Udayavni Special

ಚಿಟ್‌ಫ‌ಂಡ್‌ ವಂಚನೆ ಕಠಿನ ಕಾನೂನು ರಚಿಸಿ


Team Udayavani, Jul 20, 2018, 12:32 PM IST

chit-funds.png

ವಿತ್ತೀಯ ಅರಿವಿನ ಕೊರತೆಯೂ ಚಿಟ್‌ಫ‌ಂಡ್‌ಗಳಂಥ ದಗಾ ಕಂಪೆನಿಗಳ ವ್ಯವಹಾರಕ್ಕೆ ಪೂರಕ ವಾತಾವರಣ ಸೃಷ್ಟಿಸಿಕೊಡುತ್ತದೆ.  

ಮತ್ತೂಂದು ಚಿಟ್‌ಫ‌ಂಡ್‌ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಚಿಟ್‌ಫ‌ಂಡ್‌ ಕಂಪೆನಿಗಳು ಎಷ್ಟೇ ಮೋಸ ಮಾಡಿದರೂ ಜನರು ಬುದ್ಧಿ ಕಲಿತುಕೊಳ್ಳುವುದಿಲ್ಲ ಎನ್ನುವುದು ಬೆಂಗಳೂರಿನಲ್ಲಿ ಬಯಲಾಗಿರುವ ಈ ಪ್ರಕರಣದಿಂದ ಮತ್ತೂಮ್ಮೆ ಸಾಬೀತಾಗಿದೆ. ತ್ರಿಪುರ ಚಿಟ್‌ ಫ‌ಂಡ್‌ ಕಂಪೆನಿ ಎಂಬ ಸಂಸ್ಥೆ ನಾಲ್ಕು ರಾಜ್ಯಗಳ 30000ಕ್ಕೂ ಅಧಿಕ ಗ್ರಾಹಕರಿಗೆ ಸುಮಾರು 280 ಕೋ. ರೂ. ವಂಚಿಸಿರುವುದನ್ನು ಪತ್ತೆ ಹಚ್ಚಲಾಗಿದೆ. ಕಂಪೆನಿಯ ವ್ಯಾಪ್ತಿ ನಾಲ್ಕು ರಾಜ್ಯಗಳಲ್ಲಿ ಇರುವುದರಿಂದ ಮೋಸ ಹೋದವರ ಸಂಖ್ಯೆ ಮತ್ತು ಮೋಸದ ಮೊತ್ತ ಇನ್ನೂ ಹೆಚ್ಚಿರಲಿಕ್ಕೂ ಸಾಕು. ಸದ್ಯಕ್ಕೆ ಸಿಕ್ಕಿರುವ ಲೆಕ್ಕ ಇಷ್ಟು. 

ಚಿಟ್‌ಫ‌ಂಡ್‌ ಕಂಪೆನಿಗಳಿಂದ ಮತ್ತು ಪಾಂಜಿ ಸ್ಕೀಂಗಳಿಂದ ಜನರು ಮೋಸ ಹೋಗುವುದು ಇದು ಮೊದಲೂ ಅಲ್ಲ ಇದು ಕೊನೆಯೂ ಅಲ್ಲ. ಈ ಹಿಂದೆಯೂ ಇಂಥ ನೂರಾರು ಪ್ರಕರಣಗಳು ಸಂಭವಿಸಿದ್ದವು. ಆದರೂ ಜನರೂ ಇನ್ನೂ ಬೆಳಕಿಗೆ ಆಕರ್ಷಿತರಾಗುವ ಪತಂಗಗಳಂತೆ ಚಿಟ್‌ಫ‌ಂಡ್‌ ಕಂಪೆನಿಗಳತ್ತ  ಆಕರ್ಷಿತರಾಗುತ್ತಲೇ ಇದ್ದಾರೆ. ಚಿಟ್‌ಫ‌ಂಡ್‌ ಕಂಪೆನಿಗಳು ನೀಡುವ ಹೆಚ್ಚಿನ ಬಡ್ಡಿಯ ಆಕರ್ಷಣೆ ಜನರನ್ನು ಸೆಳೆಯು ತ್ತದೆ. ಸಾಮಾನ್ಯವಾಗಿ ಇಂಥ ವ್ಯವ ಹಾರದ ಗ್ರಾಹಕರು ಬಡವರು ಮತ್ತು ಕೆಳ ಮಧ್ಯಮ ವರ್ಗದ ವರು. ಉಳಿದೆಡೆಗಿಂತ ಒಂದು ರೂಪಾಯಿ ಹೆಚ್ಚು ಸಿಗುತ್ತದೆ ಎಂದಾ ದರೆ ರಿಸ್ಕ್ ತೆಗೆದುಕೊಳ್ಳುವ ಹುಂಬ ಧೈರ್ಯವನ್ನು ಅವರಲ್ಲಿ ವ್ಯವಸ್ಥೆ ಹುಟ್ಟಿಸಿರುತ್ತದೆ. ಹೀಗೆ ಮೋಸ ಹೋಗಲು ತಯಾರಿರುವ ಜನರಿರುವಾಗ ಮೋಸ ಮಾಡುವವರಿಗೇನೂ ಕೊರತೆಯಿಲ್ಲ. 

