ವಾಸಯೋಗ್ಯ ರಾಷ್ಟ್ರಗಳ ಪಟ್ಟಿ : ಸಾಗಬೇಕಾದ ದಾರಿ ಬಹಳ ಇದೆ

Team Udayavani, Jan 20, 2020, 11:30 AM IST

train-track

ವಾಸಯೋಗ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಹಿಂದಿನ ಬಾರಿಗೆ ಹೋಲಿಸಿದರೆ ಈಗ ಉತ್ತಮವಾಗಿರುವುದು ತುಸು ಸಂತಸ ಮೂಡಿಸುವಂಥ ಸಂಗತಿ. ಆದರೆ ಈಗಲೂ ಭಾರತ ಮಹಿಳೆಯರ ಭದ್ರತೆ ಮತ್ತು ಮಕ್ಕಳ ಪಾಲನೆ-ಪೋಷಣೆಯ ವಿಚಾರದಲ್ಲಿ ಹೇಳಿಕೊಳ್ಳುವಂಥ ಸುಧಾರಣೆ ಕಂಡಿಲ್ಲ ಎಂದೂ ಈ ವರದಿ ಹೇಳುತ್ತದೆ.

ವಾರ್ಟನ್‌ ಸ್ಕೂಲ್‌, ಯೂಎಸ್‌ ನ್ಯೂಸ್‌ ಮತ್ತು ವರ್ಲ್x ರಿಪೋರ್ಟ್‌ ಪ್ರಪಂಚದಲ್ಲಿ ವಾಸಯೋಗ್ಯ ರಾಷ್ಟ್ರಗಳ ಪಟ್ಟಿ ಸಿದ್ಧಪಡಿಸಿದ್ದು, ಇದರಲ್ಲಿ ಭಾರತದ ಸ್ಥಾನ ಹಿಂದಿನ ಬಾರಿಗೆ ಹೋಲಿಸಿದರೆ ಈಗ ಉತ್ತಮವಾಗಿರುವುದು ತುಸು ಸಂತಸ ಮೂಡಿಸುವಂಥ ಸಂಗತಿ. ಆದರೆ ಈಗಲೂ ಭಾರತ ಮಹಿಳೆಯರ ಭದ್ರತೆ ಮತ್ತು ಮಕ್ಕಳ ಪಾಲನೆ-ಪೋಷಣೆಯ ವಿಚಾರದಲ್ಲಿ ಹೇಳಿಕೊಳ್ಳುವಂಥ ಸುಧಾರಣೆ ಕಂಡಿಲ್ಲ ಎಂದೂ ಈ ವರದಿ ಹೇಳುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ವರದಿಯನ್ನು ಆಯಾ ದೇಶಗಳಲ್ಲಿನ ಸಾಮಾಜಿಕ ದತ್ತಾಂಶಗಳು ಹಾಗೂ ಜಾಗತಿಕ ಅಭಿಪ್ರಾಯದ ಆಧಾರದಲ್ಲಿ ತಯಾರಿಸಲಾಗಿದೆ. ಪ್ರಪಂಚದ 73 ವಾಸ ಯೋಗ್ಯ ದೇಶಗಳಲ್ಲಿ ಭಾರತ 25ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಅದು 27ನೇ ಸ್ಥಾನದಲ್ಲಿತ್ತು. ವ್ಯಾಪಾರ, ನಿವೇಶ, ಪ್ರವಾಸಕ್ಕೆ ಅನುಕೂಲಕರ ಸ್ಥಿತಿ, ಸಾಮಾಜಿಕ ಸನ್ನಿವೇಶದ ಮಾನದಂಡದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಭಾರತವು ಮಕ್ಕಳ ಲಾಲನೆ-ಪಾಲನೆಗೆ ಉತ್ತಮ ದೇಶವಲ್ಲ ಎಂದು ಈ ವರದಿಯು ಹೇಳಿರುವುದು, ದೇಶದ ರೈಲ್ವೇ ಸ್ಟೇಷನ್ನುಗಳಲ್ಲಿ, ಬಸ್‌ಸ್ಟಾಂಡುಗಳಲ್ಲಿ ಪ್ರತಿನಿತ್ಯ ರಕ್ಷಣೆಯಾಗುತ್ತಿರುವ ದಿಕ್ಕಿಲ್ಲದ ಮಕ್ಕಳ ಆಧಾರದಲ್ಲಿ ಹಾಗೂ ಕಳೆದ ಎರಡು ವರ್ಷದಲ್ಲಿ ಭಾರತೀಯ ಶಾಲೆಗಳಲ್ಲಿ ಮಕ್ಕಳ ಮೇಲೆನಡೆದ ಲೈಂಗಿಕ ಅಪರಾಧದ ಹಿನ್ನೆಲೆಯಲ್ಲಿ.

