ಸಾಧನೆಯ  ಕನಸಷ್ಟೇ  ಕಾಣುತ್ತ  ಕೂತವರ್ಯಾರೂ ಉದ್ಧಾರವಾಗಿಲ್ಲ!


Team Udayavani, Apr 18, 2017, 11:03 AM IST

18-ANKANA-1.jpg

ಸಾಧನೆಯ ಕನಸು ಪ್ರತಿಯೊಬ್ಬನಿಗೂ ಇರುತ್ತದೆ. ಆದರೆ, ಅದರ ದಾರಿ ತಿಳಿದಿರುವುದಿಲ್ಲ. ಅಡೆತಡೆಗಳಿರುತ್ತವೆ. ಅವುಗಳಿಗೆ ಬೆದರಬಾರದು, ನೆಪ ಹೇಳಬಾರದು. ಕನಸು, ಹಣ ಸಂಪಾದನೆ ಮತ್ತು ಜ್ಞಾನ – ಈ ಮೂರು ಹಾದಿಯಲ್ಲಿ ಏಕಕಾಲಕ್ಕೆ ಚಲಿಸಿದರೆ ಮಾತ್ರ ಚಿಕ್ಕ ವಯಸ್ಸಿನಲ್ಲೇ ಸಾಧಿಸಲು ಸಾಧ್ಯ.

ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊಂದು ಸಾಧಿಸಬೇಕೆಂಬ ಹಂಬಲವಿರುತ್ತದೆ. ಕೆಲವರು ಒಂದು ಡಿಗ್ರಿ ತೆಗೆದುಕೊಂಡು ಒಂದು ಸಣ್ಣ ಕೆಲಸಕ್ಕೆ ಕೈತುಂಬ ಸಂಬಳ ತೆಗೆದುಕೊಳ್ಳುವುದೇ ಸಾಧನೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು “ಬೆಳಿಗ್ಗೆ ಒಂಬತ್ತು ಗಂಟೆಗೆ ಕೆಲಸಕ್ಕೆ ಹೋಗಿ ಸಂಜೆ ಐದು ಗಂಟೆಗೆ ವಾಪಸ್ಸು ಬರುವುದನ್ನು ಎಲ್ಲರೂ ಮಾಡ್ತಾರೆ, ನಾನು ಸ್ವಲ್ಪ ಡಿಫ‌ರೆಂಟಾಗಿರಬೇಕು’ ಅಂತ ಬೇರೆ ಬೇರೆ ಕೆಲಸಗಳಿಗೆ ಕೈಹಾಕುತ್ತಾರೆ. ಮತ್ತೆ ಕೆಲವರು “ನಾನು ಸಾಧನೆ ಮಾಡಿದರೆ ಸಣ್ಣ ಸಾಧನೆಯನ್ನಂತೂ ಮಾಡುವುದಿಲ್ಲ. ಚಿಕ್ಕವನಾಗಿದ್ದಾಗ ಕಂಡ ಕನಸಿನಂತೆ ಅತಿ ದೊಡ್ಡ ಸಾಧನೆಯನ್ನೇ ಮಾಡಬೇಕು’ ಅಂತ ಕನಸು ಕಾಣುತ್ತಾರೆ. ಬರೇ ಕನಸು ಕಾಣುತ್ತಾರೆ, ಕನಸು ಮಾತ್ರ ಕಾಣುತ್ತಾ ಕುಳಿತಿರುತ್ತಾರೆ.

