ಹೂಡಿಕೆಗೆ ಕಡೇ ದಿನ ಮಾರ್ಚ್‌ 31

Team Udayavani, Mar 18, 2019, 12:30 AM IST

ಈ ವಿತ್ತ ವರ್ಷ ಅಂದರೆ 2018-19 ಸಾಲಿನ ಕರ ಲೆಕ್ಕಾಚಾರ ಮತ್ತು ತತ್ಸಂಬಂಧಿ ಹೂಡಿಕೆಗೆ ಕೊನೆಯ ದಿನಾಂಕ ಇದೇ ಮಾರ್ಚ್‌ 31. ಹಾಗಾಗಿ ಈ ವರ್ಷಕ್ಕೆ ಅನ್ವಯವಾಗುವಂತೆ ಯಾವುದೇ ಕರ ವಿನಾಯಿತಿಯುಳ್ಳ ಹೂಡಿಕೆ ಮಾಡುವುದಿದ್ದರೂ ಅದು ಮಾರ್ಚ್‌ 31ರ ಒಳಗಾಗಿ ಮಾಡತಕ್ಕದ್ದು. ಅನಂತರದ್ದು ಏನಿದ್ದರೂ ಮುಂದಿನ ವಿತ್ತ ವರ್ಷಕ್ಕೆ ಸಲ್ಲುತ್ತದೆ. ಹಲವಾರು ಜನರು ಈ ವರ್ಷ ಮುಗಿದು ಮುಂದಿನ ವರ್ಷಕ್ಕೆ ಕಾಲಿಟ್ಟರೂ ತಮ್ಮ ಹೂಡಿಕೆಯನ್ನು ಜುಲೈ 31ರ ಒಳಗಾಗಿ ಮಾಡಿದರೆ ಸಾಕು ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ. ಇದಕ್ಕೆ ಕಾರಣವಿದೆ. ಈ ವರ್ಷದ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಜುಲೈ 31, 2019 ಆಗಿರುತ್ತದೆ. ಅದು ರಿಟರ್ನ್ ಫೈಲಿಂಗ್‌ ಮಾಡಲು ಮಾತ್ರವೇ ಹೊರತು ಕರ ವಿನಾಯಿತಿಗಾಗಿ ಹೂಡಿಕೆ ಮಾಡಲು ಅಲ್ಲ ಎನ್ನುವುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. 

ಇದೇ ರೀತಿ ಇನ್ನೊಂದು ಗೊಂದಲ ಹಲವರನ್ನು ಕಾಡುವು ದಿದೆ. ಅದೇನೆಂದರೆ ಈ ವರ್ಷದ (2018-19) ಕರ ಮತ್ತು ಹೂಡಿಕೆ ಇತ್ಯಾದಿ ಎಲ್ಲಾ ವಿತ್ತ ವಿಚಾರಕ್ಕೆ ಲೆಕ್ಕ ಹಾಕಲು ಬಳಸು ವುದು 2018ರಲ್ಲಿ ಘೋಷಿತ ಬಜೆಟ್; ಮೊನ್ನೆ 2019 ಫೆಬ್ರವರಿ ಯಲ್ಲಿ ಘೋಷಿತವಾದ ಬಜೆಟ್‌ ಅಲ್ಲ. ಈ ಬಗ್ಗೆಯೂ ಸಜ್ಜಿಗೆ- ಬಜಿಲ್‌ ಮಾಡಿಕೊಂಡು ತಪ್ಪು ತಪ್ಪು ಲೆಕ್ಕ ಹಾಕಿ ಆ ಬಳಿಕ ಪರಿತಪಿ ಸುವವರು ಸುಮಾರು ಜನ ಇ¨ªಾರೆ. ಈ ಬಗ್ಗೆಯೂ ಸ್ಪಷ್ಟತೆ ಇರಲಿ. 

ಮತ್ತೂ ಒಂದು ಗೊಂದಲ ಬಾಕಿ ಕರ ಕಟ್ಟುವುದರ ಬಗ್ಗೆ. ಸರಕಾರಕ್ಕೆ ಕಟ್ಟಲು ಇರುವ ಕರವನ್ನು ಅಡ್ವಾನ್ಸ್‌ ಟ್ಯಾಕ್ಸ್‌ ರೂಪದಲ್ಲಿ ಕಾಲಾನುಕ್ರಮೇಣ ಕಟ್ಟಬೇಕು ಮತ್ತು ನಿಮ್ಮ ಕರ ಬಾಕಿ ಎಲ್ಲವೂ ಮಾರ್ಚ್‌ ಅಂತ್ಯದ ಒಳಗಾಗಿ ಮುಗಿಯಬೇಕು. ಇಲ್ಲದಿದ್ದರೆ ವಿಳಂಬ ಬಡ್ಡಿ ಬೀಳುತ್ತದೆ. ಮಾರ್ಚ್‌ ಬಳಿಕ ಜುಲೈ ಒಳಗಾಗಿ ರಿಟರ್ನ್ ಫೈಲಿಂಗ್‌ ಮಾಡುವಾಗಲೂ ಕರ ಕಟ್ಟಲು ಬರುತ್ತದೆ. ಆದರೆ ಅದರ ಮೇಲೆ ಬಡ್ಡಿ ತೆರಬೇಕಾಗುತ್ತದೆ. ಹಾಗಾಗಿಕರ ಬಾಕಿ ಇರುವವರು ಸರಿಯಾಗಿ ಲೆಕ್ಕ ಹಾಕಿ ಇವಾಗಲೇ ಕರ ಕಟ್ಟಿ ಬಿಡಿ. 

