್ನಡ ತಿಳಿದಿಲ್ಲ; ಅವರು ಉರ್ದು ಮತ್ತು ಮರಾಠಿ ಮಾತ್ರ ಬಲ್ಲವರು. ಈ ಶಿಕ್ಷಕರು ಕನ್ನಡ ಮಾತ್ರ ಬಲ್ಲ ಅಥವಾ ಉರ್ದು ಯಾ ಮರಾಠಿಯನ್ನು ಅರೆಬರೆ ತಿಳಿದಿರುವ ಮಕ್ಕಳಿಗೆ ಆ ಭಾಷೆಗಳಲ್ಲಿ ವಿವಿಧ ವಿಷಯಗಳ ಪಾಠ ಮಾಡಿದರೆ ಮಕ್ಕಳು ಅದನ್ನು ಹೇಗೆ ಅರ್ಥೈಸಿಕೊಂಡಾರು, ಅರಗಿಸಿಕೊಂಡಾರು?

ನೆರೆಯ ಕೇರಳದಂತೆ ಮಹಾರಾಷ್ಟ್ರ ಸರಕಾರ ಕೂಡ ಹಿಂದೆ ಕನ್ನಡಿಗರನ್ನು ಕೆಣಕುವಂತಹ ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಈಗಿನದ್ದು ಮಕ್ಕಳನ್ನು ಬಾಧಿಸುವ ನಡೆಯಾದರೆ ಜನಸಾಮಾನ್ಯರು ತೊಂದರೆಗೆ ಈಡಾಗಬಲ್ಲಂತಹ ನಿಲುವುಗಳನ್ನು ಉಭಯ ನೆರೆರಾಜ್ಯಗಳು ಅನುಸರಿಸಿದ್ದಿದೆ. ಮಲಯಾಳ ಅಥವಾ ಮರಾಠಿ ಮಾತ್ರ ಬಲ್ಲ ಅಧಿಕಾರಿಗಳ ನೇಮಕ, ಮಲಯಾಳ ಅಥವಾ ಮರಾಠಿಯಲ್ಲಿ ಮಾತ್ರ ಸುತ್ತೋಲೆಗಳನ್ನು ಹೊರಡಿಸುವುದು ಇತ್ಯಾದಿ ಇದಕ್ಕೆ ಉದಾಹರಣೆ. ಈಗಿನದ್ದು ಅದಕ್ಕೆ ಇನ್ನೊಂದು ಸೇರ್ಪಡೆ.

ರಾಜ್ಯಗಳ ಭಾಷಾಧಾರಿತ ಮರುವಿಂಗಡನೆ ಆದ ಸಂದರ್ಭದಲ್ಲಿ ನಡೆದು ಹೋದಂತಹ ಅಪಸವ್ಯಗಳು ಇವಕ್ಕೆಲ್ಲ ಮೂಲ ಕಾರಣ ಎಂದರೆ ತಪ್ಪಾಗದು. ಇಂತಹ ಸಂದರ್ಭಗಳಲ್ಲಿ ಉಭಯ ರಾಜ್ಯಗಳ ಸರಕಾರಗಳು ಪರಸ್ಪರ ಹೊಂದಾಣಿಕೆ, ಅನುಸರಣೆಯ ನಿಲುವನ್ನು ಹೊಂದಿರುವುದು ಅಪೇಕ್ಷಣೀಯ.

ಕಾಸರಗೋಡಿನಲ್ಲಿ ನಡೆದಂತೆಯೇ ಮಹಾರಾಷ್ಟ್ರ ಸರಕಾರದ ಈಗಿನ ನಡೆಯನ್ನು ಗಡಿಭಾಗದ ಕನ್ನಡ ಹೋರಾಟಗಾರರು ಬಲವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆಯಲಾಗಿದೆ. ಈಗ ಸರಕಾರ ತಡ ಮಾಡದೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಕಾನೂನು ಮತ್ತು ರಾಜತಾಂತ್ರಿಕ ರೀತಿಯಲ್ಲಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡು ಮಹಾರಾಷ್ಟ್ರ ಸರಕಾರದ ಜತೆಗೆ ವ್ಯವಹರಿಸಬೇಕು. ತೊಂದರೆಗೀಡಾದ ಕನ್ನಡ ಭಾಷಿಕ ಮಕ್ಕಳ ಹಿತವನ್ನು ಕಾಪಾಡುವುದಕ್ಕೆ ವಿಳಂಬ ಬೇಡ.

