ಹುಲಿ ಗಣತಿ ವರದಿ: ಶ್ಲಾಘನೀಯ ಸಾಧನೆ

Team Udayavani, Aug 1, 2019, 5:42 AM IST

ಹುಲಿ ಸಂರಕ್ಷಣೆಯ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ತೀವ್ರ ಜಾಗೃತಿ ವಹಿಸಲಾಗುತ್ತಿದೆ. ಆದರೂ, ಈ ವಿಷಯದಲ್ಲಿ ಸಕಾರಾತ್ಮಕವೆನ್ನುವಂಥ ಸುದ್ದಿಗಳೇನೂ ಹೆಚ್ಚು ಹೊರಹೊಮ್ಮುತ್ತಲೇ ಇರಲಿಲ್ಲ. ಆದರೆ ಈಗ ಹುಲಿಗಳ ಸಂಖ್ಯೆಯ ಮೇಲೆ ಹೊರಬಿದ್ದಿರುವ ಅಂಕಿಅಂಶಗಳು, ಇದೆಲ್ಲ ಇಷ್ಟು ವರ್ಷಗಳ ಪ್ರಯತ್ನಗಳ ಒಟ್ಟು ಸಕಾರಾತ್ಮಕ ಫ‌ಲ ಎಂಬ ಸಂದೇಶವನ್ನು ಕಳುಹಿಸಿವೆ.

ವಿಶ್ವ ಹುಲಿಗಳ ದಿನದಂದು ಪ್ರಧಾನಿ ಮೋದಿಯವರು ಬಿಡುಗಡೆ ಮಾಡಿದ ಹುಲಿ ಗಣತಿ ವರದಿಯು ಭಾರತದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿರುವುದನ್ನು ಸಾರುತ್ತಿದೆ. 2018ರ ಹುಲಿ ಗಣತಿಯ ಪ್ರಕಾರ ಭಾರತದಲ್ಲಿ 2,967 ಹುಲಿಗಳಿದ್ದು, 2006ರಲ್ಲಿದ್ದ 1,411 ಹುಲಿಗಳ ಸಂಖ್ಯೆಗಿಂತ ಇದು ಎರಡು ಪಟ್ಟು ಅಧಿಕ.

‘ಒಂಬತ್ತು ವರ್ಷಗಳ ಹಿಂದೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ವನ್ಯಜೀವಿ ಸಂರಕ್ಷಣೆ ಕುರಿತ ಸಮ್ಮೇಳನದಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮಲ್ಲಿರುವ ಹುಲಿ ಸಂತತಿಯನ್ನು 2022ರೊಳಗೆ ದುಪ್ಪಟ್ಟು ಮಾಡಬೇಕೆಂದು ಕರೆ ನೀಡಲಾಗಿತ್ತು, ಭಾರತವು ಆ ಗಡಿ ಮುಗಿಯಲು ಇನ್ನೂ ನಾಲ್ಕು ವರ್ಷ ಬಾಕಿ ಇರುವಂತೆಯೇ ಗುರಿ ತಲುಪಿದೆ’ ಎಂಬ ಪ್ರಧಾನಿಯ ಮಾತು, ನಿಜಕ್ಕೂ ಹೆಮ್ಮೆಪಡಬೇಕಾದ ವಿಚಾರ.

ಅದರಷ್ಟೇ ಹೆಮ್ಮೆಯ ವಿಚಾರವೆಂದರೆ, ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಸಿಕ್ಕಿದೆ ಎನ್ನುವುದು. ಆದಾಗ್ಯೂ, ಹಿಂದಿನ ಎರಡು ಗಣತಿಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು, ಹಾಗೆಂದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ ಎಂದೇನೂ ಇದರರ್ಥವಲ್ಲ, ಬದಲಾಗಿ ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣ.

2006ರಲ್ಲಿ ಹುಲಿಗಳ ಸಂಖ್ಯೆ ಹದಿನಾಲ್ಕು ನೂರಕ್ಕೆ ಬಂದು ನಿಂತಾಗ ನಿಜಕ್ಕೂ ಕಳವಳ ಉಂಟಾಗಿದ್ದು ಸುಳ್ಳಲ್ಲ. ಆ ಸಮಯದಿಂದಲೇ ಹುಲಿ ಸಂರಕ್ಷಣೆಗಾಗಿ ಅಭಯಾರಣ್ಯಗಳ ವಿಸ್ತರಣೆಯಿಂದ ಹಿಡಿದು, ಅವುಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವಂಥ ಉಪಕ್ರಮಗಳನ್ನು ಜಾರಿಗೆ ತರಲಾಯಿತು. ಇದೆಲ್ಲದರ ಪರಿಣಾಮವಾಗಿ ಇಂದು ಸಂತೋಷದಾಯಕ ಫ‌ಲಿತಾಂಶ ಹೊರಬಂದಿದೆ. ಈ ಬಾರಿ ಹುಲಿಗಳ ಗಣತಿಗೆ 28 ಮಾನದಂಡಗಳನ್ನು ಉಪಯೋಗಿಸಲಾಗಿತ್ತು. ಇನ್ನು 2014ರ ಗಣತಿಯಲ್ಲಿ ಒಂದೂವರೆ ವರ್ಷಕ್ಕೂ ಮೇಲ್ಪಟ್ಟ ಹುಲಿಗಳನ್ನು ಎಣಿಸಲಾಗಿತ್ತು, ಅದೇ 2018ರ ಸರ್ವೇಯಲ್ಲಿ ಒಂದು ವರ್ಷದ ಹುಲಿಗಳನ್ನೂ ಪರಿಗಣಿಸಲಾಗಿದೆ. 2014ರಲ್ಲಿ 692ರಷ್ಟಿದ್ದ ದೇಶದಲ್ಲಿನ ಹುಲಿಗಳ ಸಂರಕ್ಷಿತ ವಲಯಗಳ ಸಂಖ್ಯೆ, 2019ರ ಹೊತ್ತಿಗೆ 860ಕ್ಕೆ ಏರಿದೆ. ಅಲ್ಲದೇ ಹುಲಿಗಳ ಮೀಸಲು ಕೇಂದ್ರಗಳ ಸಂಖ್ಯೆಯು 2014ರಲ್ಲಿ 43ರಷ್ಟಿದ್ದದ್ದು 2019ರ ವೇಳೆಗೆ 100ಕ್ಕೆ ತಲುಪಿದೆ.

