ಕರ ಕಾನೂನಿನಲ್ಲಿ ಭ್ರಮೆಯ ಪೊರೆ ಮತ್ತದರ ಕ್ಯಾಟರ್ಯಾಕ್ಟ್

Team Udayavani, Aug 19, 2019, 6:01 AM IST

ಆದಾಯ ತೆರಿಗೆಯ ಮಾತು ಬರುವಾಗ ಗೋಚರಿಸುವ ಗೊಂದಲಗಳು ಹಲವು. ಒಬ್ಬೊಬ್ಬರು ಒಂದೊಂದು ರೀತಿಯ ತಪ್ಪು ತಿಳುವಳಿಕೆಗೆ ಒಳಗಾಗಿರುತ್ತಾರೆ. ಅಂತಹ ಭ್ರಮೆಯಲ್ಲಿ ತಪ್ಪು ಮಾಡುತ್ತಾರೆ ಮತ್ತು ಕರ ಇಲಾಖೆಯ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಮೇಲೆ ನೋಟೀಸು, ವಿವರಣೆ, ಬಡ್ಡಿ, ಪೆನಾಲ್ಟಿ ಇತ್ಯಾದಿಗಳನ್ನು ಹಿಡಿದುಕೊಂಡು ಟೆನ್ಶನ್‌ ಮಾಡಿಕೊಂಡು ಪಿತ್ತಕಾಯಿಲೆ ಹಿಡಿಸಿಕೊಳುತ್ತಾರೆ. ರಾತ್ರಿಯೆÇÉಾ ನಿದ್ರೆ ಮಾಡದೆ ಬೆಳಗಾತ ಎದ್ದು ವಾಂತಿ ಮಾಡಿಕೊಂಡು ಜೀವನದಲ್ಲಿ ಬಳಲುತ್ತಾರೆ. ವಿತ್ತದಿಂದ ಪಿತ್ತದವರೆಗಿನ ಈ ಸುಡುಗಾಡು ಜರ್ನಿ ಯಾವೋನಿಗೆ ಬೇಕು ಸ್ವಾಮೀ?

ಅದೆÇÉಾ ಬಿಟ್ಟು, ಈ ಕೆಳಗಿನ ಕೆಲ ಪ್ರಾಮುಖ್ಯ ಕರಗೊಂದಲಗಳನ್ನು ಸರಿಯಾಗಿ ಅರ್ಥೈಸಿಕೊಂಡು ನೆಮ್ಮದಿಯ ಬದುಕು ಬದುಕುವಂತವರಾಗಿ. ಇದು ನಿಮ್ಮ ತಾತ ಗುರುಗುಂಟಿರಾಯರ ಇಚ್ಛೆಯೂ ಹೌದು; ಆಶೀರ್ವಾದವೂ ಹೌದು!