ಟಾಪ್ ನ್ಯೂಸ್

9-mng

Mangaluru: ಡ್ರಗ್ಸ್‌ ಸೇವನೆ: ಐವರ ಬಂಧನ 

Budget 2024;  The flow of money in the hands of the people will increase!

Budget 2024; ಮೂಲಸೌಕರ್ಯಕ್ಕೆ 11,11,111 ಕೋಟಿ:  ಜನರ ಕೈಯಲ್ಲಿ ಹಣ ಹರಿವೂ ಹೆಚ್ಚಳ!

Cancer Medicine: ಇನ್ನೂ 3 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಶುಲ್ಕವಿಲ್ಲ!

Cancer Medicine: ಇನ್ನೂ 3 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಶುಲ್ಕವಿಲ್ಲ!

belaHeavy Rain; Holiday announced for schools in four taluks of Belagavi district

Heavy Rain; ಬೆಳಗಾವಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

cm-SIDDU

Union Budget; ರಾಜ್ಯದ ಹಿತ ಕಾಪಾಡುವಲ್ಲಿ ಕೇಂದ್ರ ಸಚಿವರು ವಿಫಲ: ಸಿಎಂ ಸಿದ್ದರಾಮಯ್ಯ

Budget 2024; center has given impetus to the Railway Department

Budget 2024; ಹೆಚ್ಚುತ್ತಿರುವ ಅಪಘಾತಗಳು; ರೈಲ್ವೇ ಇಲಾಖೆಗೆ ಉತ್ತೇಜನ ನೀಡಿದ ಕೇಂದ್ರ

NEET

NEET-UG Paper Leak: ನೀಟ್‌ ಮರು ಪರೀಕ್ಷೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NIPAH

Kerala ನಿಫಾ ಸೋಂಕು: ರಾಜ್ಯದಲ್ಲೂ ನಿಗಾ ಅಗತ್ಯ

Kerala-Vijayaan

Kerala: ವಿದೇಶಾಂಗ ಕಾರ್ಯದರ್ಶಿ ನೇಮಕ: ಒಕ್ಕೂಟ ವ್ಯವಸ್ಥೆಗೆ ಧಕ್ಕೆ

vande bharat

KAVACHಸುರಕ್ಷ ವ್ಯವಸ್ಥೆ ಅಳವಡಿಕೆ ಇನ್ನಷ್ಟು ತ್ವರಿತಗತಿಯಲ್ಲಿ ನಡೆಯಲಿ

ಕನ್ನಡಿಗರಿಗೆ ಮೀಸಲು: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ

ಕನ್ನಡಿಗರಿಗೆ ಮೀಸಲು: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ

Let the government medical college idea come into action

Editorial; ಸರಕಾರಿ ವೈದ್ಯಕೀಯ ಕಾಲೇಜು ಚಿಂತನೆ ಕಾರ್ಯರೂಪಕ್ಕೆ ಬರಲಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

ladhakh

Budget 2024; ಲಡಾಖ್‌ಗೆ 6 ಸಾವಿರ ಕೋಟಿ ರೂ.: ಕಳೆದ ಸಾಲಿಗಿಂತ ಶೇ.32 ಹೆಚ್ಚು ಅನುದಾನ ಘೋಷಣೆ

Budget 2024; Mudra loan limit increased to Rs.20 lakhs

Union Budget 2024: ಮುದ್ರಾ ಸಾಲ ಮಿತಿ 20 ಲಕ್ಷ ರೂ.ಗಳಿಗೆ ಏರಿಕೆ

9-mng

Mangaluru: ಡ್ರಗ್ಸ್‌ ಸೇವನೆ: ಐವರ ಬಂಧನ 

Budget 2024;  The flow of money in the hands of the people will increase!

Budget 2024; ಮೂಲಸೌಕರ್ಯಕ್ಕೆ 11,11,111 ಕೋಟಿ:  ಜನರ ಕೈಯಲ್ಲಿ ಹಣ ಹರಿವೂ ಹೆಚ್ಚಳ!

Cancer Medicine: ಇನ್ನೂ 3 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಶುಲ್ಕವಿಲ್ಲ!

Cancer Medicine: ಇನ್ನೂ 3 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಶುಲ್ಕವಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.