ಸಾಧನೆಯ ಬಗ್ಗೆ ಕನಸು ಕಾಣುವುದು ತುಂಬಾ ಸುಂದರವಾದ ವಿಷಯ. ಆದರೆ ಸಾಧಿಸುವುದು ಹೇಗೆ ಎಂಬುದನ್ನು ವಾಸ್ತವ ನೆಲೆಯಲ್ಲಿ ನಿಂತು ಹೆಚ್ಚಿನವರು ಯೋಚಿಸುವುದೇ ಇಲ್ಲ. ಯಾರು ಏನು ಬೇಕಾದರೂ ಆಗಬಹುದು, ಯಾವುದೂ ಅಸಾಧ್ಯವಲ್ಲ. ಆದರೆ ನಮಗೆ ಬೇಕು ಅನ್ನಿಸಿದ್ದರ ಹಿಂದೆ ನೂರಕ್ಕೆ ನೂರು ಶ್ರಮ ಹಾಕಿ ಓಡಬೇಕು. ಕೆಲವು ಸಲ ನಾವು ಓಡುವುದಕ್ಕೇನೋ ರೆಡಿ ಇರುತ್ತೇವೆ; ಆದರೆ ನಮ್ಮ ಜೀವನ, ಆ ಜೀವನದಲ್ಲಿ ನಮ್ಮ ಸುತ್ತಲಿರುವ ಪ್ರೀತಿಪಾತ್ರರು, ಅವರ ಅಸಹಾಯಕತೆ ಇವೆಲ್ಲ ನಮ್ಮ ಜೀವನಕ್ಕೆ ತತ್‌ಕ್ಷಣ ಬೇಕಾಗಿರುವ ಮೂಲಭೂತ ಆವಶ್ಯಕತೆಗಳನ್ನು ಜ್ಞಾಪಿಸಿ ಅಡ್ಡಗಾಲು ಹಾಕುತ್ತವೆ. ಪ್ರತಿನಿತ್ಯ ಜೀವನ ಸಾಗಿಸುವುದೇ ಕಷ್ಟ ಅನ್ನಿಸುತ್ತಿರುವಾಗ ಸಾಧನೆಯ ಬಗ್ಗೆ ಯೋಚಿಸುವುದಾದರೂ ಹೇಗೆ? ಯೋಚಿಸಿದರೂ ಈಗ ಸದ್ಯಕ್ಕೆ ಅದರ ಕಡೆಗೆ ಹೋಗುವುದಿಲ್ಲ ಅಂತ ನಿರ್ಧಾರ ತೆಗೆದುಕೊಂಡು ಸುಮ್ಮನಾಗುತ್ತೇವೆ.

ಸಾಧನೆಗೆ ಸಂಸಾರ ಬಿಡಬೇಕೆ?: ಕಷ್ಟದಲ್ಲಿರುವವರು ನಿಜವಾಗಿಯೂ ಏನನ್ನೂ ಸಾಧಿಸಲು ಸಾಧ್ಯವಿಲ್ಲವೇ? ಖಂಡಿತ ಇದೆ. ಸಾಧಿಸಲು ನಿಮ್ಮ ತಂದೆ ತಾಯಿಯನ್ನು ದೂರ ಮಾಡಬೇಕಿಲ್ಲ, ಅಣ್ಣತಂಗಿಯ ಪ್ರೀತಿಯಿಂದ ವಂಚಿತರಾಗಬೇಕಿಲ್ಲ, ಅವರ್ಯಾರನ್ನೂ ನೋಡಿಕೊಳ್ಳದೆ ಎಲ್ಲ ಜವಾಬ್ದಾರಿಗಳನ್ನು ಕಳಚಿಕೊಂಡು ಮನೆ ಬಿಟ್ಟು ಓಡಿಹೋಗಬೇಕಿಲ್ಲ. ಒಬ್ಬರಲ್ಲ ಇಬ್ಬರಲ್ಲ, ಸಾವಿರಾರು ಜನ ಹೀಗೆ ಮನೆ ಬಿಟ್ಟು ಓಡಿ ಬಂದು ಸಾಧನೆ ಮಾಡುತ್ತೇವೆ ಅಂತ ಸುಮ್ಮನೆ ಕೂತಿದ್ದಾರೆ. ಯಾಕೆ ಸುಮ್ಮನೆ ಕೂತಿದ್ದಾರೆ ಅಂದರೆ, ಅದಕ್ಕೆ ಬೇರೆ ಯಾರೂ ಕಾರಣರಲ್ಲ; ಅವರೇ ಕಾರಣರು. ಅವರು ತಮ್ಮ ಕಣ್ಮುಂದೆ ಸಾಧನೆ ಮಾಡಿರುವ, ಬಡತನದಿಂದ ಬಂದಿರುವ ಜನರೊಡನೆ ತಮ್ಮನ್ನು ಹೋಲಿಸಿಕೊಲುವುದಿಲ್ಲ. ಬದಲಿಗೆ, ಅವರ ಕಣ್ಣಿಗೆ ಈಗಾಗಲೇ ಶ್ರೀಮಂತರು ಕಾಣಿಸುತ್ತಿರುತ್ತಾರೆ. ತಾನು ಕೂಡ ಶ್ರೀಮಂತನಾಗಿದ್ದಿದ್ದರೆ ದೊಡ್ಡ ಸಾಧನೆ ಮಾಡುತ್ತಿದ್ದೆ ಅಂತ ಗೆಳೆಯರೆದುರು ಕೊಚ್ಚಿಕೊಳ್ಳುತ್ತಾರೆ. ಆ ಕಡೆ ಹೆತ್ತ ಅಪ್ಪ ಅಮ್ಮನಿಗೂ ಇವರು ಸಂತೋಷ ಕೊಡುವುದಿಲ್ಲ. ಇತ್ತ ತಾವು ಕಷ್ಟಪಟ್ಟು ದುಡಿದು ತನ್ನ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿ ಇದ್ದೇನೆ ಎಂಬ ನೆಮ್ಮದಿಯನ್ನೂ ಪಡೆಯುವುದಿಲ್ಲ. ದಿನಕ್ಕೊಂದು ಹೊಸ ಕೆಲಸಕ್ಕೆ ಕೈ ಹಾಕುವುದು, ಕೊನೆಗೆ ಯಾವುದರಲ್ಲೂ ಉದ್ಧಾರವಾಗದೆ ಹೊರಟಲ್ಲಿಗೇ ಮರಳುವುದು. ಹೀಗೆ ಮಾಡುತ್ತಿದ್ದರೆ ಏನನ್ನೂ ಸಾಧಿಸಲಾರಿರಿ. ದೇಹಕ್ಕೆ ವಯಸ್ಸಾಗುತ್ತದೆ, ಅಪ್ಪ ಅಮ್ಮನಿಗೂ ವಯಸ್ಸಾಗುತ್ತದೆ. ಒಂದು ದಿನ “ಮನೆಯವರ್ಯಾರನ್ನೂ ನಾನು ಚೆನ್ನಾಗಿ ನೊಡಿಕೊಳ್ಳಲಿಲ’ ಎಂಬ ಅಪರಾಧಿ ಭಾವನೆ ಕಾಡತೊಡಗುತ್ತದೆ.