ಪರಿಣತರ ಪ್ರಕಾರ ಇದುವರೆಗೂ ಬೇರಾವ ದೇಶದಲ್ಲೂ ಇಷ್ಟೊಂದು ಬೃಹತ್‌ ಸರ್ವೇ ನಡೆದೇ ಇಲ್ಲ.

ಆದಾಗ್ಯೂ ಪ್ರಸಕ್ತ ಅಂಕಿ-ಅಂಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿವೆಯಾದರೂ, ಸತ್ಯವೇನೆಂದರೆ, ಈಗಲೂ ಅಪಾಯ ದೂರವಾಗಿಲ್ಲ. ಹುಲಿಗಳ ವಾಸ ಪ್ರದೇಶಗಳಲ್ಲಿ ವಿವಿಧ ರೂಪದಲ್ಲಿ ಮನುಷ್ಯನ ಉಪಸ್ಥಿತಿಯು ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಇದಷ್ಟೇ ಅಲ್ಲದೆ, ಯಾವ ಸುಂದರಬನ್‌ ಪ್ರದೇಶವನ್ನು ಹುಲಿಗಳ ಸ್ವರ್ಗ ಎಂದು ಕರೆಯಲಾಗುತ್ತಿತ್ತೋ ಆ ಪ್ರದೇಶದ ಬಹಳಷ್ಟು ಭಾಗವೂ ಕೂಡ ಸಾಗರದ ಹೊಡೆತಕ್ಕೆ ಮುಳುಗಿ ಹೋಗುವ ಅಪಾಯವೂ ಇದೆ. ಇದೇನಾದರೂ ಆದರೆ ಹೊಸ ಸವಾಲು ಎದುರಾಗಿ ನಿಲ್ಲುತ್ತದೆ. ಆ ಸವಾಲನ್ನು ಸಕ್ಷಮವಾಗಿ ಎದುರಿಸಲು ಭಾರತ ಸಿದ್ಧವಿರಬೇಕಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಅನೇಕ ಬಾರಿ ಪಾಕ್‌ ಪರವಾದ ಘೋಷಣೆ, ಪಾಕ್‌ ಗುಣಗಾನಗಳು ನಡೆದಿರುವುದು ಪ್ರತಿಭಟನೆಯ ನೈಜ ಉದ್ದೇಶವನ್ನು ಪ್ರಶ್ನಿಸುವಂತೆ...

  • ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ ರಾಕೇಶ್‌ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ...

  • ಬ್ರಿಟಿಶ್‌ ಸಂಸದೆ ಡೆಬ್ಬಿ ಅಬ್ರಹಾಂ ಅವರ ವಿಸಾ ರದ್ದುಗೊಳಿಸಿ ಹಾಗೂ ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ತಿರುಗೇಟು...

  • ಮಹಿಳೆಯರನ್ನು ಏಕೆ ಕಮಾಂಡ್‌ ಆಗಿ ನೇಮಿಸುತ್ತಿಲ್ಲ ಎನ್ನುವ ವಿಚಾರಕ್ಕೆ ಕೇಂದ್ರ ಎದುರಿಟ್ಟ ತರ್ಕ. ಮಹಿಳೆಯರನ್ನು ಕಮಾಂಡ್‌ ಆಗಿ ಸ್ವೀಕರಿಸಲು ಸೇನೆಯಲ್ಲಿರುವ...

  • ಪ್ರತಿಸಲ ಚುನಾವಣೆ ಮುಗಿದ ಕೂಡಲೇ ಚುನಾವಣಾ ಆಯೋಗ ಚಲಾವಣೆಯಾದ ಒಟ್ಟು ಮತಗಳ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಒಂದು ವೇಳೆ ಮತದಾನ ಪ್ರಮಾಣ ಶೇ.80 ಆಗಿದ್ದರೆ ಅತ್ಯುತ್ತಮ...

ಹೊಸ ಸೇರ್ಪಡೆ