1.ರಿಟರ್ನ್ ಫೈಲಿಂಗ್‌ ಮಾಡದೆ ಇರುವುದು
ಕೆಲವು ಉದ್ಯೋಗಸ್ಥರು ತಮ್ಮ ಸಂಬಳದಲ್ಲಿ ಟಿಡಿಎಸ್‌ ಸಂಪೂರ್ಣವಾಗಿ ಕಡಿತವಾಗಿದೆ, ಇನ್ನು ಕರಕಟ್ಟಲು ಯಾವುದೇ ಬಾಕಿ ಇಲ್ಲ ಎಂಬ ಕಾರಣಕ್ಕೆ ತಾವು ರಿಟರ್ನ್ ಫೈಲಿಂಗ್‌ ಕೂಡಾ ಮಾಡುವ ಅಗತ್ಯವಿಲ್ಲ ಎಂಬ ಭ್ರಮೆಯಲ್ಲಿ¨ªಾರೆ. ಆದರೆ ಈ ವಿಚಾರ ಸರಿಯಲ್ಲ. ಕರ ಹೇಳಿಕೆ ಅಥವಾ ರಿಟರ್ನ್ ಫೈಲಿಂಗ್‌ ಪ್ರತಿಯೊಬ್ಬ ಕರಾರ್ಹ ವ್ಯಕ್ತಿಯೂ ಸಲ್ಲಿಸಲೇ ಬೇಕು; ಕರ ಬಾಕಿ ಇರಲಿ, ಇಲ್ಲದೇ ಇರಲಿ ಅದು ಬೇರೆ ಮಾತು. ಯಾವುದೇ ಕರಾರ್ಹ ವ್ಯಕ್ತಿ (Taxable person) ಅಂದರೆ “ಒಟ್ಟು ಆದಾಯ’ ರೂ 2.5 ಲಕ್ಷ ಮೀರಿ ಇರುವವರು ವರ್ಷಾಂತ್ಯದಲ್ಲಿ ರಿಟರ್ನ್ ಫೈಲಿಂಗ್‌ ಮಾಡಲೇ ಬೇಕು. ಈ ಮಿತಿ 60 ವರ್ಷ ದಾಟಿದವರಿಗೆ ರೂ. 3 ಲಕ್ಷ ಹಾಗೂ 80 ವರ್ಷ ದಾಟಿದವರಿಗೆ ರೂ.5 ಲಕ್ಷ. ಸದ್ರಿ ವಿತ್ತ ವರ್ಷ 2018-19ರ ಯಾವುದೇ ದಿನಾಂಕದಂದು ಕೂಡಾ 60 ಯಾ 80 ಸಂಪನ್ನರಾದವರು ಈ ವಿತ್ತ ವರ್ಷ ಪೂರ್ತಿ ಈ ಹೆಚ್ಚುವರಿ ಮಿತಿಯ ಲಾಭವನ್ನು ಪಡೆಯಬಹುದು. (ಇದರಲ್ಲಿ ವರ್ಷ ಪೂರ್ತಿ 60 ಯಾ 80 ಆಗಿರಬೇಕೆಂಬ ಕಡ್ಡಾಯ ಅಥವಾ ಟrಟ rಚಠಿಚ ಪದ್ಧತಿ ಇಲ್ಲ). ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ ಒಟ್ಟು ಆದಾಯ ಅಂದರೆ ಎÇÉಾ ಮೂಲಗಳಿಂದ ಬರುವ ಒಟ್ಟು ಆದಾಯ ಎಂದರ್ಥ – ಎಲ್ಲೆ„ಸಿ, ಪಿಪಿಎಫ್, ಎನ್‌ಪಿಎಸ್‌ ಇತ್ಯಾದಿ ಸೆಕ್ಷನ್‌ 80 ಹೂಡಿಕೆಗಳ ಕಡಿತಗಳ ಮುನ್ನ. ನೀವು ನಿಮ್ಮ ಪೂರ್ತಿ ಆದಾಯ ನಮೂದಿಸಿ ಎÇÉಾ ರೀತಿಯ ರಿಯಾಯಿತಿಯನ್ನು ತೋರಿಸಿ ಫೈಲಿಂಗ್‌ ಮಾಡಬೇಕು. ಕರಾರ್ಹವುಳ್ಳ ಜನರು ರಿಟರ್ನ್ ಫೈಲಿಂಗ್‌ ಮಾಡದೆ ಇರುವುದು ಅಪರಾಧ ಮತ್ತು ಅದರ ಮೇಲೆ ಕಡ್ಡಾಯವಾದ ಲೇಟ್‌ ಫೀಸ್‌ ಕೂಡಾ ಇರುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