ನೆಪ ಹೇಳುವುದನ್ನು ನಿಲ್ಲಿಸಿ: ನಮಗಿಂತ ಕಷ್ಟಪಟ್ಟು ಬೆಳೆದು, ಕಾರಣ ಕೊಡದೆ, ನೆಪ ಹೇಳದೆ ಸಾಧನೆ ಮಾಡುತ್ತಾರಲ್ಲ; ಅವರು ನಿಜವಾದ ಸಾಧಕರು. ಸಾಧನೆ ಮಾಡಲೇಬೇಕು ಅಂತ ಛಲ ತೊಟ್ಟವರು ಯಾವತ್ತೂ ಲೋಭಿಗಳಾಗಬಾರದು. ಪ್ರಳಯವಾದರೂ ಅದು ತನ್ನ ಸಾಧನೆಗೆ ಅಡ್ಡಿಯಾಯಿತು ಎಂದು ಕಾರಣ ಕೊಡಬಾರದು. ಜ್ವರ ಬಂತು, ತಲೆ ನೋವು, ಎಚ್ಚರವೇ ಆಗಲಿಲ್ಲ, ಮೊಬೈಲ್‌ ಫೋನ್‌ ಚಾರ್ಜ್‌ ಮಾಡಲು ಮರೆತೆ, ಮಳೆ ಬಂತು, ಬಸ್ಸು ಸಿಗಲಿಲ್ಲ, ಒಳ್ಳೆಯ ಗೆಳೆಯರೇ ಇಲ್ಲ, ಯಾರೂ ಸಹಾಯ ಮಾಡಲಿಲ್ಲ, ಇವತ್ತು ರಜೆ, ನಾಳೆ ಮಾಡಿದರಾಯಿತು, ಹುಡುಗಿ ನನಗೆ ಕೈ ಕೊಟ್ಟಳು, ನಿನ್ನೆ ರಾತ್ರಿ ಸ್ವಲ್ಪ ಜಾಸ್ತಿ ಕುಡಿದಿದ್ದೆ, ಅವನ್ಯಾರೋ ಬೈದ… ಹೀಗೆ ಕಾರಣಗಳನ್ನು ಜೋಡಿಸುತ್ತಾ ಹೋದರೆ ಕೊನೆಗೆ ಏನೂ ಪಡೆದುಕೊಳ್ಳದೆ, ಏನನ್ನೂ ಸಾಧಿಸದೆ ಖಾಲಿ ಕೈಯಲ್ಲಿ ಕುಳಿತಿರಬೇಕಾಗುತ್ತದೆ.

