ಜವಾಬ್ದಾರಿಗಳು ಬೇರೆಯವರಿಗಷ್ಟೇ ಅಲ್ಲ, ನಮಗೂ ಇವೆ!


Team Udayavani, Feb 12, 2019, 12:30 AM IST

x-14.jpg

ಜನರು ವಿದೇಶದಲ್ಲಿ ನೆಲೆಸಿ ನಮ್ಮ ದೇಶಕ್ಕೆ ಕಾಲಿಟ್ಟ ತಕ್ಷಣ ವಿಮಾನ ನಿಲ್ದಾಣದಿಂದಲೇ ದೇಶವನ್ನು ಬೈಯಲು ಆರಂಭಿಸುತ್ತಾರೆ. ನೀವು ದೇಶಕ್ಕಾಗಿ ಏನು ಮಾಡಿದ್ದೀರಾ ಎಂದು ಕೇಳಿದರೆ, ನಾವ್ಯಾಕೆ ಮಾಡ್ಬೇಕು? ಸರಕಾರ ಎಲ್ಲವನ್ನೂ ಸರಿಪಡಿಸಬೇಕು ಎನ್ನುತ್ತಾರೆ. ಬೇರೆ ದೇಶಗಳಲ್ಲಿ ನಮ್ಮವರು ಅಲ್ಲಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಏಕೆಂದರೆ ಅಲ್ಲಿ ನಿಯಮಗಳನ್ನು ಮೀರಿದರೆ ಯಾರು, ಏನು ಅಂತ ನೋಡದೆ ಒದ್ದು ಒಳಗೆ ಹಾಕುತ್ತಾರೆ..

ಸಮಾಜ ಯಾರಿಂದ ಸೃಷ್ಟಿಯಾಗಿದೆ? ನಮ್ಮೆದುರಿರುವವರನ್ನು ನಾವು ಸಮಾಜ ಎನ್ನುತ್ತೇವೆ. ನಮ್ಮೆದುರಿರುವವರಿಗೆ ನಾವೇ ಸಮಾಜವಾಗಿ ಕಾಣುತ್ತೇವೆ. ನಾವು ಯಾವಾಗಲೂ ಸಮಾಜ ಅಂದರೆ ಬೇರೆ ಯಾರೋ ಎಂಬಂತೆ ಮಾತನಾಡುತ್ತೇವೆ. ಆದರೆ ಸಮಾಜ ನಮ್ಮಿಂದಲೇ ಹುಟ್ಟಿದ್ದು, ನಮ್ಮ ಹಿರಿಯರಿಂದಲೇ ರೂಪುಗೊಂಡಿರುವುದು ಎಂಬುದನ್ನು ಯೋಚಿಸುವುದಿಲ್ಲ. ಸಾರ್ವಜನಿಕವಾಗಿ ಕೆಲವು ಸಲ ನಾವೇ ತಪ್ಪು ಮಾಡಿ ಬೇರೆಯವರ ತಲೆಗೆ ಕಟ್ಟಲು ನೋಡುತ್ತೇವೆ ಅಥವಾ ನಾವು ಸುಮ್ಮನೆ ನಿಂತಿದ್ದನ್ನು ನೋಡಿ ಬೇರೆಯವರು ಜೋರು ಮಾಡಿ ನಮ್ಮನ್ನೇ ತಪ್ಪಿತಸ್ಥರಂತೆ ದೂಷಿಸುತ್ತಾರೆ. ಸನ್ನಿವೇಶ ಏನೇ ಆದರೂ ಪರಿಣಾಮ ಇಬ್ಬರ ಮೇಲೂ ಆಗುತ್ತದೆ.

