Udayavni Special

ಫಾಸ್ಟಾಗ್‌ ಬಗ್ಗೆ ಬೇಕು ಮತ್ತಷ್ಟು ಜನ ಜಾಗೃತಿ


Team Udayavani, Dec 16, 2019, 1:16 AM IST

Fastag-rule-amp

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ ಫಾಸ್ಟಾಗ್‌ ವ್ಯವಸ್ಥೆ ವಾಹನ ಚಾಲಕ-ಮಾಲೀಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ. ಟೋಲ್‌ ಪ್ಲಾಜಾಗಳಲ್ಲಿ ಈ ಬಗ್ಗೆ ಅದರ ಜಾರಿ ಬಗ್ಗೆ ಸಿದ್ಧತೆ ಇಲ್ಲದೇ ಇರುವುದು ಮತ್ತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆಯಿಂದ ಹೀಗಾಗಿದೆ. ಒಂದು ಮಾಹಿತಿಯ ಪ್ರಕಾರ ಕರ್ನಾಟಕದ ಶೇ.42 ವಾಹನಗಳಲ್ಲಿ ಮಾತ್ರ ಅದನ್ನು ಅಳವಡಿಸಿಕೊಳ್ಳಲಾಗಿದೆ. ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಪಾವತಿ ವಿಚಾರದಲ್ಲಿ ಸರಿಯಾದ ರೀತಿಯಲ್ಲಿ ಚಿಲ್ಲರೆ ಕೊಡುವುದಕ್ಕೆ, ಹೆಚ್ಚಿನ ಅವಧಿ ಅದಕ್ಕಾಗಿಯೇ ವಿನಿಯೋಗವಾಗುವುದನ್ನು ತಪ್ಪಿಸಲು ಕೇಂದ್ರ ಫಾಸ್ಟಾಗ್‌ ಕಡ್ಡಾಯಗೊಳಿಸಿತ್ತು. ಕೇಂದ್ರ ಸರ್ಕಾರದ ಉದ್ದೇಶ ಒಳ್ಳೆಯದೇ.

ಆದರೆ ಅದನ್ನು ಕಡ್ಡಾಯಗೊಳಿಸುವುದರ ಜತೆಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಬಗ್ಗೆ ಅದು ನೀಡಿದ ಸಾರ್ವಜನಿಕ ಪ್ರಚಾರ ಏನೇನೂ ಸಾಲದು. ಎನ್‌ಎಚ್‌ಎಐ ನೀಡಿದ ಮಾಹಿತಿ ಪ್ರಕಾರ ಡಿ.1ರ ಒಳಗಿನ ಅವಧಿಯಲ್ಲಿ ಶೇ.30, ಡಿ.15ರ ವರೆಗಿನ 2ನೇ ಅವಧಿಯಲ್ಲಿ ಶೇ.12ರಷ್ಟು ವಾಹನಗಳು ಮಾತ್ರ ಹೊಸ ವ್ಯವಸ್ಥೆ ಅಳವಡಿಸಿಕೊಂಡಿವೆ. ಒಟ್ಟಾರೆಯಾಗಿ ಶೇ.58ರಷ್ಟು ವಾಹನ ಗಳಲ್ಲಿ ಈ ವ್ಯವಸ್ಥೆ ಇಲ್ಲ. ಆದರೆ ಶೇ.75ರಷ್ಟು ಅಂದರೆ ನಾಲ್ಕು ಟೋಲ್‌ ನೀಡಿ ಹೋಗುವ ದಾರಿಯಲ್ಲಿ ಮೂರು ಫಾಸ್ಟಾ ಗ್‌ಗೆ ಮತ್ತು 1ರಲ್ಲಿ ನಗದು ನೀಡಿ ಪಾವತಿಸಲು ಈಗ ಅವಕಾಶ ಮಾಡಲಾಗಿದೆ.

