ಕಾಫೀಯ ಡೇ ಬದಲಿಸಿದ ಸಿದ್ಧಾರ್ಥ

Team Udayavani, Jul 31, 2019, 10:44 AM IST

ಸ್ಟಾಕ್‌ ಬ್ರೋಕರ್‌ ಸಿದ್ಧಾರ್ಥ ಕಾಫೀ ಉದ್ಯಮಿ ಆಗಿದ್ದು…

ಚಿಕ್ಕಮಗಳೂರಿನ ಕಾಫಿ  ಎಸ್ಟೇಟ್‌ ಮಾಲೀಕರ ಕುಟುಂಬದಲ್ಲಿ ಜನಿಸಿದ ಸಿದ್ಧಾರ್ಥ ಓದಿದ್ದು ಮಂಗಳೂರಿನಲ್ಲಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎ ಎಕನಾಮಿಕ್ಸ್‌ ಓದಿದ ನಂತರ 1983ರಲ್ಲಿ ಜೆಎಂ ಫೈನಾನ್ಷಿಯಲ್‌ ಎಂಬ ಸ್ಟಾಕ್‌ ಮಾರ್ಕೆಟ್‌ ಟ್ರೇಡಿಂಗ್‌ ಕಂಪನಿಯಲ್ಲಿ ಮ್ಯಾನೇಜ್‌ಮೆಂಟ್‌ ಟ್ರೇನಿಯಾಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಂದ ಮರು ವರ್ಷವೇ ಅಂದರೆ 1984ರಲ್ಲಿ ತಂದೆಯಿಂದ ಹಣ ತೆಗೆದುಕೊಂಡು ಬಂದು, ಸಿವನ್‌ ಸೆಕ್ಯುರಿಟೀಸ್‌ ಎಂಬ ಷೇರು ಮಾರುಕಟ್ಟೆ ವಹಿವಾಟು ಕಂಪನಿಯನ್ನು ಖರೀದಿಸಿದರು. ಈ ಕಂಪನಿಯನ್ನು ಖರೀದಿಸಿ ಯಶಸ್ವಿ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಮತ್ತು ಸ್ಟಾಕ್‌ ಬ್ರೋಕಿಂಗ್‌ ಕಂಪನಿಯನ್ನಾಗಿ ರೂಪಿಸಿದರು. 2000 ನೇ ಇಸ್ವಿಯಲ್ಲಿ ಈ ಕಂಪನಿಯನ್ನು ವೇ ಟು ವೆಲ್ತ್‌ ಎಂದು ಮರುನಾಮಕರಣ ಮಾಡಲಾಯಿತು. ಕಾಫಿ  ಡೇ ಹುಟ್ಟಿದ್ದು 1992ರಲ್ಲಿ. ಆಗ ಅಮಲ್ಗಮೇಟೆಡ್‌ ಬೀನ್‌ ಕಂಪನಿ ಟ್ರೇಡಿಂಗ್‌ ಎಂಬ ಹೆಸರಿನಲ್ಲಿ ಕಂಪನಿಯನ್ನು ಆರಂಭಿಸಲಾಗಿತ್ತು. ನಂತರ ಇದನ್ನು ಕಾಫಿ ಡೇ ಗ್ಲೋಬಲ್‌ ಎಂದೂ ಕರೆಯಲಾಯಿತು. ಆರಂಭದಲ್ಲಿ ಈ ಕಂಪನಿ ಕೇವಲ ಕಾಫಿ  ವಹಿವಾಟು ಮಾಡುತ್ತಿತ್ತು. ಅಂದರೆ ಕಾಫಿ  ಖರೀದಿಸುವುದು, ಸಂಸ್ಕರಿಸುವುದು ಮತ್ತು ಅದನ್ನು ರೋಸ್ಟ್‌ ಮಾಡುವ ಪ್ರಕ್ರಿಯೆಯನ್ನುಈ ಕಂಪನಿ ಮಾಡುತ್ತಿತ್ತು.