ಜಗಳ ಶುರುವಾಗೋದು ಹೇಗೆ?
ಅತಿ ಹೆಚ್ಚು ಬಾರಿ ಜಗಳ ಶುರುವಾಗುವುದೇ ನಿಯಮಗಳನ್ನು ಪಾಲಿಸದಿದ್ದಾಗ. ಉದಾಹರಣೆಗೆ ಯಾರದೋ ಇನ್‌ಫ‌ುÉಯೆನ್ಸ್‌ ತಂದು ಮುನ್ನುಗ್ಗಿ ಅಧಿಕಾರ ಚಲಾಯಿಸುವುದು, ಯಾರೋ ಒಬ್ಬರಿಗೆ ಅಪಘಾತವಾದಾಗ ಇತರರು ಸರಿ-ತಪ್ಪು ತಿಳಿಯದೆ ಮೂರ್ಖರಂತೆ ಮೈ ಮೇಲೆ ಬಿದ್ದು ಕೂಗಾಡುವುದು, ನಾಗರಿಕತೆಯಿಲ್ಲದ ಕೆಲ ಪಡ್ಡೆ ಹುಡುಗರು ಹೀರೋಗಳಂತೆ ವರ್ತಿಸುವುದು ಹೀಗೆ ಅನೇಕ ಅಧರ್ಮ ಕಾರಣಗಳು ಸತ್ಯದ ಬಾಯಿ ಮುಚ್ಚಿಸಿ ಹಾರಾಡುತ್ತವೆ. ಇಂತಹ ಸಂದರ್ಭಗಳಲ್ಲೇ ಪಬ್ಲಿಕ್‌ನಲ್ಲಿ ಜಗಳಗಳು ಶುರುವಾಗುತ್ತವೆ.

ನಿಯಮಗಳು ಇರೋದ್ಯಾರಿಗೆ?
ಸರಕಾರಗಳು ನಿಯಮಗಳನ್ನು ಯಾರಿಗೋಸ್ಕರ ಮಾಡಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವುಗಳು ನಮ್ಮ ಒಳಿತಿಗಾಗಿ ಇವೆ ಎಂಬ ಅರಿವಿಲ್ಲದೆ ಎಲ್ಲದಕ್ಕೂ ಆತುರ ಪಟ್ಟರೆ ಸಾವು ಕೂಡ ಆತುರದಿಂದಲೇ ಬರುತ್ತದೆ. ಎಷ್ಟೇ ನಿಯಮಗಳನ್ನು ಮಾಡಿ ಎಷ್ಟೇ ದಂಡ ಅಥವಾ ಸುಂಕ ವಸೂಲಿ ಮಾಡಿದರೂ ಜನರು ಕ್ಯಾರೇ ಅನ್ನುವುದಿಲ್ಲ. ಅದರಲ್ಲೂ ಯುವಜನರು ನಿಯಮಗಳನ್ನು ಉಲ್ಲಂ ಸುವುದರಲ್ಲೇ ಥ್ರಿಲ್‌ ಅನುಭವಿಸುತ್ತಾರೆ. ವಾಹನ ಚಲಾಯಿಸುವಾಗ ತಮ್ಮ ಮೋಜಿಗಾಗಿ ಬೇರೆಯವರನ್ನು ಬಲಿ ತೆಗೆದುಕೊಳ್ಳುತ್ತಾರೆ. ಇತ್ತೀಚೆಗಂತೂ ಪುಟ್‌ಪಾತ್‌ ಮೇಲೂ ದ್ವಿಚಕ್ರ ವಾಹನೆಗಳ ಹಾವಳಿ. ಅಲ್ಲಿ ವಯಸ್ಸಾದವರು ವಾಕಿಂಗ್‌ ಮಾಡುತ್ತಿದ್ದರೆ ಅಥವಾ ಬಸ್‌ನಿಂದ ಇಳಿದು ಪಾದಚಾರಿ ಮಾರ್ಗದಲ್ಲಿ ಜನರು ನಡೆದು ಹೋಗುತ್ತಿದ್ದರೆ ಪಡ್ಡೆಗಳು ಅಲ್ಲೂ ಬೈಕ್‌ ನುಗ್ಗಿಸಿ ಜನರನ್ನು ಗಾಬರಿ ಬೀಳಿಸುತ್ತಾರೆ. ಅಥವಾ ಗುದ್ದಿ ಬೀಳಿಸುತ್ತಾರೆ! ಈ ರೀತಿ ಮಾಡುವವರೆಲ್ಲ ಅವಿದ್ಯಾವಂತರಲ್ಲ. ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ವಿದ್ಯಾವಂತರು ಮತ್ತು ಅವಿದ್ಯಾವಂತರು ಎಂದು ವರ್ಗೀಕರಣ ಮಾಡುವಂತೆಯೂ ಇಲ್ಲ. ಏಕೆಂದರೆ ಎಲ್ಲರೂ ಹೀಗೆ ಮಾಡುತ್ತಾರೆ. ಕೆಲವು ಸಲ ಆತುರಕ್ಕೆ ಅಥವಾ ಟೈಂ ಉಳಿಸುವುದಕ್ಕೆ ವಿದ್ಯಾವಂತರೇ ಇಂಥವುಗಳನ್ನು ಹೆಚ್ಚು ಮಾಡುತ್ತಾರೆ.

