ವಾಟ್ಸ್‌ಆ್ಯಪ್‌ಗೆ ಎಚ್ಚರಿಕೆ ಸ್ವಾಗತಾರ್ಹ


Team Udayavani, Aug 23, 2018, 6:00 AM IST

s-12.jpg

ಸಾಮಾಜಿಕ ಮಾಧ್ಯಮಗಳು ಹರಡುವ ಸುಳ್ಳು ಸುದ್ದಿಗಳು ಅನಾಹುತಕಾರಿ ಪರಿಣಾಮಗಳಿಗೆ ಕಾರಣವಾಗುತ್ತಿವೆ. ಅದರಲ್ಲೂ ವಾಟ್ಸ್‌ಆ್ಯಪ್‌ ಸೃಷ್ಟಿಸುತ್ತಿರುವ ಅವಾಂತರಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಹರಡುವ ಮಕ್ಕಳ ಕಳ್ಳರೆಂಬ ಸುಳ್ಳು ಸುದ್ದಿಗಳನ್ನು ನಂಬಿ ಜನರು ಗುಂಪುಗೂಡಿ ಥಳಿಸಿ ಸಾಯಿಸಿದ ಹಲವು ಪ್ರಕರಣಗಳು ದೇಶದ ಹಲವೆಡೆಗಳಲ್ಲಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಾಟ್ಸ್‌ಆ್ಯಪ್‌ಗೆ ಲಗಾಮು ಹಾಕುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನಿನ್ನೆ ವಾಟ್ಸ್‌ಆ್ಯಪ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ಕರೆಸಿಕೊಂಡು ಸುಳ್ಳು ಸುದ್ದಿಗಳ ಮೂಲವನ್ನು ಪತ್ತೆಹಚ್ಚಲು ತಾಂತ್ರಿಕವಾದ ದಾರಿಯನ್ನು ಹುಡುಕಬೇಕೆಂದು ಕಟ್ಟುನಿಟ್ಟಾಗಿ ಹೇಳಿರುವುದು ಸ್ವಾಗತಾರ್ಹ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ತನ್ನನ್ನು ಭೇಟಿಯಾದ ವಾಟ್ಸ್‌ಆ್ಯಪ್‌ ಸಿಇಒ ಕ್ರಿಸ್‌ ಡೇನಿಯಲ್ಸ್‌ಗೆ ಭಾರತದಲ್ಲಿ ಕಾರ್ಪೋರೇಟ್‌ ಘಟಕ ಸ್ಥಾಪಿಸಿ ಸ್ಥಳೀಯ ಕಚೇರಿ ತೆರೆಯಬೇಕೆಂದು ಹೇಳಿದ್ದಾರೆ ಹಾಗೂ ಜೊತೆಗೆ ಭಾರತೀಯ ಗ್ರಾಹಕರ ಅಹವಾಲುಗಳನ್ನು ಆಲಿಸಲು ಅಧಿಕಾರಿಯನ್ನು ನೇಮಿಸಲೂ ಸೂಚಿಸಿದ್ದಾರೆ. 

