ತೂಗುಸೇತುವೆ ಕುಸಿತ: ಸುರಕ್ಷತೆ ವಿಚಾರದಲ್ಲಿ ರಾಜಿ ಬೇಡ


Team Udayavani, Nov 2, 2022, 6:00 AM IST

ತೂಗುಸೇತುವೆ ಕುಸಿತ: ಸುರಕ್ಷತೆ ವಿಚಾರದಲ್ಲಿ ರಾಜಿ ಬೇಡ

ಗುಜರಾತ್‌ನ ಮೊರ್ಬಿಯಲ್ಲಿನ ತೂಗುಸೇತುವೆ ದುರಂತದಿಂದಾಗಿ 141 ಮಂದಿ ಸಾವನ್ನಪ್ಪಿದ್ದು, ಇದೊಂದು ಅತ್ಯಂತ ಘನಘೋರ ಕೃತ್ಯವಾಗಿದೆ. ಇನ್ನೂ ರಕ್ಷಣ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿಯೂ ಎದುರಾಗಿದೆ. ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಮತ್ತು ಈ ತೂಗುಸೇತುವೆ ನಿರ್ವಹಣೆಯ ಹೊಣೆ ಹೊತ್ತಿದ್ದ ಕಂಪೆನಿಯ ಹೊಣೆಗೇಡಿತನದಿಂದಾಗಿ ಈ ದುರಂತ ಸಂಭವಿಸಿದ್ದು, ಅನ್ಯಾಯವಾಗಿ ಮುಗ್ಧರು ಪ್ರಾಣ ಕಳೆದುಕೊಂಡಿದ್ದಾರೆ.

ಅಂದ ಹಾಗೆ ಈ ತೂಗುಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದು, ಇತ್ತೀಚೆಗಷ್ಟೇ ಅದನ್ನು 2 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿ ನಡೆಸಲಾಗಿತ್ತು. ಅಲ್ಲದೆ ದುರಂತ ನಡೆದ ನಾಲ್ಕು ದಿನದ ಹಿಂದಷ್ಟೇ ಈ ಸೇತುವೆಯನ್ನು ಜನರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ಅಂದರೆ ನಾಲ್ಕೇ ದಿನದಲ್ಲಿ ಈ ಘಟನೆ ನಡೆದಿದೆ ಎಂದರೆ ದುರಸ್ತಿ ಕಾರ್ಯವನ್ನು ಸರಿಯಾಗಿ ನಡೆಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ.

ಇತಿಹಾಸದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಈ ತೂಗು ಸೇತುವೆಯನ್ನು 1877ರಲ್ಲಿ ನಿರ್ಮಿಸಲಾಗಿದ್ದು, 1879ರಲ್ಲಿ ಉದ್ಘಾಟನೆ ಮಾಡಲಾಗಿತ್ತು. ಕಳೆದ ಮಾರ್ಚ್‌ನಲ್ಲಷ್ಟೇ ಈ ಸೇತುವೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಒರೆವಾ ಗ್ರೂಪ್‌ ದುರಸ್ತಿ ಕಾರ್ಯ ಮಾಡಿದ್ದು, ಮುಂದಿನ 15 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗಿತ್ತು. ಆದರೆ ಜನರ ಪ್ರವೇಶಕ್ಕೆ ಮುಕ್ತವಾದ ನಾಲ್ಕೇ ದಿನದಲ್ಲಿ ತೂಗುಸೇತುವೆ ಕುಸಿದುಬಿದ್ದಿದೆ ಎಂದರೆ ಸರಿಯಾಗಿ ಮಾಡಿರಲಿಲ್ಲ ಎಂದು ಹೇಳಬಹುದು.

