Udayavni Special

ನಿಜವಾಗಿಯೂ ನಮ್ಮ ವ್ಯಕ್ತಿತ್ವ ವಂಶವಾಹಿಯಿಂದ ಬಂದದ್ದಾ?


Team Udayavani, Jul 18, 2017, 7:24 AM IST

18-ANKANA-1.gif

ಮಕ್ಕಳು ಎಲ್ಲೇ ಹುಟ್ಟಿ ಎಲ್ಲೇ ಬೆಳೆದರೂ ಮೂಲತಃ ಅವರ ತಂದೆ ತಾಯಿಯ ವಂಶವಾಹಿಗಳು ಅವರ ಸಾಮಾನ್ಯ ನಡವಳಿಕೆಗೆ ಕಾರಣವಾಗಿರುತ್ತದೆ. ಶೇ.50ರಷ್ಟು ನಮ್ಮ ಸುತ್ತಮುತ್ತಲಿನ ಜನರ ನಡವಳಿಕೆ, ತಂದೆ-ತಾಯಿ ನಡೆದು ಕೊಳ್ಳುವ ರೀತಿ, ಸ್ನೇಹ ಮತ್ತು ಸಹವಾಸ ಇವೆಲ್ಲ ನಮ್ಮ ಪೂರ್ಣ ವ್ಯಕ್ತಿತ್ವಕ್ಕೆ ಕಾರಣವೆನಿಸಿಕೊಳ್ಳುತ್ತವೆ. 

ಪ್ರಪಂಚದಲ್ಲಿ ಲಕ್ಷಾಂತರ ಜೀವಿಗಳು ಪ್ರತಿಕ್ಷಣ ಜೀವತಾಳುತ್ತವೆ. ನಾವು ಎಲ್ಲ ಜೀವರಾಶಿಗಳ ನಡವಳಿಕೆ ಮತ್ತು ಅದಕ್ಕೆ ಕಾರಣವಾಗಿರುವ ವಂಶವಾಹಿಯ (ಜೀನ್‌) ಬಗ್ಗೆ ಸಂಶೋಧನೆ ನಡೆಸುವುದು ಅಸಾಧ್ಯ. ಆದರೂ, ಸಾವಿರಾರು ಪ್ರಭೇದದ ಜೀವಿಗಳ ವಂಶವಾಹಿಯನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಸಹಜವಾಗಿಯೇ ಇಲ್ಲಿ ಮನುಷ್ಯನ ವಂಶವಾಹಿಯ ಅಧ್ಯಯನಕ್ಕೆ ಹೆಚ್ಚು ಒತ್ತು ಸಿಕ್ಕಿದೆ. 

ಮನುಷ್ಯನ ನಡವಳಿಕೆ, ಅವನ ಹೋಲಿಕೆ, ಅವನ ಚಿಂತನಾ ಶೈಲಿ ಇವೆಲ್ಲ ಅವನ ಮನೆತನದ ವಂಶವಾಹಿಯಿಂದ ಬಂದಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ವಂಶವಾಹಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು ಮೂಲ ಕಾರಣವೇ ನಮಗೆ ಅಚ್ಚರಿ ಮೂಡಿಸುವ ಹಲವು ಪರಿಛಾಯೆಗಳು. ಮನೆಯಲ್ಲಿ ಒಂದು ಮಗು ಹುಟ್ಟಿದ ತತ್‌ಕ್ಷಣವೇ ನಾವು ಮೊದಲು ಗಮನಿಸುವುದು ಆ ಮಗು ಅಪ್ಪನಂತೆ ಇದೆಯಾ ಅಥವಾ ಅಮ್ಮನಂತೆ ಇದೆಯಾ ಎಂಬುದನ್ನು. ಮೂಗು-ಕಣ್ಣು- ಬಾಯಿ ಎಲ್ಲವನ್ನೂ ಆ ಮಗುವಿನ ತಂದೆ ತಾಯಿಗೆ ಹೋಲಿಸಿ ನೋಡುತ್ತೇವೆ. ಕೆಲವು ಮಕ್ಕಳು ಅಪ್ಪ-ಅಮ್ಮನ ಹೋಲಿಕೆ ಪಡೆಯದೆ ಅಜ್ಜಿ-ತಾತನ ರೂಪ ಪಡೆದುಕೊಂಡಿರುವುದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ಬರೀ ಮುಖ ಮಾತ್ರವಲ್ಲ; ಕೆಲವು ಮಕ್ಕಳ ಕೈ-ಕಾಳು-ಬೆರಳುಗಳು-
ಮಾತನಾಡುವ ರೀತಿ-ನಗುವ ರೀತಿ- ಕೆಲಸ ಮಾಡುವ ರೀತಿ ಎಲ್ಲವೂ ತಮ್ಮ ಪೂರ್ವಜರನ್ನು ಹೋಲುವುದನ್ನು ನೋಡಿದಾಗಲೆಲ್ಲ ಇದು ಹೇಗೆ ಸಾಧ್ಯ ಎನ್ನುವ ಅಚ್ಚರಿಯ ಪ್ರಶ್ನೆ ಮೂಡುತ್ತದೆ. 

