ಹಾಕಿ ದೇಶದ ಮೂಲೆಮೂಲೆಗೆ ತಲುಪುವುದೇ ಈಗಿನ ಅಗತ್ಯ


Team Udayavani, Jan 11, 2023, 6:00 AM IST

ಹಾಕಿ ದೇಶದ ಮೂಲೆಮೂಲೆಗೆ ತಲುಪುವುದೇ ಈಗಿನ ಅಗತ್ಯ

ಹಾಕಿಯಲ್ಲಿ ಭಾರತ ಮತ್ತೆ ಗತವೈಭವ ಗಳಿಸಬಹುದು, ಹಾಕಿ ಸ್ಟಿಕ್‌ಗಳು ಇನ್ನೊಮ್ಮೆ ಬಿರುಸಿನಿಂದ ಬೀಸಬಹುದು ಎಂಬ ಕನಸು ಮತ್ತೂಮ್ಮೆ ಕುಡಿಯೊಡೆದಿದೆ. ಹೀಗೊಂದು ಆಶೆ ಹುಟ್ಟಿಕೊಳ್ಳಲು ಕಾರಣವೂ ಇದೆ,
ಅದರಲ್ಲೊಂದು ಅರ್ಥವೂ ಇದೆ. 2021ರ ಟೋಕಿಯೊ ಒಲಿಂಪಿಕ್ಸ್‌ ಮುಗಿದ ಮೇಲೆ ಭಾರತ ಹಾಕಿ ತಂಡದಲ್ಲಿ ಒಂದು ಹೊಸ ಆಶಾಭಾವನೆ ಆರಂಭವಾಗಿದೆ. ಪುರುಷರ ಹಾಕಿ ತಂಡ ಅಲ್ಲಿ ಕಂಚಿನ ಪದಕ ಗೆದ್ದಿತ್ತು. ಮಹಿಳಾ ತಂಡ ಅಲ್ಲಿ ನಾಲ್ಕನೇ ಸ್ಥಾನಿಯಾಗಿತ್ತು.

ಮಹಿಳಾ ತಂಡ ಅದ್ಭುತವಾಗಿ ಆಡಿ ಕೊನೆಯ ನಿಮಿಷಗಳಲ್ಲಿ ಕಂಚು ತಪ್ಪಿಸಿಕೊಂಡಿತು. ಪುರುಷರ ಹಾಕಿ ತಂಡ ಇನ್ನೇನು ಸೋತೇ ಹೋಯಿತು ಎನ್ನುವಾಗ ಜರ್ಮನಿಯನ್ನು ಮಣಿಸಿತು! ಸೆಮಿಫೈನಲ್‌ನಲ್ಲಿ ಭಾರತ ತಂಡ ಬಹುತೇಕ ಗೆದ್ದೇ ಬಿಟ್ಟಿತ್ತು. ಕೊನೆಯ ನಿಮಿಷಗಳಲ್ಲಿ ಹಠಾತ್‌ ಒತ್ತಡವನ್ನು ನಿಭಾಯಿಸಲಾಗದೆ ಸೋತುಹೋಯಿತು. ಆ ಕಡೆಯ ಹತ್ತು ನಿಮಿಷಗಳನ್ನು ಹೊರತುಪಡಿಸಿದರೆ ಭಾರತೀಯರ ಆಟ ಅದ್ಭುತ. ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಜರ್ಮನಿ­ಎದುರು ಭಾರತ ತಿರುಗಿಬಿದ್ದಿದ್ದು, 2021ರ ಮೂರು ಶ್ರೇಷ್ಠ ಪಂದ್ಯಗಳಲ್ಲೊಂದು ಎಂದು ಗುರುತಿಸಲ್ಪಟ್ಟಿದೆ.

ವಿಶೇಷವೆಂದರೆ ಒಲಿಂಪಿಕ್ಸ್‌ ಮುಗಿದ ಮೇಲೆ ಭಾರತೀಯ ಹಾಕಿ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ವಿಶ್ವಕಪ್‌ಗೆ ಮಾತ್ರ ಗಂಭೀರವಾಗಿಯೇ ಸಿದ್ಧತೆ ನಡೆಸಿದೆ. ಟೋಕಿಯೊದಲ್ಲಿ ಕಂಚು ಗೆಲ್ಲುವಾಗ ಮನ್‌ಪ್ರೀತ್‌ ಸಿಂಗ್‌ ನಾಯಕರಾಗಿದ್ದರು. ಈಗವರು ತಂಡದಲ್ಲಿದ್ದಾರೆ, ಚುಕ್ಕಾಣಿಯನ್ನು ರಕ್ಷಣ ಆಟಗಾರ ಹರ್ಮನ್‌ಪ್ರೀತ್‌ಗೆ ವಹಿಸಲಾಗಿದೆ. ತಂಡವೇನಾದರೂ ವಿಶ್ವಕಪ್‌ ಗೆದ್ದರೆ ಪ್ರತೀ ಆಟಗಾರರಿಗೆ ತಲಾ 1 ಕೋಟಿ ರೂ. ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹೇಳಿದ್ದಾರೆ. ನಿರೀಕ್ಷೆಗಳು ಗರಿಗೆದರಿವೆ.