1996ರಲ್ಲಿ ಕಾಫಿ  ಔಟ್‌ ಲೆಟ್‌ ಆರಂಭಿಸಲೂ ಶುರು ಮಾಡಿದರು. ಬೆಂಗಳೂರಿನ ಬ್ರಿಗೇಡ್‌ ರೋಡ್‌ನ‌ಲ್ಲಿ ಮೊದಲ ಕೆಫೆ ಕಾಫಿ  ಡೇ ಆರಂಭವಾಯಿತು. ಸದ್ಯ ವಿಯೆನ್ನಾ, ಝೆಕ್‌ ರಿಪಬ್ಲಿಕ್‌, ಮಲೇಷ್ಯಾ, ನೇಪಾಳ ಮತ್ತು ಈಜಿಪ್ಟ್ನಲ್ಲೂ ಕೆಫೆ ಕಾμ ಡೇ

ಔಟ್‌ಲೆಟ್‌ಗಳಿವೆ. 1999 ರಲ್ಲಿ 10 ಉದ್ಯಮಿಗಳು ಸೇರಿ ಮೈಂಡ್‌ಟ್ರೀ ಎಂಬ ಐಟಿ ಕಂಪನಿಯನ್ನು ಸ್ಥಾಪಿಸುತ್ತಿರುವ ಹೊತ್ತಿಗೆ, ಐಟಿ ಉದ್ಯಮಿ ಅಶೋಕ್‌ ಸೂಟಾ, ಸುಬ್ರತೋ ಬಗಿc, ರೋಸ್ತೋವ್‌ ರಾವಣನ್‌ ಹಾಗೂ ಕೆ ಕೆ ನಟರಾಜನ್‌ ಜೊತೆಗೆ ಸಿದ್ಧಾರ್ಥ ಕೂಡ ಹೂಡಿಕೆ ಮಾಡಿದ್ದರು. ಮೂಲಗಳ ಪ್ರಕಾರ ಹಂತ ಹಂತವಾಗಿ ಸಿದ್ಧಾರ್ಥ ಮಾಡಿದ ಹೂಡಿಕೆ ಸುಮಾರು 340 ಕೋಟಿ ರೂ. ಆಗಿತ್ತು. 20 ವರ್ಷಗಳ ನಂತರ ಅಂದರೆ 2019ರಲ್ಲಿ ಈ ಷೇರುಗಳನ್ನು ಅವರು ಮಾರಾಟ ಮಾಡಿದ್ದು, ಒಟ್ಟು 3 ಸಾವಿರ ಕೋಟಿ ರೂ. ಮೌಲ್ಯ ಹೊಂದಿತ್ತು. ಒಟ್ಟು ಶೇ. ಶೇ. 20.43 ರಷ್ಟು ಷೇರುಗಳನ್ನು ಅವರು ಹೊಂದಿದ್ದರು. ಮೈಂಡ್‌ಟ್ರೀ ಕಂಪನಿಯಲ್ಲಿ ಹೆಚ್ಚು ಪ್ರಮಾಣದ ಷೇರು ಸಿದ್ಧಾರ್ಥ ಅವರದ್ದೇ ಆಗಿತ್ತು. ಸಿದ್ಧಾರ್ಥ ಕೇವಲ ಕಾಫಿ  ವಹಿವಾಟು ಮಾತ್ರ ಹೊಂದಿರಲಿಲ್ಲ.

ಅವರು ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಕೂಡ ಆಗಿದ್ದರಿಂದ ತಮ್ಮ ಹೂಡಿಕೆಯನ್ನು ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿದ್ದರು.

 

ನಿಜಕ್ಕೂ ಸಿದ್ಧಾರ್ಥ ನಷ್ಟದಲ್ಲಿದ್ದರೇ?:

ಕಾಫಿ ಡೇ ಕಂಪನಿಯ ಮಾಲೀಕ ಸಿದ್ಧಾªರ್ಥ ನಾಪತ್ತೆಯಾಗಿರುವುದಕ್ಕೂ ಅವರ ಕಂಪನಿಯ ವಹಿವಾಟಿಗೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ವಿಪರೀತ ಸಾಲವಿತ್ತು ಎಂಬ ವಿಚಾರವನ್ನು ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದರಲ್ಲೂ ನಮೂದಿಸಲಾಗಿದೆ. ಕೆಫೆ ಕಾμ ಡೇ 2018-19ರ ವಿತ್ತ ವರ್ಷದಲ್ಲಿ ಒಟ್ಟು 6547.38 ಕೋಟಿ ರೂ. ಸಾಲ ಹೊಂದಿತ್ತು.