2.ಬಡ್ಡಿ ಆದಾಯವನ್ನು ಕಡೆಗಣಿಸುವುದು:
ವಾರ್ಷಿಕ 10 ಸಾವಿರ ರೂ.ವರೆಗಿನ ಬಡ್ಡಿಯ ಕರ ಮುಕ್ತ ಆದಾಯ ಕೇವಲ ಎಸಿº ಖಾತೆಯ ಬಡ್ಡಿಗೆ ಮಾತ್ರವೇ ಅನ್ವಯಿಸುತ್ತದೆ. ಸೆಕ್ಷನ್‌ 80TTAಅಡಿಯಲ್ಲಿ ಬರುವ ಈ ವಿನಾಯಿತಿ ಎಫಿx, ಆರ್ಡಿ, ಎನ್‌ಎಸ್‌ಸಿ, ಎಂಐಎಸ್‌ ಇತ್ಯಾದಿ ಯಾವುದೇ ಠೇವಣಿಗಳ ಮೇಲಿನ ಬಡ್ಡಿ ಆದಾಯಗಳಿಗೆ ಲಾಗೂ ಆಗುವುದಿಲ್ಲ. ಈ ಖಾತೆಗಳಲ್ಲಿ ಹುಟ್ಟುವ ಪ್ರತಿಯೊಂದು ಪೈಸೆಯ ಮೇಲೂ ಆದಾಯ ತೆರಿಗೆ ಅನ್ವಯವಾಗುತ್ತದೆ ಎನ್ನುವುದು ನೆನಪಿರಲಿ. ಬ್ಯಾಂಕಿನವರು ರೂ. 10,000 ಮೀರಿದರೆ ಮಾತ್ರ ಟಿಡಿಎಸ್‌ ಕಡಿತ ಮಾಡುವುದು ಹೌದಾದರೂ ಅದರ ಕೆಳಗಿನ ಆದಾಯ ಕರಮುಕ್ತ ಎಂದರ್ಥವಲ್ಲ. ಅದು ಟಿಡಿಎಸ್‌ ಕಡಿತಕ್ಕೆ ಒಳಪಡುವುದಿಲ್ಲ ಎಂದಷ್ಟೇ ಅರ್ಥ. ಆದಾಯ ತೆರಿಗೆಯ ಅಡಿಯಲ್ಲಿ ಅಂತಹ ಬಡ್ಡಿಯ ಪ್ರತಿಯೊಂದು ಪೈಸೆಗೂ ತೆರಿಗೆ ಇದೆ. ಅಂತಹ ಬಡ್ಡಿಯನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ ಅನ್ವಯ ರೀತಿಯಲ್ಲಿ ಕರಕಟ್ಟಬೇಕು. ಕರಾರ್ಹರು ಬ್ಯಾಂಕ್‌ ಎಫಿx ಮೇಲೆ ಸುಖಾಸುಮ್ಮನೆ ಫಾರ್ಮ್ 15ಏ/ಎಸಹಿ ಮಾಡಿ ಕೊಟ್ಟು ಟಿಡಿಎಸ್‌ನಿಂದ ಕಾನೂನು ಬಾಹಿರವಾಗಿ ತಪ್ಪಿಸಿಕೊಂಡರೂ ಅಂತಿಮ ಕರದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. (ಈ ತಪ್ಪನ್ನು ಬ್ಯಾಂಕ್‌ ಸಿಬ್ಬಂದಿಗಳು ಹೇಳಿಕೊಟ್ಟರೂ ಮಾಡಬೇಡಿ. ಈ ರೀತಿಯ ಬಹಳಷ್ಟು ಕೇಸುಗಳು ನನ್ನ ಗಮನಕ್ಕೆ ಬಂದಿವೆ)