ಸಂಶೋಧನೆಯಲ್ಲಿ ಸಿಕ್ಕ ಸತ್ಯಾಂಶ
ವಿಜ್ಞಾನಿಗಳು ಈ ವಿಚಾರವಾಗಿ ಸಂಶೋಧನೆ ನಡೆಸಿ, ಈ ಎಲ್ಲ ತಲೆಮಾರುಗಳ ಹೊಂದಾಣಿಕೆಗೆ ಕಾರಣ ಅವರವರ 
ಮನೆತನದಲ್ಲಿ ಒಂದು ಪೀಳಿಗೆಯಿಂದ ಮತ್ತೂಂದು ಪೀಳಿಗೆಗೆ ಸಾಗುತ್ತಿರುವ ವಂಶವಾಹಿಗಳೇ ಎಂದು ಹೇಳಿದರು. ಮತ್ತೂಂದು ವಿಜ್ಞಾನಿಗಳ ಗುಂಪು ಇದನ್ನು ಖಂಡಿಸಿ ಇಲ್ಲ ಇದು ತಪ್ಪು ಕಲ್ಪನೆ; ಒಂದು ಮಗು ಹುಟ್ಟಿದಾಗ ಅದರ ಬಾಹ್ಯ ಗುರುತು ಮಾತ್ರವಲ್ಲ, ಆಂತರಿಕ ಚಿಂತನೆಗಳೂ ಸಹ ಮುಖ್ಯವಾಗುತ್ತವೆ. ಅದು ವಂಶವಾಹಿಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಸಾಗುವುದಿಲ್ಲ. ಹುಟ್ಟಿದ ಮಗುವಿನ ಮೇಲೆ ಅದು ಬೆಳೆಯುವ ವಾತಾವರಣ ಪ್ರಭಾವ ಬೀರುತ್ತದೆ. ಎಲ್ಲ ಮಕ್ಕಳು ತಮ್ಮ ಸುತ್ತಮುತ್ತಲಿನ ಜನಜೀವನ ನೋಡಿ ಕಲಿಯುತ್ತಾರೆ ಎಂದು ವಾದ ಮಾಡಿತು, ಅದನ್ನು ಸಾಬೀತುಪಡಿಸಲು ಆ ವಿಜ್ಞಾನಿಗಳು ತಮ್ಮ ಜತೆ ಹತ್ತು ಮಕ್ಕಳನ್ನು ಕರೆದುಕೊಂಡು 
ಒಂದು ದ್ವೀಪಕ್ಕೆ ಹೋದರು. ಆಗತಾನೇ ಹುಟ್ಟಿದ ಹತ್ತೂ ಮಕ್ಕಳನ್ನು ಒಂದೇ ಜಾಗದಲ್ಲಿ, ಒಂದೇ ವಾತಾವರಣದಲ್ಲಿ, ಎಲ್ಲರಿಗೂ ಸಮಾನ ವ್ಯವಸ್ಥೆ ಕಲ್ಪಿಸಿ, ವಿದ್ಯಾಭ್ಯಾಸ ನೀಡಿ ಬೆಳೆಸಿದರು. 

