ಉಗ್ರ ದಮನ; ಬದಲಾವಣೆಯ ಹಾದಿಯಲ್ಲಿ


Team Udayavani, Jun 10, 2020, 11:41 AM IST

ಉಗ್ರ ದಮನ; ಬದಲಾವಣೆಯ ಹಾದಿಯಲ್ಲಿ

ಸಾಂದರ್ಭಿಕ ಚಿತ್ರ

ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಭದ್ರತಾಪಡೆಗಳಿಗೆ ಅಭೂತಪೂರ್ವ ಯಶಸ್ಸು ದೊರೆಯುತ್ತಿದೆ. ಶೋಪಿಯಾ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ 9 ಉಗ್ರರು ಹತರಾಗಿದ್ದಾರೆ. ಅದರಲ್ಲೂ ಮೋಸ್ಟ್‌ ವಾಂಟೆಡ್‌ ಉಗ್ರ, ಹಿಜ್ಬುಲ್‌ನ ಕಮಾಂಡರ್‌ ಫಾರೂಕ್‌ ಅಹ್ಮದ್‌ ಭಟ್‌ನ ಸಾವು ನಮ್ಮ ಭದ್ರತಾಪಡೆಗಳ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದರೆ, ಉಗ್ರವಾದಿ ಸಂಘಟನೆಗಳ ಹಾಗೂ ಅವುಗಳ ಪೋಷಕ ದೇಶವಾದ ಪಾಕಿಸ್ಥಾನದ ಮನೋಬಲ ಕುಸಿದಿರಲಿಕ್ಕೂ ಸಾಕು.

ಕಳೆದ ಕೆಲವು ಸಮಯದಿಂದ ಭಾರತೀಯ ಸೈನಿಕರು ಹಾಗೂ ಗುಪ್ತಚರ ಇಲಾಖೆಗಳ ಸಕ್ಷಮ ಸಹಭಾಗಿತ್ವದಿಂದಾಗಿ ಕಣಿವೆಯಲ್ಲಿ ಆತಂಕವಾದದ ವಿರುದ್ಧ ಭಾರೀ ಯಶಸ್ಸು ಪ್ರಾಪ್ತವಾಗುತ್ತಿದೆ. ಗಮನಾರ್ಹ ಸಂಗತಿಯೇನೆಂದರೆ, ಉಗ್ರ ಬುರ್ಹಾನ್‌ ವಾನಿಯನ್ನು ಹೊಡೆದುರುಳಿಸಿದ ಅನಂತರ ಕಾಶ್ಮೀರದಲ್ಲಿ ಅನೇಕ ಉಗ್ರ ಸಂಘಟನೆಗಳು ತಮ್ಮ ಬಾಹುಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಲೇ ಇವೆಯಾದರೂ ಭಾರತೀಯ ಸೇನೆ ಅವುಗಳ ಪ್ರಯತ್ನವನ್ನು ಕತ್ತರಿಸಿಹಾಕುತ್ತಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ಅನಂತರದಿಂದ ಅಲ್ಲಿ ಸ್ಥಿತಿ ಬಹಳಷ್ಟು ಸುಧಾರಿಸಿದೆ.

ಬಹುದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಭದ್ರತಾ ಪಡೆ, ಪೊಲೀಸರು, ಗುಪ್ತಚರ ಸಂಸ್ಥೆಗಳಿಗೆ ಪ್ರಬಲ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಲು, ತಂತ್ರ ರೂಪಿಸಲು ಸಾಧ್ಯವಾಗಿದೆ. ಇನ್ನು ಅನೇಕ ಪ್ರತ್ಯೇಕತಾವಾದಿ ನಾಯಕರ ಚಲನವಲನಕ್ಕೂ ಬ್ರೇಕ್‌ ಬಿದ್ದಿರುವುದರಿಂದಾಗಿ ಕಣಿವೆ ಪ್ರಾಂತ್ಯದಲ್ಲಿ  ಪ್ರತ್ಯೇಕತೆಯ ಕೂಗೂ ತಗ್ಗುತ್ತಿದೆ. ಪ್ರತ್ಯೇಕತಾವಾದಿಗಳು ಹಾಗೂ ಉಗ್ರರಿಂದ ಬ್ರೇನ್‌ವಾಶ್‌ ಆಗಿ ಬಂದೂಕು ಕೈಗೆತ್ತಿಕೊಳ್ಳುತ್ತಿದ್ದ ಯುವಕರನ್ನು ಸರಿದಾರಿಗೆ ತರುವ ಕೆಲಸಕ್ಕೂ ಕೇಂದ್ರ ಸರಕಾರ ವೇಗ ನೀಡಿದೆ.

ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಮೂಲಕ ಜನರಿಗೆ ಬದುಕಿನ ದಾರಿ ಕಲ್ಪಿಸುವ ಮಹತ್ತರ ಉದ್ದೇಶದೊಂದಿಗೆ ನಮ್ಮ ವ್ಯವಸ್ಥೆ ಪ್ರಬಲ ಹೆಜ್ಜೆ ಇಡುತ್ತಿದೆ. ಇದೇನೇ ಇದ್ದರೂ, ಆರ್ಟಿಕಲ್‌ 370 ಹಿಂಪಡೆದು ಜಮ್ಮು- ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ನಂತರದಿಂದ ಪಾಕಿಸ್ಥಾನ ಸರಕಾರ ಹಾಗೂ ಪಾಕ್‌ ಸೇನೆಯು ಭಾರತದ ವಿರುದ್ಧ ಭುಸುಗುಡುತ್ತಿವೆ. ಈ ಕಾರಣದಿಂದಾಗಿಯೇ ಅವು ನಿರಂತರವಾಗಿ ಉಗ್ರರನ್ನು ಒಳನುಸುಳಿಸುವ ಪ್ರಯತ್ನದಲ್ಲಿ ತೊಡಗಿವೆ. ಗಡಿಯಾಚೆಯಿಂದ ಪ್ರತಿನಿತ್ಯ ಅಪ್ರಚೋದಿತ ಗುಂಡಿನ ದಾಳಿಗಳು ವರದಿಯಾಗುತ್ತಲೇ ಇವೆ. ಆದರೆ ಈ ದಾಳಿಗಳು ಹಾಗೂ ತಂತ್ರಗಳೆಲ್ಲ ಪಾಕಿಸ್ಥಾನದ ಪರದಾಟದ ಪ್ರತಿಫ‌ಲನವಷ್ಟೇ.

ಜಮ್ಮು-ಕಾಶ್ಮೀರದಲ್ಲಿ ದಶಕಗಳಿಂದ ನಿರ್ವಿಘ್ನವಾಗಿ ತಮ್ಮ ಕುಕೃತ್ಯಗಳನ್ನು ಮೆರೆಯುತ್ತಾ ಬಂದಿದ್ದ ಪಾಕಿಸ್ಥಾನಕ್ಕೆ ಭಾರತ ಬಹುದೊಡ್ಡ ಆಘಾತವನ್ನೇ ನೀಡುತ್ತಿದೆ. ಈಗ ಭಾರತ ಸರಕಾರ ಆ ಪ್ರದೇಶದಲ್ಲಿ ವೇಗವಾಗಿ ಕೈಗೊಳ್ಳುತ್ತಿರುವ ಸುಧಾರಣಾ ಕಾರ್ಯಗಳು ಹಾಗೂ ನಮ್ಮ ಭದ್ರತಾಪಡೆಗಳು ಮೆರೆಯುತ್ತಿರುವ ಪರಾಕ್ರಮಗಳನ್ನು ಪರಿಗಣಿಸಿದಾಗ ಕೆಲವೇ ದಿನಗಳಲ್ಲೇ ಕಾಶ್ಮೀರದಲ್ಲಿ ಪಾಕ್‌ನ ಕಳ್ಳಾಟಗಳೆಲ್ಲ ನಿಲ್ಲುವ ಆಶಾದಾಯಕ ಸಂದೇಶ ಸಿಗುತ್ತಿದೆ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.