ಇನ್ನೂ ಮುಂದುವರಿದು ನೋಡಿದರೆ, ಕರಕಟ್ಟಿದ ದುಡ್ಡಿನಿಂದ ಮಾಡಿದ, ಕರಮುಕ್ತ ದುಡ್ಡಿನಿಂದ ಮಾಡಿದ ಅಥವಾ ಕರವಿನಾಯಿತಿಗಾಗಿ ಮಾಡಿದ ಹೂಡಿಕೆ ಮೇಲಿನ ಬಡ್ಡಿ ಆದಾಯವು ಕೂಡಾ ಕರಮುಕ್ತ ಎನ್ನುವ ದೊಡ್ಡ ಪ್ರಮಾಣದ ಪೊರೆ ಹಲವರನ್ನು ಆವರಿಸಿದೆ. ಉದಾಹರಣೆಗೆ ಸಂಪೂರ್ಣವಾಗಿ ಕರತೆತ್ತ ಸಂಬಳದಿಂದ ಉಳಿಕೆಯಾದ ದುಡ್ಡಿನಿಂದ ಮಾಡಿದ ಎಫಿx, ಕೃಷಿ ಆದಾಯದಿಂದ ಬಂದ ದುಡ್ಡಿನಿಂದ ಮಾಡಿದ ಎಫಿx, ಕರ ವಿನಾಯಿತಿಗೆಂದ ಸೆಕ್ಷನ್‌ 80ಸಿ ಅಡಿಯಲ್ಲಿ ಮಾಡಿದ 5 ವರ್ಷದ ಎಫಿx ಅಥವಾ ಎನ್‌ಎಸ್‌ಸಿಗಳ ಮೇಲೆ ಹುಟ್ಟುವ ಬಡ್ಡಿ ಭಾರತದಲ್ಲಿ ಕರಾರ್ಹವಲ್ಲದ ವಿದೇಶಿ ಮೂಲದ ಆದಾಯದಿಂದ ಭಾರತದೊಳಗೆ ಮಾಡಿದ ಎನ್‌ಆರ್‌ಒ ಎಫಿx ಇವೆಲ್ಲವುಗಳ ಬಡ್ಡಿಗಳೂ ಕರಾರ್ಹವೇ. (ಇದಕ್ಕೆ ಅಪವಾದ ವೆಂದರೆ ನಿರ್ದಿಷ್ಟವಾಗಿ ಕರ ಮುಕ್ತ ಆದಾಯವೆಂದು ಘೋಷಿಸಲ್ಪಟ್ಟ ಪಿಪಿಎಫ್, ಟ್ಯಾಕ್ಸ್‌ ಫ್ರೀ ಬಾಂಡ್‌ ಇತ್ಯಾದಿಗಳು ಮಾತ್ರ)

3.ಕುಟುಂಬಸ್ಥರ ಹೆಸರಿನಲ್ಲಿ ನಿಮ್ಮ ಆದಾಯ:
ಹೆಂಡತಿಯ ಹೆಸರಿನಲ್ಲಿ ಎಫಿx, ಮೈನರ್‌ ಮಕ್ಕಳ ಹೆಸರಿನಲ್ಲಿ ಎಫಿx ಇಡುವ ಪರಿಪಾಠ ನಮ್ಮಲ್ಲಿ ಲಾಗಾಯ್ತಿನಿಂದ ಇದೆ. ನಿಮ್ಮ ದುಡ್ಡನ್ನು ಈ ರೀತಿ ಹೆಂಡತಿ ಯಾ ಮೈನರ್‌ ಮಕ್ಕಳ ಹೆಸರಿನಲ್ಲಿ ಇಟ್ಟಾಕ್ಷಣ ಆ ಎಫಿxಯಿಂದ ಬರುವ ಬಡ್ಡಿ ಆದಾಯ ಅವರ ಆದಾಯವಾಗುತ್ತದೆ ಎನ್ನುವುದು ಕೂಡಾ ಇನ್ನೊಂದು ಭ್ರಮೆ. ಮೂಲ ದುಡ್ಡು ನಿಮ್ಮದಾದ ಕಾರಣ ಅದರಿಂದ ಬರುವ ಬಡ್ಡಿ ಕೂಡಾ ನಿಮ್ಮ ಆದಾಯಕ್ಕೇ ಸೇರಿಸಲ್ಪಡುತ್ತದೆ. ಬರೇ ಹೆಸರು ಬದಲಾಯಿಸಿ ತೆರಿಗೆ ತಪ್ಪಿಸುವ ಜಾಣ್ಮೆಯನ್ನು ಮಟ್ಟಹಾಕಲು ಸರಕಾರ ಈ ಕಾನೂನು ತಂದಿದೆ. ಆದರೆ, ಪತ್ನಿಗೆ ತನ್ನದೇ ಆದ ಆದಾಯವಿದ್ದಲ್ಲಿ ಅಂತಹ ಆದಾಯದಿಂದ ಬಂದ ದುಡ್ಡನ್ನು ನಿಮ್ಮ ಆದಾಯಕ್ಕೆ ಸೇರಿಸಬೇಕಾದದ್ದಿಲ್ಲ. ಮೇಜರ್‌ ಆದ ಮಕ್ಕಳಿಗೆ ನೀವು ದುಡ್ಡು ದಾನ ಮಾಡಿ ಆ ದುಡ್ಡಿನಿಂದ ಬರುವ ಆದಾಯವನ್ನು ನಿಮ್ಮ ಆದಾಯಕ್ಕೆ ಸೇರಿಸುವ ಕ್ಲಬ್ಬಿಂಗ್‌ ಪ್ರಾವಿಜನ್‌ ತೆರಿಗೆ ಕಾನೂನಿನಲ್ಲಿಲ್ಲ.