ಏಕೆಂದರೆ ಈ ವಿಜ್ಞಾನಿಗಳ ಪ್ರಕಾರ ಎಲ್ಲ ಮನುಷ್ಯರಿಗೂ ಸಮಾನವಾದ ವ್ಯವಸ್ಥೆಯಿದ್ದರೆ ಎಲ್ಲರ ಚಿಂತನೆ ಒಂದೇ 
ಆಗಿರುತ್ತದೆ, ಬೇರೆ ಬೇರೆಯಾಗಲು ಸಾಧ್ಯವೇ ಇಲ್ಲ. ಮನುಷ್ಯ ತನಗೆ ಬೇಕಾದುದು ಸಿಗದಿದ್ದಾಗ ಹುಚ್ಚನಂತೆ ವರ್ತಿಸುತ್ತಾನೆ. ವಾತಾವರಣವೇ ಎಲ್ಲರನ್ನೂ ಬೇರೆ ಬೇರೆಯಾಗಿ ವರ್ತಿಸುವಂತೆ ಮಾಡುವುದು ಎಂಬುದು ಅವರ ವಾದವಾಗಿತ್ತು. ಹಠದಿಂದ ಆ ಹತ್ತೂ ಜನ ಮಕ್ಕಳನ್ನು ಹತ್ತು ವರ್ಷ ಒಂದೇ ವಾತಾವರಣದಲ್ಲಿ ಬೆಳೆಸಿದರು. ಆದರೆ ಹತ್ತೂ ಮಕ್ಕಳ ವಂಶವಾಹಿ ಬೇರೆ ಬೇರೆಯಾಗಿದ್ದರಿಂದ, ಎಲ್ಲರೂ ಅವರವರ ಮನೆಯವರ ಹೋಲಿಕೆಯಂತೆ ನಡೆದುಕೊಳ್ಳಲಾರಂಭಿಸಿದರು. ಮಕ್ಕಳಿಗೆ ಎಷ್ಟೇ ಶ್ರದ್ಧೆ-ಭಕ್ತಿ-ವಿದ್ಯೆ ಕಲಿಸಿದರೂ ಎಲ್ಲರಲ್ಲೂ ಅದು ಸಮಾನವಾಗಿ ಬೇರೂರಲಿಲ್ಲ. ಆಗ ಆ ವಿಜ್ಞಾನಿಗಳಿಗೆ ತಾವು ಹತ್ತು ವರ್ಷ ಶ್ರಮಪಟ್ಟರೂ ತಮ್ಮ ತಮ್ಮ ಪೂರ್ವಜರ ವಂಶವಾಹಿಯಿಂದ ರೂಪುಗೊಂಡಿರುವ ಆ ಮಕ್ಕಳು ಒಂದೇ ರೀತಿಯ ವಾತಾವರಣದಿಂದಾಗಿ ಒಂದೇ ರೀತಿ ವರ್ತಿಸಲು ಅಸಾಧ್ಯ ಎಂಬ ಅರಿವಾಯಿತು. ಆದರೆ, ಇದರ ಜತೆಗೇ, ವಾತಾವರಣದ ಕಾರಣದಿಂದ ಕೆಲವು ವಿಷಯಗಳಲ್ಲಿ ಅವರೆಲ್ಲ ಒಂದೇ ರೀತಿ ವರ್ತಿಸುತ್ತಿದ್ದಾರೆಂಬುದೂ ತಿಳಿಯಿತು. 

ಮಕ್ಕಳು ಎಲ್ಲೇ ಹುಟ್ಟಿ ಎಲ್ಲೇ ಬೆಳೆದರೂ ಮೂಲತಃ ಅವರ ತಂದೆ ತಾಯಿಯ ವಂಶವಾಹಿಗಳು ಅವರ ಸಾಮಾನ್ಯ ನಡವಳಿಕೆಗೆ ಕಾರಣವಾಗಿರುತ್ತದೆ. ಶೇ.50ರಷ್ಟು ನಮ್ಮ ಸುತ್ತಮುತ್ತಲಿನ ಜನರ ನಡವಳಿಕೆ, ನಾವು ನಡೆದು ಬರುವ ದಾರಿ, ಸಮಾಜ, ಮನೆಯಲ್ಲಿ ತಂದೆ-ತಾಯಿ ನಡೆದುಕೊಳ್ಳುವ ರೀತಿ, ನಮ್ಮ ಸ್ನೇಹ ಮತ್ತು ಸಹವಾಸ ಇವೆಲ್ಲ ನಮ್ಮ ಪೂರ್ಣ ವ್ಯಕ್ತಿತ್ವಕ್ಕೆ ಕಾರಣವೆನಿಸಿಕೊಳ್ಳುತ್ತವೆ. 