ದೇಶದಲ್ಲಿ ಚಿಟ್‌ಫ‌ಂಡ್‌ ಮೋಸ ದೊಡ್ಡದಾಗಿ ಚರ್ಚೆಯಾಗಿದ್ದು ಪಶ್ಚಿಮ ಬಂಗಾಳದ ಶಾರದಾ ಚಿಟ್‌ಫ‌ಂಡ್‌ ಕಂಪೆನಿ ಮುಳುಗಿದಾಗ. ರಾಜಕಾರಣಿಗಳು, ಸಿನೇಮಾ ಕ್ಷೇತ್ರದವರು ಮತ್ತು ಉದ್ಯಮಿಗಳ ಕೃಪಾಶ್ರಯದಲ್ಲಿ ಬೆಳೆದ ಈ ಸಂಸ್ಥೆ ಸುಮಾರು 30,000 ಕೋ. ರೂ.ಯಷ್ಟು ವಂಚನೆ ಎಸಗಿದೆ. ಇದರಲ್ಲಿ ಹಣ ಹೂಡಿದವರಲ್ಲಿ ಕಡು ಬಡವರಿಂದ ಹಿಡಿದು ಶ್ರೀಮಂತ ಉದ್ಯಮಿಗಳ ತನಕ ಇದ್ದರೂ. ಅಂದರೆ ಸುಲಭದಲ್ಲಿ ಹಣ ಗಳಿಸುವ ಭರವಸೆಗೆ ಬಡವರು ಮಾತ್ರವಲ್ಲದೆ ಶ್ರೀಮಂತರೂ ಮಾರು ಹೋಗುತ್ತಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಯಾವುದೇ ಸಂಸ್ಥೆ ತಮ್ಮ ಹಣಕ್ಕೆ ಇಷ್ಟು ದೊಡ್ಡ ಪ್ರತಿಫ‌ಲ ನೀಡಲು ಹೇಗೆ ಸಾಧ್ಯ ಎಂದು ಒಂದು ಕ್ಷಣ ಯೋಚಿಸಿದರೂ ಚಿಟ್‌ಫ‌ಂಡ್‌ ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಲು ಯಾರೂ ಮುಂದಾಗಲಿಕ್ಕಿಲ್ಲ. ಆದರೆ ಆಮಿಷಗಳ ಎದುರು ಜನರು ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿರುವುದರಿಂದ ಚಿಟ್‌ಫ‌ಂಡ್‌ ಬೆಳೆ ಹುಲುಸಾಗಿ ಬೆಳೆಯುತ್ತದೆ. 
ವಿತ್ತೀಯ ಅರಿವಿನ ಕೊರತೆಯೂ ಚಿಟ್‌ಫ‌ಂಡ್‌ಗಳಂಥ ದಗಾ ಕಂಪೆನಿಗಳ ವ್ಯವಹಾರಕ್ಕೆ ಪೂರಕ ವಾತಾವರಣ ಸೃಷ್ಟಿಸಿಕೊಡುತ್ತದೆ. ಈಗಲೂ ಗ್ರಾಮೀಣ ಭಾಗಗಳ ಜನರು ಬ್ಯಾಂಕುಗಳಿಗಿಂತಲೂ ಹೆಚ್ಚಾಗಿ ಖಾಸಗಿ ವ್ಯಕ್ತಿಗಳು ನಡೆಸುವ ಹಣಕಾಸಿನ ವಹಿವಾಟುಗಳ ಮೇಲೆಯೇ ಹೆಚ್ಚು ಭರವಸೆ ಹೊಂದಿದ್ದಾರೆ. ಚಿಟ್‌ಫ‌ಂಡ್‌ ವ್ಯವಹಾರಗಳನ್ನು ನಿಯಂತ್ರಿಸಲು ಚಿಟ್‌ಫ‌ಂಡ್‌ ಕಾಯಿದೆ 1982 ಇದೆ. ಶಾರದಾ ಮತ್ತು ರೋಸ್‌ವ್ಯಾಲಿ ವಂಚನೆ ಕಾಂಡಗಳು ಬಯಲಾದ ಬಳಿಕ ಕೇಂದ್ರ ಈ ಕಾಯಿದೆಗೆ ಬದಲಾಗಿ ಅನಿಯಂತ್ರಿತ ಠೇವಣಿ ಸ್ಕೀಂಗಳು ಮತ್ತು ಚಿಟ್‌ಫ‌ಂಡ್‌ ವ್ಯವಹಾರಗಳನ್ನು ನಿಷೇಧಿಸುವ ಕರಡು ಕಾಯಿದೆಯನ್ನು ರಚಿಸಿದ್ದರೂ ಅದಿನ್ನೂ ಶಾಸನವಾಗಿ ಜಾರಿಗೆ ಬಂದಿಲ್ಲ. ಲೋಕಸಭೆಯಲ್ಲಿ ಮಂಡನೆಯಾಗಿರುವ ಕಾಯಿದೆಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. 