4.ಎನ್‌ಪಿಎಸ್‌ ಎಂಬ ಮಹಾ ಕರಗೊಂದಲ:
ಅಯ್ಯೋ! ಇದೊಂದು ದೊಡ್ಡ ಕಾಂಡ. ಇದನ್ನು ಎಷ್ಟು ಬಾರಿ ವಿವರಿಸಿದರೂ ಸಾಲದು. ಅಣಬೆಯಂತೆ ಮತ್ತದೇ ಗೊಂದಲ ಪುನರ್ಜನ್ಮ ಪಡೆದು ಕಾಡುತ್ತಲೇ ಇರುತ್ತದೆ. ಎನ್‌ಪಿಎಸ್‌ ಅಥವಾ ನ್ಯಾಷನಲ್‌ ಪೆನ್ಶನ್‌ ಸ್ಕೀಮಿಗೆ ಕಟ್ಟಿದ ದುಡ್ಡಿನ ಮೇಲೆ 3 ರೀತಿಯ ತೆರಿಗೆ ವಿನಾಯಿತಿ ಇದೆ.

ಮೊದಲನೆಯದಾಗಿ, ಈ ಸ್ಕೀಮಿಗೆ ಕಟ್ಟಿದ ದುಡ್ಡಿನ ಮೇಲೆ ವಾರ್ಷಿಕ ರೂ. 1.5 ಲಕ್ಷದವರೆಗೆ 80ಸಿ ಕರಲಾಭ ಸಿಗುತ್ತದೆ. (ಈ ಸೆಕ್ಷನ್‌ ಅಡಿಯಲ್ಲಿ ಎನ್‌ಪಿಎಸ್‌ ಅಲ್ಲದೆ ಪಿಪಿಎಫ್, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್‌, 5 ವಾರ್ಷಿಕ ಎಫ್ಡಿ, ಟ್ಯೂಷನ್‌ ಫೀಸ್‌ ಇತ್ಯಾದಿ ಹಲವಾರು ಯೋಜನೆಗಳೂ ಸೇರಿವೆ)
ಎರಡನೆಯದಾಗಿ, 2015 ಬಜೆಟ್‌ ಅನುಸಾರ ಇದೇ ಸ್ಕೀಮಿಗೆ ಹೊಸ ಸೆಕ್ಷನ್‌ 80ಸಿಸಿಡಿ(1ಬಿ) ಅನುಸಾರ ಹೆಚ್ಚುವರಿ (additional) ರೂ. 50,000 ಮೊತ್ತದ ಪ್ರತ್ಯೇಕ ಕರವಿನಾಯಿತಿ ಲಭಿಸುತ್ತದೆ. ಈ 50,000 ಕರವಿನಾಯಿತಿ ಇದೊಂದೇ ಸ್ಕೀಮಿಗೆ (ಅಟಲ್‌ ಪೆನ್ಶನ್‌ ಕೂಡಾ ಓಕೆ) ಸಿಗುತ್ತದಲ್ಲದೆ ಬೇರಾವ ಸ್ಕೀಮಿನಲ್ಲೂ ಲಭ್ಯವಿಲ್ಲ. ಈ ಕಾರಣಕ್ಕೆ ಎನ್‌ಪಿಎಸ್‌ ಸ್ಕೀಮಿನ ಘನತೆ ಮತ್ತು ಉಪಯುಕ್ತತೆ ಇನ್ನಷ್ಟು ಹೆಚ್ಚಿದೆ.