ಕಾಫಿ ಡೇ ನಷ್ಟದಲ್ಲಿತ್ತೇ?: 2018 ಡಿಸೆಂಬರ್‌ಗೆ ಕೊನೆಯಾದ ತ್ತೈಮಾಸಿಕದಲ್ಲಿ ಕಾಫಿ ಡೇ ಸಂಚಿತ ಆದಾಯ 996.51 ಕೋಟಿ ರೂ. ಅದೇ ತ್ತೈಮಾಸಿಕದಲ್ಲಿ ನಿವ್ವಳ ಲಾಭ 73.15 ಕೋಟಿ ರೂ. ಆಗಿತ್ತು. ಹಿಂದಿನ ವರ್ಷದ ತ್ತೈಮಾಸಿಕದಲ್ಲಿ ಕೇವಲ 27.99 ಕೋಟಿ ರೂ. ಲಾಭ ಮಾಡಿತ್ತು. ಅಂದರೆ ಕಾಫಿ ಡೇ ಲಾಭದಲ್ಲೇ ಇತ್ತು. ಆದರೆ ಸಾಲದ ಹೊರೆ ಹೆಚ್ಚಿದ್ದುದರಿಂದ ಕಂಪನಿಯ ಹೂಡಿಕೆಯ ಮೇಲೆ ಒತ್ತಡವಿತ್ತು. ಮೈಂಡ್‌ಟ್ರೀ ಕಂಪನಿಯಲ್ಲಿನ ಷೇರು ಮಾರಾಟದಿಂದ ಬಂದ ಸುಮಾರು 3 ಸಾವಿರ ಕೋಟಿ ರೂ. ಅನ್ನು ಸಾಲ ತೀರಿಸಲು ಬಳಸಿಕೊಂಡಿದ್ದರು. ಅದರ ನಂತರವೂ ಕಂಪನಿಯ ಸಾಲ 2019 ಮಾರ್ಚ್‌ ವೇಳೆಗೆ 6547 ಕೋಟಿ ರೂ. ಆಗಿತ್ತು. ಅದೇ ವೇಳೆಗೆ, 2018 ಡಿಸೆಂಬರ್‌ಗೆ ಹೋಲಿಸಿದರೆ ಕಂಪನಿಯ ಸಾಲದ ಪ್ರಮಾಣ ಶೇ. 65ರಷ್ಟು ಹೆಚ್ಚಾಗಿತ್ತು.

 

ಕಾಫಿ ಡೇಯಲ್ಲಿ ನಂದನ್‌ ನಿಲೇಕಣಿಯ ಹೂಡಿಕೆ:  ಕಾಫಿ ಡೇಯಲ್ಲಿ ಸಿದ್ಧಾರ್ಥ ಅವರದ್ದೇ ಸಂಪೂರ್ಣ ಹೂಡಿಕೆ ಇಲ್ಲ. ಅವರ ಪತ್ನಿಯ ಹೂಡಿಕೆಯೂ ಇದೆ. ಇದರ ಹೊತೆಗೆ ಇತರ ಹಲವರು ಹೂಡಿಕೆ ಮಾಡಿದ್ದಾರೆ. ಸಿದ್ಧಾರ್ಥ ಹಾಗೂ ಅವರ ಪತ್ನಿಯ ಹೂಡಿಕೆ ಶೇ. 53.93 ರಷ್ಟಿದ್ದರೆ, ಬಾಕಿ ಹೂಡಿಕೆ ಇತರ ಉದ್ಯಮಿಗಳದ್ದಿದೆ. ಈ ಪೈಕಿ ನಾರ್ವೆ ಮೂಲದ ಗವರ್ನಮೆಂಟ್‌ ಪೆನ್ಶನ್ ಫ‌ಂಡ್‌ ಗ್ಲೋಬಲ್‌ (ಶೇ. 2.31), ಎನ್‌ಎಲ್‌ಎಸ್‌ ಮಾರಿಷಸ್‌ ಎಲ್‌ಎಲ್‌ಸಿ, ಕೆಕೆಆರ್‌ ಮಾರಿಷಸ್‌ ಪಿಇ ಇನ್ವೆಸ್ಟ್‌ಮೆಂಟ್ಸ್‌, ಮರಿನಾ ವೆಸ್ಟ್‌ ಮತ್ತು ಮರಿನಾ ಲಿ. ಶೇ. 22.35 ರಷ್ಟು ಹೂಡಿಕೆ ಹೊಂದಿದೆ. ಇದರ ಹೊರತಾಗಿ ಇನ್ಫೋಸಿಸ್‌ ಸಹ ಸಂಸ್ಥಾಪಕ ನಂದನ್‌ ನೀಲೇಕಣಿ ಶೇ. 2.69 ರಷ್ಟು ಹೂಡಿಕೆ ಹೊಂದಿದ್ದರೆ, ಕಮ್ಮರಗೋಡು ರಾಮಚಂದ್ರೇಗೌಡ ಸುಧೀರ್‌ ಎಂಬುವವರು ಶೇ. 2.49ರಷ್ಟು ಪಾಲು ಹೊಂದಿದ್ದಾರೆ.