ಗೊಂದಲಗಳ ಬಗ್ಗೆ ಹೇಳುವಾಗ ಎಲ್ಲಾ ಗೊಂದಲಗಳ ಬಗ್ಗೆಯೂ ಒಟ್ಟಿಗೇ ಹೇಳಿಯೇ ಬಿಡುವ. ಇನ್ನೂ ಒಂದು ಸುಪರ್‌ ಗೊಂದಲವಿದೆ. ಅದನ್ನೆಂತದಕ್ಕೆ ಬಾಕಿ ಮಾಡುವುದು? ಅದೇನೆಂದರೆ, ವಿತ್ತ ವರ್ಷ ಮತ್ತು ಅಸೆನ್ಮೆಂಟ್‌ ವರ್ಷ ಬೇರೆ ಬೇರೆ. ಪ್ರತಿ ವಿತ್ತ ವರ್ಷಕ್ಕೂ ಅದರ ಮುಂದಿನ ವರ್ಷವೇ ಅಸೆನ್ಮೆಂಟ್‌ ವರ್ಷ. ಅಂದರೆ 2018-19 ವಿತ್ತ ವರ್ಷಕ್ಕೆ ಅದರ ಮುಂದಿನ ಅಂದರೆ 2019-20 ವರ್ಷವೇ ಅಸೆನ್ಮೆಂಟ್‌ ವರ್ಷ. ಯಾವುದೇ ಕಾನೂನಾತ್ಮಕ ಮಾಹಿತಿಯನ್ನು ಓದುವಾಗ ವಿತ್ತ ವರ್ಷ ಎಂದು ಬರೆದಿದ್ದಾರೋ ಅಥವಾ ಅಸೆನ್ಮೆಂಟ್‌ ವರ್ಷ ಎಂದು ಬರೆದಿದ್ದಾರೋ ಎಂದು ಸರೀ ಕಣ್ಣು ಬಿಟ್ಟು ನೋಡಿಕೊಂಡು ಓದ ತಕ್ಕದ್ದು. ಅವರಡನ್ನೂ ಸಜ್ಜಿಗೆ-ಬಜಿಲ್‌ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. 

ಈ ಗೊಂದಲಗಳ ಬಗ್ಗೆ ಈ ಹಿಂದೆಯೂ ಕೆಲ ಬಾರಿ ಬರೆದಿದ್ದೇನೆ. ಕಾಕು ಕಾಲಮ್ಮಿನ ರೆಗ್ಯುಲರ್‌ ಓದುಗರಿಗೆ ಇದೆಲ್ಲಾ ಚರ್ವಿತ ಚರ್ವಣವೆನಿಸಬಹುದು. ಆದರೆ ಅದರ ಅಗತ್ಯವನ್ನು ಮನಗಂಡು ಉದ್ದೇಶಪೂರ್ವಕವಾಗಿಯೇ ಬಹುಜನರ ಹಿತಾಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆ ಕೆಲಸ ಮಾಡುತ್ತಿದ್ದೇನೆ. ಇದೀಗ ವಿತ್ತ ವರ್ಷ 2018-19ಕ್ಕೆ ಸಂಬಂಧ ಪಟ್ಟಂತೆ 2018ರ ಬಜೆಟ್‌ ಅನುಸಾರ ಇದೇ ಮಾರ್ಚ್‌ 31ರ ಒಳಗಾಗಿ ಮಾಡಬೇಕಾದ ಕರ ಲೆಕ್ಕ ಹಾಗೂ ಹೂಡಿಕೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಒಂದು ಕಟ್ಟ ಕಡೆಯ ಬಾರಿ ಕೊಡುತ್ತಿದ್ದೇನೆ: 

1. ಸ್ಟಾಂಡರ್ಡ್‌ ಡಿಡಕ್ಷನ್‌ 
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ಈ ವರ್ಷದ ಮಟ್ಟಿಗೆ ತಮ್ಮ ಸಂಬಳ/ಪೆನ್ಶನ್‌ ಮೊತ್ತದಿಂದ ರೂ. 40,000ವನ್ನು ನೇರವಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ. (ಮುಂದಿನ ವಿತ್ತವರ್ಷಕ್ಕೆ ಸಲ್ಲುವಂತೆ ಇದನ್ನು ರೂ. 50000 ಮಾಡಿದ್ದಾರೆ).