ಫಾಸ್ಟಾಗ್‌ ಕಡ್ಡಾಯ ಎನ್ನುವ ಗಡುವು ಒಂದು ತಿಂಗಳು ಮತ್ತೆ ವಿಸ್ತರಿಸಲಾಗಿದ್ದರೂ, ಕರ್ನಾಟಕದ ವಿವಿಧ ಭಾಗಗಳಲ್ಲಿ ಟೋಲ್‌ ಪ್ಲಾಜಾಗಳಲ್ಲಿ ಗೊಂದಲ, ಫಾಸ್ಟಾಗ್‌ ಲೇನ್‌ನಲ್ಲಿ ಹೋದ ವಾಹನಗಳಿಗೆ ಎರಡು ಪಟ್ಟು ಹೆಚ್ಚು ಶುಲ್ಕ, ಮೈಲುಗಟ್ಟಲೆ ಸರತಿ ಸಾಲು ಸಾಮಾನ್ಯವಾಗಿತ್ತು.

ಕೇವಲ ಕೆಲವು ಬೂತ್‌ಗಳಲ್ಲಿ ಮಾತ್ರ ನಗದು ಪಾವತಿಗೆ ಇಂಥ ನಂಬರ್‌ ಲೇನ್‌ನಲ್ಲಿ ಹೋಗಿ, ಫಾಸ್ಟಾಗ್‌ಗೆ ಈ ಲೇನ್‌ನಲ್ಲಿ ಹೋಗಿ ಎಂಬ ಬಗ್ಗೆ ಮಾಹಿತಿ ಇದ್ದವು. ಕೆಲವೊಂದು ಸಂದರ್ಭದಲ್ಲಿ ಫಾಸ್ಟಾಗ್‌ ಲೇನ್‌ ಸ್ಕ್ಯಾನರ್‌ ಸರಿಯಾಗಿ ಕೆಲಸ ನಿರ್ವಹಿಸದೇ ಇರುವ ಬಗ್ಗೆ, ಇದರ ಜತೆಗೆ ಸ್ಕ್ಯಾನರ್‌ಗಳ ಮಾಹಿತಿ-ನಿಯಂತ್ರಣ ಹೊಂದಿರುವ ಸರ್ವರ್‌ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದೆ ಎಂಬ ದೂರುಗಳಿವೆ. ಜ.15ರ ವರೆಗೆ ನಿಗದಿತ ವಾಹನಕ್ಕೆ ಫಾಸ್ಟಾಗ್‌ ಇಲ್ಲದೇ ಇದ್ದರೆ ದಂಡ ವಿಧಿಸುವಂತೆ ಕೂಡ ಇಲ್ಲ ಎಂದು ಹೇಳಲಾಗಿದೆ. ಆದರೆ ಗಮನಿಸಬೇಕಾಗಿರುವ ಅಂಶವೆಂದರೆ ಫಾಸ್ಟಾಗ್‌ ಇಲ್ಲದೇ ಇರುವವರು ನಗದು ಪಾವತಿ ಮಾಡುವ ದ್ವಾರದಲ್ಲಿಯೇ ಹೋಗಬೇಕು. ಇಲ್ಲದೇ ಇದ್ದರೆ ದಂಡ ಪಾವತಿ ಮಾಡಬೇಕು. ಆದರೆ ಇಂಥ ಮಾಹಿತಿಯೇ ಸಮರ್ಪಕವಾಗಿಲ್ಲ. ಅದನ್ನು ಸರಿಪಡಿಸಬೇಕಾಗಿದೆ.