ಕಾಯಿದೆಯಲ್ಲಿರುವ ಕೆಲವು ಅಂಶಗಳು ಈ ಮಾದರಿಯ ವಂಚನೆಯನ್ನು ತಡೆಯಲು ಸಶಕ್ತವಾಗಿವೆ. ಚಿಟ್‌ಫ‌ಂಡ್‌ ವ್ಯವಹಾರದಲ್ಲಿ ಮೋಸ ಮಾಡಿದ ಕಂಪೆನಿಗಳ ನಿರ್ದೇಶಕರನ್ನು ಅವರು ಸ್ಥಾನಮಾನ ಲೆಕ್ಕಿಸದೆ ಕಾನೂನು ಕ್ರಮಕ್ಕೊಳಪಡಿಸುತ್ತೇವೆ ಎಂದು ಹಣಕಾಸು ಸಚಿವ ಅರುಣ್‌ ಜೈಟ್ಲೀ ಕಳೆದ ಚಳಿಗಾಲದ ಅಧಿವೇಶನದಲ್ಲೇ ಹೇಳಿದ್ದರೂ ಕೇಂದ್ರದ ಕಡೆಯಿಂದ ಇನ್ನೂ ಅಂಥ ದಿಟ್ಟ ಕೆಲಸ ನಡೆದಿರುವುದು ವರದಿಯಾಗಿಲ್ಲ. 
ಚಿಟ್‌ಫ‌ಂಡ್‌ ವಂಚನೆಗಳು ಬೆಳಕಿಗೆ ಬಂದ ಬಳಿಕ ಸರಕಾರಗಳು ಸಂತ್ರಸ್ತರಿಗೆ ಪರಿಹಾರ ನೀಡಲು ಒಂದಿಷ್ಟು ಮೊತ್ತ ಎತ್ತಿಡುವುದರಿಂದ ಈ ಪೀಡೆ ನಿವಾರಣೆಯಾಗದು. ಪಶ್ಚಿಮ ಬಂಗಾಲ ಸರಕಾರ 30,000 ಕೋ. ರೂ. ವಂಚನೆ ನಡೆದಾಗ 500 ಕೋ. ರೂ. ಎತ್ತಿಟ್ಟು ನಗೆಪಾಟಲಿಗೀಡಾದದ್ದನ್ನು ನೆನಪಿಸಿಕೊಳ್ಳಬಹುದು. ಅಲ್ಲದೆ ಜನರ ತೆರಿಗೆ ಹಣವನ್ನು ಇಂಥ ಕೆಲಸಗಳಿಗೆ ಬಳಸುವುದು ಸರಿಯೇ ಎಂಬ ನೈತಿಕತೆಯ ಪ್ರಶ್ನೆಯೂ ಇಲ್ಲಿದೆ. ಇದರ ಬದಲು ಚಿಟ್‌ಫ‌ಂಡ್‌ ಮತ್ತು ಪಾಂಜಿ ಸ್ಕೀಂಗಳ ವಿರುದ್ಧ ಕಠಿನ ನಿಯಮಗಳನ್ನು ರೂಪಿಸುವುದೇ ಸರಿಯಾದ ಕ್ರಮ. ಸರ್ವರಿಗೂ ಬ್ಯಾಂಕ್‌ ಸೇವೆ, ಎಲ್ಲರಿಗೂ ವಿತ್ತೀಯ ಸೇರ್ಪಡೆ ಎಂಬ ಮಹೋನ್ನತ ಯೋಜನೆಗಳನ್ನು ಜಾರಿಗೊಳಿಸು ತ್ತಿರುವಾಗ ಇಂಥ ವಂಚನೆಗಳು ನಡೆಯುತ್ತಿರುವುದು ಆರೋಗ್ಯಕರವಲ್ಲ. 