ಖುದ್ದು ಭಾರತೀಯ ರೈಲ್ವೆ ಕಳೆದ ವಾರ ಬಿಡುಗಡೆ ಮಾಡಿರುವ ವರದಿಯು 2019ರಲ್ಲಿ ದೇಶಾದ್ಯಂತ ರೈಲ್ವೆ ಸ್ಟೇಷನ್ನುಗಳಿಂದ 16,457 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಹೇಳಿದೆ. ರೈಲ್ವೆೆ ಪ್ರೊಟೆಕ್ಷನ್‌ ಫೋರ್ಸ್‌(ಆರ್‌ಪಿಎಫ್) ಪ್ರತಿ ದಿನ 46 ಮಕ್ಕಳನ್ನು ರಕ್ಷಿಸುತ್ತಿದೆಯಂತೆ. ಹೀಗಾಗಿ, ಆಂತರಿಕ ತೊಂದರೆಗೆ ಸಿಲುಕಿರುವ ಕೀನ್ಯಾ ಮತ್ತು ಈಜಿಪ್ತ್ ನಂಥ ರಾಷ್ಟ್ರಗಳೂ ಮಕ್ಕಳ ಆರೈಕೆಯಲ್ಲಿ ನಮಗಿಂತ ಉತ್ತಮ ಸ್ಥಾನ ಪಡೆದಿವೆ. ಆದಾಗ್ಯೂ ಈ ವಿಚಾರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ (65ನೇ ಸ್ಥಾನ) ಈ ವರ್ಷ(59ನೇ ಸ್ಥಾನ) ಪರಿಸ್ಥಿತಿಯು ಸುಧಾರಿಸಿದೆ. ಮಹಿಳೆಯರ ಸುರಕ್ಷತೆಯಲ್ಲೂ ಭಾರತ 58ನೇ ಸ್ಥಾನ ಪಡೆದಿರುವುದು ಕಳವಳಕಾರಿ ವಿಚಾರ. ಯುಎಇ, ಕತಾರ್‌, ಸೌದಿ ಅರಬ್‌ನಂಥ ರಾಷ್ಟ್ರಗಳು ಮಹಿಳಾ ಸುರಕ್ಷತೆಯ ಪಟ್ಟಿಯಲ್ಲಿ ನಮಗಿಂತ ಉತ್ತಮ ಅಂಕ ಗಳಿಸಿವೆ. ಆದರೆ ಈ ರಾಷ್ಟ್ರಗಳಲ್ಲಿ ಲಿಂಗ ಸಮಾನತೆ ಎನ್ನುವುದು ಕನಸಿನ ಮಾತೇ ಸರಿ. ಇವುಗಳ ರ್‍ಯಾಂಕಿಂಗ್‌ ಉತ್ತಮವಾಗಿರುವುದಕ್ಕೆ ಕಾರಣವೂ ಇದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ಜನ ದೇಶಾದ್ಯಂತ ರಸ್ತೆಗಿಳಿದು ಪ್ರತಿಭಟಿಸುತ್ತಾರೆ, ನಮ್ಮ ಮಾಧÂಮಗಳು ಗಟ್ಟಿಯಾಗಿ ಧ್ವನಿಯೆತ್ತುತ್ತವೆ, ವಿಶ್ವದಾದ್ಯಂತ ಈ ವಿಷಯ ಚರ್ಚೆಗೊಳಗಾಗುತ್ತದೆ. ಆದರೆ ಈ ಮೇಲಿನ ರಾಷ್ಟ್ರಗಳಲ್ಲಿ ಇಂಥ ವಿಚಾರಗಳು ಸುದ್ದಿಯಾಗುವುದೇ ಇಲ್ಲ. ಮಾಧ್ಯಮಗಳಿಗೂ ಅಷ್ಟು ಸ್ವಾತಂತ್ರÂವಿಲ್ಲ.
ಹಾಗೆಂದು, ಇದಕ್ಕಾಗಿ ನಾವು ಸಮಾಧಾನಪಟ್ಟುಕೊಳ್ಳುವಂತೇನೂ ಇಲ್ಲ. ನಮ್ಮ ರಾಜ್ಯವೂ ಸೇರಿದಂತೆ, ದೇಶಾದ್ಯಂತ ಪ್ರತಿನಿತ್ಯ ನೂರಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ. ಈ ವಿಚಾರದಲ್ಲಿ ಜನ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎನ್ನುವುದೇನೋ ಸರಿ, ಆದರೆ ಬೇರು ಮಟ್ಟದಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗುತ್ತಿಲ್ಲ.

ವಿಕಾಸದ ದೃಷ್ಟಿಕೋನದಿಂದ ನೋಡಿದರೆ ಭಾರತದ ನಗರಗಳಲ್ಲಿ ಮೂಲ ಸೌಕರ್ಯಗಳು ಹೆಚ್ಚಾಗಿವೆ, ದೇಶವು ಹೆಚ್ಚು ಉದ್ಯಮ ಸ್ನೇಹಿ ಆಗುತ್ತಿದೆ ಎನ್ನುವುದು ಸತ್ಯವಾದರೂ, ಕಾನೂನು ಸುವ್ಯವಸ್ಥೆ, ಸಂವೇದನಾಶೀಲತೆ ನಮ್ಮ ಅಜೆಂಡಾದ ಪ್ರಮುಖ ಭಾಗವಾಗಿಲ್ಲ. ಇದು ಸಾಧ್ಯವಾಗುವ ನಿಟ್ಟಿನಲ್ಲಿ ಸಮಾಜ-ಸರ್ಕಾರ ಜತೆಯಾಗಿ ಹೆಜ್ಜೆಯಿಡಬೇಕಿದೆ.

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.