ನಿಮಗೇನು ಬೇಕು ಅನ್ನುವುದನ್ನು ಮೊದಲು ನಿಮ್ಮ ಮನಸ್ಸಿನೊಳಗೆ ಖಚಿತಪಡಿಸಿಕೊಳ್ಳಿ. ಆಮೇಲೆ ಅದನ್ನು ಪಡೆಯುವ ದಾರಿಯನ್ನು ಎಲ್ಲ ದೃಷ್ಟಿಕೋನಗಳಿಂದ ನೋಡಿ. ಯಾವುದನ್ನೂ ನೀವಂದುಕೊಂಡದ್ದನ್ನು ಸಾಧಿಸಲು ಎಷ್ಟು ದಿನ, ಎಷ್ಟು ವರ್ಷ ಬೇಕಾಗುತ್ತದೆ, ಅಷ್ಟು ದಿನ ನಿಮ್ಮ ಖರ್ಚು ಯಾರು ನೋಡಿಕೊಳ್ಳುತ್ತಾರೆ, ಹೊಟ್ಟೆಗೇನು ಮಾಡಬೇಕು, ಕುಟುಂಬಕ್ಕೇನು ಮಾಡಬೇಕು ಎಂಬುದನ್ನೆಲ್ಲ  ನಿಶ್ಚಯಿಸಿಕೊಳ್ಳಿ. ಅಂದುಕೊಂಡದ್ದನ್ನು ಸಾಧಿಸುವಷ್ಟು ಬುದ್ಧಿವಂತಿಕೆ ನಿಮ್ಮಲ್ಲಿದೆಯೇ ಎಂಬುದನ್ನು ಪ್ರಾಮಾಣಿಕವಾಗಿ ಯೋಚಿಸಿ ನಿರ್ಧರಿಸಿಕೊಳ್ಳಿ. 

ಯೋಜಿತ ದಾರಿ: ಸಾಧನೆಗೆ ವ್ಯವಸ್ಥಿತ‌ ಯೋಜನೆ ಬೇಕು. ಸಾಧಿಸುವವರು ಏಕಕಾಲಕ್ಕೆ ಈ ಕೆಳಗಿನ ಮೂರು ದಾರಿಗಳಲ್ಲಿ ಚಲಿಸಬೇಕು.
1) ಸಾಧನೆಯ ದಾರಿ (ನಿಮ್ಮ ಕನಸಿನ ದಾರಿ) 2) ಜ್ಞಾನ ಸಂಪಾದಿಸುವ ದಾರಿ  3) ಹಣ ಸಂಪಾದಿಸುವ ದಾರಿ
ದಿನದ 24 ಗಂಟೆಗಳನ್ನು ಈ ಮೂರು ದಾರಿಗಳಿಗೆ ಸರಿಯಾಗಿ ವಿಂಗಡಿಸಿಕೊಳ್ಳಬೇಕು. ಬರೀ ಸಾಧನೆ ಮಾಡುತ್ತೇನೆ ಅಂತ ಕೂತಿದ್ದರೆ ಸಂಪಾದನೆ ಮಾಡುವವರು ಯಾರು? ಅಥವಾ ಬರೀ ಸಂಪಾದನೆ ಮಾಡುತ್ತಿದ್ದರೆ, “ಅಯ್ಯೋ ನನ್ನ ಕನಸೇ ಬೇರೆ ಆಗಿತ್ತು, ನಾನು ಇಲ್ಲಿ ಈ ಕೆಲಸದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ’ ಎಂದು ಹಳಹಳಿಸುತ್ತೀರಿ. ಕೆಲ ಹುಡುಗರಂತೂ ಕೆಲಸಕ್ಕಾಗಿ ಅಲೆದಾಡುತ್ತಾ ತುಂಬ ಕಷ್ಟ ಪಡುತ್ತಿರುತ್ತಾರೆ. ಜೇಬಿನಲ್ಲಿ ಬಸ್‌ ಚಾರ್ಜಿಗೂ ಕಾಸಿರುವುದಿಲ್ಲ. ಸ್ನೇಹಿತನ ರೂಮಿನಲ್ಲೇ ಕೆಲವು ದಿನ ಕಳೆಯಬಹುದೆಂಬ ನಂಬಿಕೆಯಿರುತ್ತದೆ. ಆದರೂ ಸ್ವಾಭಿಮಾನ ಮನಸ್ಸನ್ನು ಚುಚ್ಚುತ್ತಲೇ ಇರುತ್ತದೆ. ಇಂಥ‌ ಅಸಹಾಯಕ ಸ್ಥಿತಿಯಲ್ಲಿ ಕೆಲಸ ಸಿಕ್ಕಾಗ ಮನುಷ್ಯ ಆ ಕೆಲಸವನ್ನು ಕಣ್ಣಿಗೊತ್ತಿಕೊಂಡು, ದೇವರೇ ಹುಡುಕಿಕೊಂಡು ಬಂದು ಈ ಕೆಲಸ ಕೊಟ್ಟಿದಾನೆ ಅಂತ ಅದಕ್ಕೆ ಅಂಟಿಕೊಂಡು ಬಿಡುತ್ತಾರೆ. ಆಗ ನಿಮ್ಮ ಕನಸಿನ ಕರೆಯೇನಾಯಿತು ಸ್ವಾಮಿ?