ವಿಚಿತ್ರವೆಂದರೆ ಈ ತೂಗುಸೇತುವೆ ಒಮ್ಮೆಗೆ 125 ಮಂದಿಯ ಸಾಮರ್ಥ್ಯವನ್ನು ಮಾತ್ರ ತಡೆಯುವ ಶಕ್ತಿ ಹೊಂದಿತ್ತು. ಇದು ಗೊತ್ತಿದ್ದರೂ 250ರಿಂದ 300 ಮಂದಿಯನ್ನು ಸೇತುವೆ ಮೇಲೆ ಬಿಟ್ಟಿದ್ದೂ ತಪ್ಪು. ಹಾಗೆಯೇ ಸೇತುವೆಯ ಫಿಟ್‌ನೆಸ್‌ ಪ್ರಮಾಣಪತ್ರ ಇಲ್ಲದೇ ಮುಕ್ತಗೊಳಿಸಿದ್ದೂ ತಪ್ಪು ಎಂದು ಸ್ಥಳೀಯ ಆಡಳಿತವೇ ಹೇಳಿದೆ.
ಇಷ್ಟೆಲ್ಲ ಸಂಗತಿಗಳನ್ನು ಗಮನಿಸಿದ ಅನಂತರ ಇಲ್ಲಿ ತಪ್ಪು ಮಾಡಿದ್ದು ಯಾರು ಎಂಬ ಪ್ರಶ್ನೆ ಮೂಡುತ್ತದೆ. ರಾಜ್ಯ ಸರಕಾರವೂ ಈ ಬಗ್ಗೆ ಒಂದಷ್ಟು ಗಮನಹರಿಸಬೇಕಿತ್ತು. ಸಾಮಾನ್ಯವಾಗಿ ಜನ ಗುಂಪು ಗುಂಪಾಗಿ ಸೇರುವೆಡೆ ಎಷ್ಟೇ ಸುರಕ್ಷತ ಕ್ರಮಗಳನ್ನು ತೆಗೆದುಕೊಂಡರೂ ಸಾಲದು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲೇಬಾರದು. ಒಂದೇ ಒಂದು ತಪ್ಪು ಇಂಥ ಘಟನೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅಧಿಕಾರಿಗಳೂ ಗಮನದಲ್ಲಿ ಇರಿಸಿಕೊಳ್ಳಬೇಕು.

ಹಾಗೆಯೇ ಈ ತೂಗುಸೇತುವೆಯ ನಿರ್ವಹಣೆ ಹೊತ್ತಿದ್ದ ಖಾಸಗಿ ಸಂಸ್ಥೆ ವಯಸ್ಕರಿಗೆ 17 ರೂ. ಮಕ್ಕಳಿಗೆ 12 ರೂ. ಟಿಕೆಟ್‌ ಹಣ ವಸೂಲಿ ಮಾಡಿಕೊಂಡಿದೆ. ಫಿಟ್‌ನೆಸ್‌ ಸರ್ಟಿಫಿಕೇಟ್‌ ಇಲ್ಲದೆಯೇ ಸೇತುವೆ ಆರಂಭಿಸಿದ್ದು ಹೇಗೆ? ಹಾಗೆಯೇ ಯಾವುದೇ ಮುನ್ನೆಚ್ಚರಿಕ ಕ್ರಮಗಳಿಲ್ಲದೇ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಿದ್ದು ಹೇಗೆ? ಈ ಪ್ರಮಾಣದ ಜನರನ್ನು ತಡೆದುಕೊಳ್ಳುವ ಶಕ್ತಿ ಈ ತೂಗುಸೇತುವೆಗಿದೆಯೇ ಎಂಬ ಪರೀಕ್ಷೆಯನ್ನಾದರೂ ಮಾಡಿಸಲಾಗಿತ್ತೇ ಎಂಬ ಪ್ರಶ್ನೆಗಳೂ ಮೂಡುತ್ತವೆ. ಆದರೆ ಈ ಎಲ್ಲÉ ಪ್ರಶ್ನೆಗಳಿಗೆ ಗುಜರಾತ್‌ ಸರಕಾರ ನೇಮಕ ಮಾಡಿರುವ ಆರು ಮಂದಿ ಸದಸ್ಯರ ಸಮಿತಿ ಉತ್ತರ ನೀಡಬೇಕು. ಅಲ್ಲದೇ ಪ್ರಾಣ ಕಳೆದುಕೊಂಡ ಮುಗ್ಧರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸವನ್ನಾದರೂ ಮಾಡಬೇಕು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.