ಈ 80ಸಿಸಿಡಿ(1ಬಿ) ಸೆಕ್ಷನ್‌ ಇಷ್ಟೊಂದು ಲಾಭಕರವಾಗಿದ್ದರೂ ಇದು ಅತ್ಯಂತ ಗೊಂದಲಕ್ಕೆ ಎಡೆಮಾಡಿದೆ. ಕೆಲವು ಜನರು ಹೆಚ್ಚುವರಿ ಅಥವಾ additional deduction ಎನ್ನುವ ಪದವನ್ನು ತಪ್ಪಾಗಿ ಅಥೆìçಸಿಕೊಂಡು ಬಹುತೇಕ ನೌಕರರಿಗೆ ಈ ಕರ ಸೌಲಭ್ಯ ಸಿಗುವುದಿಲ್ಲವೆಂದು ಭಾವಿಸಿ¨ªಾರೆ. ಅಂಥವರು ಸರಕಾರದ ಶೇ.10 ಕಡಿತವಲ್ಲದೆ ಹೆಚ್ಚುವರಿ ಕಡಿತಕ್ಕೆ ಮಾತ್ರ ಈ ಸೆಕ್ಷನ್‌ ಮೀಸಲು. ಹಾಗಾಗಿ ನಿಮ್ಮ ನೌಕರಿಯಲ್ಲಿ ಎನ್‌ಪಿಎಸ್‌ಗೆ ಹೆಚ್ಚುವರಿಯಾಗಿ ವ್ಯಾಲಂಟರಿ ದೇಣಿಗೆ ನೀಡಿದರೆ ಮಾತ್ರ ಈ ಸೆಕ್ಷನ್‌ ಅನ್ವಯ ಎನ್ನುವ ಅರ್ಥದಲ್ಲಿ ಮಾತನಾಡುತ್ತಾರೆ. ಮುಂದುವರಿದು, ನೌಕರಿಯ ಶೇ.10 ಕಡ್ಡಾಯ ಕಡಿತವು ಸೆಕ್ಷನ್‌ 80 ಸಿಸಿಡಿ(1) ಅಡಿಯಲ್ಲಿಯೂ, ಹೆಚ್ಚುವರಿ ವ್ಯಾಲಂಟರಿ ದೇಣಿಗೆ ಇದ್ದರೆ ಅದು ಮಾತ್ರ 80ಸಿಸಿಡಿ(1ಬಿ) ಬರಬೇಕೆಂದು ಅಥೆìçಸುತ್ತಾರೆ. ಆದರೆ ವಾಸ್ತವದಲ್ಲಿ ಆದಾಯ ತೆರಿಗೆಯ ಈ 80ಸಿಸಿಡಿ ಸೆಕ್ಷನ್‌ ಎಲ್ಲೂ ಆ ರೀತಿ ಹೇಳುವುದಿಲ್ಲ. additional deductionಎನ್ನುವ ಪದಕ್ಕೂ ದೇಣಿಗೆಯ ಕಡಿತಕ್ಕೂ ಯಾವುದೇ ಸಂಬಂಧವನ್ನು ಕಾನೂನು ಕಲ್ಪಿಸುವುದಿಲ್ಲ. ಕಾನೂನಿನಲ್ಲಿ additional deduction ಎನ್ನುವ ಪದ 80ಸಿ ಸೆಕ್ಷನ್ನಿನ ರೂ. 1.5 ಲಕ್ಷಕ್ಕೆ ಚಛಛಜಿಠಿಜಿಟnಚlಎಂಬ ಅರ್ಥದಲ್ಲಿ ಬಳಸಲಾಗಿದೆ. ಅಂದರೆ ಒಟ್ಟಾರೆ ರೂ. 2 ಲಕ್ಷದಷ್ಟು ಒಟ್ಟು ರಿಯಾಯಿತಿ ಬರುತ್ತದೆ.