ಭಾರತ ಹಾಕಿ ತಂಡ ಗತವೈಭವ ಗಳಿಸಲು ಹಾಕಿ ಸಂಸ್ಥೆ, ಇನ್ನಿತರರು ಪ್ರಯತ್ನ ಹಾಕುತ್ತಲೇ ಇದ್ದಾರೆ. ಆದರೆ ಒಂದು ವಿಚಾರವನ್ನು ಎಲ್ಲರೂ ಮರೆತು ಬಿಟ್ಟಂತಿದೆ. ಯಾವುದೇ ಕ್ರೀಡೆ ಬೆಳೆಯಬೇಕಾದರೆ ಅದು ಎಲ್ಲಕಡೆ ಹಬ್ಬಿಕೊಳ್ಳಬೇಕು. ಆಗ ಹೊಸ, ವಿಭಿನ್ನ ಪ್ರತಿಭೆಗಳು ಆ ಕ್ರೀಡೆಗೆ ಹೆಚ್ಚಿನ ಮೌಲ್ಯವನ್ನು ತುಂಬುತ್ತಾರೆ. ಹಾಕಿಯ ಸಮಸ್ಯೆಯಿರುವುದೇ ಇಲ್ಲಿ. ಈ ತಂಡದಲ್ಲಿ ಪ್ರಸ್ತುತ ಕರ್ನಾಟಕದ ಒಬ್ಬನೇ ಒಬ್ಬ ಆಟಗಾರನಿಲ್ಲ. ಕೊಡಗು ಆಟಗಾರರು ಭಾರತ ತಂಡದಲ್ಲಿ ಸತತವಾಗಿ ಸ್ಥಾನ ಪಡೆದಿ­ದ್ದರು. ಈಗ ಅಂತಹದ್ದೊಂದು ದೃಶ್ಯವಿಲ್ಲ. ಒಟ್ಟಾರೆ ತಂಡವನ್ನು ಪರಿಶೀಲಿಸಿ­ದರೆ ಬಹುತೇಕರು ಪಂಜಾಬ್‌ನವರು, ಪಕ್ಕದ ಹರಿಯಾಣದವರು ಇದ್ದಾರೆ. ಈಶಾನ್ಯ ರಾಜ್ಯಗಳಲ್ಲೂ ಈಗ ಹಾಕಿ ಆಟಗಾರರು ಹುಟ್ಟಿಕೊಂಡಿ­ದ್ದಾರೆ. ಅಷ್ಟು ಬಿಟ್ಟರೆ ಉಳಿದೆಲ್ಲ ರಾಜ್ಯಗಳು ಹಾಕಿ ವಿಚಾರದಲ್ಲಿ ಮೌನ!

ಕ್ರಿಕೆಟ್‌ ಭಾರತದಲ್ಲಿ ಬೆಳೆದಿರುವುದೇ ಅದು ದೇಶದ ಮೂಲೆ­ಮೂಲೆಗೆ ತಲುಪಿರುವುದರಿಂದ, ಆಟಗಾರರಿಗೆ ಬೇಕಾದ ಸೌಲಭ್ಯಗಳು ಸಿಗುತ್ತಿರುವುದರಿಂದ. ಹಾಕಿಯಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣ­ವಾಗಬೇಕು. ಕ್ರೀಡೆ ಜನಪ್ರಿಯವಾದಾಗ ಅದನ್ನು ಆಯ್ದು­ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಆಗ ತನ್ನಿಂತಾನೇ ಆಯ್ಕೆಗೆ ಹೆಚ್ಚು ಆಟಗಾರರು ಸಿಗುತ್ತಾರೆ. ಈಗ ಆಯ್ಕೆ ಮಾಡಲು ಪ್ರತಿಭಾವಂತ ಹಾಕಿ ಪಟುಗಳ ಸಂಖ್ಯೆಯೇ ಕಡಿಮೆಯಿದೆ. ಕ್ರಿಕೆಟ್‌ನಂತೆ ಒಂದೊಂದು ಸ್ಥಾನಕ್ಕೆ ಐದು, ಆರು ಮಂದಿ ಸ್ಪರ್ಧಿಸುವ ಪರಿಸ್ಥಿತಿಯಿಲ್ಲ. ಈ ಕೊರತೆಯನ್ನು ಮೊದಲು ಹಾಕಿ ಇಂಡಿಯಾ ನೀಗಿಕೊಳ್ಳಬೇಕು.

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.