ದೇಶದಲ್ಲಿರುವ ವಾಹನಗಳ ಸಂಖ್ಯೆ ಇರುವಷ್ಟು ಫಾಸ್ಟಾಗ್‌ ಅನ್ನು ಸಿದ್ಧಪಡಿಸಲಾಗಿಲ್ಲ. ಕೆಲ ಮಾಹಿತಿ ಪ್ರಕಾರ ನ.26ರಂದು 1,35,583 ಫಾಸ್ಟಾಗ್‌ ನೀಡಲಾಗಿದೆ. ಮಾತ್ರವಲ್ಲದೆ 70 ಲಕ್ಷ ಹೊಸ ವ್ಯವಸ್ಥೆ ನೀಡಲಾಗಿದೆಯೆಂದು ಕೆಲ ಅಂಕೆ-ಸಂಖ್ಯೆಗಳಲ್ಲಿ ಮಾಹಿತಿ ಇದೆ. ಟೋಲ್‌ ಪ್ಲಾಜಾ ಪ್ರವೇಶಕ್ಕಿಂತ ಮೊದಲೇ ನಗದು ಪಾವತಿಗೆ ಯಾವ ಸಂಖ್ಯೆಯ ಕೌಂಟರ್‌, ಫಾಸ್ಟಾಗ್‌ ಇರುವ ಕೌಂಟರ್‌ ಸಂಖ್ಯೆ ಯಾವುದು ಎನ್ನುವುದು ವಾಹನ ಚಾಲಕ-ಮಾಲೀಕರಿಗೆ ಸ್ಪಷ್ಟವಾಗಿ ಕಾಣುವಂತೆ ಇರಬೇಕು. ಕೆಲವೊಂದು ಟೋಲ್‌ ಪ್ಲಾಜಾಗಳಲ್ಲಿ ವಾಹನಗಳ ಸಾಲು ಹೆಚ್ಚಿದ್ದರೆ, ಫಾಸ್ಟಾಗ್‌ ಮಾತ್ರ ಇರುವ ಕೌಂಟರ್‌ಗಳಲ್ಲಿಯೂ ಕೂಡ ನಗದು ಪಾವತಿ ಮಾಡುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಿದೆ. ಆದರೆ ಅದಕ್ಕೆ ನಿಗದಿತ ಕಂಪ್ಯೂಟರ್‌ನಲ್ಲಿ ಅಪ್‌ಡೇಟ್‌ ಮಾಡಬೇಕಾಗುತ್ತದೆ. ಸದ್ಯದ ಅವಧಿಯಲ್ಲಿ ಅಂಥವುಗಳಿಗೆ ಕೂಡ ಅವಕಾಶ ಮಾಡಬೇಕು. ಹೀಗಾಗಿ ಮುಂದಿನ 1 ತಿಂಗಳ ಅವಧಿಯಲ್ಲಿ ಹೊಸ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಮೊಬೈಲ್‌ಗ‌ಳಿಗೆ ನೇರವಾಗಿ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ. ಈ ಮೂಲಕ ಅನಾನುಕೂಲತೆಗಳನ್ನು ತಪ್ಪಿಸಬಹುದು.

ಹೇಗಿದ್ದರೂ ಈಗ ಎಲ್ಲರ ಕೈಯಲ್ಲೂ ಮೊಬೈಲ್‌ ಇರುವುದರಿಂದ ಎಸ್‌ಎಂಎಸ್‌, ಸ್ಥಳೀಯರ ಗಣ್ಯರ ಧ್ವನಿಮುದ್ರಿಕೆಯಲ್ಲಿ ಫಾಸ್ಟಾಗ್‌ ಅಳವಡಿಕೆ ಬಗ್ಗೆ ಗ್ರಾಹಕರಿಗೆಕರೆ ಮಾಡುವುದರ ಮೂಲಕ ಸಂದೇಶ ನೀಡಿ, ಅರಿವು ಮೂಡಿಸಲು ಅವಕಾಶ ಇದೆ. ಅದನ್ನು ಸಂಬಂಧಿಸಿದ ಪ್ರಾಧಿಕಾರದ ಮುಖ್ಯಸ್ಥರು ಅರಿತು ಮಾಡಬೇಕು. ಆದರೆ ಆ ನಿಟ್ಟಿನಲ್ಲಿ ಸೂಕ್ತ ಚಿಂತನೆ ನಡೆಯಬೇಕಾಗಿದೆ. ಇದರಿಂದಾಗಿ ಮುಂದಿನ ಒಂದು ತಿಂಗಳಲ್ಲಿ ಸಮರ್ಥವಾಗಿ ಜಾಗೃತಿ ಮೂಡಿಸಲು ಅವಕಾಶ ಇದೆ. ಹೀಗಾಗಿ, ಕೇಂದ್ರದ ಭೂ ಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಆಡಳಿತ ಕೈಜೋಡಿಸಬಹುದು. ದೇಶದ ಎಲ್ಲಾ ಸರ್ಕಾರಿ, ಖಾಸಗಿ, ಸಹಕಾರಿ ರಂಗಕ್ಕೆ ಸೇರಿದ 22 ವಿತ್ತೀಯ ಸಂಸ್ಥೆಗಳ ಮೂಲಕ ಅದನ್ನು ಖರೀದಿಸಲು ಅವಕಾಶ ಉಂಟು. ಇದರ ಜತೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಂಚಾರ ಪೊಲೀಸರು ಕೂಡ ಹೊಸ ವ್ಯವಸ್ಥೆ ಅಳವಡಿಕೆಗೆ ಕೈಜೋಡಿಸಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid-beedr