ಫಾರಿನ್‌ ಕನ್ನಡಿಗರ ಮನಸ್ಥಿತಿ
ಡಿಗ್ರಿ ಮುಗಿಸಿ ನಮ್ಮ ಮಗ ಫಾರಿನ್‌ಗೆ ಹಾರಬೇಕು, ತುಂಬಾ ತುಂಬಾ ಸಂಪಾದಿಸಿ ದೊಡ್ಡ ವ್ಯಕ್ತಿಯಾಗಬೇಕು ಎಂಬುದು ಬಹಳ ತಂದೆ ತಾಯಂದಿರ ಕನಸು. ಆದರೆ ಚಿಕ್ಕ ವಯಸ್ಸಿನಿಂದ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಿಕೊಡುವುದು ತಮ್ಮ ಕರ್ತವ್ಯ ಎಂದು ಎಲ್ಲರೂ ಭಾವಿಸುವುದಿಲ್ಲ. ಬರೀ ಓದಬೇಕು, ದುಡಿಯಬೇಕು ಎಂದು ತಲೆಗೆ ಹಚ್ಚಿಕೊಂಡಿರುವ ಜನರು ವಿದೇಶದಲ್ಲಿ ನೆಲೆಸಿ ನಮ್ಮ ದೇಶಕ್ಕೆ ಕಾಲಿಟ್ಟ ತಕ್ಷಣ ವಿಮಾನ ನಿಲ್ದಾಣದಿಂದಲೇ ದೇಶವನ್ನು ಬೈಯಲು ಆರಂಭಿಸುತ್ತಾರೆ. ಹಾಗಾದರೆ ನೀವು ನಿಮ್ಮ ದೇಶಕ್ಕಾಗಿ ಏನು ಮಾಡಿದ್ದೀರಾ ಎಂದು ಕೇಳಿದರೆ, ನಾವ್ಯಾಕೆ ಮಾಡ್ಬೇಕು? ಸರಕಾರ ಎಲ್ಲವನ್ನೂ ಸರಿಪಡಿಸಬೇಕು ಎನ್ನುತ್ತಾರೆ. ಪ್ರತಿಯೊಬ್ಬ ಪ್ರಜೆಯೂ ತನ್ನ ತಾಯಿನಾಡಿನ ಋಣ ತೀರಿಸಬೇಕು. ಎಲ್ಲವನ್ನೂ ಸರಕಾರ ಮಾಡಲಿ ಎಂದು ಎಸ್ಕೇಪ್‌ ಆಗುವುದು ಹೇಡಿತನವಷ್ಟೆ. 

