ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

Team Udayavani, May 7, 2021, 6:20 AM IST

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಮೀಸಲಾತಿ ಮಿತಿ ಹೆಚ್ಚಿಸುವ ವಿಚಾರದಲ್ಲಿ ರಾಜ್ಯಗಳಿಗೆ ಅಧಿಕಾರವಿಲ್ಲ. ಇಲ್ಲಿ ರಾಷ್ಟ್ರಪತಿ ಹಾಗೂ ಸಂಸತ್ತಿಗೆ  ಸಂಪೂರ್ಣ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರವಷ್ಟೇ ತೀರ್ಪು ನೀಡಿದೆ. ಮರಾಠಿ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದು ಪಡಿಸಿ, ಈ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಜತೆಗೆ ಮರಾಠಿ ಸಮುದಾಯಕ್ಕೆ ಏಕೆ ಮೀಸಲಾತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸುವಲ್ಲಿ ಮಹಾರಾಷ್ಟ್ರ ಸರಕಾರ ವಿಫ‌ಲವಾಗಿದೆ ಎಂಬುದು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ.

ಮಹಾರಾಷ್ಟ್ರದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯವನ್ನು ಒಪ್ಪಬಹುದು. ಏಕೆಂದರೆ  ಸರಕಾರ ಮರಾಠಿ ಸಮುದಾಯ ಹಿಂದುಳಿದಿದೆ ಎಂದು ಸಾಬೀತು ಮಾಡುವಲ್ಲಿ ವಿಫ‌ಲವಾಗಿರಬಹುದು. ಜತೆಗೆ ಮೀಸಲಾತಿ ನೀಡುವ ತನ್ನ ನಿರ್ಧಾರ ಎಷ್ಟು ಸರಿ ಎಂಬ ಬಗ್ಗೆ ಸಮರ್ಥ ವಾದ ಮಂಡಿಸುವಲ್ಲಿ ಎಡವಿರಬಹುದು. ಆದರೆ ಇದೇ ಮೀಸಲಾತಿ ನಿಗದಿ ವಿಚಾರದಲ್ಲಿ ರಾಜ್ಯ ಸರಕಾರಗಳು ಶೇ.50ಕ್ಕಿಂತ ಹೆಚ್ಚು ಮೀಸಲು ನಿಗದಿ ಮಾಡುವಂತಿಲ್ಲ. ಇಲ್ಲಿ ಕೇಂದ್ರ ಸರಕಾರವೇ ನಿಗದಿ ಮಾಡಬೇಕು ಎಂದು ಹೇಳಿರುವುದು ಮಾತ್ರ ರಾಜ್ಯಗಳ ಅಧಿಕಾರಕ್ಕೆ ಭಂಗ ತಂದಂತಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಏಕೆಂದರೆ ರಾಜ್ಯಗಳಿಗೆ ಮಾತ್ರ ತನ್ನ ಪ್ರಜೆಗಳ ಸಾಮಾಜಿಕ ಮತ್ತು  ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಗೊತ್ತಿರುತ್ತದೆ. ಪ್ರತಿಯೊಂದು ಬಾರಿಯೂ ರಾಜ್ಯ ಸರಕಾರಗಳು ಯಾವುದೋ ಒಂದು ಸಮುದಾಯಕ್ಕೆ ಅನ್ಯಾಯವಾಗಿದೆ, ಇದಕ್ಕೆ ನ್ಯಾಯ ಸಿಗಬೇಕು ಎಂದಾದರೆ ಮೀಸಲಾತಿ ನೀಡಬೇಕು. ಈ ಬಗ್ಗೆ ಗಮನ ಹರಿಸಿ ಎಂದು ಪದೇ ಪದೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಬೇಕು. ಈ ಮನವಿ ಬಗ್ಗೆ ಕೇಂದ್ರ ಸರಕಾರ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ ಬಹಳಷ್ಟು ಸಮಯ ಕಳೆದು ಹೋಗಿರುತ್ತದೆ. ಹೀಗಾಗಿ ಮೀಸಲಾತಿ ಹೆಚ್ಚಿಸುವ ನಿರ್ಧಾರ ರಾಜ್ಯಗಳ ಬಳಿ ಇದ್ದರೆ ಒಳಿತು.

ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕಾನೂನು ಹೋರಾಟ ಮುಂದುವರಿಸುವ ಅಗತ್ಯವಿದೆ. ಈ ಹಿಂದೆ ಸುಪ್ರೀಂ ಕೋರ್ಟ್‌ ಮೀಸಲು ಹೆಚ್ಚಿಸುವ ಅಧಿಕಾರ ಯಾರಲ್ಲಿರಬೇಕು ಎಂಬ ಅಭಿಪ್ರಾಯ ಕೇಳಿದಾಗ, ಕರ್ನಾಟಕವೂ ರಾಜ್ಯಗಳ ಬಳಿಯೇ ಇರಲಿ ಎಂದು ವಾದಿಸಿತ್ತು. ಇದೇ ವಾದವನ್ನು ಮುಂದಿಟ್ಟುಕೊಂಡು, ಮುಂದೆಯೂ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಸಮರ ಮುಂದುವರಿಸಬೇಕು. ಜತೆಗೆ ಮಂಡಲ್‌ ತೀರ್ಪಿನ ಮರುಪರಿಶೀಲನೆ ಸಂಬಂಧವೂ ರಾಜ್ಯ ಸರಕಾರ ಕಾನೂನು ಹೋರಾಟ ಮುಂದುವರಿಸಬಹುದು. ಏಕೆಂದರೆ ಸದ್ಯ ನೀಡಲಾಗಿರುವ ಮೀಸಲಾತಿ, ಬಹಳಷ್ಟು ಹಿಂದಿನ ಜಾತಿ ಗಣತಿ ವರದಿ ಆಧರಿಸಿ ನೀಡಿದಂಥದ್ದು. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಹೊಸದಾಗಿ ಜಾತಿಗಣತಿ ಮಾಡಿ ಮೀಸಲಾತಿಯನ್ನು ಪರಿಷ್ಕರಿಸಬಹುದು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮನಸ್ಸು ಮಾಡಬೇಕಷ್ಟೇ.

ಈಗಾಗಲೇ ಮೀಸಲಾತಿ ಹೋರಾಟ ಸಂಬಂಧ ಮೂರ್ನಾಲ್ಕು ಸಮುದಾಯಗಳಿಗೆ ಮೀಸಲಾತಿ ನೀಡುವ ಅಥವಾ ಮೀಸಲು ಬದಲಿಸುವ ಬಗ್ಗೆ ಕರ್ನಾಟಕ ಸರಕಾರ ಭರವಸೆ ನೀಡಿದೆ. ಜತೆಗೆ ಇದರ ಅಧ್ಯಯನಕ್ಕಾಗಿ ಸಮಿತಿಗಳನ್ನೂ ರಚಿಸಿದೆ. ಈ ಸಮಿತಿಗಳ ಶಿಫಾರಸಿನ ಅನ್ವಯ ಮೀಸಲು ನೀಡಲು ರಾಜ್ಯ ಸರಕಾರ ಮತ್ತೆ ಕೇಂದ್ರ ಸರಕಾರದ ಬಾಗಿಲಿಗೇ ಹೋಗಬೇಕು. ಈ ಪ್ರಕ್ರಿಯೆ ಬಹಳಷ್ಟು ದಿನ ಹಿಡಿಯುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ ತ್ವರಿತಗತಿಯಲ್ಲಿ ರಾಜ್ಯ ಸರಕಾರ ನಿರ್ಧಾರಕ್ಕೆ ಬರಬೇಕು.

ಟಾಪ್ ನ್ಯೂಸ್

ಕೆನಡಿಯನ್‌ ಮಾಸ್ಟರ್’ ಟೆನಿಸ್‌: ಕ್ವಾರ್ಟರ್‌ ಫೈನಲ್‌ ಗೆ ನಿಕ್‌ ಕಿರ್ಗಿಯೋಸ್‌

ಕೆನಡಿಯನ್‌ ಮಾಸ್ಟರ್’ ಟೆನಿಸ್‌: ಕ್ವಾರ್ಟರ್‌ ಫೈನಲ್‌ ಗೆ ನಿಕ್‌ ಕಿರ್ಗಿಯೋಸ್‌

ಯುಎಇ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಲೀಗ್‌: ಮೈ ಎಮಿರೇಟ್ಸ್‌ ಟಿ 20 ತಂಡ ಘೋಷಣೆ

ಯುಎಇ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಲೀಗ್‌: ಮೈ ಎಮಿರೇಟ್ಸ್‌ ಟಿ 20 ತಂಡ ಘೋಷಣೆ

ಏಷ್ಯಾ ಕಪ್‌ ಕ್ರಿಕೆಟ್‌: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್‌

ಏಷ್ಯಾ ಕಪ್‌ ಕ್ರಿಕೆಟ್‌: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್‌

ಕೆಪಿಟಿಸಿಎಲ್‌: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ

ಕೆಪಿಟಿಸಿಎಲ್‌: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ

ಟೈಲರ್‌ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ

ಟೈಲರ್‌ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ

ಬಾಂಗ್ಲಾದೇಶಿಯರ ಆಧಾರ್‌ ದಾಖಲೆ ಪರಿಶೀಲನೆಗೆ ಹೈಕೋರ್ಟ್‌ ಅನುಮತಿ

ಬಾಂಗ್ಲಾದೇಶಿಯರ ಆಧಾರ್‌ ದಾಖಲೆ ಪರಿಶೀಲನೆಗೆ ಹೈಕೋರ್ಟ್‌ ಅನುಮತಿ

ನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ ಉಗ್ರ ಸಂಘಟನೆ ನಿಯೋಜಿಸಿದ್ದ ಉಗ್ರ ಬಂಧನನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ ಉಗ್ರ ಸಂಘಟನೆ ನಿಯೋಜಿಸಿದ್ದ ಉಗ್ರ ಬಂಧನ

ನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ ಉಗ್ರ ಸಂಘಟನೆ ನಿಯೋಜಿಸಿದ್ದ ಉಗ್ರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೋಕಾಯುಕ್ತಕ್ಕೆ ಸರಕಾರ ಮತ್ತಷ್ಟು ಶಕ್ತಿ ತುಂಬಲಿ

ಲೋಕಾಯುಕ್ತಕ್ಕೆ ಸರಕಾರ ಮತ್ತಷ್ಟು ಶಕ್ತಿ ತುಂಬಲಿ

ಉಗ್ರರ ವಿಚಾರದಲ್ಲಿ ಚೀನದ ನಿಲುವು ಖಂಡನೀಯ

ಉಗ್ರರ ವಿಚಾರದಲ್ಲಿ ಚೀನದ ನಿಲುವು ಖಂಡನೀಯ

ತಿರಂಗಾ ಹಾರಿಸುವಾಗ ಧ್ವಜ ಸಂಹಿತೆ ಮರೆಯಬೇಡಿ

ತಿರಂಗಾ ಹಾರಿಸುವಾಗ ಧ್ವಜ ಸಂಹಿತೆ ಮರೆಯಬೇಡಿ

ಕಾಮನ್‌ವೆಲ್ತ್‌ ಸಾಧನೆ ಒಲಿಂಪಿಕ್ಸ್‌ನಲ್ಲೂ ಮುಂದುವರೆಯಲಿ

ಕಾಮನ್‌ವೆಲ್ತ್‌ ಸಾಧನೆ ಒಲಿಂಪಿಕ್ಸ್‌ನಲ್ಲೂ ಮುಂದುವರೆಯಲಿ

ವೃತ್ತಿಪರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡಬೇಡಿ

ವೃತ್ತಿಪರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡಬೇಡಿ

MUST WATCH

udayavani youtube

News bulletin 12-8-2022

udayavani youtube

12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗಾ ಜಾಗೃತಿ

udayavani youtube

ರಕ್ಷಾಬಂಧನವನ್ನು ತುಂಡರಿಸಿ ಹಾಕಿದ ಘಟನೆ ಕ್ಷಮೆ ಕೇಳಿದ ಶಾಲಾ ಆಡಳಿತ ಮಂಡಳಿ

udayavani youtube

ನಾಯಿಯ ಮೇಲೆ ಚಿರತೆ ದಾಳಿ:ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ರಸ್ತೆ ಗುಂಡಿಯ ಕೊಳಚೆ ನೀರಿನಲ್ಲೇ ಯೋಗ, ಸ್ನಾನ ಮಾಡಿದ ವ್ಯಕ್ತಿ

ಹೊಸ ಸೇರ್ಪಡೆ

ಕೆನಡಿಯನ್‌ ಮಾಸ್ಟರ್’ ಟೆನಿಸ್‌: ಕ್ವಾರ್ಟರ್‌ ಫೈನಲ್‌ ಗೆ ನಿಕ್‌ ಕಿರ್ಗಿಯೋಸ್‌

ಕೆನಡಿಯನ್‌ ಮಾಸ್ಟರ್’ ಟೆನಿಸ್‌: ಕ್ವಾರ್ಟರ್‌ ಫೈನಲ್‌ ಗೆ ನಿಕ್‌ ಕಿರ್ಗಿಯೋಸ್‌

ಯುಎಇ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಲೀಗ್‌: ಮೈ ಎಮಿರೇಟ್ಸ್‌ ಟಿ 20 ತಂಡ ಘೋಷಣೆ

ಯುಎಇ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಲೀಗ್‌: ಮೈ ಎಮಿರೇಟ್ಸ್‌ ಟಿ 20 ತಂಡ ಘೋಷಣೆ

ಏಷ್ಯಾ ಕಪ್‌ ಕ್ರಿಕೆಟ್‌: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್‌

ಏಷ್ಯಾ ಕಪ್‌ ಕ್ರಿಕೆಟ್‌: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್‌

ಕೆಪಿಟಿಸಿಎಲ್‌: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ

ಕೆಪಿಟಿಸಿಎಲ್‌: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ

ಟೈಲರ್‌ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ

ಟೈಲರ್‌ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.