ಸುಳ್ಳು ಸುದ್ದಿಗಳು ಹರಡುವುದನ್ನು ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ತಾಕೀತು ಮಾಡಿದ ಬೆನ್ನಿಗೆ ದಿಲ್ಲಿಗೆ ದೌಡಾಯಿಸಿದ ಡೇನಿಯಲ್ಸ್‌ಗೆ ಪ್ರಸಾದ್‌ ನೆಲದ ಕಾನೂನು ಪಾಲಿಸಬೇಕೆಂದು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತದಲ್ಲಿ ಕಚೇರಿ ಆರಂಭಿಸಿದರೆ ನೆಲದ ಕಾನೂನು ವ್ಯಾಪ್ತಿಗೆ ಈ ಕಚೇರಿಯೂ ಒಳಪಡುವುದರಿಂದ ಕಾನೂನು ಪಾಲನೆ ಸಾಧ್ಯವಾಗುತ್ತದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಜನಪ್ರಿಯ ಸೋಷಿಯಲ್‌ ಮೀಡಿಯಾಗಳ ಕಚೇರಿಗಳಿರುವುದು ವಿದೇಶಗಳಲ್ಲಿ. ಹೀಗಾಗಿ ಅವುಗಳಿಗೆ ಮೂಗುದಾರ ತೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಸುಳ್ಳು ಸುದ್ದಿ ಸೃಷ್ಟಿಸಿದ್ದು ಯಾರೆಂದು ತಿಳಿಯಬೇಕಿದ್ದರೆ ಈ ಕಚೇರಿಗಳಿಗೆ ಮನವಿ ಮಾಡಬೇಕಿತ್ತು. ವಿದೇಶ ಗಳಲ್ಲಿರುವ ಅಧಿಕಾರಿಗಳು ಇಷ್ಟವಿದ್ದರೆ ಮಾಹಿತಿ ಕೊಡುತ್ತಿದ್ದರು ಇಲ್ಲದಿದ್ದರೆ ನಿರ್ಲಕ್ಷಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಈ ಮಾಧ್ಯಮವನ್ನು ಉತ್ತರದಾಯಿ ಮಾಡುವ ಅವಕಾಶ ಸರಕಾರಕ್ಕಿರಲಿಲ್ಲ. ಹೀಗಾಗಿ ಇದು ಒಂದು ಉತ್ತಮ ಕ್ರಮ. ವಾಟ್ಸ್‌ಆ್ಯಪ್‌ ಮಾತ್ರವಲ್ಲದೆ ಫೇಸ್‌ಬುಕ್‌ ಸೇರಿದಂತೆ ಉಳಿದ ಸೋಷಿಯಲ್‌ ಮೀಡಿಯಾಗಳಿಗೂ ಕಚೇರಿಯನ್ನು ಸ್ಥಾಪಿಸಲು ಹೇಳಬೇಕು. 

ಲಿಂಚಿಂಗ್‌ ಪ್ರಕರಣಗಳು ಕಳವಳಕಾರಿಯಾಗಿ ಹೆಚ್ಚಿದ ಬಳಿಕ ವಾಟ್ಸ್‌ಆ್ಯಪ್‌ ಕೇಂದ್ರದ ದೂರಿನ ಮೇರೆಗೆ ಸಂದೇಶದಲ್ಲಿ ಫಾರ್‌ವರ್ಡೆಡ್‌ ಎಂದು ತೋರಿಸುವ ಫೀಚರ್‌ ಸೇರಿಸಿಕೊಂಡಿದೆ ಹಾಗೂ ಸಂದೇಶ ವಿನಿಮಯವನ್ನು ಐದು ಗ್ರೂಪುಗಳಿಗೆ ಸೀಮಿತಗೊಳಿಸಿದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನ ಆಗಿಲ್ಲ. ಈ ನಿಯಮ ಬಂದ ಬಳಿಕವೂ ಗುಂಪು ಥಳಿತ ಪ್ರಕರಣ ಸಂಭವಿಸಿದೆ. 