ಅಷ್ಟು ಮಾತ್ರವಲ್ಲದೆ ನಿಮ್ಮ ಸಂಬಳದ ಶೇ.10 ಕಡಿತವನ್ನು ಕಡ್ಡಾಯವಾಗಿ ಸೆಕ್ಷನ್‌ 80ಸಿಸಿಡಿ(1) ಅಡಿಯಲ್ಲಿಯೇ ತಗೆದುಕೊಳ್ಳಬೇಕೆಂಬ ಯಾವ ನಿಯಮವೂ ಇಲ್ಲ. ಅದನ್ನು ಸಂಪೂರ್ಣವಾಗಿ ಅಥವಾ ಭಾಗಶಃ 80ಸಿಸಿಡಿ(1ಬಿ) ಅಡಿಯಲ್ಲಿಯೂ ತೆಗೆದುಕೊಳ್ಳಬಹುದು. ನಿಮ್ಮ ಯಾವುದೇ ರೀತಿಯ ಎನ್‌ಪಿಎಸ್‌ ದೇಣಿಗೆಯನ್ನು ಯಾವುದೇ ಪ್ರಮಾಣದಲ್ಲಿ ಈ ಎರಡರೊಳಗೆ ಯಾವುದೇ ಸೆಕ್ಷನ್‌ನಲ್ಲಿ ಸಂಪೂರ್ಣವಾಗಿ ಯಾ ಭಾಗಶಃ ಹಂಚಿಕೊಂಡು ನಿಮ್ಮ ಕರಭಾರವನ್ನು ಕಡಿಮೆಗೊಳಿಸುವ ಸೂತ್ರಕ್ಕೆ ತೆರಿಗೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ.

ಇವೆರಡೂ ಅಲ್ಲದೆ ಉದ್ಯೋಗದಾತರು (Employers) ಪ್ರತ್ಯೇಕವಾಗಿ ತಮ್ಮ ದೇಣಿಗೆಯನ್ನು ನಿಮ್ಮ ಎನ್‌ಪಿಎಸ್‌ ಖಾತೆಗೆ ನೀಡಿದರೆ ಆ ಮೊತ್ತವೂ ಕೂಡಾ ಇನ್ನೊಂದು ಪ್ರತ್ಯೇಕ ಸೆಕ್ಷನ್‌ 80ಸಿಸಿಡಿ(2) ಪ್ರಕಾರ ಕರ ವಿನಾಯಿತಿಗೆ ಒಳಪಡುತ್ತದೆ. ಇದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದರ ಲೆಕ್ಕಾಚಾರವನ್ನು ಅವರೇ ಫಾರ್ಮ್ 16ನಲ್ಲಿ ಹಾಕುತ್ತಾರೆ. ಆದರೆ ಇದನ್ನು ಪುನಃ 80ಸಿಸಿಡಿ(1) ಅಥವಾ 80ಸಿಸಿಡಿ(1ಬಿ) ಅಡಿಯಲ್ಲಿ ತೋರಿಸುವುದು ಅಪರಾಧ.