ನಮ್ಮ ಆಶ್ರಮದಲ್ಲಾದ ಅನುಭವ
ನಾವು ಸಹ ಮೊದಮೊದಲು ಹೀಗೇ ವಾದ ಮಾಡಿದ್ದೆವು. ನಮ್ಮ ಆಶ್ರಮದಲ್ಲಿ ಎಲ್ಲ ಮಕ್ಕಳನ್ನು ಒಂದೇ ರೀತಿ ಪ್ರೀತಿಯಿಂದ ನೋಡಿಕೊಂಡು, ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟರೂ ಕೂಡ ಕೆಲವು ಮಕ್ಕಳು ವಿಚಿತ್ರವಾಗಿ ವರ್ತಿಸುತ್ತಿದ್ದರು. ತಮ್ಮನ್ನು ನೋಡಿಕೊಳ್ಳುತ್ತಿರುವ ತಾಯಿಯನ್ನೇ ಕೆಟ್ಟ ಪದಗಳಿಂದ ಕೀಳಾಗಿ ಬೈಯುತ್ತಿದ್ದರು. ಚಿಕ್ಕ ಮಕ್ಕಳಾದರೂ ಕೆಲವು ಸಲ ಕ್ರೂರಿಗಳಂತೆ ವರ್ತಿಸುತ್ತಿದ್ದರು. ಮನೆಯಲ್ಲೇ ಕಳ್ಳತನ ಮಾಡುವುದು, ಸಾಕುತ್ತಿರುವ ಅಮ್ಮನನ್ನೇ ಹೊಡೆಯುವುದು ಮಾಡುತ್ತಿದ್ದರು. ಮತ್ತೂಂದು ಕಡೆ ನೋಡಿದರೆ ಇನ್ನೊಂದು ಮಗು ಶ್ರದ್ಧೆಯಿಂದ ಓದುತ್ತಿರುತ್ತಿತ್ತು. ನಮ್ರತೆಯಿಂದ ತನ್ನನ್ನು ಸಾಕುತ್ತಿರುವ ಅಮ್ಮನಿಗೆ ತರಕಾರಿ ಹೆಚ್ಚಿಕೊಟ್ಟು ಅಡುಗೆ ಮಾಡಲು ಸಹಾಯ ಮಾಡುತ್ತಿತ್ತು. “ಹೆತ್ತವರಂತೂ ನನ್ನನ್ನು ಬಿಸಾಕಿದರು, ಇವಳಾದರೂ ನನಗೆ ಇಷ್ಟೊಂದು ಪ್ರೀತಿ ತೋರುವಳಲ್ಲ’ ಅಂತ ಅವಳ ಕಾಲು ಒತ್ತಿ ಮಲಗಿಸಿ, ಅವಳನ್ನು ಕಾಪಾಡು ಅಂತ ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. 
ಒಂದು ಮನೆಯಲ್ಲಿರುವವರೆಲ್ಲ ತಮ್ಮ ಮನೆತನದ ವಂಶವಾಹಿಯಿಂದ ಒಂದೇ ಆಗಿರುತ್ತಾರೆ ಎನ್ನುವುದು ಸುಳ್ಳು. ಪಂಡಿತರ ಮಗನಾಗಿ ಪಂಡಿತನೇ ಹುಟ್ಟುತ್ತಾನೆ, ವಿಜ್ಞಾನಿಯ ಮಗನಾಗಿ ವಿಜ್ಞಾನಿಯೇ ಹುಟ್ಟುತ್ತಾನೆ ಅಂತ ಹೇಳಲಾಗದು. ಹಾಗೆಯೇ ಕೆಲವು ಮಕ್ಕಳು ತಾಯಿಯ ವಂಶವಾಹಿಗಳನ್ನು ಪಡೆದುಕೊಂಡರೆ, ಕೆಲವರು ತಂದೆಯ ವಂಶವಾಹಿಗಳನ್ನು ಪಡೆಯುತ್ತಾರೆ. ಇನ್ನು ಕೆಲವು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಬಿಟ್ಟು ತಮ್ಮ ಮೂರು ತಲೆಮಾರಿನ ಹಿಂದಿನವರನ್ನು ಹೋಲುತ್ತಾರೆ. ಒಂದೇ ಕುಟುಂಬದಲ್ಲಿ 
ಸಂಬಂಧ ಬೆಳೆಸಿದರೆ/ ಮದುವೆಯಾದರೆ ಕೆಲವು ಸಲ ಮಕ್ಕಳು ಅಂಗವಿಕಲರಾಗಿ ಅಥವಾ ಬುದ್ಧಿಮಾಂದ್ಯರಾಗಿ ಹುಟ್ಟಿರುವುದನ್ನು ಕಂಡಿದ್ದೇವೆ. ಇದೂ ವಂಶವಾಹಿಗಳಿಂದ ಉಂಟಾಗುವಂಥದೇ.