ಕಾಫಿ ಕಹಿ ಎಂದಿದ್ದ ಕೋಕಾ ಕೋಲಾ ಕಂಪನಿ: ಕೆಫೆ ಕಾಫಿ ಡೇಯಲ್ಲಿ ಸಾಲದ ಪ್ರಮಾಣ ಹೆಚ್ಚುತ್ತಿರುವುದರಿಂದ ತನ್ನ ಸ್ವಲ್ಪ ಮಟ್ಟಿನ ಷೇರನ್ನು ಮಾರಲು ಸಿದ್ದಾರ್ಥ ನಿರ್ಧರಿಸಿದ್ದರು. ಇದೇ ಕಾರಣಕ್ಕೆ ಕೋಕಾ ಕೋಲಾ ಜೊತೆಗೆ ಸಿದ್ಧಾರ್ಥ ಮಾತುಕತೆ ನಡೆಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಿತ್ತು. ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಇನ್ನೊಂದೆಡೆ ಇದೇ ವೇಳೆ ಐರೋಪ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಕೋಸ್ಟಾ ಕೆಫೆ ಕಂಪನಿಯನ್ನು ಕೋಕಾ ಕೋಲಾ 35 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಸಿತ್ತು. ಕಾಫಿ ಡೇಯಲ್ಲಿ ಆದಾಯಕ್ಕಿಂತ ಹೆಚ್ಚು ಸಾಲ ಇರುವುದರಿಂದಾಗಿಯೇ ಖರೀದಿ ಬಗ್ಗೆ ಕೋಕಾ ಕೋಲಾ ಹಿಂಜರಿಯುತ್ತಿತ್ತು ಎಂದು ಹೇಳಲಾಗಿದೆ. ಶೇ. 20ರಿಂದ ಶೇ. 25ರಷ್ಟು ಪಾಲನ್ನು ಮಾರಾಟ ಮಾಡಲು ಸಿದ್ಧಾರ್ಥ ನಿರ್ಧರಿಸಿದ್ದರು.

 

ಸಿದ್ಧಾರ್ಥ ಕಂಪನಿಯ ಮೌಲ್ಯ:

  1.ಕಾಫಿ ಡೇ:

 • 1600 ಸ್ಟೋರ್‌, 5400 ವೆಂಡಿಂಗ್‌ ಮಶಿನ್‌, 500 ಎಕ್ಸ್‌ಪ್ರೆಸ್‌ ಸ್ಟೋರ್‌ಗಳು.
 • ಈ ವರ್ಷದ ಆದಾಯ ನಿರೀಕ್ಷೆ 2200 ಕೋಟಿ ರೂ.
 • ಬ್ರಾಂಡ್‌ ಮೌಲ್ಯ ಅಂದಾಜು 7-8 ಸಾವಿರ ಕೋಟಿ ರೂ.
 • ಚಿಕ್ಕಮಗಳೂರಿನಲ್ಲಿ 30 ಎಕರೆ ಕಾμ ತೋಟ -150ರಿಂದ 200 ಕೋಟಿ ರೂ.
 • ಹಾಸನದಲ್ಲಿ 30 ಎಕರೆ ಭೂಮಿ ಮೌಲ್ಯ 150 ಕೋಟಿ ರೂ.
 1. ಕಾಫಿ ಎಸ್ಟೇಟ್ಸ್‌:
 • ಒಟ್ಟು 12 ಸಾವಿರ ಎಕರೆ ಕಾμ ತೋಟ, 2 ಸಾವಿರ ಕೋಟಿ ರೂ. ಮೌಲ್ಯ
 • 3,000 – 3500 ಜನರಿಗೆ ಉದ್ಯೋಗ
 •  ಸಿಲ್ವರ್‌ ಓಕ್‌ ಮರಗಳ ಮೌಲ್ಯ ಅಂದಾಜು 1 ಸಾವಿರ ಕೋಟಿ
 • ಒಟ್ಟು ಮರಮಟ್ಟುಗಳ ಮೌಲ್ಯ 1,000-1300 ಕೋಟಿ ರೂ.

3.ಸಿಸಿಡಿ ವೆಂಡಿಂಗ್‌ ಮಶಿನ್ಸ್‌:

 • 15 ಸಾವಿರ ಟನ್‌ ಕಾμ ರೋಸ್ಟ್‌ ಮಾಡುವ ಸಾಮರ್ಥ್ಯದ ಘಟಕ
 1. ಟ್ಯಾಂಗ್ಲಿನ್‌:
 • ಮೈಸೂರು ರಸ್ತೆಯಲ್ಲಿ 90 ಎಕರೆ. ಕಟ್ಟಡದ ಬಾಡಿಗೆ ವಾರ್ಷಿಕ 250 ಕೋಟಿ ರೂ.
 • ಮಂಗಳೂರಿನಲ್ಲಿ 21 ಎಕರೆ ಭೂಮಿ, ಕಟ್ಟಡಗಳ ಬಾಡಿಗೆ 400 ಕೋಟಿ ರೂ.
 • ಬೆಂಗಳೂರಿನಲ್ಲಿ 3600 ಕೋಟಿ ರೂ. ಮೌಲ್ಯದ ಸ್ವತ್ತು.
 1. ಸಿಕಾಲ್‌ ಲಾಜಿಸ್ಟಿಕ್ಸ್‌:
 • 1000 ಕೋಟಿ ರೂ. ಹೂಡಿಕೆ

6.ವೇ2ವೆಲ್ತ್‌:

 • ಅಂದಾಜು 400 ಕೋಟಿ ರೂ. ಮೌಲ್ಯ
 •  ವಾರ್ಷಿಕ 5 ಕೋಟಿ ಆದಾಯ

7.ಇಟ್ಟಿಯಮ್‌:

 •  ಶೇ. 28 ರಷ್ಟು ಪಾಲು, ಮೌಲ್ಯ 140 ಕೋಟಿ ರೂ.

8.ಮ್ಯಾಗ್ನಾಸಾಫ್ಟ್:

 • ಅಂದಾಜು 75-100 ಕೋಟಿ ರೂ.

9.ಸೆರೈ:

 • ಚಿಕ್ಕಮಗಳೂರು, ಕಬಿನಿ ಮತ್ತು ಬಂಡೀಪುರದಲ್ಲಿ ಸ್ವತ್ತು
 • ಅಂಡಮಾನ್‌ನಲ್ಲಿ ಬೇರ್‌ಫ‌ೂಟ್‌ ರೆಸಾರ್ಟ್ಸ್
 • ಒಟ್ಟು 300 ಕೋಟಿ ರೂ. ಮೌಲ್ಯ

9.ಮೈಂಡ್‌ಟ್ರೀ:

 • ಷೇರು ಮಾರಾಟದ ನಂತರ ಹೂಡಿಕೆ ಶೂನ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