ಬೀದರ್: ಇಂದು 97 ಜನರಿಗೆ ಕೋವಿಡ್ ಪಾಸಿಟಿವ್: 1 ಸಾವು

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

vntialtor

ಎಂ.ಎಸ್. ರಾಮಯ್ಯ ಆಸ್ಪತ್ರೆಗೆ 30 ವೆಂಟಿಲೇಟರ್ ಹಸ್ತಾಂತರ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಚಾ.ನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

ಚಾಮರಾಜನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಮ್ಯಾಂಚೆಸ್ಟರ್ ಅಂಗಣದಲ್ಲಿ ಸಚಿನ್, ಕುಂಬ್ಲೆ ಸೃಷ್ಟಿಸಿದ ಇತಿಹಾಸಕ್ಕೆ 30ರ ಸಂಭ್ರಮ

ಮ್ಯಾಂಚೆಸ್ಟರ್ ಅಂಗಣದಲ್ಲಿ ಸಚಿನ್, ಕುಂಬ್ಳೆ ಸೃಷ್ಟಿಸಿದ ಇತಿಹಾಸಕ್ಕೆ 30ರ ಸಂಭ್ರಮ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ಶೈಕ್ಷಣಿಕ ಸಂದಿಗ್ಧತೆ; ಸರಕಾರಗಳ ಕಾಳಜಿ ಶ್ಲಾಘನೀಯ

ಶೈಕ್ಷಣಿಕ ಸಂದಿಗ್ಧತೆ; ಸರಕಾರಗಳ ಕಾಳಜಿ ಶ್ಲಾಘನೀಯ

ಕೋವಿಡ್‌ ಲಸಿಕೆ ಭಾರತದ ಸಿದ್ಧತೆ

ಕೋವಿಡ್‌ ಲಸಿಕೆ ಭಾರತದ ಸಿದ್ಧತೆ

ನೆರೆ ಪರಿಹಾರ ದೂರದೃಷ್ಟಿ ಬೇಕಿದೆ

ನೆರೆ ಪರಿಹಾರ ದೂರದೃಷ್ಟಿ ಬೇಕಿದೆ

ರಕ್ಷಣ ಇಲಾಖೆಯ ಸಮುಚಿತ ನಿರ್ಧಾರ ಆತ್ಮನಿರ್ಭರತೆಯ ಹಾದಿಯಲ್ಲಿ

ರಕ್ಷಣ ಇಲಾಖೆಯ ಸಮುಚಿತ ನಿರ್ಧಾರ ಆತ್ಮನಿರ್ಭರತೆಯ ಹಾದಿಯಲ್ಲಿ

MUST WATCH

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Makingಹೊಸ ಸೇರ್ಪಡೆ

covid-beedr

ಬೀದರ್: ಇಂದು 97 ಜನರಿಗೆ ಕೋವಿಡ್ ಪಾಸಿಟಿವ್: 1 ಸಾವು

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ

vntialtor

ಎಂ.ಎಸ್. ರಾಮಯ್ಯ ಆಸ್ಪತ್ರೆಗೆ 30 ವೆಂಟಿಲೇಟರ್ ಹಸ್ತಾಂತರ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಹಾವೇರಿ: 139 ಜನರಿಗೆ ಕೋವಿಡ್ 19 ಸೋಂಕು ದೃಢ; 3 ಸಾವು; 2292 ಸೋಂಕಿತರ ಸಂಖ್ಯೆ

ಚಾ.ನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

ಚಾಮರಾಜನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.