ಬೇರೆ ದೇಶಗಳಲ್ಲಿ ನಮ್ಮವರು ಅಲ್ಲಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಏಕೆಂದರೆ ಅಲ್ಲಿ ನಿಯಮಗಳನ್ನು ಮೀರಿದರೆ ಯಾರು, ಏನು ಅಂತ ನೋಡದೆ ಒದ್ದು ಒಳಗೆ ಹಾಕುತ್ತಾರೆ, ಅಷ್ಟೇ ದಂಡವನ್ನೂ ಕಟ್ಟಿಸಿಕೊಳ್ಳುತ್ತಾರೆ. ಆ ಭಯದಿಂದ ವಿದೇಶದಲ್ಲಿ ನಮ್ಮವರು ಸಂಯಮದಿಂದ ವರ್ತಿಸುತ್ತಾರೆ. ಆದರೆ ನಮ್ಮ ದೇಶಕ್ಕೆ ಬಂದ ತಕ್ಷಣ ಯಾವ ಭಯವೂ ಇಲ್ಲದೆ ಮನಬಂದಂತೆ ವರ್ತಿಸುತ್ತಾರೆ.  ನಿಜ ಹೇಳಬೇಕು ಅಂದರೆ ನಮ್ಮ ದೇಶ ನಮಗೆಲ್ಲ ಅತಿ ಎನ್ನುವಷ್ಟು ಸ್ವತಂತ್ರವಾಗಿ ಬದುಕಲು ಬಿಟ್ಟಿದೆ. ನಾವು ಇಷ್ಟ ಬಂದಂತೆ ವರ್ತಿಸಿ ಕೆಲವು ನಿಯಮಗಳನ್ನು ಉಲ್ಲಂ ಸಿದರೂ ನಮ್ಮನ್ನು ಕ್ಷಮಿಸಿ ಮತ್ತೂಂದು ಚಾನ್ಸ್‌ ಕೊಡುತ್ತದೆ. ನಮ್ಮ ದಿನನಿತ್ಯದ ಜೀವನದ ಮೇಲೆ ತೀರಾ ಕಟ್ಟುಪಾಡುಗಳನ್ನು ಹೇರುವುದಿಲ್ಲ. ಆದರೆ, ಬೇರೆ ದೇಶಗಳಲ್ಲಿ ಒಂದು ಹುಡುಗಿಗೆ ಅವಾಚ್ಯ ಪದ ಬಳಸಿ ಮೆಸೇಜ್‌ ಕಳುಹಿಸಿದರೆ ಅಥವಾ ಇ-ಮೇಲ್‌ ಕಳುಹಿಸಿದರೆ ಅದಕ್ಕೂ ಹುಡುಗನನ್ನು ಜೈಲಿಗೆ ಹಾಕುತ್ತಾರೆ. ನಮ್ಮ ದೇಶದಲ್ಲಿ ಹುಡುಗರು ಬೀದಿಯಲ್ಲೇ ನಿಂತು ಬಾಯಿತುಂಬಾ ಕೆಟ್ಟ ಪದಗಳಲ್ಲಿ ಹುಡುಗಿಯರನ್ನು ನಿಂದಿಸಿದರೂ ಯಾರೂ ಕೇಳುವವರಿಲ್ಲ. ಅಷ್ಟು ಸ್ವಾತಂತ್ರ್ಯವಿದೆ ನಮ್ಮವರಿಗೆ. 

ನಮಗೆ ಜವಾಬ್ದಾರಿಯಿಲ್ಲವೇ?
ನಾನು, ನನ್ನ ಸಂಸಾರ, ನನ್ನ ಮನೆ ಅಂತ ಕೆಲವರು ಸ್ವಾರ್ಥಿಗಳಾಗಿ ಬೇರೆ ಜನರ ಬಗ್ಗೆ ಕ್ಯಾರೇ ಮಾಡುವುದಿಲ್ಲ. ನಾಳೆ ನಿಮ್ಮ ಮಕ್ಕಳು ಇದೇ ಸಮಾಜದಲ್ಲಿ ಬೆಳೆಯುತ್ತಾರೆ.ಇವತ್ತಿನ ನಿಮ್ಮ ಕೆಟ್ಟ ವರ್ತನೆಯನ್ನು ನಾಳೆ ನಿಮ್ಮ ಮಕ್ಕಳ ಮುಂದೆ ಬೇರೆಯವರು ಪ್ರದರ್ಶಿಸಬಹುದು. ನಮ್ಮನ್ನು ನಾವು ಸರಿಪಡಿಸಿಕೊಂಡರೆ ಜಗತ್ತು ತಾನಾಗೇ ಸರಿಹೋಗುತ್ತದೆ. ಬೇರೆಯವರು ಸಮಾಜಕ್ಕೆ ಒಳಿತು ಮಾಡುತ್ತಾರೋ, ಬಿಡುತ್ತಾರೋ ಮುಖ್ಯವಲ್ಲ, ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಇನ್ನೊಬ್ಬರ ಕಡೆ ಕೈತೋರಿಸಿ ನಾವು ದೊಡ್ಡ ಮನುಷ್ಯರೆನಿಸಿಕೊಂಡರೆ ಸಾಲದು, ನಾನೊಬ್ಬ ನಾಗರಿಕನಾಗಿ ನನ್ನ ಜವಾಬ್ದಾರಿಗಳನ್ನು ಒಪ್ಪಿಕೊಂಡು ಕಾರ್ಯಗತಗೊಳಿಸುತ್ತಿದ್ದೇನೆಂಬ ಹೆಮ್ಮೆಯಿರಬೇಕು. 