2. ಗೃಹ ಸಾಲದ ಮೇಲಿನ ಬಡ್ಡಿ (ಸೆಕ್ಷನ್‌ 24/ಸೆಕ್ಷನ್‌ 80ಇಇ)
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ಒಟ್ಟು ರೂ. 2 ಲಕ್ಷದವರೆಗೆ ಸ್ವಂತ ಅಥವಾ ಬಾಡಿಗೆ ನೀಡಿರುವ ಮನೆಯ ಮೇಲೆ ಮಾಡಿದ ಗೃಹಸಾಲದ ಬಡ್ಡಿಯನ್ನು “ಇನ್‌ಕಮ್‌ ಫ‌Åಮ್‌ ಹೌಸ್‌ ಪ್ರಾಪರ್ಟಿ’ ಎಂಬ ಹೆಸರಿನಲ್ಲಿ ಕಳೆಯಬಹುದಾಗಿದೆ. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್‌ ಟ್ಯಾಕ್ಸ್‌ ಹಾಗೂ ಮತ್ತು ಬಾಡಿಗೆಯ ಶೇ.30 ನಿರ್ವಹಣಾ ವೆಚ್ಚಗಳನ್ನೂ ಕಳೆಯಬಹುದು. 

ಇದಲ್ಲದೆ ಸೆಕ್ಷನ್‌ 80ಇಇ ಅನುಸಾರ ತಮ್ಮ ಪ್ರಥಮ ಮನೆಗಾಗಿ ಹಿಂದೊಮ್ಮೆ 2016-17 ಅವಧಿಯಲ್ಲಿ ಸಾಲ ಮಾಡಿದ್ದಲ್ಲಿ ಅದರ ಬಡ್ಡಿಯ ಮರುಪಾವತಿಗಾಗಿ ವಾರ್ಷಿಕ ರೂ. 50,000 ವರೆಗೆ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತದೆ. ಮನೆಯ ಒಟ್ಟು ವೆಚ್ಚ ರೂ. 50 ಲಕ್ಷ ಮಿತಿಯೊಳಗೆ ಹಾಗೂ ಸಾಲದ ಒಟ್ಟು ಮೊತ್ತ ರೂ. 35 ಲಕ್ಷದ ಮಿತಿಯೊಳಗೆ ಇದ್ದಿರಬೇಕು. ಈ ಸೌಲಭ್ಯ ಎಪ್ರಿಲ್‌ 1, 2017 ಬಳಿಕ ಮಾಡಿದ ಗೃಹ ಸಾಲಕ್ಕೆ ಲಭ್ಯವಿಲ್ಲ. 

3. ಎನ್‌ಪಿಎಸ್‌/ಅಟಲ್‌ ಪೆನ್ಶನ್‌ (ಸೆಕ್ಷನ್‌ 80 ಸಿಸಿಡಿ(1ಬಿ) 
ಎನ್‌ಪಿಎಸ್‌ ದೇಣಿಗೆಯು 2 ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್‌ಪಿಎಸ್‌ ದೇಣಿಗೆ ಸೆಕ್ಷನ್‌ 80ಸಿ ಅಡಿಯಲ್ಲಿ ಪಿಪಿಎಫ್, ಎನ್‌ಎಸ್‌ಸಿ, ಇಎಲ…ಎಸ್‌ಎಸ್‌, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಒಟ್ಟಿಗೆ ಬರುತ್ತದೆ. ಅದನ್ನು ಆಮೇಲೆ ನೋಡೋಣ. ಆದರೆ ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್‌ 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ. 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರ ವಿನಾಯಿತಿ ಲಭ್ಯ. ಹಾಗಾಗಿ ಮೊತ್ತ ಮೊದಲು ಎನ್‌ಪಿಎಸ್‌ ಹೂಡಿಕೆಯನ್ನು 80ಸಿಸಿಡಿ (1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಸಿ ಅಡಿಯಲ್ಲಿ ತೆಗೆದುಕೊಳ್ಳಬಹುದು. (ಮೂರನೆಯದಾಗಿ ಎನ್‌ಪಿಎಸ್‌ ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80ಸಿಸಿಡಿ(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕವಾಗಿ ಕರ ವಿನಾಯಿತಿಯೊಂದಿಗೆ ಬರುತ್ತದೆ) 

4. ಮೆಡಿಕಲ್‌ ಇನ್ಶೂರನ್ಸ್‌ (ಸೆಕ್ಷನ್‌ 80ಡಿ) 
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂಗಾಗಿ ಈ ಸೆಕ್ಷನ್‌ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ. 50,000 ಆಗಿದೆ. 60 ವರ್ಷ ದಾಟಿದ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು. 

5. ಅವಲಂಬಿತರ ಅಂಗವೈಕಲ್ಯ (ಸೆಕ್ಷನ್‌ 80 ಡಿಡಿ)
ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್‌ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ.40-ಶೇ.80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ. 1,25,000 ಆಗಿರುತ್ತದೆ. 

6. ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್‌ 80ಡಿಡಿಬಿ)
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್‌, ನ್ಯುರೋ, ಏಡ್ಸ್‌, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸ ಬಹುದು. ಮಿತಿ ರೂ. 40,000.60 ದಾಟಿದ ವರಿಷ್ಠರಿಗೆ ರೂ.1,00.000. 

ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸಬೇಕು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