ಟಾಪ್ ನ್ಯೂಸ್

Untitled-1

ಜಾಗತಿಕ ಟಾಪ್‌ ಸ್ಟಾರ್ಟ್‌ ಅಪ್‌ ಹಬ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ

Dwayne Bravo

ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬ್ರಾವೋ ಜೊತೆ ಜಗಳವಾಡಿದ ಸಿಎಸ್ ಕೆ ನಾಯಕ ಧೋನಿ

ಐಪಿಎಲ್ ನಲ್ಲಿ ಬೆಳಕಿಗೆ ಬಂದ ಹೊಸ ಪ್ರತಿಭೆ: ವೆಂಕಟೇಶ್ ಅಯ್ಯರ್ ಎಂಬ ಅಚ್ಚರಿ

ಐಪಿಎಲ್ ನಲ್ಲಿ ಬೆಳಕಿಗೆ ಬಂದ ಹೊಸ ಪ್ರತಿಭೆ: ವೆಂಕಟೇಶ್ ಅಯ್ಯರ್ ಎಂಬ ಅಚ್ಚರಿ

ಅಕ್ರಮವಾಗಿ ಆಕ್ರಮಿಸಿರುವ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡಿ: ಪಾಕ್ ಗೆ ಭಾರತದ ಖಡಕ್ ಉತ್ತರ

ಅಕ್ರಮವಾಗಿ ಆಕ್ರಮಿಸಿರುವ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡಿ: ಪಾಕ್ ಗೆ ಭಾರತದ ಖಡಕ್ ಉತ್ತರ

Untitled-1

ಮಂಗಳೂರು-ಮಣಿಪಾಲ : ಎಸಿ ವೋಲ್ವೊ ಬಸ್‌ ಇನ್ನು ನೆನಪು ಮಾತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ರಾಜಕೀಯಕ್ಕಾಗಿಯೇ ಎನ್‌ಇಪಿ ಬಗ್ಗೆ ವಿರೋಧ ಬೇಡ

ಪರಿಹಾರ ನಿರ್ಧಾರ ತಡವಾದರೂ ಉತ್ತಮವಾದ ಕ್ರಮ

ಪರಿಹಾರ ನಿರ್ಧಾರ ತಡವಾದರೂ ಉತ್ತಮವಾದ ಕ್ರಮ

ಭಯೋತ್ಪಾದನೆಯ ಮೂಲೋತ್ಪಾಟನೆಗೆ ಮೊಳಗೀತೇ ರಣಕಹಳೆ?

ಭಯೋತ್ಪಾದನೆಯ ಮೂಲೋತ್ಪಾಟನೆಗೆ ಮೊಳಗೀತೇ ರಣಕಹಳೆ?

ಸಾರ್ವಜನಿಕ ದೂರುಗಳ ವಿಲೇವಾರಿಯಲ್ಲಿ ಅಸಡ್ಡೆ ಬೇಡ 

ಸಾರ್ವಜನಿಕ ದೂರುಗಳ ವಿಲೇವಾರಿಯಲ್ಲಿ ಅಸಡ್ಡೆ ಬೇಡ 

Untitled-1

ಶಿಕ್ಷಕರ ವರ್ಗಾವಣೆ ವಿಘ್ನ ನಿವಾರಣೆಯಾಗಲಿ

MUST WATCH

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಹೊಸ ಸೇರ್ಪಡೆ

Untitled-1

ಜಾಗತಿಕ ಟಾಪ್‌ ಸ್ಟಾರ್ಟ್‌ ಅಪ್‌ ಹಬ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ

Dwayne Bravo

ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬ್ರಾವೋ ಜೊತೆ ಜಗಳವಾಡಿದ ಸಿಎಸ್ ಕೆ ನಾಯಕ ಧೋನಿ

ಐಪಿಎಲ್ ನಲ್ಲಿ ಬೆಳಕಿಗೆ ಬಂದ ಹೊಸ ಪ್ರತಿಭೆ: ವೆಂಕಟೇಶ್ ಅಯ್ಯರ್ ಎಂಬ ಅಚ್ಚರಿ

ಐಪಿಎಲ್ ನಲ್ಲಿ ಬೆಳಕಿಗೆ ಬಂದ ಹೊಸ ಪ್ರತಿಭೆ: ವೆಂಕಟೇಶ್ ಅಯ್ಯರ್ ಎಂಬ ಅಚ್ಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.