ಕೆಲವು ಸಲ ಒಬ್ಬ ವ್ಯಕ್ತಿ ಅಸಡ್ಡೆಯಿಂದ ಮಾಡುವ ಕೆಲಸದ ದುಷ್ಪರಿಣಾಮವನ್ನು ಅನೇಕರು ಅನುಭವಿಸಬೇಕಾಗುತ್ತದೆ. ಪ್ರತಿಯೊಬ್ಬ ಮನುಷ್ಯನೂ ಅವನವನ ವ್ಯಕ್ತಿತ್ವವನ್ನು ಗೌರವಿಸಿಕೊಂಡು ಮುಂದಾಲೋಚನೆಯಿಂದ ಕಾರ್ಯ ನಿರ್ವಹಿಸಿದರೆ ಸಮಾಜದಲ್ಲಿ ಪೊಲೀಸ್‌ ಸ್ಟೇಷನ್‌, ನ್ಯಾಯಾಲಯದ ಮತ್ತು ಮಾನವ ಹಕ್ಕುಗಳ ಕಾವಲುಗಾರರ ಅವಶ್ಯಕತೆಯಿರುವುದಿಲ್ಲ. ನಮ್ಮ ಜವಾಬ್ದಾರಿಗಳನ್ನು ಬೇರೆಯವರ ತಲೆಯ ಮೇಲೆ ಹೇರಬಾರದು, ಅದರ ಬದಲು ನ್ಯಾಯಬದ್ಧ ನಡವಳಿಕೆಯನ್ನು ನಾವೇ ಅಳವಡಿಸಿಕೊಳ್ಳಬೇಕು. ತಮಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದೆ ಎಂದು ಕ್ಯೂನಲ್ಲಿ ನಿಲ್ಲದೇ ಇರುವವರು ಅಥವಾ ದಬಾಯಿಸುವವರನ್ನು ನಾವು ನೋಡುತ್ತಿರುತ್ತೇವೆ. ಅವರು ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾರೆ. ರಸ್ತೆಯಲ್ಲಿ ಎಲ್ಲರನ್ನೂ ಓವರ್‌ ಟೇಕ್‌ ಮಾಡಿಕೊಂಡು ವಾಹನ ಓಡಿಸುತ್ತಾರೆ. ತಾವೇ ತಪ್ಪು ಮಾಡಿ ಬೇರೆಯವರನ್ನು ಬಾಯಿ ತುಂಬಾ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಇವರೆಲ್ಲ ತಮ್ಮ ಸಮಾಜಕ್ಕೆ ಕೆಟ್ಟ ಹೆಸರು ತರಲೆಂದೇ ಹುಟ್ಟಿದವರು. ಇಂತಹವರನ್ನು ಪೋಷಿಸುವವರು ಕೆಲ ದೊಡ್ಡ ನಾಯಕರು, ಶ್ರೀಮಂತರು, ರೌಡಿಗಳು. ಸಾಮಾಜಿಕ ಕಳಕಳಿ-ಜವಾಬ್ದಾರಿ ಇಲ್ಲದ ಅನೇಕರು ನಮ್ಮ ದೇಶದಲ್ಲಿ/ರಾಜ್ಯದಲ್ಲಿ ನಾಯಕರಾಗಿದ್ದಾರೆ. ಅವರನ್ನು ನಾವೇ ಗೆಲ್ಲಿಸಿದ್ದೇವೆ. ಹಾಗಿದ್ದ ಮೇಲೆ ಸಾಮಾಜಿಕ ಜವಾಬ್ದಾರಿ ನಮಗಿರಬೇಕಾ? ಅವರಿಗಿರಬೇಕಾ?

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.