ಏನೇ ಆದರೂ ನಾವು ನಾವೇ!
ನಾವು ಇತ್ತೀಚೆಗೆ ಕಂಡ ಇನ್ನೊಂದು ಅಚ್ಚರಿ ಎಂದರೆ, ಒಂದೇ ಒಂದು ವಂಶವಾಹಿಯಿಂದ ಒಂದು ಜೀವಿಯ ಮತ್ತೂಂದು ತದ್ರೂಪಿಯನ್ನು ಸೃಷ್ಟಿಮಾಡಲು ಸಾಧ್ಯ ಎಂಬುದು. ವಿಜ್ಞಾನಿಗಳು ಇಂದು ಎಷ್ಟು ಮುಂದುವರೆದಿದ್ದಾರೆಂದರೆ, ಒಂದು ಜೀವಿಯನ್ನು ಕ್ಲೋನ್‌ ಮಾಡಿ ಅದನ್ನೇ ಹೋಲುವ ಮತ್ತೂಂದು ಜೀವಿಯನ್ನು ಸೃಷ್ಟಿಸುತ್ತಾರೆ. ಹಾಗೆಯೇ, ವಂಶವಾಹಿಯ ಮೂಲಕ ನಮ್ಮ ವಂಶವೃಕ್ಷವನ್ನೇ ಕಂಡು ಹಿಡಿಯುತ್ತಾರೆ. ನಮ್ಮ ಜೀನ್‌ಗಳು ನೂರಾರು ವರ್ಷಗಳ ಹಿಂದೆ ಯಾವ ವಂಶಕ್ಕೆ ಸೇರಿದುದಾಗಿವೆ, ನಮ್ಮ ವಂಶಕ್ಕೆ ಸೇರಿದ ಪೂರ್ವಜರು ಯಾರ್ಯಾರು, ನಾವ್ಯಾಕೆ ಬೇರೆಯವರಿಗಿಂತ ಕೆಲವು ವಿಚಾರಗಳಲ್ಲಿ ಭಿನ್ನವಾಗಿದ್ದೇವೆ, ನಮಗೆ ಈ ನಡವಳಿಕೆ ಯಾರಿಂದ ಬಂತು… ಎಂದು ಯೋಚಿಸಿದರೆ ಇವುಗಳೆಲ್ಲ ನಮಗೆ ನಮ್ಮ ಪೂರ್ವಜರಿಂದ ಬಂದ ಬಳುವಳಿ ಎಂಬುದು ತಿಳಿಯುತ್ತದೆ.  ಇಷ್ಟೆಲ್ಲ ಆದ ಮೇಲೂ, ನಮ್ಮ ವ್ಯಕ್ತಿತ್ವಕ್ಕೆ ವಂಶವಾಹಿಯೇ ಶೇ.50ರಷ್ಟು ಕಾರಣವಾದರೂ ನಮ್ಮನ್ನು ನಾವು ಹೇಗೆ ಬೇಕೋ ಹಾಗೆ ರೂಪಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಇಚ್ಛಾಶಕ್ತಿ ಬೇಕು. ವಂಶವಾಹಿಗಳು ನಮಗೆ ಬರುವ ರೋಗಗಳನ್ನು ನಿರ್ಧರಿಸಬಹುದು. ಆದರೆ, ನಾವು ಹೇಗಿರಬೇಕು, ನಮ್ಮ ವ್ಯಕ್ತಿತ್ವ ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಲು ಸಾಧ್ಯವಿದೆ. ಮಹಾನ್‌ ಸಾಧಕರನ್ನೊಮ್ಮೆ ನೋಡಿ. ಅವರ ತಂದೆಯೋ ಅಜ್ಜನೋ ಮಹಾನ್‌ ಸಾಧನೆ ಮಾಡಿದ್ದ ಎಂಬ ಕಾರಣಕ್ಕೆ ಇವರ್ಯಾರೂ ಸಾಧಕರಾಗಲಿಲ್ಲ. ಅವರೆಲ್ಲ ಪ್ರಯತ್ನಪಟ್ಟು ಸಾಧಕರಾದರು.

ರೂಪಾ ಅಯ್ಯರ್‌

ಟಾಪ್ ನ್ಯೂಸ್

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

xfdrete

ವಾಯುಪಡೆ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ವಿ.ಆರ್‌. ಚೌಧರಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.