ಬುದ್ಧಿಯನ್ನೂ ಸ್ವಲ್ಪ ಬೆಳೆಸಿ: ನಾವು ಒಂದೊಂದೇ ಹೆಜ್ಜೆ ಮುಂದೆ ಹೋಗುತ್ತಿದ್ದಂತೆ ಅದಕ್ಕೆ ಸರಿಯಾಗಿ ನಮ್ಮ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು. ಇಲ್ಲವಾದರೆ ನಾವು ಕನಸಿನಲ್ಲಿ ಮಾತ್ರ ಮುಂದಿರುತ್ತೇವೆ, ವಾಸ್ತವದಲ್ಲಿ ಹಿಂದುಳಿದಿರುತ್ತೇವೆ. ನಮ್ಮ ಯಾವುದೇ ಕನಸು ನೂರಕ್ಕೆ ನೂರು ಸತ್ಯವಾಗಿದ್ದಲ್ಲಿ ಅದು ನನಸಾಗಿಯೇ ಆಗುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಿಮಗೆ ಯಾವುದೇ ಒಂದು ನೂರಕ್ಕೆ ನೂರು ಬೇಕೇ ಬೇಕು ಅನಿಸಿ ಅದು ನಿಮಗೆ ಸಿಗದಿದ್ದಲ್ಲಿ ನೀವು ಅದನ್ನು ನೂರಕ್ಕೆ ನೂರರಷ್ಟು ಬಯಸಿಲ್ಲ ಎಂದೇ ಅರ್ಥ.  ಕನಸು, ಹಣ ಸಂಪಾದನೆ ಮತ್ತು ಜ್ಞಾನ – ಈ ಮೂರು ಹಾದಿಯಲ್ಲಿ ಏಕಕಾಲಕ್ಕೆ ಚಲಿಸಿದರೆ ಮಾತ್ರ ಚಿಕ್ಕ ವಯಸ್ಸಿನಲ್ಲೇ ಸಾಧಿಸಲು ಸಾಧ್ಯ. ಇವಿದ್ದರೆ ಹತ್ತು ವರ್ಷಗಳಲ್ಲಿ ಸಾಧಿಸುವುದನ್ನು ಐದೇ ವರ್ಷದಲ್ಲಿ ಸಾಧಿಸಿ ತೋರಿಸಬಹುದು. ಒಂದಾದ ಅನಂತರ ಮತ್ತೂಂದು ಎಂದುಕೊಂಡರೆ ನಾವು ಸಾಧಿಸುವಷ್ಟರಲ್ಲಿ ನಮಗೆ ವಯಸ್ಸಾಗಿರುತ್ತದೆ ಇಲ್ಲವೇ ನಾವು ಸಾಧಿಸಲು ಹೊರಟಿರುವುದೇ ಔಟ್‌ ಡೇಟೆಡ್‌ ಆಗಿರುತ್ತದೆ. ಇವೆಲ್ಲದರ ನಡುವೆ ಹಣಕಾಸಿನ ಒತ್ತಡ ಬರುತ್ತಲೇ ಇರುತ್ತದೆ. ನಮಗೆ ಬೇಕಾದ ಹಣವನ್ನು ಹತ್ತು ಜನರ ಬಳಿ ಸಾಲ ತೆಗೆದುಕೊಳ್ಳಬಹುದು. ಹಾಗಂತೆ ಸಾಲದಲ್ಲೇ ಬದುಕುತ್ತಿದ್ದರೆ ನೆಮ್ಮದಿಯ ಜೀವನ ನಡೆಸುವುದು ಎಂದು?

ಸಣ್ಣ ಪುಟ್ಟ ಕೆಲಸವಾದರೂ ಅವಮಾನ ಎಂದುಕೊಳ್ಳದೆ ನಮ್ಮ ದುಡ್ಡಿನಲ್ಲಿ ನಾವು ಬದುಕುವುದೇ ಚೆಂದ! ಇಷ್ಟೆಲ್ಲ ಕಷ್ಟಗಳಿಂದ ಮುಕ್ತಿ ಹೊಂದಿ ಸಾಧನೆ ಮಾಡಬೇಕು ಅಂದರೆ ದೃಢ ಮನಸ್ಸಿನ ಜತೆಗೆ ತಾಳ್ಮೆಯೂ ಇರಬೇಕು.

ರೂಪಾ ಅಯ್ಯರ್‌

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.