ಭಾರತ ಮಾತ್ರವಲ್ಲದೆ ಇತರ ದೇಶಗಳಲ್ಲೂ ನಿರ್ದಿಷ್ಟವಾಗಿ ವಾಟ್ಸ್‌ಆ್ಯಪ್‌ ಕುರಿತಾದ ದೂರುಗಳು ಹೆಚ್ಚೇ ಇವೆ. 12 ದೇಶಗಳಲ್ಲಿ ವಾಟ್ಸ್‌ಆ್ಯಪ್‌ಗೆ ಒಂದಲ್ಲ ಒಂದು ಸಂದರ್ಭದಲ್ಲಿ ನಿಷೇಧ ಹೇರಲಾಗಿತ್ತು. ಉಗಾಂಡದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಗೆ ಪ್ರತ್ಯೇಕ ತೆರಿಗೆಯೇ ಇದೆ. ವಾಟ್ಸ್‌ಆ್ಯಪ್‌ ಈ ಪರಿಯಲ್ಲಿ ದುರ್ಬಳಕೆಯಾಗಲು ಅದರ ತಂತ್ರಜ್ಞಾನದಲ್ಲಿರುವ ದೋಷವೂ ಕಾರಣ. ವಾಟ್ಸ್‌ಆ್ಯಪ್‌ನಲ್ಲಿರುವ ಗ್ರೂಪ್‌ಗ್ಳ ಮುಖಾಂತರ ಸುಳ್ಳು ಸುದ್ದಿಗಳು ಕ್ಷಿಪ್ರವಾಗಿ ರವಾನೆ ಯಾಗುತ್ತವೆ. ಇದಕ್ಕೆ ಗ್ರೂಪ್‌ ಅಡ್ಮಿನಿಸ್ಟ್ರೇಟರ್‌ನನ್ನು ಹೊಣೆ ಮಾಡಿದರೂ ಇದು ಪರಿಣಾಮಕಾರಿಯೇನಲ್ಲ. ಏಕೆಂದರೆ ಅಡ್ಮಿನ್‌ಗೂ ಸದಸ್ಯರು ಕಳುಹಿಸುವ ಸಂದೇಶಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿರುತ್ತವೆ. ಅಂದರೆ ಎಲ್ಲ ಡೇಟಾಗಳು ಆಯಾಯ ಮೊಬೈಲ್‌ನಲ್ಲಿ ಸೇವ್‌ ಆಗಿರುತ್ತವೆಯೇ ಹೊರತು ವಾಟ್ಸ್‌ಆ್ಯಪ್‌ ಸರ್ವರ್‌ನಲ್ಲಿ ಅಲ್ಲ. ಈ ವಿಚಾರವನ್ನು ಸ್ವತಹ ವಾಟ್ಸ್‌ಆ್ಯಪ್‌ ಒಪ್ಪಿಕೊಂಡಿದೆ. ಹೀಗಾಗಿ ಸಂದೇಶಗಳ ಮೇಲೆ ಕಂಪೆನಿಗೂ ನಿಯಂತ್ರಣವಿರುವುದಿಲ್ಲ ಹಾಗೂ ಅವುಗಳ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಆ್ಯಪ್‌ನಲ್ಲಿ ಯಾವ ಚರ್ಚೆ ಆಗುತ್ತದೆ ಎನ್ನುವುದು ಕಂಪೆನಿಗೂ ಗೊತ್ತಿರುವುದಿಲ್ಲ. ಸಂದೇಶ ರವಾನೆಯಾದ ಕೂಡಲೇ ಸರ್ವರ್‌ನಿಂದ ಡಿಲೀಟ್‌ ಆಗುತ್ತದೆ ಎನ್ನುವ ಸೂಚನೆ ವಾಟ್ಸ್‌ಆ್ಯಪ್‌ ವೆಬ್‌ಸೈಟಿನಲ್ಲೇ ಇದೆ. ಈ ದೃಷ್ಟಿಯಿಂದಲೂ ವಾಟ್ಸ್‌ಆ್ಯಪ್‌ ಸುಳ್ಳು ಸುದ್ದಿಗಳ ಮೂಲ ಪತ್ತೆಹಚ್ಚಲು ತಾಂತ್ರಿಕವಾದ ಪರಿಹಾರ ಕಂಡುಕೊಳ್ಳುವುದು ಅತಿ ಅಗತ್ಯ. 

ಹಾಗೆಂದು ಸೋಷಿಯಲ್‌ ಮೀಡಿಯಾಗಳಿಂದ ಬರೀ ಕೆಡುಕು ಮಾತ್ರ ಆಗುತ್ತದೆ ಎಂದಲ್ಲ. ದುರಂತಗಳ ಸಂದರ್ಭದಲ್ಲಿ ಮೊದಲು ನೆರವಿಗೆ ಬರುವುದೇ ಸೋಷಿಯಲ್‌ ಮೀಡಿಯಾ ಎನ್ನುವುದು ಕೇರಳ ಮತ್ತು ಕೊಡಗಿನ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮತ್ತೂಮ್ಮೆ ಸಾಬೀತಾಗಿದೆ. ಆದರೆ ಜನರು ಅದನ್ನು ಒಳಿತಿಗಿಂತ ಕೆಡುಕಿಗೆ ಹೆಚ್ಚು ಉಪಯೋಗಿಸುತ್ತಿರು ವುದರಿಂದ ವರವಾಗಬೇಕಾದ ಆವಿಷ್ಕಾರ ಶಾಪವಾಗಿ ಪರಿಣಮಿಸುತ್ತಿದೆ. 

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.