ಹಾಗಾಗಿ 3 ಪ್ರತ್ಯೇಕ ಸೆಕ್ಷನ್‌ಗಳ ಅಡಿಯಲ್ಲಿ ಕರಲಾಭ ಇರುವ ಈ ಯೋಜನೆ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಓದುಗರು ಈ ಮೂರೂ ಸೆಕ್ಷನ್‌ಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಅಥೆìçಸಿ ಕೊಂಡು ವ್ಯವಹರಿಸಬೇಕು. ಇವುಗಳ ಬಗ್ಗೆ ಸಾಕಷ್ಟು ಗೊಂದಲಗಳು ಸುಳಿದಾಡುತ್ತಿವೆ. 80ಸಿಸಿಡಿ(1) ಮತ್ತು 80ಸಿಸಿಡಿ(1ಆ) ಮತ್ತು 80ಸಿಸಿಡಿ(2) ಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಅಥೆìçಸಬೇಕು.

5.ದೃಢೀಕರಣವೆಂಬ ಬಾಲಂಗೋಚಿ:
ಆನ್‌ಲೈನ್‌ ಆಗಿ ರಿಟರ್ನ್ಸ್ ಫೈಲಿಂಗ್‌ ಮಾಡುವಾಗ ಅದನ್ನು ದೃಢೀಕರಣ ಮಾಡುವುದು ಕೂಡಾ ಅವಶ್ಯ. ಯಾರೋ ಒಬ್ಟಾತ ನನ್ನ ಪಾಸ್ವರ್ಡ್‌ ಕದ್ದು ಅಥವಾ ನನ್ನ ಖಾತೆಯನ್ನು ಹ್ಯಾಕ್‌ ಮಾಡಿ ರಿಟರ್ನ್ ಸಲ್ಲಿಸಿದ್ದಲ್ಲ, ಇದನ್ನು ನಾನೇ ನನ್ನ ಸ್ವಂತ ಕೈಯಾರೆ ಮಾಡಿದ್ದೇನೆ ಎನ್ನುವ ದೃಢೀಕರಣ ಕಾನೂನಿನ ದೃಷ್ಟಿಕೋನದಿಂದ ಅವಶ್ಯವಾಗಿದೆ. ಇದನ್ನು ಎಸ್ಸೆಮ್ಮೆಸ್‌ ಮೂಲಕ, ಬ್ಯಾಂಕ್‌ ಖಾತೆಯ ಮೂಲಕ, ಡಿ-ಮ್ಯಾಟ್‌ ಖಾತೆಯ ಮೂಲಕ ಅಥವಾ
ಫಾರ್ಮ್-ವಿ ಯಲ್ಲಿ ಸಹಿ ಹಾಕಿ ಇಲಾಖೆಗೆ ಕಳುಹಿಸುವ ಮೂಲಕ ಮಾಡಬಹುದು. ಇಂತಹ ದೃಢೀಕರಣ ಮಾಡುವವರೆಗೆ ನಿಮ್ಮ ರಿಟರ್ನ್ ಫೈಲಿಂಗ್‌ ಇಲಾಖೆಯ ವೆಬ್‌ಸೈಟಿನಲ್ಲಿ ಸೇವ್‌ ಆಗುತ್ತದೆಯೇ ಹೊರತು ಫೈಲಿಂಗ್‌ ಆಗುವುದಿಲ್ಲ. ಅದನ್ನು ಇಲಾಖೆ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಆನ್‌ಲೈನ್‌ ಫೈಲಿಂಗ್‌ ಮಾಡಿ ದೃಢೀಕರಣ ಮಾಡದೆ ಇರುವವರಿಗೆ ಇಲಾಖೆಯಿಂದ ಫೈಲಿಂಗ್‌ ಮಾಡದ ತಪ್ಪಿಗಾಗಿ ನೋಟಿಸ್‌ ಬಂದಿದೆ.

– ಜಯದೇವ ಪ್ರಸಾದ ಮೊಳೆಯಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